ನಡೆಯುವಾಗ (Walking) ಮತ್ತು ಕುಳಿತಾಗ ಹಾಗೂ ನಿಂತಾಗ (Standing) ಕೈಗಳು ಮತ್ತು ಪಾದಗಳ (Hands And Feet) ಕೀಲುಗಳಲ್ಲಿ ನೋವು (Joint Pain), ಬಿಗಿತ ಉಂಟಾಗುವುದು ಮೂಳೆ ಕಾಯಿಲೆಯ (Disease) ಸಂಕೇತ (Sign) ಆಗಿದೆ. ಕೆಲವು ದೈಹಿಕ ನೋವು ಮತ್ತುಸಂಕೇತಗಳು, ಇದು ದುರ್ಬಲ ಮೂಳೆಗಳು ಮತ್ತು ಕೀಲುಗಳಲ್ಲಿ ಲೂಬ್ರಿಕಂಟ್ ಕೊರತೆ ಸಂಕೇತ ಆಗಿದೆ. ವ್ಯಕ್ತಿಯ ಕೀಲುಗಳಲ್ಲಿನ ಲೂಬ್ರಿಕಂಟ್ ಖಾಲಿ ಆದಾಗ ಅವನು ಆಗಾಗ್ಗೆ ಈ ರೀತಿಯ ಸಮಸ್ಯೆ ಎದುರಿಸುವ ಸಾಧ್ಯತೆ ಇರುತ್ತದೆ. ಹಾಗಿದ್ದರೆ ಏನಿದು ಲೂಬ್ರಿಕಂಟ್ ಅಂತಾ ನೀವು ಯೋಚನೆ ಮಾಡ್ತಿರಬಹುದು ಅಲ್ವಾ? ನಾವು ಇವತ್ತು ದುರ್ಬಲ ಮೂಳೆಗೆ ಕಾರಣ ಆಗುವ ಲೂಬ್ರಿಕಂಟ್ ಕೊರತೆಯ ಬಗ್ಗೆ ಇಲ್ಲಿ ತಿಳಿಯೋಣ.
ಲೂಬ್ರಿಕಂಟ್ ಕೊರತೆ ಎಂದರೇನು?
ಮೂಳೆಗಳ ಕೀಲುಗಳಲ್ಲಿ ಒಂದು ದ್ರವ ಇದೆ. ಇದು ಮೂಳೆಗಳು ಒಟ್ಟಿಗೆ ಅಂಟಿಕೊಳ್ಳದಂತೆ ಕೀಲುಗಳನ್ನು ನಯಗೊಳಿಸುವ ಕೆಲಸ ಮಾಡುತ್ತದೆ. ಇದನ್ನು ಕಾರ್ಟಿಲೆಜ್ ಮತ್ತು ಸೈನೋವಿಯಂ ಎಂದೂ ಕರೆಯುತ್ತಾರೆ. ಸಾಮಾನ್ಯ ಭಾಷೆಯಲ್ಲಿ ಇದನ್ನು ಜಾಯಿಂಟ್ ಗ್ರೀಸ್ ಎಂದು ಕರೆಯುತ್ತಾರೆ. ಏಕೆಂದರೆ ಗ್ರೀಸ್ ಯಾವುದೇ ಕಬ್ಬಿಣದ ಭಾಗ ಮೃದುವಾಗಿ ಇಡುತ್ತದೆ.
ಈ ಹಿಂದೆ ವಯಸ್ಸಾದವರಲ್ಲಿ ಮೊದಲು ಕೀಲು ನೋವು ಅಥವಾ ಇತರ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಈಗ ಯುವ ಜನಾಂಗ ಸಹ ಅದನ್ನು ಎದುರಿಸುತ್ತಿದ್ದಾರೆ. ವಾಸ್ತವದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು, ನಿಂತಿರುವುದು, ಕಳಪೆ ಆಹಾರ ಪದ್ಧತಿ ಮತ್ತು
ಇದನ್ನೂ ಓದಿ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?
ಅತಿಯಾದ ಮದ್ಯಪಾನ ಕೆಟ್ಟ ಅಭ್ಯಾಸಗಳು ಕೀಲುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ವಯಸ್ಸಾಗುವಿಕೆ, ಗಾಯ ಅಥವಾ ಹೆಚ್ಚಿನ ತೂಕ ಎತ್ತುವುದು ನಿಮ್ಮ ಕಾರ್ಟಿಲೆಜ್ ಅನ್ನು ಹಾನಿ ಉಂಟು ಮಾಡುತ್ತದೆ. ಇದು ನಿಮ್ಮ ಕೀಲುಗಳಿಗೆ ಹಾನಿ ಮಾಡುವ ಪ್ರತಿಕ್ರಿಯೆ ಉಂಟು ಮಾಡುತ್ತದೆ. ನಂತರ ಇದು ಸಂಧಿವಾತಕ್ಕೆ ಕಾರಣ ಆಗಬಹುದು.
ಕೇಲ್ ತರಕಾರಿ
ಕೇಲ್ ಇದೊಂದು ಎಲೆಕೋಸು ಕುಟುಂಬದ ತರಕಾರಿ ಆಗಿದೆ. ಇದನ್ನು ಹೆಚ್ಚಾಗಿ ಸಲಾಡ್ ಆಗಿ ಬಳಕೆ ಮಾಡಲಾಗುತ್ತದೆ. ಈ ಎಲೆಗಳ ತರಕಾರಿಯಲ್ಲಿ ಎಲ್ಲಾ ಅಗತ್ಯ ಪೋಷಕಾಂಶಗಳು ಇವೆ. ಮೆಡಿಕಲ್ ನ್ಯೂಸ್ ಟುಡೇ ವರದಿ ಪ್ರಕಾರ, ಈ ತರಕಾರಿ ಆಂಟಿಆಕ್ಸಿಡೆಂಟ್ ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ.
ಅಲ್ಲದೆ ಕ್ಯಾಲ್ಸಿಯಂ ದೊಡ್ಡ ಪ್ರಮಾಣದಲ್ಲಿ ಇದರಲ್ಲಿದೆ. ಇದು ಮೂಳೆಗಳು ಮತ್ತು ಕೀಲುಗಳ ಆರೋಗ್ಯಕ್ಕೆ ಅಗತ್ಯ ಆಗಿದೆ. ಇದರ ಸೇವನೆ ನಿಮ್ಮ ಮೂಳೆಗಳನ್ನು ಬಲವಾಗಿಡಲು ಸಹಕಾರಿ ಆಗಿದೆ.
ಕೆಂಪು ಬೆಲ್ ಪೆಪರ್
ಕ್ಯಾಪ್ಸಿಕಂ ತಿನ್ನಲು ರುಚಿಕರ ಮಾತ್ರವಲ್ಲ ಒಟ್ಟಾರೆ ಆರೋಗ್ಯಕ್ಕೆ ಉತ್ತಮ ತರಕಾರಿ ಆಗಿದೆ. ಕೆಂಪು ಕ್ಯಾಪ್ಸಿಕಂನಲ್ಲಿ ವಿಟಮಿನ್ ಸಿ ಸಮೃದ್ಧ ಆಗಿದೆ. ವಿಟಮಿನ್ ಸಿ ನಿಮ್ಮ ದೇಹವು ಕಾಲಜನ್ ಅನ್ನು ತಯಾರಿಸಲು ಸಹಾಯ ಮಾಡುತ್ತದೆ.
ಇದು ನಿಮ್ಮ ಕಾರ್ಟಿಲೆಜ್, ಸ್ನಾಯುರಜ್ಜುಗಳು ಮತ್ತು ಅಸ್ಥಿರಜ್ಜುಗಳ ಭಾಗ ಆಗಿದೆ. ಇದು ನಿಮ್ಮ ಕೀಲುಗಳಲ್ಲಿ ನಮ್ಯತೆ ಮತ್ತು ಬಲ ನಿರ್ಮಿಸಲು ಸಹಾಯ ಮಾಡುತ್ತದೆ.
ಬೆಳ್ಳುಳ್ಳಿ ಮತ್ತು ಈರುಳ್ಳಿ
ಬೆಳ್ಳುಳ್ಳಿ ಮತ್ತು ಈರುಳ್ಳಿ ಇಲ್ಲದೆ ಆಹಾರದ ರುಚಿ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಎನ್ ಸಿಬಿಐ ವರದಿ ಪ್ರಕಾರ, ಈ ಎರಡೂ ತರಕಾರಿಗಳು ಶಕ್ತಿಯುತವಾದ ಸಲ್ಫರ್ ಸಂಯುಕ್ತ ಹೊಂದಿವೆ. ಇದು ಉರಿಯೂತ ಮತ್ತು ನೋವಿನ ವಿರುದ್ಧ ಹೋರಾಡುತ್ತದೆ. ನಿಮ್ಮ ಕೀಲುಗಳನ್ನು ಬಲವಾಗಿ ಮತ್ತು ಹೊಂದಿಕೊಳ್ಳುವಂತೆ ಮಾಡಲು ಸಹಕಾರಿ. ತರಕಾರಿಗಳಲ್ಲಿ ಇವುಗಳ ಬಳಕೆ ಜೊತೆಗೆ ಅವುಗಳನ್ನು ಕಚ್ಚಾ ತಿನ್ನಬೇಕು.
ಶುಂಠಿ
ಶುಂಠಿಯು ಆ ಎಲ್ಲಾ ಗುಣ ಹೊಂದಿದೆ. ಹಾಗಾಗಿ ಇದು ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಶುಂಠಿಯು ಉರಿಯೂತ ನಿವಾರಕ ಮತ್ತು ನೋವು ನಿವಾರಕ ಗುಣ ಹೊಂದಿದೆ. ಮೂಳೆಗಳು ಮತ್ತು ಕೀಲುಗಳ ಆರೋಗ್ಯ ಕಾಪಾಡಲು, ನೀವು ಶುಂಠಿಯನ್ನು ಆಹಾರದಲ್ಲಿ ಅಥವಾ ಕಚ್ಚಾ ರೂಪದಲ್ಲಿ ಸೇವಿಸಬೇಕು.
ಇದನ್ನೂ ಓದಿ: ದೇಹದಲ್ಲಿ ಮೆಗ್ನೀಸಿಯಮ್ ಕೊರತೆ ಈ ಅಪಾಯಕ್ಕೆ ಕಾರಣವಂತೆ, ಎಚ್ಚರವಿರಲಿ
ಬೀನ್ಸ್
ಬೀನ್ಸ್ ಆರೋಗ್ಯ ಪ್ರಯೋಜನ ನೀಡುತ್ತದೆ. ಈ ತರಕಾರಿ ಪ್ರೋಟೀನ್ ಅಗತ್ಯ ಖನಿಜಗಳು ಮತ್ತು ಫೈಬರ್ನ ಉತ್ತಮ ಮೂಲ. ಬೀನ್ಸ್ನಲ್ಲಿರುವ ಮಾಂತ್ರಿಕ ಫ್ಲೇವನಾಯ್ಡ್ಗಳು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿದೆ. ಅದು ಕೀಲು ನೋವು ಮತ್ತು ಉರಿಯೂತ ಕಡಿಮೆ ಮಾಡಲು ಸಹಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ