• Home
  • »
  • News
  • »
  • lifestyle
  • »
  • Brain Stroke: ಮಿನಿ ಸ್ಟ್ರೋಕ್ ಎಂದರೇನು? ಇದರ ಲಕ್ಷಣಗಳು ಮತ್ತು ತಡೆಗಟ್ಟುವ ಮಾರ್ಗ ತಿಳಿದುಕೊಳ್ಳಿ

Brain Stroke: ಮಿನಿ ಸ್ಟ್ರೋಕ್ ಎಂದರೇನು? ಇದರ ಲಕ್ಷಣಗಳು ಮತ್ತು ತಡೆಗಟ್ಟುವ ಮಾರ್ಗ ತಿಳಿದುಕೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಹದ ಇತರೆ ಅಂಗಗಳಿಗೆ ಹೇಗೆ ರಕ್ತ ಸಂಚಾರ ಹಾಗೂ ರಕ್ತ ಪೂರೈಕೆ ಆಗುವುದು ಮುಖ್ಯವೋ ಅಷ್ಟೇ ಮೆದುಳಿಗೂ ರಕ್ತ ಪೂರೈಕೆಯಾಗುವುದು ಮುಖ್ಯವಾಗುತ್ತದೆ. ಮೆದುಳಿನ ಸ್ಟ್ರೋಕ್ ಉಂಟಾಗಲು ಕೆಲವು ಕಾರಣಗಳಿವೆ.

  • Share this:

    ಮೆದುಳಿನ ಭಾಗಗಳಿಗೆ (Brain parts) ಸಾಕಷ್ಟು ರಕ್ತ ಪೂರೈಕೆ (Blood Circulation) ಆಗದೇ ಹೋದಾಗ ಮೆದುಳಿನ ಸ್ಟ್ರೋಕ್ (Brain Stroke) ಸಂಭವಿಸುತ್ತದೆ. ಮಾರಣಾಂತಿಕ ಮೆದುಳಿನ ಸ್ಟ್ರೋಕ್ ಸಾಕಷ್ಟು ಸಮಸ್ಯೆ ತಂದೊಡ್ಡುತ್ತದೆ. ಸ್ಟ್ರೋಕ್ ಆರೋಗ್ಯ ಸಮಸ್ಯೆಯನ್ನು (Health Problems) ಕೆಲವೊಮ್ಮೆ ಮೆದುಳಿನ ದಾಳಿ ಎಂದು ಕರೆಯುತ್ತಾರೆ. ದೇಹದ ಇತರೆ ಅಂಗಗಳಿಗೆ ಹೇಗೆ ರಕ್ತ ಸಂಚಾರ ಹಾಗೂ ರಕ್ತ ಪೂರೈಕೆ ಆಗುವುದು ಮುಖ್ಯವೋ, ಅಷ್ಟೇ ಮೆದುಳಿಗೂ ರಕ್ತ ಪೂರೈಕೆಯಾಗುವುದು ಮುಖ್ಯವಾಗುತ್ತದೆ. ಮೆದುಳಿನ ಸ್ಟ್ರೋಕ್ ಉಂಟಾಗಲು ಕೆಲವು ಕಾರಣಗಳಿವೆ. ಅದರಲ್ಲಿ ಮೆದುಳಿನಲ್ಲಿನ ರಕ್ತನಾಳವು ಸಿಡಿದಾಗ ಮೆದುಳಿನ ಸ್ಟ್ರೋಕ್ ಸಂಭವಿಸುವುದು ಮುಖ್ಯ ಕಾರಣ ಆಗಿದೆ.


    ಮೆದುಳಿನ ಸ್ಟ್ರೋಕ್ ಸಂಭವಿಸಲು ಕಾರಣಗಳು


    ಮೆದುಳಿನ ಸ್ಟ್ರೋಕ್ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯು ಪರಿಣಾಮಕಾರಿ ಚಿಕಿತ್ಸೆ ಪಡೆದುಕೊಳ್ಳದೇ ಹೋದ್ರೆ ದೀರ್ಘಾವಧಿಯ ಅಂಗವೈಕಲ್ಯ ಹಾಗೂ ಸಾವು ಸಂಭವಿಸುವ ಸಾಧ್ಯತೆ ಹೆಚ್ಚು. ದೇಹದ ಕೆಲ ಭಾಗಗಳಲ್ಲಿ ನೋವು ತೊಂದರೆ ಅನುಭವಿಸುವುದು ಪಾರ್ಶ್ವವಾಯು ಸಮಸ್ಯೆಯ ಸಂಕೇತವಾಗಿದೆ.


    ಮೆದುಳಿನ ಸ್ಟ್ರೋಕ್ ಸಂಭವಿಸುವ ಕೆಲವು ದಿನಗಳ ಮೊದಲು ತಲೆನೋವು, ಮರಗಟ್ಟುವಿಕೆ, ಜುಮ್ಮೆನಿಸುವಿಕೆ ಸಮಸ್ಯೆ ಕಾಡುತ್ತದೆ. ಆದರೆ ತುಂಬಾ ಜನರು ಈ ಲಕ್ಷಣಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಒಂದು ಅಧ್ಯಯನದ ಪ್ರಕಾರ, ವಿಶ್ವದಾದ್ಯಂತ ಸಾವು ಮತ್ತು ಅಂಗವೈಕಲ್ಯ ಪ್ರಕರಣಗಳ ಹೆಚ್ಚಳಕ್ಕೆ ಮೆದುಳಿನ ಸ್ಟ್ರೋಕ್ ಎರಡನೇ ಪ್ರಮುಖ ಹಾಗೂ ಮುಖ್ಯ ಕಾರಣ ಆಗಿದೆ.




    ಜೊತೆಗೆ ಭಾರತದಲ್ಲಿ ಅಂಗವೈಕಲ್ಯ ಹೆಚ್ಚಳಕ್ಕೆ ಐದನೇ ಪ್ರಮುಖ ಹಾಗೂ ಮುಖ್ಯ ಕಾರಣ ಆಗಿದೆ. ಇತ್ತೀಚಿಗೆ ನಡೆದ ಕೆಲವು ಅಧ್ಯಯನ ಮತ್ತು  ಸಂಶೋಧನೆಗಳು ಈ ಮೂಕ ಕೊಲೆಗಾರ ಕಾಯಿಲೆಯಾಗಿರುವ ಮೆದುಳಿನ ಸ್ಟ್ರೋಕ್ ಸಮಸ್ಯೆ ಬಗ್ಗೆ ಕೆಲವು ಮಾಹಿತಿ ನೀಡಿವೆ.


    ವಾರದ ಮೊದಲು ಮೆದುಳಿನ ಸ್ಟ್ರೋಕ್ ಲಕ್ಷಣಗಳು ಗೋಚರಿಸುತ್ತವೆ


    ಅಧ್ಯಯನದಲ್ಲಿ ಹೇಳಿದ ಪ್ರಕಾರ, ಮೆದುಳಿನ ಸ್ಟ್ರೋಕ್ ಸಂಭವಿಸುವ ವಾರದ ಮೊದಲೇ ದೇಹದಲ್ಲಿ ಅದರ ರೋಗ ಲಕ್ಷಣಗಳು ಗೋಚರಿಸುತ್ತವೆ. ಶೇ. 43 ರಷ್ಟು ಸ್ಟ್ರೋಕ್ ರೋಗಿಗಳು ಪ್ರಮುಖ ಸ್ಟ್ರೋಕ್‌ ಗೆ ತುತ್ತಾಗುವ ಒಂದು ವಾರದ ಮೊದಲು ದೇಹದಲ್ಲಿ ಕೆಲವು ಮಿನಿ ಸ್ಟ್ರೋಕ್ ರೋಗಲಕ್ಷಣ ಅನುಭವಿಸುತ್ತಾರೆ ಎಂದು ತಿಳಿಸಿದೆ.


    ಮಿನಿ ಸ್ಟ್ರೋಕ್ ಎಂದರೇನು?


    ಮಿನಿ ಸ್ಟ್ರೋಕ್ ಸಂಭವಿಸಿದ್ರೆ ಇದನ್ನು ಅಸ್ಥಿರ ರಕ್ತದ ಕೊರತೆಯ ದಾಳಿ ಅಂತಾ ಕರೆಯುತ್ತಾರೆ. ಇದು ಅಲ್ಪಾವಧಿಯವರೆಗಿರುತ್ತದೆ. ಮೆದುಳಿಗೆ ರಕ್ತ ಪೂರೈಕೆಯಲ್ಲಿ ಸಂಕ್ಷಿಪ್ತ ಅಡಚಣೆ ಉಂಟಾದಾಗ ಮಿನಿ ಸ್ಟ್ರೋಕ್ ಸಮಸ್ಯೆ ಉಂಟಾಗುತ್ತದೆ. ಈ ಮಿನಿ ಸ್ಟ್ರೋಕ್ ಕೆಲವೇ ನಿಮಿಷ ಇರುತ್ತದೆ. ಯಾವುದೇ ಶಾಶ್ವತ ಹಾನಿ ಉಂಟು ಮಾಡಲ್ಲ ಎಂದಿದೆ ಮೇಯೊ ಕ್ಲಿನಿಕ್.


    ಸಾಂದರ್ಭಿಕ ಚಿತ್ರ


    ಮಿನಿ ಸ್ಟ್ರೋಕ್ ಲಕ್ಷಣಗಳು ಹೀಗಿವೆ


    ಮುಖ ಅಥವಾ ದೇಹದ ಒಂದು ಬದಿಯಲ್ಲಿ ಪಾರ್ಶ್ವವಾಯು ಸಂಭವ, ಸ್ಪಷ್ಟವಾಗಿ ಮಾತನಾಡಲು ತೊಂದರೆ ಉಂಟಾಗುವುದು, ಕುರುಡುತನ ಸಮಸ್ಯೆ, ಸಮತೋಲನ ಕಾಯ್ದುಕೊಳ್ಳು ಸಾಧ್ಯವಾಗದಿರುವುದು ಮತ್ತು ನಡೆಯಲು ತೊಂದರೆ ಉಂಟಾಗುವುದು, ಕೈಯಲ್ಲಿ ಮರಗಟ್ಟುವಿಕೆ, ವಿಷಯ ಗ್ರಹಿಕೆ ಸಮಸ್ಯೆ, ಅರ್ಥ ಮಾಡಿಕೊಳ್ಳಲು ಕಷ್ಟ, ತಲೆಸುತ್ತು ಬರುವುದು ಕಾರಣವಾಗಿದೆ.


    ಮಿನಿ ಸ್ಟ್ರೋಕ್‌ ಉಂಟಾಗಲು ಯಾವೆಲ್ಲಾ ಅಪಾಯಕಾರಿ ಅಂಶಗಳು ಕಾರಣವಾಗಿವೆ?


    ಕುಟುಂಬದಲ್ಲಿ ಪಾರ್ಶ್ವವಾಯು ಇತಿಹಾಸ, ಐವತ್ತೈದು ವರ್ಷ ಮೇಲ್ಪಟ್ಟವರಲ್ಲಿ, ಅಧಿಕ ಬಿಪಿ, ದೈಹಿಕ ಚಟುವಟಿಕೆ ಕೊರತೆ, ಮಧುಮೇಹ, ಹೃದ್ರೋಗ, ಧೂಮಪಾನ, ಬೊಜ್ಜು ಸೇರಿದಂತೆ ಹಲವು ಅಂಶಗಳು ಪಾರ್ಶ್ವವಾಯು ಅಪಾಯ ಹೆಚ್ಚಿಸುತ್ತವೆ ಎಂದು ಕ್ಲೀವ್‌ಲ್ಯಾಂಡ್ ಕ್ಲಿನಿಕ್ ಹೇಳಿದೆ.


    ಇದನ್ನೂ ಓದಿ: ಮಧುಮೇಹ ರೋಗಿಗಳು ಯಾಕೆ ಪ್ರೊಟೀನ್ ಸಮೃದ್ಧ ಆಹಾರ ಸೇವಿಸಬೇಕು?


    ಮಿನಿ ಸ್ಟ್ರೋಕ್ ತಡೆಗಟ್ಟುವ ಮಾರ್ಗೋಪಾಯ


    ಆರೋಗ್ಯಕರ ಜೀವನ ನಡೆಸುವುದು ಮುಖ್ಯ. ಧೂಮಪಾನ ಮಾಡ್ಬೇಡಿ, ನಿಯಮಿತ ವ್ಯಾಯಾಮ ಮಾಡ್ಬೇಕು, ಹಸಿರು ತರಕಾರಿಗಳು ಮತ್ತು ಹಣ್ಣು ಸೇವಿಸುವುದು, ಆರೋಗ್ಯಕರ ತೂಕ ಕಾಪಾಡುವುದು ಮುಖ್ಯ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು