Cardiac Arrest: ಹೃದಯಾಘಾತ, ಹೃದಯ ಸ್ತಂಭನದ ನಡುವಿನ ವ್ಯತ್ಯಾಸ ಹಾಗೂ ಲಕ್ಷಣಗಳೇನು?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಜನರು ಹೃದಯ ಸ್ತಂಭನವನ್ನೂ ಸಹ ಹೃದಯಾಘಾತ ಎಂದು ಪರಿಗಣಿಸುತ್ತಾರೆ. ಮತ್ತು 5 ನಿಮಿಷಗಳಲ್ಲಿ ಮಾಡಬಹುದಾದ ಚಿಕಿತ್ಸೆ ಬಗ್ಗೆ ಅರಿವು ಇಲ್ಲದೆ ವಿಳಂಬ ಮಾಡುತ್ತಾರೆ ಇದು ವ್ಯಕ್ತಿಯ ಜೀವಕ್ಕ ಅಪಾಯ ತಂದೊಡ್ಡುತ್ತದೆ.

  • Share this:

    ಇತ್ತೀಚಿನ ದಿನಗಳಲ್ಲಿ (Now A Days) ಹೃದಯಾಘಾತ (Heart Attack) ಮತ್ತು ಹೃದಯ ಸ್ತಂಭನ (Cardiac Arrest) ಕಾಯಿಲೆ ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಜನರು ಕೆಲವೊಮ್ಮೆ ಹೃದಯಾಘಾತ ಮತ್ತು ಹೃದಯ ಸ್ತಂಭನ ಎರಡೂ ಒಂದೇ ಎಂದು ಭಾವಿಸುತ್ತಾರೆ. ಆದರೆ ಹೃದಯಾಘಾತ ಮತ್ತು ಹೃದಯ ಸ್ತಂಭನ ಎರಡರ ನಡುವೆ ಸಾಕಷ್ಟು ವ್ಯತ್ಯಾಸವಿದೆ ಎಂದು ವೈದ್ಯರು ಹೇಳುತ್ತಾರೆ. ಹೃದಯ ಸ್ತಂಭನ ಮತ್ತು ಹೃದಯಾಘಾತ ಎರಡು ವಿಭಿನ್ನ ವಿಷಯಗಳಾಗಿವೆ. ಇತ್ತೀಚೆಗೆ ಭಾರತದಲ್ಲಿ ಏಕಾಏಕಿ ಹೃದಯ ಸ್ತಂಭನ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಆದರೆ ಆತಂಕದ ವಿಷಯ ಅಂದ್ರೆ ಹೃದಯ ಸ್ತಂಭನದ ಬಗ್ಗೆ ಜನರಿಗೆ ಹೆಚ್ಚು ತಿಳಿವಳಿಕೆ ಇಲ್ಲ.


    ಹೃದಯ ಸ್ತಂಭನ ಮತ್ತು ಹೃದಯಾಘಾತ ಎರಡೂ ಒಂದೇ ಅಲ್ಲ


    ಜನರು ಹೃದಯ ಸ್ತಂಭನವನ್ನೂ ಸಹ ಹೃದಯಾಘಾತ ಎಂದು ಪರಿಗಣಿಸುತ್ತಾರೆ. ಮತ್ತು 5 ನಿಮಿಷಗಳಲ್ಲಿ ಮಾಡಬಹುದಾದ ಚಿಕಿತ್ಸೆ ಬಗ್ಗೆ ಅರಿವು ಇಲ್ಲದೆ ವಿಳಂಬ ಮಾಡುತ್ತಾರೆ ಇದು ವ್ಯಕ್ತಿಯ ಜೀವಕ್ಕ ಅಪಾಯ ತಂದೊಡ್ಡುತ್ತದೆ.


    ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದರೊಳಗೆ ಆತ ಸಾವನ್ನಪ್ಪುತ್ತಾನೆ. ಅಂತಹ ಸ್ಥಿತಿಯಲ್ಲಿ, ಹೃದಯಾಘಾತ ಮತ್ತು ಹೃದಯ ಸ್ತಂಭನ ನಡುವಿನ ವ್ಯತ್ಯಾಸವೇನು ಮತ್ತು ಹಠಾತ್ ಹೃದಯ ಸ್ತಂಭನದಲ್ಲಿ ಕೇವಲ 5 ನಿಮಿಷಗಳಲ್ಲಿ ರೋಗಿಯ ಜೀವವನ್ನು ಹೇಗೆ ಉಳಿಸಬಹುದು ಎಂದು ತಿಳಿಯುವುದು ಮುಖ್ಯ.


    ಇದನ್ನೂ ಓದಿ: ನೀವೆಷ್ಟೇ ಔಷಧ ಸೇವಿಸಿದರೂ ಅಧಿಕ ರಕ್ತದೊತ್ತಡ ನಿವಾರಣೆ ಆಗದಿರುವುದಕ್ಕೆ ಈ ಅಂಶಗಳು ಕಾರಣವಾಗಿರಬಹುದು!


    ಹೃದಯಾಘಾತ ಮತ್ತು ಹೃದಯ ಸ್ತಂಭನದ ನಡುವಿನ ವ್ಯತ್ಯಾಸ


    ಪರಿಧಮನಿಯ ಅಪಧಮನಿಗಳಲ್ಲಿ ಅಡಚಣೆ ಉಂಟಾದಾಗ ಹೃದಯಾಘಾತ ಸಂಭವಿಸುತ್ತದೆ. ಅಂತಹ ಸ್ಥಿತಿಯಲ್ಲಿ ರಕ್ತವು ಹೃದಯ ಸ್ನಾಯುವನ್ನು ತಲುಪುವುದಿಲ್ಲ. ನಮ್ಮ ಹೃದಯವು ಸ್ನಾಯು, ಆದ್ದರಿಂದ ಇದು ಕಾರ್ಯ ನಿರ್ವಹಿಸಲು ಆಮ್ಲಜನಕಯುಕ್ತ ರಕ್ತದ ಅಗತ್ಯವಿದೆ.


    ಪರಿಧಮನಿಯ ಅಪಧಮನಿಗಳಲ್ಲಿ ಅಡಚಣೆಯಾದರೆ, ಅದು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಪರಿಧಮನಿಯ ಅಪಧಮನಿಗಳನ್ನು ಸಮಯಕ್ಕೆ ತೆರೆದರೆ ಹೃದಯಾಘಾತದಿಂದ ರೋಗಿಯನ್ನು ಉಳಿಸಬಹುದು. ಇದಕ್ಕಾಗಿ ರೋಗಿಗೆ 45 ನಿಮಿಷ ಸಮಯವಿರುತ್ತದೆ. ಆದರೆ


    ಹೃದಯ ಸ್ತಂಭನದಲ್ಲಿ, ಹೃದಯವು ಇದ್ದಕ್ಕಿದ್ದಂತೆ ಬಡಿಯುವುದನ್ನು ನಿಲ್ಲಿಸಿ ಬಿಡುತ್ತದೆ. ಹೃದಯ ಸ್ತಂಭನದಲ್ಲಿ ರೋಗಿಯು ಬದುಕಲು 5 ನಿಮಿಷ ಸಮಯ ಇರುತ್ತದೆ. ತಡವಾದರೆ ವೈದ್ಯರು ಸಹ ರೋಗಿಯನ್ನು ಉಳಿಸಲು ಸಾಧ್ಯವಿಲ್ಲ.


    ಹೃದಯ ಸ್ತಂಭನದ ಲಕ್ಷಣಗಳು ಏನು?


    - ಯಾರಾದರೂ ಇದ್ದಕ್ಕಿದ್ದಂತೆ ಮೂರ್ಛೆ ಹೋಗುವುದು,


    - ವ್ಯಕ್ತಿಯು 20-30 ಸೆಕೆಂಡುಗಳ ಕಾಲ ಪ್ರಜ್ಞೆ ಮರಳಿ ಪಡೆಯದೇ ಇರುವುದು ಹೃದಯ ಸ್ತಂಭನದ ಲಕ್ಷಣ


    - ಹೃದಯ ಸ್ತಂಭನದಲ್ಲಿ ಹೃದಯ ಬಡಿತವು 300-400 ಕ್ಕೆ ಹೆಚ್ಚಾಗುತ್ತದೆ.


    - ರಕ್ತದೊತ್ತಡ ವೇಗವಾಗಿ ಕಡಿಮೆಯಾಗುತ್ತದೆ


    ಹೃದಯ ಸ್ತಂಭನವಾದಾಗ ಮೊದಲು ಏನು ಮಾಡಬೇಕು?


    ಹೃದಯ ಸ್ತಂಭನ ಉಂಟಾದ 5 ನಿಮಿಷ ಅತ್ಯಂತ ಮುಖ್ಯವಾಗಿರುತ್ತದೆ. ಯಾರಿಗಾದರೂ ಹೃದಯ ಸ್ತಂಭನವಾಗಿದ್ದರೆ ಮೊದಲು ಆಂಬ್ಯುಲೆನ್ಸ್‌ಗೆ ಕರೆ ಮಾಡಿ. ರೋಗಿಗೆ ತಕ್ಷಣವೇ ಸಿಪಿಆರ್ ನೀಡಬೇಕು. CPR ಸಹಾಯದಿಂದ ನೀವು ರೋಗಿಯ ಜೀವವನ್ನು ಉಳಿಸಬಹುದು.


    CPR ಹೇಗೆ ನೀಡಲಾಗುತ್ತದೆ?


    ಸಿಪಿಆರ್ ನೀಡಲು ಮೊದಲು ರೋಗಿಯ ಎದೆಯ ಮೇಲೆ 30 ಬಾರಿ ತ್ವರಿತ ಒತ್ತಡ ಹಾಕಬೇಕು. ಇದಕ್ಕಾಗಿ ನಿಮ್ಮ ಎರಡೂ ಕೈಗಳನ್ನು ಒಟ್ಟಿಗೆ ಮುಷ್ಟಿ ಕಟ್ಟಿಕೊಳ್ಳಿ. ಮತ್ತು ಎದೆಯ ಮಧ್ಯದಲ್ಲಿ ಬಲವಾಗಿ ಹೊಡೆಯಿರಿ. ವ್ಯಕ್ತಿಯ ಮೂಳೆಗಳು ಮುರಿದು ಹೋಗುವಷ್ಟು ವೇಗವಾಗಿ ಹೊಡೆಯಬೇಕು.


    ಇದನ್ನೂ ಓದಿ: ಕಬ್ಬಿನ ಹಾಲು ಕುಡಿದ್ರೆ ಆರೋಗ್ಯದ ಮೇಲೆ ಯಾವೆಲ್ಲಾ ಅಡ್ಡ ಪರಿಣಾಮಗಳು ಉಂಟಾಗುತ್ತೆ?


    ಹಾಗೇ ಎದೆಯ ಮಧ್ಯದಲ್ಲಿ ಬಲವಾಗಿ ಹೊಡೆಯುತ್ತಾ ಇರಿ. ಎದೆಗೆ ಹೊಡೆಯುವಾಗ ಎದೆಯು ಸುಮಾರು 1 ಇಂಚು ಒಳಮುಖವಾಗಿ ಹೋಗುತ್ತದೆ ಎಂದು ಗಮನಿಸಿ. 1 ನಿಮಿಷದಲ್ಲಿ 100 ಬಾರಿ ಎದೆಯ ಮೇಲೆ ಬಲವಾಗಿ ಒತ್ತಬೇಕು. ರೋಗಿಯು ಆಸ್ಪತ್ರೆ ತಲುಪುವವರೆಗೆ ಇದನ್ನು ಮಾಡಬೇಕು.

    Published by:renukadariyannavar
    First published: