PCOS Remedy: ಇಷ್ಟು ವಿಚಾರ ಫಾಲೋ ಮಾಡಿದ್ರೆ ಸಾಕಂತೆ, ಪಿಸಿಓಎಸ್ ನಿಮ್ಮ ಹತ್ರಕ್ಕೂ ಬರಲ್ಲ ಅಂತಾರೆ ವೈದ್ಯರು

What is PCOS: ಪಿಸಿಓಎಸ್ ಹೊಂದಿರುವ ಮಹಿಳೆಯರು ಹಾರ್ಮೋನುಗಳ ವ್ಯತ್ಯಾಸ ಮತ್ತು ಚಯಾಪಚಯ ಸಮಸ್ಯೆಗಳನ್ನು ಹೊಂದಿರುತ್ತಾರೆ, ಅದು ಅವರ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸದ್ಯ ಮಹಿಳೆಯರು ಹಲವಾರು ಆರೋಗ್ಯ ಸಮಸ್ಯೆಗಳನ್ನು (Health Problems) ಅನುಭವಿಸುತ್ತಿದ್ದಾರೆ. ಒತ್ತಡದ ಜೀವನ (Stress Life) ಅವರ ಆರೋಗ್ಯ ಮೇಲೆ ಪರಿಣಾಮ ಬೀರುತ್ತಿದೆ. ಕೆಲ ವರದಿಗಳ ಪ್ರಕಾರ, ಐದು ಮಹಿಳೆಯರಲ್ಲಿ ಒಬ್ಬರು  ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ ಅಥವಾ ಪಿಸಿಓಎಸ್​ (PCOS), ಸಮಸ್ಯೆಯಿಂದ ಬಳಲುತ್ತಿದ್ದಾರೆ.  ಈ ಸಮಸ್ಯೆಯು ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಹಾಗೂ  ಹಾರ್ಮೋನುಗಳ ವ್ಯತ್ಯಾಸದಿಂದ ಇದು ಉಂಟಾಗುತ್ತದೆ. ಈ ಸಮಸ್ಯೆ ಸದ್ಯ ಬಹುತೇಕ ಮಹಿಳೆಯರಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಇದು ಮಹಿಳೆಯರನ್ನು ಚಿಂತೆಗೀಡು ಮಾಡುತ್ತದೆ. ಆದರೆ ಈ ಸಮಸ್ಯೆಗೆ ಪರಿಹಾರ ಇಲ್ಲ ಎಂದಲ್ಲ. ಈ ಪಿಸಿಓಎಸ್​ ಸಮಸ್ಯೆಗೆ ಕಾರಣವೇನು? ಅದಕ್ಕೆ ಔಷಧಿಗಳೇನು? ಎನ್ನುವ ಕುರಿತು ರಾಧಾಕೃಷ್ಣ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ.ವಿದ್ಯಾ ಭಟ್​ ಅವರು ನ್ಯೂಸ್​ 18 ಜೊತೆ ಮಾತನಾಡಿದ್ದು, ಈ ತೊಂದರೆಗೆ ಕಾರಣವನ್ನು ಹಾಗೂ ಏನು ಮಾಡಬೇಕು ಎಂಬುದನ್ನ ಬಿಚ್ಚಿಟ್ಟಿದ್ದಾರೆ.

ಪಿಸಿಓಎಸ್ ಹೊಂದಿರುವ ಮಹಿಳೆಯರು ಹಾರ್ಮೋನುಗಳ ವ್ಯತ್ಯಾಸ ಮತ್ತು ಚಯಾಪಚಯ ಸಮಸ್ಯೆಗಳನ್ನು ಹೊಂದಿರುತ್ತಾರೆ, ಅದು ಅವರ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹಾರ್ಮೋನುಗಳ ಅಸಮತೋಲನವು ಅಂಡಾಶಯದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಂಡಾಶಯಗಳು ಆರೋಗ್ಯಕರ ಪಿರಿಯಡ್ಸ್​ಗೆ ಕಾರಣವಾಗುವ ಪ್ರತಿ ತಿಂಗಳು ಬಿಡುಗಡೆಯಾಗುವ ಮೊಟ್ಟೆಯನ್ನು ತಯಾರಿಸುತ್ತವೆ. ಪಿಸಿಓಎಸ್‌ ಸಮಸ್ಯೆ ಇದ್ದಲ್ಲಿ ಅಂಡಾಣು ಬೆಳವಣಿಗೆಯಾಗದಿರಬಹುದು ಅಥವಾ ಅಂಡೋತ್ಪತ್ತಿ ಸಮಯದಲ್ಲಿ ಅದು ಬಿಡುಗಡೆಯಾಗದಿರಬಹುದು. ಈ ಸಮಸ್ಯೆ ಕಾಣಿಸಿಕೊಂಡಲ್ಲಿ ವೈದ್ಯರನ್ನು ಭೇಟಿ ಮಾಡುವುದು ಬಹಳ ಮುಖ್ಯ ಎನ್ನುತ್ತಾರೆ ಡಾ. ವಿದ್ಯಾ ಭಟ್​. ಅಲ್ಲದೇ, ಅವರ ಪ್ರಕಾರ ಇದಕ್ಕೆ ಮುಖ್ಯವಾಗಿ ಪರಿಹಾರ ಎಂದರೆ ಲೈಫ್​ಸ್ಟೈಲ್​ ಮ್ಯಾನೇಜ್​ಮೆಂಟ್​. ನಮ್ಮ ಆಹಾರ ಪದ್ಧತಿ ಹಾಗೂ ಜೀವನಶೈಲಿಯಲ್ಲಿ ಕೆಲ ಬದಲಾವಣೆ ಮಾಡಿಕೊಂಡರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.  ಹಾಗಾದ್ರೆ ಪಿಸಿಓಎಸ್​ ಸಮಸ್ಯೆ ಇರುವ ಮಹಿಳೆಯರು ಯಾವ ರೀತಿ ಜೀವನ ಶೈಲಿ ರೂಢಿಸಿಕೊಳ್ಳಬೇಕು ಎಂಬುದು ಇಲ್ಲಿದೆ.

ಸರಿಯಾದ ಡಯೆಟ್​ ಪಾಲನೆ ಮಾಡುವುದು ಬಹಳ ಮುಖ್ಯ

PCOD/PCOS ನಿಂದ ಬಳಲುತ್ತಿರುವ ಮಹಿಳೆಯರು ಸರಿಯಾದ ಡಯೆಟ್​ ಫಾಲೋ ಮಾಡಬೇಕು. ಆಹಾರದಲ್ಲಿ ಫೈಬರ್ ಸಮೃದ್ಧವಾಗಿರಬೇಕು ಮತ್ತು ಕಡಿಮೆ ಕಾರ್ಬೋಹೈಡ್ರೇಟ್ಗಳು ಮತ್ತು ಸಂಸ್ಕರಿಸಿದ ಆಹಾರಗಳು ಇರಬೇಕು. ಗೋಧಿ ಹಿಟ್ಟು, ಧಾನ್ಯಗಳು, ಅವಲಕ್ಕಿ ಮತ್ತು ಗೋಧಿ ಪಾಸ್ತಾ ಹೀಗೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರವನ್ನು ಸೇವನೆ ಮಾಡುವುದು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಈ ಆರೋಗ್ಯ ಸಮಸ್ಯೆಗಳು ಇದ್ರೆ ಮಿಸ್​ ಆಗಿಯೂ ಲಸ್ಸಿ ಕುಡಿಯಲೇಬೇಡಿ

ದಿನನಿತ್ಯ ವ್ಯಾಯಾಮ ಮಾಡಬೇಕು

ಪಿಸಿಓಎಸ್​ ಸಮಸ್ಯೆಯಿಂದ ಬಳಲುತ್ತಿರುವವರು ತೂಕ ಹೆಚ್ಚಾಗುವುದು ಸಾಮಾನ್ಯ. ಅದೇನೇ ಇರಲಿ ಪ್ರತಿನಿತ್ಯ ವ್ಯಾಯಾಮ ಮಾಡುವುದು ಬಹಳ ಉತ್ತಮ. ಬ್ಯುಸಿ ಇದ್ದರೂ ಸಹ ದಿನಕ್ಕೆ 30 ನಿಮಿಷ ವ್ಯಾಯಾಮವನ್ನು ಮಾಡಲೇಬೇಕು. ಋತುಚಕ್ರವನ್ನು ಕ್ರಮ ಬದ್ಧಗೊಳಿಸಲು ಮತ್ತು ಹೃದಯ ರಕ್ತನಾಳದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ವ್ಯಾಯಾಮ ಸಹಾಯ ಮಾಡುತ್ತದೆ.


ಸಣ್ಣ ಪ್ರಮಾಣದಲ್ಲಿ ಆಗಾಗ ತಿನ್ನುವುದು ಉತ್ತಮ

PCOS  ಹೊಂದಿರುವ ಮಹಿಳೆಯರು ದೇಹದಲ್ಲಿ ನೀರಿನ  ಸಮಸ್ಯೆಯನ್ನು ಅನುಭವಿಸಬಹುದು. ಇದಕ್ಕೆ ಉತ್ತಮ ಮಾರ್ಗ ಎಂದರೆ ಚೆನ್ನಾಗಿ ನೀರು ಕುಡಿಯುವುದು. ಮತ್ತೊಂದು ಮುಖ್ಯ ವಿಚಾರ ಎಂದರೆ ಒಂದು ಬಾರಿಗೆ ಹೆಚ್ಚು ಆಹಾರ ತಿನ್ನುವುದಕ್ಕಿಂತ ಸ್ವಲ್ಪ ಸ್ವಲ್ಪ ಆಹಾರವನ್ನು ಆಗಾಗ ತಿನ್ನುವುದು ನಿಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಪೋಷಕರೇ, ಇಷ್ಟು ಮಾಡಿದ್ರೆ ಸಾಕಂತೆ ನಿಮ್ಮ ಮಕ್ಕಳ ಐಕ್ಯೂ ಲೆವೆಲ್​ ಹೆಚ್ಚಾಗುತ್ತೆ

ಜಂಕ್ ಆಹಾರಗಳಿಂದ ದೂರವಿರಬೇಕು

ಎಲ್ಲರನ್ನೂ ಜಂಕ್ ಆಹಾರಗಳು ಸೆಳೆಯುತ್ತವೆ. ಅವುಗಳ ರುಚಿ ಪದೇ ಪದೇ ತಿನ್ನುವಂತೆ ಮಾಡುತ್ತದೆ. ಆದರೆ ಪಿಸಿಓಎಸ್​ ಸಮಸ್ಯೆ ಇದ್ದರೆ, ಈ ಆಹಾರಗಳಿಂದ ದೂರವಿರುವುದು ಬಹಳ ಮುಖ್ಯ. ಇವುಗಳು ನಿಮ್ಮ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ಹೊರಗಿನ ಆಹಾರಗಳಿಂದ ದೂರವಿರಿ. ಈ ಎಲ್ಲಾ ಟಿಪ್ಸ್ ಫಾಲೋ ಮಾಡುವುದು ಎಷ್ಟು ಮುಖ್ಯವೋ ಹಾಗೆಯೇ, ಮೊದಲ ಬಾರಿ ಪಿರಿಯಡ್ಸ್ ವ್ಯತ್ಯಾಸವಾದಗಲೇ ವೈದ್ಯರನ್ನು ಸಂಪರ್ಕಿಸಿ, ಅವರ ಸಲಹೆ ಪಡೆಯುವುದು ಸಹ ಬಹಳ ಮುಖ್ಯ.
Published by:Sandhya M
First published: