• Home
  • »
  • News
  • »
  • lifestyle
  • »
  • Weight Loss: ಕಿಟೋ ಡಯಟ್ ಎಂದರೇನು? ಇದು ತೂಕ ಇಳಿಕೆಗೆ ಇದು ಎಷ್ಟು ಮುಖ್ಯ?

Weight Loss: ಕಿಟೋ ಡಯಟ್ ಎಂದರೇನು? ಇದು ತೂಕ ಇಳಿಕೆಗೆ ಇದು ಎಷ್ಟು ಮುಖ್ಯ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸೆಲೆಬ್ರಿಟಿಗಳು ತೂಕ ಇಳಿಸಲು ಮತ್ತು ತೂಕ ನಿಯಂತ್ರಿಸಲು ಕೀಟೋ ಡಯಟ್ ತೆಗೆದುಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೀಟೋ ಡಯಟ್ ಟ್ರೆಂಡ್ ಬಹಳ ವೇಗವಾಗಿ ಹೆಚ್ಚುತ್ತಿದೆ. ಕೆಲವರು ಇದನ್ನು ಒಳ್ಳೆಯದು ಎನ್ನುತ್ತಾರೆ. ಇನ್ನು ಕೆಲವರು ಆರೋಗ್ಯಕ್ಕೆ ಹಾನಿಕಾರಕ ಎಂದು ಪರಿಗಣಿಸುತ್ತಾರೆ.

  • Share this:

    ತೂಕ ಹೆಚ್ಚಾಗುವುದು (Weight Loss) ವ್ಯಕ್ತಿಯನ್ನು (Person) ಅನೇಕ ರೀತಿಯ ಕಾಯಿಲೆಗಳಿಗೆ (Diseases) ತುತ್ತಾಗುವಂತೆ ಮಾಡುತ್ತದೆ. ಇದರ ಜೊತೆ ಆರೋಗ್ಯಕರ ಜೀವನಶೈಲಿಗಾಗಿ (Healthy Lifestyle) ಫಿಟ್ ಮತ್ತು ಫೈನ್ ಆಗಿರುವುದು ತುಂಬಾ ಸಹಕಾರಿ ಆಗಿದೆ. ಹಾಗಾಗಿ ಸಮತೋಲಿತ ಆಹಾರ ಸೇವನೆ ತುಂಬಾ ಮುಖ್ಯ. ಆಹಾರ ಸೇವನೆಯಲ್ಲಿ ಪೋಷಕಾಂಶ ಸಮೃದ್ಧ ಪದಾರ್ಥಗಳನ್ನು ಸೇರಿಸುವುದು ಉಪಯುಕ್ತ. ಮತ್ತು ದೇಹದಲ್ಲಿ ಯಾವುದೇ ಕೊಬ್ಬಿನ ಶೇಖರಣೆ ಇರುವುದಿಲ್ಲ. ಈ ಆಹಾರ ಪದ್ಧತಿ ಬಗ್ಗೆ ಸಾಕಷ್ಟು ಸಂಶೋಧನೆಗಳಿವೆ. ತೂಕ ನಷ್ಟದ ಜೊತೆಗೆ ಒಟ್ಟಾರೆ ಆರೋಗ್ಯಕ್ಕೆ ಇದು ಎಷ್ಟು ಪರಿಣಾಮಕಾರಿ ಎಂದು ತಿಳಿಯುವ ಮೊದಲು ಕೀಟೋಜೆನಿಕ್ ಅಥವಾ ಕೀಟೋ ಡಯಟ್ ಬಗ್ಗೆ ತಿಳಿಯೋಣ.


    ಸೆಲೆಬ್ರಿಟಿಗಳು ತೂಕ ಇಳಿಸಲು ಮತ್ತು ತೂಕ ನಿಯಂತ್ರಿಸಲು ಕೀಟೋ ಡಯಟ್ ತೆಗೆದುಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೀಟೋ ಡಯಟ್ ಟ್ರೆಂಡ್ ಬಹಳ ವೇಗವಾಗಿ ಹೆಚ್ಚುತ್ತಿದೆ. ಕೆಲವರು ಇದನ್ನು ಒಳ್ಳೆಯದು ಎನ್ನುತ್ತಾರೆ. ಇನ್ನು ಕೆಲವರು ಆರೋಗ್ಯಕ್ಕೆ ಹಾನಿಕಾರಕ ಎಂದು ಪರಿಗಣಿಸುತ್ತಾರೆ.


    ಕೀಟೋಜೆನಿಕ್ ಅಥವಾ ಕೀಟೋ ಡಯಟ್ ಎಂದರೇನು?


    ಪರ್ಯಾಯ ಔಷಧ ಅಡಿಯಲ್ಲಿ ಕೀಟೋಜೆನಿಕ್ ಅಥವಾ ಕೀಟೋ ಆಹಾರವನ್ನು ವಿವಿಧ ರೋಗಗಳ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತದೆ. ಇದು ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಹೆಚ್ಚಿನ ಕೊಬ್ಬಿನ ಆಹಾರವಾಗಿದೆ.


    ಇದನ್ನೂ ಓದಿ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?


    ಅಮೆರಿಕಾದಲ್ಲಿ ಮಧುಮೇಹ ನಿಯಂತ್ರಿಸಲು ಮತ್ತು ಮಕ್ಕಳಲ್ಲಿ ಅಪಸ್ಮಾರ ಚಿಕಿತ್ಸೆಗಾಗಿ ಈ ಆಹಾರ ಬಳಸಲಾಗುತ್ತಿತ್ತು. ಈ ಆಹಾರವು ಕ್ಯಾನ್ಸರ್, ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಮತ್ತು ಆಲ್ಝೈಮರ್ನ ಕಾಯಿಲೆಯಲ್ಲೂ ಪರಿಣಾಮಕಾರಿ ಎನ್ನಲಾಗಿದೆ.


    ಈ ಆಹಾರವು ಕಡಿಮೆ ಕಾರ್ಬ್ ಆಹಾರವಾಗಿದೆ. ಇದನ್ನು ತೂಕ ನಷ್ಟದಲ್ಲಿ ಹೆಚ್ಚು ಬಳಸುತ್ತಾರೆ. ಅದರಲ್ಲಿ ಕೊಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು, ಪ್ರೋಟೀನ್ ಪ್ರಮಾಣವು ಮಧ್ಯಮವಾಗಿರುತ್ತದೆ.


    ತೂಕ ನಷ್ಟಕ್ಕೆ ಕೀಟೋ ಡಯಟ್ ಹೇಗೆ ಕೆಲಸ ಮಾಡುತ್ತದೆ?


    ಹಾರ್ವರ್ಡ್ ಶಿಕ್ಷಣ ಸಂಶೋಧನೆ ಪ್ರಕಾರ, ತೂಕ ನಷ್ಟಕ್ಕೆ ಕೆಟೋಜೆನಿಕ್ ಆಹಾರ ಸೇವಿಸಲಾಗುತ್ತದೆ. ದೇಹದ ಎಲ್ಲಾ ಜೀವಕೋಶಗಳಿಗೆ ಗ್ಲೂಕೋಸ್ ಶಕ್ತಿಯ ಮುಖ್ಯ ಮೂಲ ಎಂಬುದನ್ನು ಇದು ಆಧರಿಸಿದೆ. ಕಾರ್ಬೋಹೈಡ್ರೇಟ್ ಆಹಾರ ಸೇವಿಸುವ ಮೂಲಕ ಇದನ್ನು ಪಡೆಯಲಾಗುತ್ತದೆ.


    ಇಲ್ಲಿ ಪರ್ಯಾಯ ಇಂಧನವೆಂದರೆ ಶೇಖರಿಸಿದ ಕೊಬ್ಬಿನಿಂದ ಉತ್ಪತ್ತಿಯಾಗುವ ಕೀಟೋನ್‌ಗಳು. ಹೀಗಾಗಿ ಇದನ್ನು ಕೀಟೋಜೆನಿಕ್ ಆಹಾರ ಎನ್ನಲಾಗುತ್ತದೆ. ಮೆದುಳು ಗ್ಲೂಕೋಸ್ ಹೆಚ್ಚು ಬೇಡುತ್ತದೆ.


    ಈ ಪ್ರಕ್ರಿಯೆ 3-4 ದಿನ ಮುಂದುವರೆದರೆ, ಸಂಗ್ರಹಿಸಿದ ಗ್ಲೂಕೋಸ್ ಸಂಪೂರ್ಣ ಖಾಲಿಯಾಗುತ್ತದೆ. ಇದು ಹಾರ್ಮೋನ್ ಇನ್ಸುಲಿನ್ ರಕ್ತದ ಮಟ್ಟ ಕಡಿಮೆ ಮಾಡುತ್ತದೆ. ನಂತರ ದೇಹವು ಕೊಬ್ಬನ್ನು ಅದರ ಪ್ರಾಥಮಿಕ ಇಂಧನವಾಗಿ ಬಳಸುತ್ತದೆ. ಯಕೃತ್ತು ಕೊಬ್ಬಿನಿಂದ ಕೀಟೋನ್ ದೇಹ ಮಾಡುತ್ತದೆ. ಇದನ್ನು ಗ್ಲೂಕೋಸ್ ಅನುಪಸ್ಥಿತಿಯಲ್ಲಿ ಬಳಸಬಹುದು.


    ವಿವಿಧ ಅಧ್ಯಯನ


    ಫ್ರೇಮಿಂಗ್ಹ್ಯಾಮ್ ಸ್ಟೇಟ್ ಯೂನಿವರ್ಸಿಟಿ ಅಧ್ಯಯನ ಪ್ರಕಾರ, ಇತ್ತೀಚಿನ ದಿನಗಳಲ್ಲಿ ತೂಕ ನಷ್ಟ ಮತ್ತು ರಕ್ತದ ಸಕ್ಕರೆ ನಿಯಂತ್ರಣಕ್ಕಾಗಿ ಕೀಟೋ ಡಯಟ್ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ. ಈ ಆಹಾರ ಸೇವಿಸುವುದು ಕೀಟೋ ಆಸಿಡೋಸಿಸ್ಗೆ ಕಾರಣವಾಗಲಿದೆ ಎಂದಿದೆ.


    ರಕ್ತದಲ್ಲಿ ಕೀಟೋನ್‌ಗಳು ಸಂಗ್ರಹವಾದಾಗ ಅದನ್ನು ಕೀಟೋಸಿಸ್ ಎನ್ನುತ್ತಾರೆ. ಕೀಟೋ ಆಹಾರ ಫಾಲೋ ಮಾಡಿದಾಗ ಕೀಟೋನ್‌ಗಳ ರಕ್ತದ ಮಟ್ಟ ಹಾನಿಕಾರಕ ಮಟ್ಟ ತಲುಪಬಾರದು.


    ತೂಕ ನಷ್ಟಕ್ಕೆ ಕೀಟೋ ಆಹಾರದಲ್ಲಿ ಏನು ಸೇವಿಸಬೇಕು?


    ಕೆಟೋಜೆನಿಕ್ ಆಹಾರವು ಸರಾಸರಿ 70 ರಿಂದ 80 ಪ್ರತಿಶತ ಕೊಬ್ಬು, 5 ರಿಂದ 10 ಪ್ರತಿಶತ ಕಾರ್ಬೋಹೈಡ್ರೇಟ್ ಮತ್ತು ಒಟ್ಟು ದೈನಂದಿನ ಕ್ಯಾಲೊರಿಗಳಲ್ಲಿ 10 ರಿಂದ 20 ಪ್ರತಿಶತ ಪ್ರೋಟೀನ್‌ ಬೇಕು. ಆಹಾರದಲ್ಲಿ 2000 ಕ್ಯಾಲೋರಿ ಅಗತ್ಯವಿದ್ದರೆ, ಅದು ಸುಮಾರು 165 ಗ್ರಾಂ ಕೊಬ್ಬು, 40 ಗ್ರಾಂ ಕಾರ್ಬೋಹೈಡ್ರೇಟ್ಗಳು ಮತ್ತು 75 ಗ್ರಾಂ ಪ್ರೋಟೀನ್  ಹೊಂದಿರಬೇಕು.


    ಇದನ್ನೂ ಓದಿ: ದೇಹದಲ್ಲಿ ಮೆಗ್ನೀಸಿಯಮ್ ಕೊರತೆ ಈ ಅಪಾಯಕ್ಕೆ ಕಾರಣವಂತೆ, ಎಚ್ಚರವಿರಲಿ


    ಬ್ರೆಡ್, ಧಾನ್ಯ ಅಥವಾ ಏಕದಳ ತಯಾರಿಕೆಯ ಪದಾರ್ಥ, ಪಾಸ್ತಾ, ಅಕ್ಕಿ, ಆಲೂಗಡ್ಡೆ, ಪಿಷ್ಟ ತರಕಾರಿಗಳು, ಕಾಳುಗಳು ಮತ್ತು ಹಣ್ಣಿನ ರಸಗಳು ಮತ್ತು ಹೆಚ್ಚಿನ ಹಣ್ಣುಗಳ ಸೇವನೆ ನಿಷೇಧಿಸಲಾಗಿದೆ. ಮಾಂಸ, ಸಂಸ್ಕರಿಸಿದ ಮಾಂಸ, ಬೆಣ್ಣೆ ಒಳಗೊಂಡಿರುವ ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬನ್ನು ಸೇವಿಸಲಾಗುತ್ತದೆ.

    Published by:renukadariyannavar
    First published: