ಮಾನಸಿಕ ಆರೋಗ್ಯ (Mental Health) ಕಾಪಾಡುವಲ್ಲಿ ದೈಹಿಕ ಚಟುವಟಿಕೆ (Physical Activities), ಆಹಾರ (Food) ಪದ್ಧತಿ ತುಂಬಾ ಮುಖ್ಯ ಪಾತ್ರ ವಹಿಸುತ್ತದೆ. ವ್ಯಕ್ತಿ ಎಷ್ಟು ಆನಂದದಿಂದ (Happiness) ಇರುತ್ತಾನೆಯೋ ಅದಕ್ಕೆ ಮಾನಸಿಕ ಆರೋಗ್ಯವೂ ಮುಖ್ಯವಾಗುತ್ತದೆ. ಮಾನಸಿಕ ಆರೋಗ್ಯ ಚೆನ್ನಾಗಿರಲು ಉತ್ತಮ ಆಹಾರ ಸೇವನೆ ಮತ್ತು ಯೋಗ, ಬೆಳಗ್ಗೆ ಮತ್ತು ಸಂಜೆ ಸುಂದರವಾದ ಪ್ರಕೃತಿಯಲ್ಲಿ ವಾಕಿಂಗ್ ಮಾಡುವುದು ಮನಸ್ಸಿಗೆ ಮುದ ನೀಡುತ್ತದೆ. ಇದರಲ್ಲಿ ವಿಟಮಿನ್ ಗಳು ಪ್ರಮುಖ ಪಾತ್ರ ವಹಿಸುತ್ತವೆ. ನಾವು ತಿನ್ನುವ ಆಹಾರದಲ್ಲಿ ಯಾವುದೇ ಜೀವಸತ್ವ ಮತ್ತು ಪೋಷಕಾಂಶಗಳೇ ಇರದಿದ್ದರೆ ದೇಹವು ಸಮಸ್ಯೆಗಳ ಗೂಡಾಗುತ್ತದೆ. ಹಾಗಾಗಿ ತಿನ್ನುವ ಆಹಾರದ ಬಗ್ಗೆ ಸಾಕಷ್ಟು ಗಮನಹರಿಸಬೇಕು.
ಮಾನಸಿಕ ಆರೋಗ್ಯಕ್ಕೆ ಪೋಷಕಾಂಶ ಭರಿತ ಆಹಾರ ಸೇವನೆ ಮಾಡಿ
ಆಹಾರದಲ್ಲಿ ಕೆಲವು ಜೀವಸತ್ವಗಳು ಮತ್ತು ಪೋಷಕಾಂಶಗಳ ಕೊರತೆಯಿದ್ದಾಗ ಮಾನಸಿಕ ಆರೋಗ್ಯ ಸಮಸ್ಯೆಗೆ ಇದು ಕಾರಣವಾಗುತ್ತದೆ. ಮಾನವನ ಮೆದುಳಿನ ಮೇಲೆ ಜೀವಸತ್ವಗಳು ಮತ್ತು ಪೋಷಕಾಂಶಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿಯುವುದು ತುಂಬಾ ಮುಖ್ಯ.
ಪೌಷ್ಟಿಕ ತಜ್ಞೆ ಕರಿಷ್ಮಾ ಷಾ ಮಾನಸಿಕ ಆರೋಗ್ಯ ಕಾಪಾಡುವ ಬಗ್ಗೆ ಕೆಲವು ವಿಷಯಗಳನ್ನು ತಿಳಿಸಿದ್ದಾರೆ. ದೇಹದಲ್ಲಿ ವಾತ, ಪಿತ್ತ, ಕಫಗಳೆಂಬ ತ್ರಿದೋಷಗಳಲ್ಲಿ ಸ್ವಲ್ಪ ಏರುಪೇರಾದರೂ ಮನುಷ್ಯನ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ ಎಂದು ತಿಳಿಸುತ್ತಾರೆ.
ಪಿತ್ತ ದೋಷ ಎಂದರೇನು?
ಕರಿಷ್ಮಾ ಷಾ ಹೇಳುವ ಪ್ರಕಾರ, ದೇಹದಲ್ಲಿ ಪಿತ್ತದ ಪ್ರಮಾಣ ಹೆಚ್ಚಿದರೆ ವ್ಯಕ್ತಿಯು ಹೆಚ್ಚು ಕೋಪಿಸಿಕೊಳ್ಳುತ್ತಾನೆ. ಪಿತ್ತ ದೋಷವು ಅಗ್ನಿ ಮತ್ತು ಜಲ್ ಎಂಬ ಎರಡು ಅಂಶಗಳಿಂದ ಮಾಡಲ್ಪಟ್ಟಿದೆ. ಪಿತ್ತವು ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನುಗಳು ಮತ್ತು ಕಿಣ್ವಗಳನ್ನು ನಿಯಂತ್ರಿಸುತ್ತದೆ.
ದೇಹದ ಉಷ್ಣತೆ, ಜೀರ್ಣಕಾರಿ ಬೆಂಕಿಯನ್ನು ಪಿತ್ತ ನಿಯಂತ್ರಿಸುತ್ತದೆ. ಹಾಗಾಗಿ ಪಿತ್ತ ಸಮ ಸ್ಥಿತಿಯಲ್ಲಿರುವುದು ತುಂಬಾ ಮುಖ್ಯ. ಇದು ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ. ಪಿತ್ತರಸವು ಮುಖ್ಯವಾಗಿ ದೇಹದಲ್ಲಿ ಹೊಟ್ಟೆ ಮತ್ತು ಸಣ್ಣ ಕರುಳಿನಲ್ಲಿದೆ.
ಪಿತ್ತ ದೋಷ ಅಸಮವಾದರೆ ಮಲಬದ್ಧತೆ, ಅಜೀರ್ಣ, ಆ್ಯಸಿಡಿಟಿ ಮುಂತಾದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗೆ ಕಾರಣವಾಗುತ್ತದೆ. ಪಿತ್ತ ದೋಷವು ಅಸಮತೋಲನವಾದ್ರೆ ಜೀರ್ಣಕಾರಿ ಬೆಂಕಿಯು ದುರ್ಬಲವಾಗುತ್ತದೆ. ತಿಂದ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ.
ಪಿತ್ತ ಪ್ರಕೃತಿ ಹೊಂದಿರುವ ಜನರು ಸ್ವಭಾವತಃ ಸಿಟ್ಟು, ಜ್ಞಾಪಕ ಶಕ್ತಿ ಕಳೆದುಕೊಳ್ಳುವುದು, ಕಷ್ಟಗಳನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ, ಲೈಂಗಿಕ ಬಯಕೆಯ ಕೊರತೆ ಉಂಟಾಗುತ್ತದೆ. ತುಂಬಾ ನಕಾರಾತ್ಮಕ ಭಾವನೆ, ಮಾನಸಿಕ ಅಸ್ವಸ್ಥತೆ ಹೊಂದಿರುತ್ತಾರೆ.
ಪಿತ್ತ ಹೆಚ್ಚಾಗಲು ಕಾರಣವೇನು?
ದೇಹದಲ್ಲಿ ಪಿತ್ತ ಹೆಚ್ಚಾಗಲು ಹಲವು ಕಾರಣಗಳಿವೆ. ಮಸಾಲೆಯುಕ್ತ ಆಹಾರ, ಹೆಚ್ಚು ಉಪ್ಪು ಸೇವನೆ, ಕಷ್ಟ ಪಟ್ಟು ಕೆಲಸ ಮಾಡುವುದು, ಯಾವಾಗಲೂ ಮಾನಸಿಕ ಉದ್ವೇಗ ಮತ್ತು ಕೋಪವು ಪಿತ್ತ ಹೆಚ್ಚಾಗಲು ಕಾರಣವಾಗಿದೆ.
ಅತಿಯಾದ ಮದ್ಯ ಸೇವನೆ, ಸರಿಯಾದ ಸಮಯಕ್ಕೆ ಊಟ ಮಾಡದಿರುವುದು, ಹಸಿವಾಗದಿದ್ದರೂ ಊಟ ಮಾಡುವುದು, ಅತಿಯಾಗಿ ಎಳ್ಳೆಣ್ಣೆ, ಸಾಸಿವೆ, ಮೊಸರು, ಮಜ್ಜಿಗೆ, ಹುಳಿ ಪದಾರ್ಥ ಸೇವಿಸುವುದು, ಹೆಚ್ಚು ಮಾಂಸ ತಿನ್ನುವುದು ಪಿತ್ತವನ್ನು ಹೆಚ್ಚಿಸುತ್ತದೆ.
ಹೆಚ್ಚಿದ ಪಿತ್ತ ಸರಿಪಡಿಸಲು, ಮೊದಲು ಪಿತ್ತ ದೋಷ ಹೆಚ್ಚಿಸುವ ಅಂಶಗಳಿಮದ ದೂರವಿರಿ. ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿ. ಪಿತ್ತ ದೋಷ ಇರುವವರು ಮೂಲಂಗಿ, ಕರಿಮೆಣಸು, ಎಣ್ಣೆ, ಗೋಡಂಬಿ, ಕಡಲೆಕಾಯಿ, ಪಿಸ್ತಾ, ಆಕ್ರೋಟ್, ಬಾದಾಮಿ, ಕಾಫಿ ಮತ್ತು ಆಲ್ಕೋಹಾಲ್ ಸೇವನೆ ತಪ್ಪಿಸಿ.
ಇದನ್ನೂ ಓದಿ: ಅರಿಶಿನ ಫೇಸ್ಪ್ಯಾಕ್ ಹಾಕಿದ್ರೆ ಸಾಕು ತ್ವಚೆ ಒಣಗುವ ಸಮಸ್ಯೆಗೆ ಪರಿಹಾರ ಸಿಗುತ್ತೆ
ಪಿತ್ತ ದೋಷ ಸರಿಪಡಿಸಲು ಯಾವ ಪೋಷಕಾಂಶ ಭರಿತ ಪದಾರ್ಥ ಸೇವಿಸಬೇಕು?
ಮೆಗ್ನೀಸಿಯಮ್ ಪೋಷಕಾಂಶ ಭರಿತ ಹಣ್ಣುಗಳು ಮತ್ತು ತರಕಾರಿ ಸೇವಿಸಿ. ವಿಟಮಿನ್ ಬಿ 12 ಸಮೃದ್ಧ ಆಹಾರ ಸೇವನೆ ಮಾಡಿ. ಕಬ್ಬಿಣ ಪೋಷಕಾಂಶ ಭರಿತ ಆಹಾರ ಸೇವನೆ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ