ಲೈಮ್ ರೋಗಕ್ಕೂ ಇಲ್ವಂತೆ ಔಷಧ: ಕೀಟದಿಂದ ಬರುವ ಈ ಕಾಯಿಲೆ ಬಗ್ಗೆ ಇರಲಿ ಎಚ್ಚರ..!

lyme disease: ಇತ್ತೀಚೆಗೆ ಬ್ಲೂಮ್‌ಬರ್ಗ್‌ನಲ್ಲಿ ಪ್ರಕಟಿಸಿದ ವರದಿಯಿಂದಾಗಿ ಇದೀಗ ಲೈಮ್‌ ರೋಗದ ಚಿಕಿತ್ಸೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.

zahir | news18-kannada
Updated:August 8, 2019, 5:03 PM IST
ಲೈಮ್ ರೋಗಕ್ಕೂ ಇಲ್ವಂತೆ ಔಷಧ: ಕೀಟದಿಂದ ಬರುವ ಈ ಕಾಯಿಲೆ ಬಗ್ಗೆ ಇರಲಿ ಎಚ್ಚರ..!
lyme disease
  • Share this:
ಲೈಮ್ (lyme) ಎಂಬುದು ಒಂದು ಸಾಂಕ್ರಾಮಿಕ ಕಾಯಿಲೆ. ಈ ಕಾಯಿಲೆಯು ಬೊರೆಲಿಯಾ ಬರ್ಗ್‌ಡೋರ್ಫೆರಿ (Borrelia Burgdorferi)ಎಂಬ ಬ್ಯಾಕ್ಟೀರಿಯದಿಂದ ಬರುತ್ತದೆ. ಸಾಮಾನ್ಯವಾಗಿ ಇದು ಐಕ್ಸೋಡ್ಸ್, ಟಿಕ್, ಡೀರ್ ಟಿಕ್ ಕೀಟಗಳ ಕಚ್ಚುವಿಕೆಯಿಂದ ಮನುಷ್ಯನ ದೇಹ ಪ್ರವೇಶಿಸುತ್ತದೆ. ಈ ಸಣ್ಣ ಕೀಟ ಕಚ್ಚಿದ 3 ರಿಂದ 30 ದಿನಗಳಲ್ಲಿ ಲೈಮ್ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ.

ಕೀಟ ಕಚ್ಚಿದ ಬಳಿಕ ಜ್ವರ, ತಲೆನೋವು, ದೌರ್ಬಲ್ಯ, ಸ್ನಾಯು ಅಥವಾ ಕೀಲು ನೋವು ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣಗಳು. ಸಮಯಕ್ಕೆ ಸರಿಯಾದ ಚಿಕಿತ್ಸೆ ಮಾಡಿಕೊಳ್ಳದಿದ್ದರೆ ಇದು ಹೃದಯ, ದೇಹದ ಕೀಲುಗಳಿಗೆ ಮತ್ತು ನರಮಂಡಲಕ್ಕೆ ಹರಡಬಹುದು. ಇತ್ತೀಚೆಗೆ ಬ್ಲೂಮ್‌ಬರ್ಗ್‌ನಲ್ಲಿ ಪ್ರಕಟಿಸಿದ ವರದಿಯಿಂದಾಗಿ ಇದೀಗ ಲೈಮ್‌ ರೋಗದ ಚಿಕಿತ್ಸೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಲೈಮ್ ರೋಗಕ್ಕೆ ಕಾರಣವಾಗುವ ಕೀಟ ಕಚ್ಚುತ್ತಿರುವ ಫೋಟೋ


ಲೈಮ್ ರೋಗವನ್ನು ನಿಯಮಿತ ಔಷಧಿಗಳಿಂದ ಗುಣಪಡಿಸಬಹುದೆಂಬ ಖಾತ್ರಿ ಇಲ್ಲ ಎಂಬುದನ್ನು ಅನೇಕ ವೈದ್ಯರು ಒಪ್ಪಿಕೊಂಡಿದ್ದಾರೆ. ಅನೇಕ ಸಂದರ್ಭಗಳಲ್ಲಿ ಔಷಧಿಯನ್ನು ನಿಯಮಿತವಾಗಿ ತೆಗೆದುಕೊಂಡ ಹೊರತಾಗಿಯೂ, ರೋಗದ ಲಕ್ಷಣಗಳು ಹಾಗೇ ಉಳಿದಿರುವುದು ಕಂಡು ಬಂದಿದೆ.

ಈ ಬಗ್ಗೆ ಇನ್ನೂ ಕೂಡ ವೈದ್ಯಲೋಕ ಸಂಶೋಧನೆಯಲ್ಲಿದ್ದು, ಹೀಗಾಗಿ ಲೈಮ್ ರೋಗಕ್ಕೆ ಇದುವೇ ಮದ್ದು ಎನ್ನಲಾಗುವುದಿಲ್ಲ ಎಂದು ವೈದ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಆರಂಭದಲ್ಲೇ ಈ ರೋಗಕ್ಕೆ ಚಿಕಿತ್ಸೆ ತೆಗೆದುಕೊಂಡರೆ ಮಾತ್ರ ಲೈಮ್ ಕಾಯಿಲೆಯನ್ನು ಗುಣಪಡಿಸಬಹುದು. ಇದರ ಹೊರತಾಗಿ ಈ ಕಾಯಿಲೆಗೆ ತುತ್ತಾದವರನ್ನು ತಿಂಗಳು ಅಥವಾ ವರ್ಷಗಳವರೆಗೆ ಆ್ಯಂಟಿ ಬ್ಯಾಕ್ಟೀರಿಯಾ ನೀಡಿ ಕಾಪಾಡಲಾಗುತ್ತಿದೆ.

ಲೈಮ್ ಕಾಯಿಲೆಯ ಲಕ್ಷಣಗಳು :
- ಜ್ವರ- ಶೀತ
- ಸ್ನಾಯುಗಳ ನೋವು
- ತಲೆನೋವು
- ತೀವ್ರ ಆಯಾಸ
- ತೋಳುಗಳಲ್ಲಿ ಮರಗಟ್ಟುವಿಕೆ
- ದೇಹ ಜುಮ್ಮೆನಿಸುವ ಭಾವನೆ
- ಗಂಟಲು ನೋವು
- ಕೀಲು ನೋವು

ಇದನ್ನು ತಡೆಯುವುದು ಹೇಗೆ?
- ಹುಲ್ಲು ಅಥವಾ ಉದ್ಯಾನವನದಲ್ಲಿ ಕುಳಿತುಕೊಳ್ಳುವ ಮೊದಲು ಕೀಟಗಳಿದೆಯೇ ಎಂಬುದನ್ನು ಸರಿಯಾಗಿ ಗಮನಿಸಿ.
- ನೀವು ಪಾರ್ಕ್ ಅಥವಾ ಹುಲ್ಲಿನ ಸ್ಥಳಗಳಿಂದ ಬಂದ ಮೇಲೆ ಎರಡು ಗಂಟೆಗಳ ಒಳಗೆ ಸ್ನಾನ ಮಾಡಿ.
- ಉದ್ದನೆಯ ತೋಳಿನ ಶರ್ಟ್ ಅಥವಾ ಟೀ ಶರ್ಟ್ ಮತ್ತು ಬೂಟುಗಳನ್ನು ಧರಿಸಿ.
- ಮಳೆಯಲ್ಲಿ ಇಂತಹ ಕೀಟಗಳ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಿ.
- ರೋಗ ಲಕ್ಷಣಗಳು ನಿಮ್ಮ ದೇಹದಲ್ಲಿ ಕಾಣಿಸಿದರೆ ತಕ್ಷಣ ರಕ್ತ ಪರೀಕ್ಷೆ ಮಾಡಿಕೊಳ್ಳಿ.First published: August 8, 2019, 5:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading