ಸ್ಪಿರುಲಿನಾವನ್ನು (Spirulina) ಅನೇಕ ಆಯುರ್ವೇದ (Ayurveda) ಔಷಧಿಗಳಲ್ಲಿ (Medicine) ಬಳಕೆ ಮಾಡುತ್ತಾರೆ. ಸ್ಪಿರುಲಿನಾ ಪ್ರಯೋಜನಗಳಿಂದಾಗಿ (Benefits) ಇದನ್ನು ಸೂಪರ್ ಫುಡ್ಗಳ (Super Food) ಪಟ್ಟಿಯಲ್ಲಿ ಸೇರಿಸಲಾಗಿದೆ. ಸ್ಪಿರುಲಿನಾ ಪ್ರೋಟೀನ್ ಮತ್ತು ವಿಟಮಿನ್ಗಳಲ್ಲಿ ಸಮೃದ್ಧವಾಗಿದೆ. ಇದರಲ್ಲಿ ಸುಮಾರು 18 ವಿಧದ ಜೀವಸತ್ವ ಮತ್ತು ಖನಿಜಗಳು ಇವೆ. ಇದು ಶೇಕಡಾ 60 ಕ್ಕಿಂತ ಹೆಚ್ಚು ಪ್ರೋಟೀನ್ ಹೊಂದಿದೆ. ವಿಟಮಿನ್ ಎ, ಕಬ್ಬಿಣ, ಕ್ಯಾಲ್ಸಿಯಂ, ಫೈಟೊನ್ಯೂಟ್ರಿಯೆಂಟ್ಸ್, ಕ್ಯಾರೋಟಿನ್ ಮತ್ತು ಉತ್ಕರ್ಷಣ ನಿರೋಧಕಗಳು ಸಹ ಸ್ಪಿರುಲಿನಾದಲ್ಲಿ ಕಂಡು ಬರುತ್ತವೆ. ಖಿನ್ನತೆ ಮತ್ತು ಒತ್ತಡ ನಿವಾರಣೆಗೆ ಸ್ಪಿರುಲಿನಾ ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ ಇದನ್ನು ತೂಕ ನಷ್ಟಕ್ಕೆ ಸಹ ಬಳಸುತ್ತಾರೆ.
ಏನಿದು ಸ್ಪಿರುಲಿನಾ?
ಆಯುರ್ವೇದದಲ್ಲಿ ಸ್ಪಿರುಲಿನಾಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಸ್ಪಿರುಲಿನಾ ನೀರಿನಲ್ಲಿ ಕಂಡು ಬರುವ ಪಾಚಿ ಸಸ್ಯ ಆಗಿದೆ. ಈ ಸಸ್ಯವು ಸರೋವರ, ಜಲಪಾತ ಅಥವಾ ಉಪ್ಪು ನೀರಿನಲ್ಲಿ ಬೆಳೆಯುತ್ತದೆ. ಆಯುರ್ವೇದದಲ್ಲಿ ಅನೇಕ ಔಷಧಿಗಳಲ್ಲಿ ಸ್ಪಿರುಲಿನಾ ಬಳಕೆ ಮಾಡಲಾಗುತ್ತದೆ.
ಸ್ಪಿರುಲಿನಾದಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಗಳು ಹೇರಳವಾಗಿ ಇವೆ. ಸುಮಾರು 60 ಪ್ರತಿಶತದಷ್ಟು ಸ್ಪಿರುಲಿನಾ ದೇಹಕ್ಕೆ ಪ್ರೋಟೀನ್ ಮತ್ತು ಇತರ ಅಗತ್ಯ ಅಮೈನೋ ಆಮ್ಲಗಳನ್ನು ಒದಗಿಸುತ್ತದೆ. 18 ಕ್ಕೂ ಹೆಚ್ಚು ಜೀವಸತ್ವ ಮತ್ತು ಖನಿಜಗಳು ಇದರಲ್ಲಿ ಇವೆ. ಸ್ಪಿರುಲಿನಾದಿಂದ ದೇಹವು ವಿಟಮಿನ್ ಎ, ಕಬ್ಬಿಣ, ಕ್ಯಾಲ್ಸಿಯಂ, ಕ್ಯಾರೋಟಿನ್ ಮತ್ತು ಉತ್ಕರ್ಷಣ ನಿರೋಧಕ ಪಡೆಯುತ್ತದೆ.
ಇದನ್ನೂ ಓದಿ: ಬಿಳಿ ಕೂದಲ ಸಮಸ್ಯೆ ನಿವಾರಣೆಗೆ ವಾಲ್ ನಟ್ ಸಿಪ್ಪೆಯಿಂದ ಹೀಗೆ ಮಾಡಿ, ಪ್ರಯೋಜನ ಪಡೆಯಿರಿ
ಸ್ಪಿರುಲಿನಾ ಸೂಪರ್ಫುಡ್
ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಸ್ಪಿರುಲಿನಾ ಸೂಪರ್ಫುಡ್ ಎಂದು ಕರೆಯಿಸಿಕೊಳ್ಳುತ್ತದೆ. ಇದನ್ನು ಅನೇಕ ಆಯುರ್ವೇದ ಔಷಧಿಗಳಲ್ಲಿ ಬಳಕೆ ಮಾಡುತ್ತಾರೆ. ಸ್ಪಿರುಲಿನಾ ಸೇವನೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ನೀಡುತ್ತದೆ.
ಸ್ಪಿರುಲಿನಾ ಆರೋಗ್ಯ ಪ್ರಯೋಜನಗಳು
ಖಿನ್ನತೆ ಹೊಡೆದೋಡಿಸುತ್ತದೆ
ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ 12 ಸ್ಪಿರುಲಿನಾದಲ್ಲಿ ಕಂಡು ಬರುತ್ತದೆ. ಖಿನ್ನತೆ ತೊಡೆದು ಹಾಕಲು ಮತ್ತು ಮೆದುಳನ್ನು ಪೋಷಿಸಲು ಅವಶ್ಯಕವಾಗಿದೆ. ಸ್ಪಿರುಲಿನಾ ಸೇವನೆ ಮೆದುಳಿಗೆ ಶಕ್ತಿ ನೀಡುತ್ತದೆ. ಮತ್ತು ರಕ್ತ ಕಣಗಳ ಉತ್ಪಾದನೆಗೆ ಸಹಕಾರಿ. ಗಂಭೀರ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ.
ಕಣ್ಣಿನ ಪ್ರಯೋಜನಗಳು
ಸ್ಪಿರುಲಿನಾ ಉತ್ತಮ ಪ್ರಮಾಣದ ವಿಟಮಿನ್ ಎ ಹೊಂದಿದೆ. ಇದು ಜೆರಿಯಾಟ್ರಿಕ್ ಕ್ಯಾಟರಾಕ್ಟ್, ರೆಟಿನೈಟಿಸ್, ನೆಫ್ರೋಟಿಕ್ ರೆಟಿನಾದ ಹಾನಿಯಂತಹ ಕಣ್ಣಿನ ಕಾಯಿಲೆಗಳ ಚಿಕಿತ್ಸೆಗೆ ಸಹಕಾರಿ. ಸ್ಪಿರುಲಿನಾ ಸೇವನೆ ದೃಷ್ಟಿ ಹೆಚ್ಚಿಸಲು ಮತ್ತು ಕಣ್ಣಿನ ಸ್ನಾಯುಗಳನ್ನು ಬಲಪಡಿಸುತ್ತದೆ.
ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ
ನಿಮ್ಮ ತೂಕ ಕಡಿಮೆ ಮಾಡಲು ಸ್ಪಿರುಲಿನಾ ಸಹಾಯ ಮಾಡುತ್ತದೆ. ಬೀಟಾ ಕ್ಯಾರೋಟಿನ್, ಕೊಬ್ಬಿನಾಮ್ಲಗಳು, ಕ್ಲೋರೊಫಿಲ್ ಮತ್ತು ಇತರ ಪೋಷಕಾಂಶಗಳು ಇದರಲ್ಲಿವೆ. ಇದು ಹೆಚ್ಚಿದ ತೂಕ ಕಡಿಮೆ ಮಾಡಲು ಸಹಕಾರಿ. ಉಪವಾಸ ಮಾಡುವಾಗ ಇದನ್ನು ತಿಂದರೆ ದೀರ್ಘ ಕಾಲ ಹಸಿವಾಗುವುದಿಲ್ಲ.
ಕ್ಯಾನ್ಸರ್ ತಡೆಗಟ್ಟುತ್ತದೆ
ಸ್ಪಿರುಲಿನಾದ ಸೇವನೆಯಿಂದ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳ ಅಪಾಯದಿಂದ ದೇಹದ ರಕ್ಷಣೆ ಸಾಧ್ಯ. ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಸ್ಪಿರುಲಿನಾ ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ಇದು ಹಾನಿಕಾರಕ ಸ್ವತಂತ್ರ ರಾಡಿಕಲ್ಗಳನ್ನು ನಾಶ ಮಾಡುತ್ತದೆ.
ಇದನ್ನೂ ಓದಿ: ಮಹಿಳೆಯರ ಮುಖದ ಮೇಲಿನ ಅನಗತ್ಯ ಕೂದಲು ತೆಗೆದು ಹಾಕುವುದು ಹೇಗೆ?
ಪಿತ್ತ ಜನಕಾಂಗವನ್ನು ಆರೋಗ್ಯಕರವಾಗಿಡುತ್ತದೆ
ಸ್ಪಿರುಲಿನಾದಲ್ಲಿ ಫೈಬರ್ ಮತ್ತು ಪ್ರೊಟೀನ್ ಉತ್ತಮ ಪ್ರಮಾಣದಲ್ಲಿವೆ. ಇದು ಯಕೃತ್ತನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡುತ್ತದೆ. ಇದು ಯಕೃತ್ತನ್ನು ಆರೋಗ್ಯಕರವಾಗಿರಿಸುತ್ತದೆ. ಹೆಪಟೈಟಿಸ್ ಮತ್ತು ಸಿರೋಸಿಸ್ ಅಪಾಯ, ಯಕೃತ್ತಿನ ಹಾನಿಯಿಂದ ರಕ್ಷಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ