Jaggery Benefits: ಬೆಲ್ಲ ತಿಂದ್ರೆ ಬೆಟ್ಟದಷ್ಟು ಉಪಯೋಗ, ಪ್ರತಿದಿನ ಬೆಳಗ್ಗೆ ಬೆಲ್ಲ ತಿಂದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಬೆಲ್ಲ ತಿಂದ್ರೆ ಬೆಟ್ಟದಷ್ಟು ಉಪಯೋಗಗಳಿವೆ. ಪ್ರತಿದಿನ ಬೆಳಗ್ಗೆ ಬೆಲ್ಲ ತಿಂದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಲ್ಲವೇ ಊಟದ ನಂತರ ಬೆಲ್ಲವನ್ನು ತಿನ್ನುವುದರಿಂದ ಹೊಟ್ಟೆಯೂ ತಂಪಾಗಿರುತ್ತದೆ. ರೋಗ ನಿರೋಧಕ ಶಕ್ತಿಯೂ  ಹೆಚ್ಚಾಗಲು ಸಹಾಯ ಮಾಡುತ್ತೆ. ಮತ್ತು ಗ್ಯಾಸ್ ಬರುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಲ್ಲವು ಏಷ್ಯಾ (Asia), ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ಬಳಸಲಾಗುವ ಒಂದು ಸಾಂಪ್ರದಾಯಿಕ, ಶುದ್ಧೀಕರಿಸದ, ಅಪಕೇಂದ್ರಕವನ್ನು ಉಪಯೋಗಿಸದೇ ತಯಾರಿಸಲಾಗುವ ಸಕ್ಕರೆ. ಅದನ್ನು ನೇರ ಬಳಕೆಗಾಗಿ ತಯಾರಿಸಲಾಗುತ್ತದೆ. ಕಬ್ಬಿನ ರಸದ ಸಾಂದ್ರಿತ ಉತ್ಪನ್ನದಿಂದ ತಯಾರಿಸಲಾಗುತ್ತೆ. ಬೆಲ್ಲದ ಬಣ್ಣವು ಬಂಗಾರ ಕಂದು ಅಥವಾ ಗಾಢ ಕಂದು ಇರಬಹುದು. ದಕ್ಷಿಣ ಭಾರತದಲ್ಲಿ ಸಕ್ಕರೆ ಬದಲು ಹೆಚ್ಚಾಗಿ ಬೆಲ್ಲವನ್ನು ಬಳಸಲಾಗುತ್ತದೆ. ಬೆಲ್ಲ (Jaggery ) ತಿಂದ್ರೆ ಬೆಟ್ಟದಷ್ಟು ಉಪಯೋಗಗಳಿವೆ (Benefits). ಪ್ರತಿದಿನ ಬೆಳಗ್ಗೆ (Morning) ಬೆಲ್ಲ ತಿಂದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಲ್ಲವೇ ಊಟದ ನಂತರ ಬೆಲ್ಲವನ್ನು ತಿನ್ನುವುದರಿಂದ ಹೊಟ್ಟೆಯೂ ತಂಪಾಗಿರುತ್ತದೆ. ರೋಗ ನಿರೋಧಕ (Immunity power) ಶಕ್ತಿಯೂ  ಹೆಚ್ಚಾಗಲು ಸಹಾಯ ಮಾಡುತ್ತೆ. ಮತ್ತು ಗ್ಯಾಸ್ ಬರುವುದಿಲ್ಲ.

  ಬೆಲ್ಲ ತಿಂದ್ರೆ ರಕ್ತ ಶುದ್ಧಿಯಾಗುತ್ತದೆ

  ಬೆಲ್ಲವನ್ನು ಕೆಲವರು ಅಡುಗೆಗೆ ಮಾತ್ರ ಬಳಸುತ್ತಾರೆ. ಇಲ್ಲವೇ ಸಿಹಿ ತಿನಿಸುಗಳನ್ನು ಮಾಡಲು ಉಪಯೋಗಿಸುತ್ತಾರೆ. ಅದು ಒಳ್ಳೆಯದೆ. ಆದ್ರೆ ಬೆಲ್ಲವನ್ನು ಬೆಳಗ್ಗೆ ಎದ್ದಾಗ ತಿಂಡಿಗೆ ಮುಂಚೆ ಇಲ್ಲವೇ ತಿಂಡಿಯಾದ ನಂತರ ತಿಂದ್ರೆ ಒಳ್ಳೆಯದು.

  ಬೆಲ್ಲ ತಿನ್ನುವುದರಿಂದ ನಮ್ಮ ರಕ್ತ ಶುದ್ಧಿಯಾಗುತ್ತದೆ. ರಕ್ತ ಶುದ್ಧಿಯಾಗುತ್ತದೆ ಎನ್ನುವುದನ್ನು ಹಲವಾರು ಅಧ್ಯಯನಗಳು ಹೇಳಿವೆ. ಅಲ್ಲದೆ ಹೊಟ್ಟೆಯನ್ನು ತಂಪಾಗಿಡುತ್ತದೆ. ಗ್ಯಾಸ್ಟ್ರಿಕ್ಟ್ ನಂತಹ ಸಮಸ್ಯೆ ಬರುವುದಿಲ್ಲ., ಬೆಲ್ಲ ಕೂಡ ಶುದ್ಧವಾಗಿರಬೇಕು. ಯಾವುದೇ ಕೆಟ್ಟ ಅಂಶ ಬೆರೆತಿರದ ಉತ್ತಮ ಬೆಲ್ಲ ಆರೋಗ್ಯಕ್ಕೆ ಉತ್ತಮ.

  ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

  ಬೆಲ್ಲದಲ್ಲಿ ಸತು ಮತ್ತು ಸೆಲೆನಿಯಂ ಎಂಬ ಖನಿಜಾಂಶವಿರುತ್ತದೆ. ಇವು ದೇಹಸಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನಮಗೆ ಯಾವುದೇ ಕಾಯಿಲೆ ಬರದಂತೆ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಸಹಾಯ ಮಾಡುತ್ತೆ. ಅದಕ್ಕೆ ಯಾರಿಗಾದ್ರೂ ಸುಸ್ತಾದಾಗ ತಕ್ಷಣ ಬೆಲ್ಲ ನೀರು ಕೊಡುತ್ತಾರೆ.

  ಇದನ್ನೂ ಓದಿ: Jaggery Benefits: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಂಡು ಬೆಲ್ಲ ತಿನ್ನಿ ಸಾಕು, ಸೊಂಟದ ಸುತ್ತಳತೆ ಕಡಿಮೆಯಾಗುತ್ತೆ

  ಲಿವರ್ ಸಮಸ್ಯೆ ಬರದಂತೆ ತಡೆಯುತ್ತದೆ.

  ಬಾಯಿಗೆ ರುಚಿ ಬರಲಿ ಎಂದು ನಾವು ಹೆಚ್ಚಾಗಿ ಕರಿದ ತಿಂಡಿಗಳು, ಪೌಷಿಕಾಂಶ ಇಲ್ಲದ ಆಹಾರಳನ್ನು ಸೇವಿಸಿ ಬಿಡುತ್ತೇವೆ. ಕೆಲವೊಮ್ಮೆ ಎಲ್ಲವನ್ನು ದಕ್ಕಿಸಿಕೊಳ್ಳಲು ಲಿವರ್‍ಗೆ ಆಗಲ್ಲ. ಹಲವು ಬಾರಿ ಲಿವರ್ ನಲ್ಲಿ ಅನೇಕ ವಿಷಕಾರಿ ಅಂಶಗಳು ಶೇಖರಣೆಯಾಗುತ್ತಿರುತ್ತವೆ. ಆದ್ದರಿಂದ ಪ್ರತಿದಿನ ಸ್ಪಲ್ಪ ಬೆಲ್ಲ ಸೇವಿಸಿದ್ರೆ, ವಿಷಕಾರಿ ಅಂಶಗಳು ನಾಶವಾಗಲು ಸಹಾಯ ಮಾಡುತ್ತೆ.

  ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ

  ಬೆಲ್ಲ ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ. ಜೀರ್ಣಕ್ರಿಯೆಗೆ ಸಹಾಯ ಮಾಡುವ ಕಿಣ್ವಗಳನ್ನು ಬೆಲ್ಲದಲ್ಲಿರುವ ಅಂಶ ಸಕ್ರಿಯಗೊಳಿಸುದೆ. ಊಟದ ನಂತರ ಬೆಲ್ಲ ತಿಂದ್ರೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಮಲಬದ್ಧತೆಯ ಸಮಸ್ಯೆಯೂ ಕಾಡುವುದಿಲ್ಲ.

  ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗಲು ಸಹಾಯ

  ಮಹಿಳೆಯರಿಗೆ ಹೆಚ್ಚಾಗಿ ಹಿಮೋಗ್ಲೋಬಿನ್ ಸಮಸ್ಯೆ ಕಾಡುತ್ತಿರುತ್ತೆ. ದಿನ ಬೆಲ್ಲ ತಿಂದ್ರೆ ಹಿಮೋಗ್ಲೋಬಿನ್ ಮಟ್ಟದಲ್ಲಿ ಏರಿಕೆಯಾಗುತ್ತದೆ ಎಂದು ಆರ್ಯುವೇದದ ವೈದ್ಯರು ಹೇಳಿದ್ದಾರೆ. ಐರನ್ ಕಂಟೆಂಟ್ ಹೆಚ್ಚಿರುವುದರಿಂದ ಕೆಂಪು ರಕ್ತ ಕಣಗಳು ಹೆಚ್ಚಾಗುತ್ತವೆ.

  ಇದನ್ನೂ ಓದಿ: Vijayapura Jaggery Tea: ಕುಡಿದೋನೆ ಬಲ್ಲ ವಿಜಯಪುರ ಬೆಲ್ಲದ ಚಹಾದ ಸ್ವಾದ! ವಿಡಿಯೋ ನೋಡಿ

  ಸಕ್ಕರೆ ಕಾಯಿಲೆ ಇರುವವರಿಗೆ ಒಳ್ಳೆಯದು

  ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಿಗಿ ತಿನ್ನಬೇಕು ಅನ್ನಿಸುತ್ತದೆ. ಸಕ್ಕರೆ ತಿಂದ್ರೆ ಡೇಂಜರ್ ಬದಲಿಗೆ ಬೆಲ್ಲವಿರುವ ಆಹಾರ ಪದಾರ್ಥ ತಿಂದರೆ ಅವರ ಆಸೆಯೂ ತೀರುತ್ತದೆ. ಆರೋಗ್ಯಕ್ಕೂ ಒಳ್ಳೆಯದು.

  ಕರ್ನಾಟಕದಲ್ಲಿ ಕಬ್ಬಿನಿಂದ ಬೆಲ್ಲ ತಯಾರಿಕೆ


  ಬೆಲ್ಲ ತಯಾರಿಸುವ ಜಾಗಕ್ಕೆ "ಆಲೆಮನೆ" ಎನ್ನುವರು. ಹೊಲದಿಂದ ತಂದು ತುಂಡರಿಸಿದ ಮೊದಲ ಕಬ್ಬನ್ನು ರಸ ಪಡೆಯಲು ಕಬ್ಬು ಹಿಂಡುವ ಕಣೆಯ (ಕ್ರಷರ್) ಒಳಗೆ ಹಾಕುವುದು. ನಂತರ ಕಬ್ಬಿನ ಹಾಲನ್ನು ಶೋದಿಸಿ ದೊಡ್ಡ ಕುದಿಯುವ ಕಬ್ಬಿಣದ ಬಾನಿಯಲ್ಲಿ ಹಾಕಿ ಅಡಿಯಲ್ಲಿ ಬೆಂಕಿಹಾಕಿ ಕುದಿಸಲಾಗುತ್ತದೆ. 


  ಶಾಖ ವ್ಯರ್ಥವಾಗದಂತೆ ಗೂಡು ಕುಲುಮೆಯನ್ನು ನೆಲದಲ್ಲಿ ನಿರ್ಮಿಸಲಾಗಿರುತ್ತದೆ.  ಇತ್ತೀಚೆಗೆ ಒಂದು  ಕಡಾಯಿ ಬದಲು 3 ರಿಂದ 4 ಬಾನಿಗಳನ್ನು ಸಾಲಿನಲ್ಲಿ ಇಟ್ಟು ಕಬ್ಬಿನ ಹಾಲು ಕುದಿಯುವ ವ್ಯವಸ್ಥೆ ಮಾಡಲಾಗುವುದು.  ಮತ್ತು ಹೊಗೆ ಕೊಳವೆಯ ಮೂಲಕ ಅನಿಲಗಳು ಎಲ್ಲಾ ನಾಲ್ಕು ಕುದಿಯುವ ಕಡಾಯಿಗಳಿಗೆ ಒಂದರ ನಂತರ ಮತ್ತೊಂದು, ಮತ್ತೆ ಒಂದು ನಂತರಲ್ಲಿ ಚಿಮಣಿ ಮೂಲಕ ಅಡಿಯಲ್ಲಿ ಬೆಂಕಿಯ ಸುಳಿ ಹೋಗಲು ವ್ಯವಸ್ಥೆ ಮಾಡುವರು. 


  ಕುದಿಯುವುದರಿಂದ ಎಲ್ಲಾ ನೀರಿನ ಅಂಶ ಆವಿಯಾಗಿ ನಂತರ ಕಬ್ಬಿನ ಹಾಲು ಗಟ್ಟಿಯಾಗುತ್ತದೆ. ಮಂದವಾದ ಹಳದಿ ವಸ್ತುವು ಎತ್ತಿ ಬಿಟ್ಟಾಗ ದಾರವಾಗುವ ಹದ ಬಂದಾಗ ಕುದಿಯುವ ಬೆಲ್ಲವನ್ನು ತಂಪಾಗಿಸುವ ಅಗಲದ ಸಿಮೆಂಟಿನ ಕಟ್ಟೆಯಿರುವ ಹೊಂಡಕ್ಕೆ ಬಿಡಲಾಗುವುದು ಅಥವಾ ಬೋಗುಣಿಗೆ ಬಿಡಲಾಗುತ್ತದೆ. ಅದನ್ನು ಸ್ವಲ್ಪ ಆರಿದ ನಂತರ ಬೇಕಾದ ಗಾತ್ರಕ್ಕೆ ಬೇಕಾದ ಆಕಾರದ ಅಚ್ಚುಗಳನ್ನು ಮಾಡಲಾಗುವುದು.

  Published by:Savitha Savitha
  First published: