Headache And Migraine: ತಲೆನೋವು ಮತ್ತು ಮೈಗ್ರೇನ್ ಎಂದರೇನು? ಎರಡರ ನಡುವಿನ ವ್ಯತ್ಯಾಸವೇನು?

ತಲೆನೋವು ಮತ್ತು ಮೈಗ್ರೇನ್ ಯಾವುದು ಎಂದು ಸರಿಯಾಗಿ ಕಂಡು ಕೊಂಡರೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ನೀಡಬಹುದು. ಈ ಮೂಲಕ ನಾವು ತಲೆನೋವು ಮತ್ತು ಮೈಗ್ರೇನ್ ನ್ನು ಕಡಿಮೆ ಮಾಡಿಕೊಳ್ಳಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಆಗಾಗ ಕಾಡುವ ಅನಾರೋಗ್ಯದಲ್ಲಿ (Unhealthy) ತಲೆನೋವು (Headache) ಮತ್ತು ಮೈಗ್ರೇನ್ (Migraine) ಕೂಡ ಒಂದು. ತಲೆನೋವು ಹಾಗೂ ಮೈಗ್ರೇನ್ ವಿವಿಧ ಕಾರಣಗಳಿಂದ (Different Causes) ಉಂಟಾಗುತ್ತವೆ. ಮನುಷ್ಯನನ್ನು ಕಾಡುವ ತಲೆನೋವು ಮತ್ತು ಮೈಗ್ರೇನ್ ಎರಡೂ ಒಂದೇ ಇಲ್ಲ. ಎರಡೂ ಅನಾರೋಗ್ಯ ಉಂಟಾದಾಗ ಬೇರೆ ಬೇರೆ ಗುಣ ಲಕ್ಷಣಗಳನ್ನು ನಾವು ಕಾಣುತ್ತೇವೆ. ತಲೆನೋವಿನ ಸಮಸ್ಯೆ ಜನರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಇದು ಮೈಗ್ರೇನ್ ಅಲ್ಲ. ತಲೆನೋವು ಬಹುತೇಕರನ್ನು ಕಾಡುತ್ತದೆ. ಆದರೆ ಮೈಗ್ರೇನ್ ಹೆಚ್ಚಿನ ಜನರನ್ನು ಬಾಧಿಸುವುದಿಲ್ಲ. ಇವೆರಡರ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಹಾಗಾಗಿ ಎರಡರ ನಡುವಿನ ವ್ಯತ್ಯಾಸವನ್ನು ನೀವು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು.

    ನೀವು ತಲೆನೋವು ಮತ್ತು ಮೈಗ್ರೇನ್ ಯಾವುದು ಎಂದು ಸರಿಯಾಗಿ ಕಂಡು ಕೊಂಡರೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ನೀಡಬಹುದು. ಈ ಮೂಲಕ ನಾವು ತಲೆನೋವು ಮತ್ತು ಮೈಗ್ರೇನ್ ನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ಎರಡನ್ನೂ ನಿರ್ಲಕ್ಷಿಸುವುದು ಸುತಾರಾಂ ಸರಿಯಲ್ಲ. ಏಕೆಂದರೆ ಇದು ಆರೋಗ್ಯಕ್ಕೆ ಸಂಬಂಧಪಟ್ಟ ಕಾಯಿಲೆ.

    ಇದನ್ನು ಕಡೆಗಣಿಸಿದರೆ ಗಂಭೀರ ಕಾಯಿಲೆಯ ರೂಪ ತಳೆದು ಬೇರೆ ಕಾಯಿಲೆಗೆ ತುತ್ತಾಗುವ ಸಂಭವ ಹೆಚ್ಚು. ತಲೆನೋವಿನಂತೆಯೇ, ಮೈಗ್ರೇನ್ ಕೂಡ ತುಂಬಾ ಸಾಮಾನ್ಯವಾಗಿದೆ ಮತ್ತು ವಿಶ್ವಾದ್ಯಂತ ಅಂಗವೈಕಲ್ಯದ 10 ಪ್ರಮುಖ ಕಾರಣಗಳಲ್ಲಿ ಮೈಗ್ರೇನ್ ಕೂಡ ಒಂದು. ಇದು ನಿಮ್ಮ ಜೀವಕ್ಕೆ ಅಪಾಯವಲ್ಲ. ಆದರೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

    ಇದನ್ನೂ ಓದಿ: ಬಾಲಿವುಡ್ ಕಿರುತೆರೆಯ ನಟಿಯರ ಆಹಾರ ಯೋಜನೆ ಕ್ರಮ ಹಾಗೂ ಫಿಟ್ನೆಸ್ ರಹಸ್ಯ ಹೀಗಿದೆ

    30ರಿಂದ 40ರ ವಯೋಮಾನದವರಲ್ಲಿ ಮೈಗ್ರೇನ್ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಎರಡರ ಬಗ್ಗೆ ಹೆಚ್ಚು ವಿವರವಾಗಿ ಇಲ್ಲಿ ನಾವು ತಿಳಿಯೋಣ.

    ತಲೆನೋವು ಎಂದರೇನು?

    ತಲೆನೋವಿನ ಬಗ್ಗೆ ನಾವು ಹೇಳುವುದಾದರೆ, ಇದರಲ್ಲಿ ಒತ್ತಡ ಮತ್ತು ನಿರಂತರ ನೋವುಂಟು ಮಾಡುವ ಈ ಸಮಸ್ಯೆಯನ್ನು ನಾವು ಹೆಚ್ಚಾಗಿ ಎದುರಿಸುತ್ತೇವೆ. ಕೆಲವೊಮ್ಮೆ ಇದು ಸೌಮ್ಯ ಆಗಿರುತ್ತದೆ. ಮತ್ತು ಕೆಲವೊಮ್ಮೆ ಗಂಭೀರ ಸ್ವರೂಪ ಪಡೆದಯಕೊಳ್ಳುತ್ತದೆ. ಹೆಚ್ಚಿನ ತಲೆನೋವು ಬಂದಾಗ ಅದು ನಿಮ್ಮ ಕುತ್ತಿಗೆ ಅಥವಾ ತಲೆಯಲ್ಲಿ ಅನುಭವ ಆಗುತ್ತದೆ. ಅಂದರೆ ಉದ್ವೇಗ, ಸ್ನಾಯು ಸೆಳೆತ ಮತ್ತು ಆತಂಕ ಉಂಟು ಮಾಡುತ್ತದೆ.

    ತಲೆನೋವಿನ ಪ್ರಕಾರಗಳು

    ಕ್ಲಸ್ಟರ್ ತಲೆನೋವು: ಇದರಲ್ಲಿ ನೀವು ತಲೆನೋವಿನ ದಾಳಿಯ ನೋವು ಅನುಭವಿಸುತ್ತೀರಿ.

    ಸೈನಸ್ ತಲೆನೋವು: ಸೈನಸ್ ರೋಗ ಲಕ್ಷಣಗಳನ್ನು ನೀವು ಅನುಭವಿಸಿದಾಗ ಸೈನಸ್ ತಲೆನೋವು ಸಂಭವಿಸುತ್ತದೆ.

    ಚಿಯಾರಿ ತಲೆನೋವು: ಚಿಯಾರಿ ವಿರೂಪ ಎಂದು ಕರೆಯಲ್ಪಡುವ ಜನ್ಮ ದೋಷದಿಂದ ಚಿಯಾರಿ ತಲೆನೋವು ಉಂಟಾಗುತ್ತದೆ.

    ಥಂಡರ್‌ಕ್ಲ್ಯಾಪ್ ತಲೆನೋವು: ಇದು 60 ಸೆಕೆಂಡುಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯವರೆಗೆ ಇರುವ ತೀವ್ರ ತಲೆನೋವು ಆಗಿದೆ.

    ವಿವಿಧ ತಲೆನೋವಿಗೆ ಹೇಗೆ ಚಿಕಿತ್ಸೆ ನೀಡಬೇಕು?

    ಹೀಟ್ ಥೆರಪಿ, ಮಸಾಜ್, ಧ್ಯಾನ ಮತ್ತು ಕುತ್ತಿಗೆಯನ್ನು ಹಿಗ್ಗಿಸುವಂತಹ ಔಷಧಿ ಹೊರತುಪಡಿಸಿ ಯಾವುದೇ ವಿಶ್ರಾಂತಿ ತಂತ್ರಗಳನ್ನು ನೀವು ಫಾಲೋ ಮಾಡಬಹುದು.

    ಮೈಗ್ರೇನ್ ಎಂದರೇನು?

    ಮೈಗ್ರೇನ್ ಉಂಟಾದಾಗ ವ್ಯಕ್ತಿಯು ತೀವ್ರವಾದ ನೋವು ಮತ್ತು ವಾಕರಿಕೆ, ಒಂದು ಕಣ್ಣು ಅಥವಾ ಕಿವಿಯ ಹಿಂದೆ ನೋವು, ಚುಕ್ಕೆ, ಬೆಳಕಿಗೆ ಅಥವಾ ಸಂವೇದನೆ, ದೃಷ್ಟಿ ನಷ್ಟ, ಇತ್ಯಾದಿಗಳಂತಹ ಇತರ ರೋಗ ಲಕ್ಷಣಗಳಿಂದ ಕೂಡಿರುತ್ತದೆ.

    ಕೆಲವರು ಹೆಚ್ಚು ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಮೈಗ್ರೇನ್ ತಲೆಯ ಒಂದು ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ನೀವು ತೀವ್ರ ನೋವುಂಟು ಮಾಡುತ್ತದೆ. ಅಧಿಕ ನೋವು ಉಂಟಾದಾಗ ಅಥವಾ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗದಿದ್ದಾಗ ಅದು ಮೈಗ್ರೇನ್ ಆಗಿರುತ್ತದೆ.

    ಔರಾಸ್ ಮತ್ತು ಪ್ರಾಡ್ರೋಮ್

    ಮೈಗ್ರೇನ್ ಅನ್ನು ಎರಡು ವರ್ಗಗಳಾಗಿ ವಿಂಗಡಣೆ ಮಾಡಲಾಗಿದೆ. ಅದರಲ್ಲಿ ಒಂದು ಆರಾಸ್ ಮೈಗ್ರೇನ್ ಮತ್ತೊಂದು ಪ್ರೋಡ್ರೋಮ್ಸ್. ಸೆಳವುಗಳಲ್ಲಿ, ಮೈಗ್ರೇನ್ ಸಂಭವಿಸುವ ಮೊದಲು ವ್ಯಕ್ತಿಯು ಸಂವೇದನೆಯನ್ನು ಅನುಭವಿಸುತ್ತಾನೆ. ನೀವು 10 ರಿಂದ 30 ನಿಮಿಷಗಳ ಮೊದಲು ಅದರ ಪರಿಣಾಮವನ್ನು ಅನುಭವಿಸಲು ಪ್ರಾರಂಭಿಸುತ್ತೀರಿ.

    ಕೆಲವು ಜನರು ಅದರ ರೋಗ ಲಕ್ಷಣಗಳನ್ನು ಅನುಭವಿಸುವ ಮೊದಲು ಎರಡು ದಿನ  ತೆಗೆದುಕೊಳ್ಳುತ್ತಾರೆ. ಈ ಹಂತವನ್ನು ಪ್ರೋಡ್ರೋಮ್ ಹಂತ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ನೀವು ಮಲಬದ್ಧತೆ, ಖಿನ್ನತೆ, ಆಗಾಗ್ಗೆ ಆಕಳಿಕೆ, ಕಿರಿಕಿರಿ, ಕುತ್ತಿಗೆ ಬಿಗಿತ ಮತ್ತು ಅಸಾಮಾನ್ಯ ಆಹಾರದ ಕಡು ಬಯಕೆ ಇರುತ್ತದೆ.

    ಮೈಗ್ರೇನ್ ಬರಲು ಕಾರಣಗಳು ಮತ್ತು ಚಿಕಿತ್ಸೆ

    ಆತಂಕ,

    ಗರ್ಭನಿರೋಧಕ,

    ಆಲ್ಕೋಹಾಲ್,

    ಹಾರ್ಮೋನುಗಳ ಬದಲಾವಣೆಗಳು,

    ಋತುಬಂಧ,

    ಕಳಪೆ ನಿದ್ರೆ ಅಭ್ಯಾಸ

    ಇದನ್ನೂ ಓದಿ: ಅನ್ನನಾಳ ಕ್ಯಾನ್ಸರ್ ರೋಗಿಗಳು ಎದುರಿಸುವ ಸಮಸ್ಯೆಗಳು ಯಾವವು? ಸಂಶೋಧನೆ ಏನು ಹೇಳುತ್ತದೆ?

    ಚಿಕಿತ್ಸೆ

    ಔಷಧಿಗಳೊಂದಿಗೆ ಒಂದು ಚಿಕಿತ್ಸೆ ಮಾತ್ರ ಸಾಧ್ಯ. ಆದಾಗ್ಯೂ, ಅದರ ಚಿಕಿತ್ಸೆಗಾಗಿ, ಆಲ್ಕೊಹಾಲ್ ಮತ್ತು ಕೆಫೀನ್‌ನಂತಹ ತಲೆನೋವು ಉಂಟು ಮಾಡುವ ಆಹಾರ ಸೇವನೆ ನಿಲ್ಲಿಸಬೇಕು.
    Published by:renukadariyannavar
    First published: