Infertility Problem: ಪುರುಷರನ್ನು ಕಾಡುವ ಬಂಜೆತನ ಸಮಸ್ಯೆ ನಿವಾರಣೆಗೆ ಆಯುರ್ವೇದ ಪರಿಹಾರವೇನು?

ಪುರುಷರಲ್ಲಿ ಬಂಜೆತನ ಸಮಸ್ಯೆ ಲೈಂಗಿಕ ಆಸಕ್ತಿ ಕಡಿಮೆ ಮಾಡುವ ಸಾಮರ್ಥ್ಯ ಮತ್ತು ಅವರ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಪುರುಷರಲ್ಲಿ ಬಂಜೆತನ ಅಥವಾ ಕಡಿಮೆ ಕಾಮಾಸಕ್ತಿಗೆ ಕಾರಣವೇನು ಎಂದು ಕೇಳಿದರೆ ಅದರ ಹಿಂದೆ ಹಲವು ಕಾರಣಗಳಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪುರುಷರಲ್ಲಿ (Men’s) ಬಂಜೆತನದ ಸಮಸ್ಯೆ (Infertility Problem) ವೇಗವಾಗಿ ಹೆಚ್ಚುತ್ತಿದೆ. ಪುರುಷರಲ್ಲಿ ಬಂಜೆತನ ಸಮಸ್ಯೆ ಇದು ಕಡಿಮೆ ಕಾಮಾಸಕ್ತಿ ಮತ್ತು ಕಳಪೆ ವೀರ್ಯ ಗಂಭೀರ ಸಮಸ್ಯೆ (Serious Issue) ಎದುರಿಸುವಂತೆ ಮಾಡುತ್ತದೆ. ನಿಸ್ಸಂಶಯವಾಗಿ ಈ ರೀತಿಯ ಪರಿಸ್ಥಿತಿ ಯಾವುದೇ ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಮತ್ತು ಪುರುಷರಲ್ಲಿ ಬಂಜೆತನ ಸಮಸ್ಯೆ ಲೈಂಗಿಕ ಆಸಕ್ತಿ ಕಡಿಮೆ ಮಾಡುವ ಸಾಮರ್ಥ್ಯ ಮತ್ತು ಅವರ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಪುರುಷರಲ್ಲಿ ಬಂಜೆತನ ಅಥವಾ ಕಡಿಮೆ ಕಾಮಾಸಕ್ತಿಗೆ ಕಾರಣವೇನು ಎಂದು ಕೇಳಿದರೆ ಅದರ ಹಿಂದೆ ಹಲವು ಕಾರಣಗಳಿವೆ ಎಂದು ಆಯುರ್ವೇದ ವೈದ್ಯೆ ದೀಕ್ಷಾ ಭಾವಸಾರ್ ಹೇಳಿದ್ದಾರೆ.

    ಪುರುಷರಲ್ಲಿ ಬಂಜೆತನ ಅಥವಾ ಕಡಿಮೆ ಕಾಮಾಸಕ್ತಿಗೆ ಕಾರಣವೇನು?

    ಅತಿಯಾದ ವ್ಯಾಯಾಮ,

    ಒತ್ತಡ,

    ಧೂಮಪಾನ,

    ವ್ಯಾಯಾಮದ ಕೊರತೆ,

    ಸ್ಥೂಲಕಾಯ, ಸೋಂಕು,

    ನಿಯಂತ್ರಿಸಲಾಗದ ಮಧುಮೇಹ,

    ಕಳಪೆ ಪೋಷಣೆ,

    ಹಾರ್ಮೋನ್ ಅಡಚಣೆಗಳು,

    ಕ್ಯಾನ್ಸರ್ ಮತ್ತು ಜನನಾಂಗದ ಕಾಯಿಲೆಗಳು ಇತ್ಯಾದಿ.

    ಇದನ್ನೂ ಓದಿ: ಜೋಳದಲ್ಲೂ ಇದೆ ಔಷಧೀಯ ಗುಣ, ಈ ಖಾಯಿಲೆಗಳಿಗೆ ಇದೇ ರಾಮಬಾಣ!

    ಬಂಜೆತನ ಮತ್ತು ಕಡಿಮೆ ಕಾಮಾಸಕ್ತಿ ಎಂದರೇನು?

    ಪುರುಷ ಬಂಜೆತನ ಎಂದರೆ ಪುರುಷನು ತನ್ನ ಸಂಗಾತಿಯೊಂದಿಗೆ ಗರ್ಭಧಾರಣೆ ಪ್ರಾರಂಭಿಸಲು ಸಾಧ್ಯವಾಗದೇ ಇರುವ ಸ್ಥಿತಿ ಆಗಿದೆ. ಇದಕ್ಕೆ ಹಲವು ಕಾರಣಗಳಿವೆ. ಆದರೆ ಸಾಕಷ್ಟು ವೀರ್ಯಾಣು ಅಥವಾ ಆರೋಗ್ಯಕರ ವೀರ್ಯ ಇಲ್ಲದೇ ಇರುವುದು ಸಹ ಪುರುಷರಲ್ಲಿ ಬಂಜೆತನಕ್ಕೆ ದೊಡ್ಡ ಕಾರಣ ಆಗಿದೆ. ಕಡಿಮೆ ಕಾಮಾಸಕ್ತಿ ಎಂದರೆ ಪುರುಷನು ಲೈಂಗಿಕ ಚಟುವಟಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುವುದು ಆಗಿದೆ.

    ಆಯುರ್ವೇದವು ಬಂಜೆತನ ಮತ್ತು ಕಾಮಾಸಕ್ತಿ ಹೆಚ್ಚಿಸಲು ಹೇಗೆ ಸಹಾಯ ಮಾಡುತ್ತದೆ

    ಡಾ. ದೀಕ್ಷಾ ಪ್ರಕಾರ, ಆಯುರ್ವೇದವು ಕೆಲವು ಆಹಾರಗಳು ಮತ್ತು ಗಿಡಮೂಲಿಕೆಗಳು ಅಥವಾ ಖನಿಜಗಳನ್ನು ಸೂಚಿಸುತ್ತದೆ. ಪುರುಷರಲ್ಲಿ ಕಾಮಾಸಕ್ತಿ ಮತ್ತು ಫಲವತ್ತತೆ ಹೆಚ್ಚಿಸಲು ಇದನ್ನು ಆಯುರ್ವೇದದಲ್ಲಿ ಸುಕರ್ಜನನ ದ್ರವ್ಯ ಎಂದು ಕರೆಯುತ್ತಾರೆ. ಅನೇಕ ಆಹಾರಗಳು ಈ ವರ್ಗಕ್ಕೆ ಸೇರುತ್ತವೆ. ಅದನ್ನು ನೀವು ಸೇವಿಸಬೇಕು.

    ಆಹಾರದಲ್ಲಿ ಯಾವ ಪದಾರ್ಥಗಳನ್ನು ಸೇರಿಸುವುದು ಪುರುಷರಲ್ಲಿ ಬಂಜೆತನ ಕಡಿಮೆ ಮಾಡುತ್ತದೆ?

    ಹಸುವಿನ ಹಾಲು

    ಹಸುವಿನ ತುಪ್ಪ

    ಜೇನು

    ಅಶ್ವಗಂಧ

    ಬಾಲ

    ಶತಾವರಿ

    ತ್ರಿಫಲ

    ಶಿಲಾಜಿತ್

    ಬಿಳಿ ಮ್ಯೂಸ್ಲಿ

    ಮದ್ಯಸಾರ

    ಕೌಂಚ್ ಬೀಜ್

    ನೆಲ್ಲಿಕಾಯಿ

    ಗೋಕ್ಷೂರ

    ಕುಂಬಳಕಾಯಿ ಬೀಜಗಳು

    ವಾಲ್ನಟ್

    ವೀರ್ಯದ ಗುಣಮಟ್ಟ ಸುಧಾರಿಸುವುದು ಹೇಗೆ?

    ಈ ವಸ್ತುಗಳ ನಿಯಮಿತ ಸೇವನೆಯು ಕಾಮಾಸಕ್ತಿ ಮತ್ತು ಫಲವತ್ತತೆ ಸುಧಾರಿಸಲು ನಿಮಗೆ ಸಹಾಯ ಮಾಡುತ್ತದೆ. ದೇಹಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳು ಅವುಗಳಲ್ಲಿ ಕಂಡು ಬರುತ್ತವೆ. ಮತ್ತು ಇದು ವೀರ್ಯದ ಗುಣಮಟ್ಟ ಸುಧಾರಿಸಲು ಮತ್ತು ವೀರ್ಯದ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

    ಯಾವ ಪದಾರ್ಥಗಳು ವೀರ್ಯ ಹೆಚ್ಚಿಸಲು ಸಹಾಯ ಮಾಡುತ್ತವೆ?

    ಹಾಲು, ತುಪ್ಪ, ಶತಾವರಿ, ಅಶ್ವಗಂಧ ಮುಂತಾದವು ಪುರುಷರಲ್ಲಿ ವೀರ್ಯ ಹೆಚ್ಚಿಸುತ್ತವೆ. ವೀರ್ಯದ ಗುಣಮಟ್ಟ ಸುಧಾರಿಸುವ ಪದಾರ್ಥಗಳೆಂದರೆ ಅವು

    ಬ್ರಾಹ್ಮಿ,

    ಶತಾವರಿ,

    ಗುಡುಚಿ ಇತ್ಯಾದಿ.

    ಕಾಮವನ್ನು ಹೆಚ್ಚಿಸುವ ಆಹಾರಗಳೆಂದರೆ

    ಕೇಸರಿ,

    ಬೆಳ್ಳುಳ್ಳಿ,

    ಉದ್ದಿನ ಮೆಣಸು,

    ಲವಂಗ ಇತ್ಯಾದಿ.

    ಅಕಾಲಿಕ ಸ್ಖಲನವನ್ನು ತಡೆಯುವ ಆಹಾರಗಳೆಂದರೆ

    ಅಡಕೆ,

    ಅಶ್ವಗಂಧ,

    ಶ್ರೀಗಂಧ ಇತ್ಯಾದಿ.

    ಇದನ್ನೂ ಓದಿ: ಮೂಲವ್ಯಾಧಿಗೆ ಇಲ್ಲಿದೆ ಸರಳ ಮನೆಮದ್ದು, ಖಂಡಿತಾ ಬೇಗ ಗುಣವಾಗುತ್ತೆ ಅಂತಾರೆ ಡಾಕ್ಟರ್

    ಆಹಾರದಲ್ಲಿ ಯಾವ ಪದಾರ್ಥಗಳನ್ನು ಸೇರಿಸುವುದು ಉತ್ತಮ?

    ನಿಮ್ಮ ಆಹಾರದಲ್ಲಿ ತಾಜಾ ಹಣ್ಣು ಮತ್ತು ತರಕಾರಿ, ತೆಂಗಿನಕಾಯಿ, ಹಾಲು ಸೇರಿಸಿ. ಇದಲ್ಲದೇ ಒಣ ಹಣ್ಣುಗಳಾದ ಬಾದಾಮಿ, ವಾಲ್ ನಟ್ಸ್, ಅಂಜೂರ, ಖರ್ಜೂರ ಇತ್ಯಾದಿ ಹಾಲಿನೊಂದಿಗೆ ಸೇರಿಸಿ ಸೇವಿಸಿ.
    Published by:renukadariyannavar
    First published: