Onion Peel: ರೂಟ್ ಟು ಸ್ಟೀಮ್ ಕುಕ್ಕಿಂಗ್ ಎಂದರೇನು? ಈರುಳ್ಳಿ ಸಿಪ್ಪೆಯ ಚಹಾ ಮಾಡುವುದು ಹೇಗೆ?

ಅಜ್ಜಿ ಅಡುಗೆ ಮಾಡುವಾಗ ಎಲ್ಲಾ ರೀತಿಯ ಬೇರು ಮತ್ತು ಕಾಂಡ ಹಾಗೂ ತಿರುಳನ್ನು ಅಡುಗೆ ಮಾಡಲು ಬಳಕೆ ಮಾಡುತ್ತಿದ್ದರು. ತರಕಾರಿಗಳ ಎಲ್ಲಾ ಭಾಗಗಳಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಹಲವು ರೀತಿಯ ಉತ್ಕರ್ಷಣ ನಿರೋಧಕ ಗುಣಗಳು ಈರುಳ್ಳಿ ಮತ್ತು ಬೆಳ್ಳುಳ್ಳಿಯ ಹೊರ ಸಿಪ್ಪೆಯಲ್ಲಿ ಅಡಗಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನೀವು ರೂಟ್ ಟು ಸ್ಟೀಮ್ ಕುಕ್ಕಿಂಗ್ (Root to Stem Cooking) ಅಡುಗೆ ವಿಷಯದ ಬಗ್ಗೆ ಕೇಳಿರಬಹುದು. ರೂಟ್ ಟು ಸ್ಟೀಮ್ ಕುಕ್ಕಿಂಗ್ ಅಡುಗೆ ಮಾಡುವಾಗ ಇದರಲ್ಲಿ ತರಕಾರಿಯ (Vegetables) ಯಾವುದೇ ಭಾಗವನ್ನು (Parts) ಎಸೆಯುವುದಿಲ್ಲ. ಸಿಪ್ಪೆಯಿಂದ ಹಿಡಿದು ಪ್ರತಿ ಭಾಗವನ್ನು ಬೇಯಿಸಿ, ಅಡುಗೆ ಮಾಡಲಾಗುತ್ತದೆ. ನಿಮ್ಮಲ್ಲಿ ಹೆಚ್ಚಿನವರು ವರ್ಷಗಟ್ಟಲೆ ತರಕಾರಿಗಳ ಕಾಂಡ ಮತ್ತು ಬೇರನ್ನು ಕಸವಾಗಿ ಬಿಸಾಡುತ್ತಾರೆ. ಅದರ ಮಧ್ಯದ ತಿರುಳನ್ನು ಇಟ್ಟುಕೊಂಡು ಅಡುಗೆಗೆ ಬಳಸುತ್ತಾರೆ. ಆದರೆ ವಾಸ್ತವದಲ್ಲಿ ಹಾಗೆ ಮಾಡುವುದು ತಪ್ಪು. ನಿಮ್ಮ ಅಜ್ಜಿಯರು ಹಳೆ ಕಾಲದಲ್ಲಿ ಅಡುಗೆ ಮಾಡುವಾಗ ಬೇರು, ಕಾಂಡ ಎಲ್ಲವನ್ನೂ ಬಳಕೆ ಮಾಡುತ್ತಿದ್ದರು.

    ಬೇರು ಮತ್ತು ಕಾಂಡ ಹಾಗೂ ತಿರುಳನ್ನು ಅಡುಗೆಗೆ ಬಳಸುವುದು

    ಅಜ್ಜಿ ಅಡುಗೆ ಮಾಡುವಾಗ ಎಲ್ಲಾ ರೀತಿಯ ಬೇರು ಮತ್ತು ಕಾಂಡ ಹಾಗೂ ತಿರುಳನ್ನು ಅಡುಗೆ ಮಾಡಲು ಬಳಕೆ ಮಾಡುತ್ತಿದ್ದರು. ಅವರಿಗೆ ಅದರ ಎಲ್ಲಾ ಪ್ರಯೋಜನಗಳು ತಿಳಿದಿದ್ದವು. ಏಕೆಂದರೆ ಹಳೆಯ ಕಾಲದಲ್ಲಿ ತರಕಾರಿಯ ಯಾವುದೇ ಭಾಗವನ್ನು ಎಸೆಯದೇ ಅಡುಗೆಗೆ ಬಳಕೆ ಮಾಡುತ್ತಿದ್ದರು. ತರಕಾರಿಗಳ ಎಲ್ಲಾ ಭಾಗಗಳಲ್ಲಿ ಪೋಷಕಾಂಶಗಳು ಹೇರಳವಾಗಿ ಕಂಡು ಬರುತ್ತವೆ.

    ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆ ಬಿಸಾಡದಿರಿ

    ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಗಳನ್ನು ನಾವು ಬಿಸಾಡುತ್ತೇವೆ. ಬಹುತೇಕರು ಅಡುಗೆ ಮಾಡುವಾಗ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆ ತೆಗೆದು ಬಳಕೆ ಮಾಡುತ್ತೇವೆ. ವಿಟಮಿನ್ ಎ, ಸಿ, ಇ ಮತ್ತು ಇತರ ಹಲವು ರೀತಿಯ ಉತ್ಕರ್ಷಣ ನಿರೋಧಕ ಗುಣಗಳು ಈರುಳ್ಳಿ ಮತ್ತು ಬೆಳ್ಳುಳ್ಳಿಯ ಹೊರ ಸಿಪ್ಪೆಯಲ್ಲಿ ಅಡಗಿವೆ.

    ಇದನ್ನೂ ಓದಿ: ಕಣ್ಣುಗಳಲ್ಲಿ ಉಂಟಾಗುವ ಈ ಸಮಸ್ಯೆಗಳು ಗಂಭೀರ ತೊಂದರೆಗೆ ಕಾರಣವಾಗುತ್ತವೆ

    ಫ್ಲೇವನಾಯ್ಡ್, ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ಮುಖ್ಯವಾಗಿ ಈರುಳ್ಳಿ ಸಿಪ್ಪೆಯಲ್ಲಿ ಕಂಡು ಬರುತ್ತವೆ. ಅಂತಹ ಸ್ಥಿತಿಯಲ್ಲಿ, ಆರೋಗ್ಯಕ್ಕೆ ಸಂಬಂಧಿಸಿದ ಪ್ರಯೋಜನಗಳನ್ನು ತಿಳಿಯಿರಿ. ಮತ್ತು ಈರುಳ್ಳಿ ಸಿಪ್ಪೆ ಮತ್ತು ಬೆಳ್ಳುಳ್ಳಿ ಸಿಪ್ಪೆಯನ್ನು ಹೇಗೆ ಬಳಕೆ ಮಾಡಬೇಕೆಂದು ಇಲ್ಲಿ ನಾವು ನೋಡೋಣ. ಜೊತೆಗೆ  ಅದನ್ನು ಮತ್ತೆ ಎಸೆಯುವ ಮೊದಲು ನೀವು ಖಂಡಿತವಾ ಒಮ್ಮೆ ಯೋಚಿಸಿ.

    ಸ್ನಾಯು ನೋವು ನಿವಾರಣೆಗೆ ಪ್ರಯೋಜನಕಾರಿ

    ಈರುಳ್ಳಿ ಸಿಪ್ಪೆಯಲ್ಲಿರುವ ಉತ್ಕರ್ಷಣ ನಿರೋಧಕ ಗುಣ ಲಕ್ಷಣಗಳು ಸ್ನಾಯು ಸೆಳೆತ ಅಥವಾ ಸ್ನಾಯು ನೋವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಈ ವೇಳೆ ನೀವು ಈರುಳ್ಳಿ ಸಿಪ್ಪೆಯನ್ನು 10 ರಿಂದ 20 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಬಹುದು. ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಮಲಗುವ ಮೊದಲು ಚಹಾದಂತೆ ಕುಡಿಯಿರಿ.

    ಚರ್ಮದ ತುರಿಕೆಗೆ ಪರಿಹಾರ ನೀಡುತ್ತದೆ

    ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಯು ಚರ್ಮವು ಶಿಲೀಂಧ್ರನಾಶಕ ಗುಣ ಹೊಂದಿದೆ. ಇದು ಕ್ರೀಡಾಪಟುಗಳು ತಮ್ಮ ಕಾಲು ಸೇರಿದಂತೆ ತುರಿಕೆ ಮುಂತಾದ ಚರ್ಮದ ಸಮಸ್ಯೆ ನಿವಾರಿಸುವಲ್ಲಿ ಅವುಗಳನ್ನು ಪರಿಣಾಮಕಾರಿಯಾಗಿ ಮಾಡುತ್ತದೆ. ಪರಿಹಾರಕ್ಕಾಗಿ ನಿಮ್ಮ ಚರ್ಮದ ಮೇಲೆ ನೀರಿನಲ್ಲಿ ಬೇಯಿಸಿದ ಸಿಪ್ಪೆ ಅನ್ವಯಿಸಬಹುದು.

    ನಿದ್ರಾಹೀನತೆ ಸಮಸ್ಯೆ ತೊಡೆದು ಹಾಕುವಲ್ಲಿ ಪ್ರಯೋಜನಕಾರಿ

    ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಗಳು ನಿದ್ರಾಹೀನತೆಗೆ ನೈಸರ್ಗಿಕ ಉತ್ತೇಜಕಗಳಾಗಿವೆ. ನೀವು ನಿದ್ದೆ ಮಾಡದಿದ್ದರೆ ಅಥವಾ ಆಗಾಗ್ಗೆ ಎದ್ದೇಳುತ್ತಿದ್ದರೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಯಿಂದ ತಯಾರಿಸಿದ ಚಹಾವು ನಿಮಗೆ ಪ್ರಯೋಜನಕಾರಿ ಎಂದು ಸಾಬೀತು ಪಡಿಸಬಹುದು.

    ದೃಷ್ಟಿ ಹೆಚ್ಚಿಸಲು ಉಪಯುಕ್ತವಾಗಿದೆ

    ವಿಟಮಿನ್ ಸಿ ಮತ್ತು ಎ ಈರುಳ್ಳಿ ಸಿಪ್ಪೆಯಲ್ಲಿ ಹೇರಳವಾಗಿ ಕಂಡು ಬರುತ್ತದೆ. ಮತ್ತು ಈ ಎರಡೂ ಜೀವಸತ್ವಗಳು ಕಣ್ಣಿನ ಆರೋಗ್ಯಕ್ಕೆ ಬಹಳ ಮುಖ್ಯ. ಕಣ್ಣುಗಳು ಆರೋಗ್ಯಕ್ಕೆ ನೀವು ಅದರಿಂದ ತಯಾರಿಸಿದ ಚಹಾ ಸೇವನೆ ಮಾಡಬಹುದು.

    ಈರುಳ್ಳಿ ಸಿಪ್ಪೆಯಿಂದ ಚಹಾ ತಯಾರಿಸುವುದು ಹೇಗೆ?

    ಬೇಕಾಗುವ ಸಾಮಗ್ರಿಗಳು

    3 ರಿಂದ 4 ಮಧ್ಯಮ ಗಾತ್ರದ ಈರುಳ್ಳಿ ಸಿಪ್ಪೆ

    2 ಕಪ್ ನೀರು

    1 ಟೀ ಚಮಚ ಜೇನುತುಪ್ಪ

    ಇದನ್ನೂ ಓದಿ: ಮೂಳೆಗಳಲ್ಲಿ ಕಿರ್ ಎಂಬ ಶಬ್ಧ ಉಂಟಾಗುವುದು ಏಕೆ? ಇದಕ್ಕೆ ಕಾರಣವೇನು?

    ಈರುಳ್ಳಿ ಸಿಪ್ಪೆಯಿಂದ ಚಹಾ ತಯಾರಿಸುವ ವಿಧಾನ

    ಈರುಳ್ಳಿ ಸಿಪ್ಪೆಯಿಂದ ಚಹಾ ತಯಾರಿಸಲು, ಈರುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಅದನ್ನು ನೀರಿನಲ್ಲಿ ಕುದಿಸಿ. ನೀರಿನ ಬಣ್ಣ ಬದಲಾಗುವವರೆಗೆ ಬೇಯಿಸಿ ಅದನ್ನು ಒಂದು ಕಪ್‌ನಲ್ಲಿ ಫಿಲ್ಟರ್ ಮಾಡಿ ಮತ್ತು ರುಚಿಗೆ ಬೇಕಾದಷ್ಟು ಜೇನುತುಪ್ಪ ಸೇರಿಸಿ ಕುಡಿಯಿರಿ.
    Published by:renukadariyannavar
    First published: