• Home
  • »
  • News
  • »
  • lifestyle
  • »
  • Health Tips: ಯಾವುದು ಇದು ಸ್ಟೀವಿಯಾ ಎಲೆ?; ಡಯಾಬಿಟಿಸ್ ಮತ್ತು ಕ್ಯಾನ್ಸರ್​​ಗೆ ರಾಮಬಾಣವಂತೆ..!

Health Tips: ಯಾವುದು ಇದು ಸ್ಟೀವಿಯಾ ಎಲೆ?; ಡಯಾಬಿಟಿಸ್ ಮತ್ತು ಕ್ಯಾನ್ಸರ್​​ಗೆ ರಾಮಬಾಣವಂತೆ..!

ಸ್ಟೀವಿಯಾ ಎಲೆ

ಸ್ಟೀವಿಯಾ ಎಲೆ

ಸಕ್ಕರೆಯ ಜಾಗದಲ್ಲಿ ಸ್ಟೀವಿಯಾವನ್ನು ಬಳಸಬಹುದು ಮತ್ತು ಅದನ್ನು ಚಹಾ ಅಥವಾ ಕಾಫಿ, ನಿಂಬೆ ಪಾನಕ, ಯೋಗರ್ಟ್‍ನಲ್ಲೂ ಬಳಸಬಹುದು. ಜನರು ಚಹಾ ಮತ್ತು ಕಾಫಿಗೆ ಒಣಗಿದ ಸ್ಟೀವಿಯಾ ಎಲೆಗಳನ್ನು ಬಳಸುತ್ತಾರೆ.

  • Share this:

ಸ್ಟೀವಿಯಾವು(Stevia Leaves) ಆಯ್‍ಸ್ಟರಕೀಸ್ ಎಂಬ ಸೂರ್ಯಕಾಂತಿ, ಡೈಸಿಗಳು ಮತ್ತು ರಾಗ್ವೀಡ್ ಹೂವಿನ ಕುಟುಂಬಕ್ಕೆ ಸೇರಿದ ಮೂಲಿಕೆಯಾಗಿದೆ. ಸಾಮಾನ್ಯವಾಗಿ ಸ್ವೀಟ್‍ಲೀಫ್, ಸ್ವೀಟ್ ಲೀಫ್, ಶುಗರ್‍ಲೀಫ್ ಅಥವಾ ಸರಳವಾಗಿ ಸ್ಟೀವಿಯಾ ಎಂದು ಕರೆಯಲಾಗುತ್ತದೆ. ಇದರಲ್ಲಿ ಯಾವುದೇ ಕ್ಯಾಲೋರಿ ಹೊಂದಿರುವುದಿಲ್ಲ. ಅಲ್ಲದೇ ಇದು 8 ವಿಭಿನ್ನ ರೀತಿಯ ಗ್ಲೈಕೋಸೈಡ್‍ಗಳನ್ನು ಹೊಂದಿರುತ್ತದೆ.


1. ಸ್ಟೀವಿಯೋಸೈಡ್
2. ರೆಬಾಡಿಯೊಸೈಡ್ ಎ, ಸಿ, ಡಿ, ಇ, ಮತ್ತು ಎಫ್
3. ಸ್ಟೀವಿಯೋಲ್ಬಯೋಸೈಡ್
4. ಡಲ್ಕೋಸೈಡ್ ಎ


ಈ ಗ್ಲೈಕೋಸೈಡ್‍ಗಳನ್ನು ಸ್ಟೀವಿಯಾ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತದೆ, ಸಾಮಾನ್ಯ ಗ್ಲೈಕೋಸೈಡ್ ರೆಬಾಡಿಯೊಸೈಡ್ ಎ (ರೆಬ್-ಎ) ಸೂರಿನಲ್ಲಿ ಬೆಳೆಸಲಾಗುತ್ತದೆ ಮತ್ತು ಅನೇಕ ಸ್ಟೀವಿಯಾ ಉತ್ಪನ್ನಗಳಲ್ಲಿ ಇದು ಪ್ರಾಥಮಿಕ ಅಂಶವಾಗಿದೆ. ರೆಬ್-ಎ ಸಕ್ಕರೆಗಿಂತ 200 ರಿಂದ 300 ಪಟ್ಟು ಸಿಹಿಯಾಗಿರುತ್ತದೆ. ನೈಸರ್ಗಿಕ ಮೂಲಗಳಿಂದ ಪಡೆದಿರುವ ಕಾರಣ ಕೃತಕ ಸಿಹಿಕಾರಕಗಳಿಗೆ ಪರ್ಯಾಯವಾಗಿ ರೆಬ್-ಎ ಯಿಂದ ತಯಾರಿಸಿದ ಸಿಹಿಕಾರಕಗಳನ್ನು ಬಳಸಲಾಗುತ್ತದೆ.


ಸ್ಟೀವಿಯಾ ಉತ್ಪನ್ನಗಳನ್ನು ಖರೀದಿಸಬಹುದು ಅಥವಾ ಅವುಗಳನ್ನು ತೋಟದಲ್ಲಿ ಬೆಳೆಸಬಹುದು. ಎಲೆಗಳನ್ನು ಕೊಯ್ಯುವುದು, ಒಣಗಿಸುವುದು, ನೀರು ಹೊರತೆಗೆಯುವುದು ಮತ್ತು ಶುದ್ಧೀಕರಿಸುವ ಸುದೀರ್ಘ ಪ್ರಕ್ರಿಯೆಯ ಮೂಲಕ ಸ್ಟೀವಿಯಾ ಉತ್ಪನ್ನಗಳನ್ನು ಹೆಚ್ಚು ಬೆಳೆಸಬಹುದು. ಆದರೆ ಸ್ವದೇಶಿ ಸ್ಟೀವಿಯಾವು ಕಹಿ ರುಚಿ ಮತ್ತು ವಾಸನೆ ಕೆಟ್ಟದಾಗಿರುತ್ತದೆ.


ಇದನ್ನೂ ಓದಿ:Belagavi Rains: ಭಾರೀ ಮಳೆಗೆ ಬೆಳಗಾವಿ ತತ್ತರ, ಗೋಕಾಕ್​​ ಫಾಲ್ಸ್​​ಗೆ ಜೀವಕಳೆ; ನೂರಾರು ಎಕರೆ ಭತ್ತ ಜಲಾವೃತ

ಸಕ್ಕರೆಯ ಜಾಗದಲ್ಲಿ ಸ್ಟೀವಿಯಾವನ್ನು ಬಳಸಬಹುದು ಮತ್ತು ಅದನ್ನು ಚಹಾ ಅಥವಾ ಕಾಫಿ, ನಿಂಬೆ ಪಾನಕ, ಯೋಗರ್ಟ್‍ನಲ್ಲೂ ಬಳಸಬಹುದು. ಜನರು ಚಹಾ ಮತ್ತು ಕಾಫಿಗೆ ಒಣಗಿದ ಸ್ಟೀವಿಯಾ ಎಲೆಗಳನ್ನು ಬಳಸುತ್ತಾರೆ. ಅವರು ಎಲೆಗಳನ್ನು ಕುದಿಯುವ ನೀರಿನಲ್ಲಿ ಹಾಕಿ 30 ನಿಮಿಷಗಳ ಕಾಲ ಕುದಿಸಿ ಅದರ ಸ್ವಾದವನ್ನು ಹೊರತೆಗೆಯುತ್ತಾರೆ. ಈ ಸಾರವನ್ನು ಪಾನೀಯಗಳಲ್ಲೂ ಉಪಯೋಗಿಸಬಹುದು.


ಏಷ್ಯಾ, ದಕ್ಷಿಣ ಅಮೆರಿಕಾದಾದ್ಯಂತ ಅನೇಕ ಉತ್ಪನ್ನಗಳಲ್ಲಿ ಇದನ್ನು ಬಳಸಲಾಗುತ್ತದೆ. ಐಸ್‍ಕ್ರೀಮ್, ಸಿಹಿತಿಂಡಿಗಳು, ಸಾಸ್‍ಗಳು, ಮೊಸರುಗಳು, ಉಪ್ಪಿನಕಾಯಿ ಪದಾರ್ಥಗಳು, ಬ್ರೆಡ್, ತಂಪು ಪಾನೀಯಗಳು, ಚೂಯಿಂಗ್ ಗಮ್ ಇವುಗಳಲ್ಲಿ ಇದರ ಬಳಕೆ ಇದ್ದೇ ಇರುತ್ತದೆ.


ಆರೋಗ್ಯಕರ ಲಾಭಗಳು:
ಜೀರೋ ಕ್ಯಾಲೋರಿ ಹೊಂದಿರುವ ಸ್ಟೀವಿಯಾ ಆರೋಗ್ಯ ವೃದ್ಧಿಗೆ ಅನುಕೂಲಕರವಾಗಿದೆ.


ಮಧುಮೇಹ


ಸ್ಟೀವಿಯಾ ಯಾವುದೇ ಸಿಹಿ ಅಂಶಗಳನ್ನು ಒಳಗೊಂಡಿರುವುದಿಲ್ಲ. ಇದನ್ನು ಮಧುಮೇಹಿಗಳು ಸಿಹಿಯ ಬದಲಾಗಿ ಬಳಸಬಹುದು ಎಂದು ಸಂಶೋಧನೆ ಹೇಳುತ್ತದೆ. ಏಕೆಂದರೆ ಇದು ದೇಹದಲ್ಲಿನ ಇನ್ಸುಲಿನ್ ಅಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕೆಲವೊಮ್ಮೆ ಊಟದ ನಂತರ ಸ್ಟೀವಿಯಾ ತೆಗೆದುಕೊಂಡ ಎರಡನೇ ವರ್ಗದ ಡಯಾಬಿಟಿಸ್ ರೋಗಿಗಳ ರಕ್ತದಲ್ಲಿ ಗ್ಲೂಕೋಸ್ ಹಾಗೂ ಗ್ಲೂಕೋಗಾನ್ ಅಂಶ ಇಳಿಕೆ ಕಂಡಿದೆ.


ಕ್ಯಾನ್ಸರ್


ಇದರಲ್ಲಿ ಕೆಂಪ್ಫೆರಾಲ್ ಎಂಬ ಅಂಶ ಇರುವುದರಿಂದ ಇದು ಮೇಧೋಜೀರಕ ಗ್ರಂಥಿಯಲ್ಲಿ ಸಂಭವಿಸಬಹುದಾದ ಕ್ಯಾನ್ಸರ್ ಅನ್ನು ತಡೆಯುತ್ತದೆ ಎಂದು ವರದಿಯಾಗಿದೆ. ಇನ್ನು ಸ್ಟೀವಿಯೋಸೈಡ್ ಎಂಬ ಗ್ಲೈಕೋಸೈಡ್ ಸಹ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಕ್ಯಾನ್ಸರ್ ಬರಲು ಸಹಾಯ ಮಾಡುವ ಕೆಲವು ಮೈಟೊಕಾಂಡ್ರಿಯ ಮಾರ್ಗಗಳನ್ನು ನಾಶ ಮಾಡಲು ಸಹಾಯ ಮಾಡುತ್ತದೆ ಎಂದು ಸಹ ಕಂಡುಹಿಡಿಯಲಾಗಿದೆ.


ಇದನ್ನೂ ಓದಿ:Karnataka Unlock 2.O: ಸೋಮವಾರದಿಂದ ಬಸ್​, ಮೆಟ್ರೋ ಓಡಾಟಕ್ಕೆ ಸಿಗುತ್ತಾ ಅನುಮತಿ?; ಇಂದು ಸಿಎಂ ಮಹತ್ವದ ನಿರ್ಧಾರ

ತೂಕ ಇಳಿಕೆ


ಸ್ಥೂಲಕಾಯತೆ ಮತ್ತು ತೂಕ ಹೆಚ್ಚಾಗಲು ಹಲವಾರು ಕಾರಣಗಳಿವೆ, ಆನುವಂಶಿಯತೆಯಿಂದ ಹಿಡಿದು ಕೊಬ್ಬಿನಂಶ ಹೆಚ್ಚಿರುವ ಸಕ್ಕರೆ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸುವುದು ಸಹ ತೂಕ ಹೆಚ್ಚಾಗಲು ಕಾರಣವಾಗಿದೆ. ಆದರೆ ಸ್ಟೀವಿಯಾದಲ್ಲಿ ಯಾವುದೇ ಸಕ್ಕರೆ ಅಂಶ ಇಲ್ಲ ಮತ್ತು ರುಚಿಯನ್ನು ರಾಜಿ ಮಾಡಿಕೊಳ್ಳದೆ ಸಮತೋಲಿತ ಆಹಾರಕ್ರಮಕ್ಕೆ ಕಾರಣವಾಗುವ ಕೆಲವೇ ಕ್ಯಾಲೊರಿಗಳಿವೆ ಎಂದು ತಿಳಿದು ಬಂದಿದೆ. ಹಾಗಾಗಿ ಇದರ ಸೇವನೆಯಿಂದ ತೂಕ ಇಳಿಕೆ ಸಾಧ್ಯವಾಗುತ್ತದೆ.


ಮಕ್ಕಳ ಆಹಾರ


ಮಕ್ಕಳು ಸಹ ಸಿಹಿ ಹಾಗೂ ಜಂಕ್ ಫುಡ್‍ಗಳನ್ನು ಸೇವಿಸುತ್ತಾರೆ. ಇದರಿಂದ ದೇಹ ತೂಕ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಸಕ್ಕರೆ ಮಟ್ಟವನ್ನು ಹೆಚ್ಚಿಸದ ರುಚಿಯನ್ನು ನೀಡುವ ಸ್ಟೀವಿಯಾ-ಪರ್ಯಾಯ ಪಾನೀಯಗಳು ಮತ್ತು ತಿಂಡಿಗಳನ್ನು ಮಕ್ಕಳಿಗೆ ನೀಡಿದರೆ ಒಳಿತು.


ರಕ್ತದೊತ್ತಡ


ಸ್ಟೀವಿಯಾ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನವು ತೋರಿಸಿದೆ. ರಕ್ತದೊತ್ತಡವನ್ನು ಕಡಿಮೆ ಮಾಡುವ ಮತ್ತು ಹೃದಯ ಬಡಿತವನ್ನು ನಿಯಂತ್ರಿಸುವ ಕೆಲವು ಗ್ಲೈಕೋಸೈಡ್‍ಗಳು ಇದರಲ್ಲಿವೆ ಎಂದು ತಿಳಿದು ಬಂದಿದೆ.


ಅಡ್ಡಪರಿಣಾಮಗಳು


ಸ್ಟೀವಿಯಾವನ್ನು ಅಡ್ಡಪರಿಣಾಮಗಳಿಂದ ಮುಕ್ತವೆಂದು ಗುರುತಿಸಲಾಗಿದೆ, ಸ್ಟೀವಿಯಾ ಉತ್ಪನ್ನಗಳನ್ನು ಹೆಚ್ಚು ಪರಿಷ್ಕರಿಸಿ ಮತ್ತು ಮಿತವಾಗಿ ಬಳಸುವವರೆಗೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ.
1. ಇದು ನಿಮ್ಮ ಮೂತ್ರಪಿಂಡಗಳು, ಸಂತಾನೋತ್ಪತ್ತಿ ವ್ಯವಸ್ಥೆ ಮತ್ತು ಹೃದಯರಕ್ತನಾಳದ ವ್ಯವಸ್ಥೆಗೆ ಹಾನಿ ಮಾಡುತ್ತದೆ.
2. ಇದು ರಕ್ತದೊತ್ತಡವನ್ನು ತುಂಬಾ ಕಡಿಮೆ ಮಾಡಬಹುದು.
3. ಕೆಲವರಿಗೆ ವಾಕರಿಕೆ, ತಲೆತಿರುಗುವಿಕೆ, ಸ್ನಾಯು ನೋವು ಮತ್ತು ಮರಗಟ್ಟುವಿಕೆ ಕಂಡು ಬರುತ್ತದೆ. ಇವನ್ನು ಕಡಿಮೆ ಮಾಡುತ್ತದೆ.
4. ಗರ್ಭಾವಸ್ಥೆಯಲ್ಲಿ ಕಚ್ಚಾ ಸ್ಟೀವಿಯಾ ಎಲೆಗಳನ್ನು ಬಳಸಬಾರದು.
ಕಚ್ಚಾ ಸ್ಟೀವಿಯಾ ಎಲೆಗಳ ಸುರಕ್ಷತೆ ಕುರಿತು ಸಾಕಷ್ಟು ಸಂಶೋಧನೆ ನಡೆದಿಲ್ಲ, ಆದ್ದರಿಂದ ಸ್ಟೀವಿಯಾ ಎಲೆ ಹೊರತಾಗಿ ಸ್ಟೀವಿಯಾ ಉತ್ಪನ್ನಗಳನ್ನು ಸೇವಿಸುವುದು ಉತ್ತಮ. ಕಚ್ಚಾ ಸ್ಟೀವಿಯಾ ಎಲೆಗಳ ವಿಷಯದಲ್ಲಿ ಅಧ್ಯಯನ ಕೊರತೆ ಹೊರತಾಗಿಯೂ, ಈ ಸಸ್ಯವನ್ನು ಲಕ್ಷಾಂತರ ಜನರು ಶತಮಾನಗಳಿಂದ ಸೇವಿಸುತ್ತಿದ್ದಾರೆ. ಸಕ್ಕರೆಯ ಪರ್ಯಾಯವಾಗಿ ಬಳಸುವ ಇದು ಹೆಚ್ಚು ಸುರಕ್ಷಿತವಾಗಿದೆ.

Published by:Latha CG
First published: