Maskne Problem: ಬಳಸಿದ್ದ ಮಾಸ್ಕ್​​ನ್ನೇ ಪದೇ, ಪದೇ ಧರಿಸ್ತೀರಾ? ಎಚ್ಚರ ಈ ಸಮಸ್ಯೆ ನಿಮ್ಮ ಬೆನ್ನಟ್ಟಬಹುದು!

ಮಾಸ್ಕ್ನೆ ಆರೋಗ್ಯ ಸಮಸ್ಯೆ

ಮಾಸ್ಕ್ನೆ ಆರೋಗ್ಯ ಸಮಸ್ಯೆ

ಮಾಸ್ಕ್‌ಗಳ ದೀರ್ಘಾವಧಿಯ ಬಳಕೆ ಚರ್ಮವನ್ನು ಒಡೆಯಲು ಕಾರಣವಾಗುತ್ತದೆ. ಇದರ ಪರಿಣಾಮ ದದ್ದುಗಳು ಅಥವಾ ಮೊಡವೆ ಉಂಟಾಗುತ್ತವೆ. ಇದನ್ನೇ ಮಾಸ್ಕ್ನೆ ಎನ್ನಲಾಗುತ್ತದೆ ಅಂತಾರೆ ಬೆಂಗಳೂರಿನ ಆಸ್ಟರ್ CMI ಆಸ್ಪತ್ರೆಯ ವೈದ್ಯಕೀಯ ಮತ್ತು ಕಾಸ್ಮೆಟಿಕ್ ಡರ್ಮಟಾಲಜಿ ವಿಭಾಗದ ಸಹ ಸಲಹೆಗಾರರು, ಲೇಖಕರು ಡಾ. ಶಿರೀನ್ ಫುರ್ಟಾಡೊ.

ಮುಂದೆ ಓದಿ ...
  • Share this:

ಕೊರೊನಾ (Corona) ನಂತರದ ದಿನಗಳಲ್ಲಿ ಹಲವು ಆರೋಗ್ಯ ಸಮಸ್ಯೆಗಳು (Health Problems) ಜನರನ್ನು ಕಾಡುತ್ತಿವೆ. ಅವುಗಳಲ್ಲಿ ಮಾಸ್ಕ್ನೆ ಸಮಸ್ಯೆ (Maskne Problem) ಕೂಡ ಒಂದು. ಕೊರೊನಾ ಹಿನ್ನೆಲೆ ಜನರು (People) ಮಾಸ್ಕ್ ಧರಿಸುತ್ತಿದ್ದಾರೆ. ವಿವಿಧ ರೀತಿಯ ಕೊರೊನಾ ರೂಪಾಂತರಗಳಿಂದಾಗಿ ಜನರು ಮಾಸ್ಕ್ ಧರಿಸುತ್ತಲೇ ಇದ್ದಾರೆ. ಹೀಗಾಗಿ ಮಾಸ್ಕ್ ಗಳು ನಮ್ಮ ಜೀವನದ ಬೇರ್ಪಡಿಸಲಾಗದ ಭಾಗವಾಗಿದೆ ಅಂದ್ರೆ ತಪ್ಪಾಗಲಾರದು. ಇಂದು ಮುಖವಾಡಗಳು ನಮ್ಮ ಜೀವನದ ಅತ್ಯಗತ್ಯ ಭಾಗವಾಗಿದೆ. ಇದು ಕೊರೊನಾ ಹಾಗು ಇತರೆ ಸಾಂಕ್ರಾಮಿಕ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುವ ಮೊದಲ ಆಯುಧವಾಗಿದೆ. ಕೆಮ್ಮುವುದು, ಸೀನುವಿಕೆ ಅಥವಾ ಮಾತನಾಡುವ ಮೂಲಕ ವೈರಸ್ ಹರಡುವಿಕೆ ತಡೆಯುತ್ತದೆ.


ಕೊರೊನಾ ನಂತರದ ದಿನಗಳಲ್ಲಿ ಮಾಸ್ಕ್ ಗಳ ಬಳಕೆ ಮತ್ತು ಆರೋಗ್ಯ


ಕೊರೊನಾ ಸೇರಿದಂತೆ ಹಲವು ಕಾಯಿಲೆಗಳನ್ನು ತಡೆಯಲು ಮಾಸ್ಕ್ ಗಳ ಬಳಕೆ ಸಹಕಾರಿಯಾಗಿದೆ ಅಂತಾರೆ ಬೆಂಗಳೂರಿನ ಆಸ್ಟರ್ CMI ಆಸ್ಪತ್ರೆಯ ವೈದ್ಯಕೀಯ ಮತ್ತು ಕಾಸ್ಮೆಟಿಕ್ ಡರ್ಮಟಾಲಜಿ ವಿಭಾಗದ ಸಹ ಸಲಹೆಗಾರರು, ಲೇಖಕರು ಡಾ. ಶಿರೀನ್ ಫುರ್ಟಾಡೊ.


ಮಾಸ್ಕ್‌ಗಳ ದೀರ್ಘಾವಧಿಯ ಬಳಕೆ ಚರ್ಮವನ್ನು ಒಡೆಯಲು ಕಾರಣವಾಗುತ್ತದೆ. ಇದರ ಪರಿಣಾಮ ದದ್ದುಗಳು ಅಥವಾ ಮೊಡವೆ ಉಂಟಾಗುತ್ತವೆ. ಇದನ್ನೇ ಮಾಸ್ಕ್ನೆ ಎನ್ನಲಾಗುತ್ತದೆ.




ಮಾಸ್ಕ್ನೆ ಎಂದರೇನು?


ದೀರ್ಘಕಾಲ ನೀವು ಒಂದೇ ಮಾಸ್ಕ್ ನ್ನು ಸ್ವಚ್ಛಗೊಳಿಸದೇ, ಪದೇ ಪದೇ ಬಳಸುವುದು ನಿಮ್ಮ ಮುಖದ ಮೇಲೆ ಮೊಡವೆ ಸಮಸ್ಯೆ ಉಂಟು ಮಾಡುತ್ತದೆ. ಹೀಗೆ ಒಂದೇ ಮಾಸ್ಕ್ ನ್ನು ಪದೇ ಪದೇ ಧರಿಸಿದರೆ ಮುಖದ ಸುತ್ತ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸಂಖ್ಯೆ ಹೆಚ್ಚಾಗುತ್ತದೆ.  ಆಗ ಮೊಡವೆ ಹಾಗೂ ಚರ್ಮದ ಸಮಸ್ಯೆ ಉಂಟಾಗುತ್ತದೆ ಇದನ್ನೇ ಮಾಸ್ಕ್ನೆ ಎನ್ನುತ್ತಾರೆ.


ಶಸ್ತ್ರಚಿಕಿತ್ಸಾ ಮಾಸ್ಕ್ ಗಳ ದೀರ್ಘಾವಧಿಯ ಬಳಕೆಯು ಮೊಡವೆಗಳನ್ನು ಹೆಚ್ಚಿಸುತ್ತದೆ. ಇದು ಪ್ರಾಥಮಿಕವಾಗಿ ಎರಡು ಕಾರಣಗಳಿಂದ ಸಂಭವಿಸುತ್ತದೆ. ದೀರ್ಘಕಾಲದವರೆಗೆ ಮುಖವಾಡಗಳ ವ್ಯಾಪಕ ಬಳಕೆ ಮತ್ತು ಅವುಗಳ ಮರು ಬಳಕೆ. ಆದರ್ಶವಾಗಿ ಶಸ್ತ್ರಚಿಕಿತ್ಸೆಯ ಮುಖವಾಡಗಳನ್ನು ಒಂದು ಬಳಕೆಯ ನಂತರ ವಿಲೇವಾರಿ ಮಾಡಬೇಕು.


ಡಾ. ಶಿರೀನ್ ಫುರ್ಟಾಡೊ, ಬೆಂಗಳೂರಿನ ಆಸ್ಟರ್ CMI ಆಸ್ಪತ್ರೆಯ ವೈದ್ಯಕೀಯ ಮತ್ತು ಕಾಸ್ಮೆಟಿಕ್ ಡರ್ಮಟಾಲಜಿ ವಿಭಾಗದ ಸಹ ಸಲಹೆಗಾರರು


ಆದರೆ ಅವುಗಳನ್ನು ಮತ್ತೆ ಮತ್ತೆ ಧರಿಸಿದರೆ ಮೊಡವೆ, ಚರ್ಮದ ಸಮಸ್ಯೆ ಹೆಚ್ಚುತ್ತದೆ. ಪದೇ ಪದೇ ಬಳಸಿದ ಮುಖವಾಡವು ಗಾಳಿಯಲ್ಲಿ ಬ್ಯಾಕ್ಟೀರಿಯಾ ಹೀರಿಕೊಳ್ಳುತ್ತದೆ. ಈ ಮುಖವಾಡಗಳ ಸಂಶ್ಲೇಷಿತ ವಸ್ತುವು ಎಣ್ಣೆಯುಕ್ತ ಚರ್ಮದ ಮೇಲೆ ಉಜ್ಜಿದಾಗ ಮುಖವಾಡದ ಸಂಪರ್ಕದಲ್ಲಿರುವ ಪ್ರದೇಶಗಳ ಸುತ್ತ ಮೊಡವೆ ಸಮಸ್ಯೆ ಆಗುತ್ತದೆ.


ಮಾಸ್ಕ್ನೆ ಸಮಸ್ಯೆ ತಪ್ಪಿಸುವುದು ಹೇಗೆ?


ಮಾಸ್ಕ್ನೆ ಸಮಸ್ಯೆ ತಪ್ಪಿಸಲು ಕೆಲವು ಸಲಹೆ ಇಲ್ಲಿದೆ.


  • ಪ್ರತಿ ಬಳಕೆಯ ನಂತರ ನಿಮ್ಮ ಮುಖವಾಡವನ್ನು ಬದಲಾಯಿಸಿ


- ನಿಮ್ಮ ಚರ್ಮವನ್ನು ಮೊಡವೆಗಳಿಂದ ರಕ್ಷಿಸಲು ಉತ್ತಮ ಮಾರ್ಗವೆಂದರೆ ನೀವು ಯಾವಾಗಲೂ ಸ್ವಚ್ಛವಾದ ಮುಖವಾಡ ಧರಿಸಿ.


- ದಿನವಿಡೀ ಬಳಸಿ ಎಸೆಯಬಹುದಾದ ಮುಖವಾಡ ಬಳಸಿ.


- ದಿನವೂ ಮನೆಗೆ ಬಂದ ನಂತರ ಮಾಸ್ಕ್ ಸ್ವಚ್ಛಗೊಳಿಸಿ.


- ಚರ್ಮದ ಮೇಲೆ ಧೂಳು ಸಂಗ್ರಹವಾಗದಂತೆ ನೋಡಿಕೊಳ್ಳಿ.


- ಬಟ್ಟೆ ಅಥವಾ ಫ್ಯಾಬ್ರಿಕ್ ಮುಖವಾಡ ಬಳಕೆ ಮಾಡಿದರೆ ದಿನವೂ ತೊಳೆಯಿರಿ. ಇದು ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.


- ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸಿ


ಮಾಸ್ಕ್


- ಕ್ಲೀನ್ ತ್ವಚೆಯು ಮೊಡವೆ ದೂರ ಮಾಡುತ್ತದೆ.


- ದಿನಕ್ಕೆ ಎರಡು ಬಾರಿ ಸ್ಯಾಲಿಸಿಲಿಕ್ ಆಮ್ಲ ಹೊಂದಿರುವ ಸೌಮ್ಯವಾದ ಕ್ಲೆನ್ಸರ್‌ ಬಳಸಿ. ಇದು ಚರ್ಮದ ಆರೋಗ್ಯ ಕಾಪಾಡುತ್ತದೆ.


- ಆಗಾಗ್ಗೆ ಮೊಡವೆ ಮೇಲೆ ಕೈಯಾಡಿಸುವುದನ್ನು ತಪ್ಪಿಸಿ.


- ಮೊಡವೆಗಳನ್ನು ತೊಡೆದು ಹಾಕಲು ಹ್ಯಾಂಡ್ಸ್-ಆಫ್ ವಿಧಾನ ಸಲಹೆ ಪಾಲಿಸಿ.


- ಹೈಡ್ರೊಕೊಲಾಯ್ಡ್ ಪ್ಯಾಚ್ಗಳು ನಿಮ್ಮ ಮೊಡವೆ ಅಥವಾ ಮೊಡವೆ ಕಲೆಗಳನ್ನು, ಸಂಭವನೀಯ ಮಾಲಿನ್ಯಕಾರಕಗಳಿಂದ ರಕ್ಷಿಸುತ್ತದೆ.


- ಮೊಡವೆಗಳ ಕೀವು ಹೊರ ತೆಗೆಯಲು ಹೀಲಿಂಗ್ ಪ್ಯಾಚ್ ಅನ್ನು ಮೊಡವೆಗಳ ಮೇಲೆ ಹೀಲಿಂಗ್ ಪ್ಯಾಚ್ ಇರಿಸಿ. 8 ಗಂಟೆಗಳಲ್ಲಿ ಫಲಿತಾಂಶ ನೋಡಬಹುದು.


- ಮೊಡವೆಗಳಿದ್ದರೆ ಮೇಕಪ್ ಬಳಕೆ ತಪ್ಪಿಸಿ. ಭಾರೀ ಮೇಕಪ್ ಮೊಡವೆಗಳಿಗೆ ಕಾರಣವಾಗಬಹುದು. ಮೇಕ್ಅಪ್ ಸಂಪೂರ್ಣವಾಗಿ ತಪ್ಪಿಸಬೇಕು. ಮ್ಯಾಟ್ ಮಾಯಿಶ್ಚರೈಸರ್ ಅಥವಾ ಸನ್‌ಸ್ಕ್ರೀನ್ ಬ್ಲಾಕ್ ಅನ್ನು ಬಳಸಿ.


ಇದನ್ನೂ ಓದಿ: COVID ನಂತರ ಪುರುಷರಲ್ಲಿ ಈ ಸಮಸ್ಯೆಯ ಕೇಸ್​​ಗಳ ಸಂಖ್ಯೆ ಹೆಚ್ಚಳ; ವೈದ್ಯರ ಸಲಹೆ ಏನು?


- ದಿನಕ್ಕೆ ಎರಡು ಬಾರಿ ಫೋಮಿಂಗ್ ಫೇಸ್‌ವಾಶ್ ಅಥವಾ ಸೌಮ್ಯವಾದ ಕ್ಲೆನ್ಸರ್‌ನಿಂದ ನಿಮ್ಮ ಮುಖವನ್ನು ತೊಳೆಯಬೇಕು.

First published: