Blood Sugar Problem: ಹೈಪರ್ಗ್ಲೈಸೆಮಿಯಾ ಎಂದರೇನು? ರಕ್ತದಲ್ಲಿ ಸಕ್ಕರೆಯ ಮಟ್ಟ ಅಧಿಕವಾಗಿದೆ ಎಂಬುದು ಈ ಲಕ್ಷಣಗಳಿಂದ ತಿಳಿಯುತ್ತದೆ

ತಜ್ಞರ ಪ್ರಕಾರ ಹೈಪರ್ಗ್ಲೈಸೀಮಿಯಾ ಕಾಯಿಲೆಯನ್ನು ತಡೆಗಟ್ಟಲು ಸಾಧ್ಯ. ಈ ಕಾಯಿಲೆಯ ನಿಯಂತ್ರಣಕ್ಕೆ ನೀವು ನಿಮ್ಮ ಮಧುಮೇಹ ರೋಗದ ನಿಯಂತ್ರಣದತ್ತ ಹೆಚ್ಚು ಗಮನ ಕೊಡಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ರಕ್ತದ ಸಕ್ಕರೆ (Blood Sugar) ಮಟ್ಟ (Level) ಅಧಿಕವಾದಾಗ (High) ಅದನ್ನು ಹೈಪರ್ಗ್ಲೈಸೆಮಿಯಾ ಎಂದು ಕರೆಯುತ್ತಾರೆ. ಮಧುಮೇಹ (Diabetes) ಇರುವವರಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ. ತಜ್ಞರ (Experts) ಪ್ರಕಾರ ಹೈಪರ್ಗ್ಲೈಸೀಮಿಯಾ ಕಾಯಿಲೆಯನ್ನು ತಡೆಗಟ್ಟಲು ಸಾಧ್ಯ. ಈ ಕಾಯಿಲೆಯ ನಿಯಂತ್ರಣಕ್ಕೆ ನೀವು ನಿಮ್ಮ ಮಧುಮೇಹ ರೋಗದ ನಿಯಂತ್ರಣದತ್ತ ಹೆಚ್ಚು ಗಮನ ಕೊಡಬೇಕು. ಎಷ್ಟೇ ಚಿಕ್ಕದಾಗಿದ್ದರೂ ಸಹ ಮಧುಮೇಹ ಕಾಯಿಲೆಯ ಆರಂಭಿಕ ಲಕ್ಷಣಗಳನ್ನು ತಿಳಿದುಕೊಳ್ಳಬೇಕು. ಇದು ನಿಮಗೆ  ಹೈಪರ್ಗ್ಲೈಸೆಮಿಯಾ  ಕಾಯಿಲೆಯ ನಿವಾರಣೆಗೆ ಸಹಾಯ ಮಾಡುತ್ತದೆ. ಮಧುಮೇಹ ನಿಯಂತ್ರಣ ಹೈಪರ್ಗ್ಲೈಸೆಮಿಯಾ ಸ್ಥಿತಿಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ರಕ್ತದ ಸಕ್ಕರೆಯ ಪ್ರಮಾಣ ಅಧಿಕಗೊಂಡಾಗ ಅತಿಯಾದ ಬಾಯಾರಿಕೆ, ಆಗಾಗ್ಗೆ ಮೂತ್ರ ವಿಸರ್ಜನೆ, ಆಯಾಸ, ವಾಕರಿಕೆ ಮತ್ತು ವಾಂತಿ, ಉಸಿರಾಟ ತೊಂದರೆ, ಹೊಟ್ಟೆ ನೋವು, ಒಣ ಬಾಯಿ ಮುಂತಾದ ಸಮಸ್ಯೆ ನಿಮ್ಮನ್ನು ಕಾಡುತ್ತವೆ.

    ಈ ಲೇಖನದಲ್ಲಿ ನಿಮ್ಮ ರಕ್ತದೊತ್ತಡ ಹೆಚ್ಚಾಗಿರುವುದನ್ನು ಹೇಗೆ ಕಂಡು ಹಿಡಿಯಬಹುದು ಮತ್ತು ಯಾವ ಲಕ್ಷಣಗಳು ಗೋಚರಿಸುತ್ತವೆ ಎಂಬುದನ್ನು ಇಲ್ಲಿ ನೋಡೋಣ.

    ಅತಿಯಾದ ಬಾಯಾರಿಕೆ

    ಆಗಾಗ್ಗೆ ಹೆಚ್ಚು ಬಾಯಾರಿಕೆ ಮತ್ತು ಹಸಿವು ಆಗುವುದು ರಕ್ತದ ಸಕ್ಕರೆಯ ಪ್ರಮಾಣ ಅಧಿಕವಾಗಿರುವ ಸಾಮಾನ್ಯ ಲಕ್ಷಣವಾಗಿದೆ. ದಿನವಿಡೀ ಎಷ್ಟು ನೀರು ಕುಡಿಯುತ್ತೀರಿ ಅಥವಾ ತಿನ್ನುತ್ತೀರಿ ಎಂಬುದು ಮುಖ್ಯವಲ್ಲ. ಯಾರಿಗಾದರೂ ಅತಿಯಾದ ಬಾಯಾರಿಕೆ ಮತ್ತು ಹಸಿವು ಉಂಟಾಗುತ್ತಿದ್ದರೆ ಅದು ಅಧಿಕ ರಕ್ತದೊತ್ತಡದ ಲಕ್ಷಣ ಆಗಿರಬಹುದು.

    ಇದನ್ನೂ ಓದಿ: ಬೇಸಿಗೆಯಲ್ಲಿ ದೇಹದ ಕಾಳಜಿಗಾಗಿ ಅಡುಗೆ ಮನೆಯಲ್ಲೇ ಇವೆ ಅಗತ್ಯ ವಸ್ತುಗಳು

    ಹೆಚ್ಚಿನ ಪ್ರಮಾಣದ ಗ್ಲೂಕೋಸ್ ಅಂದರೆ ಸಕ್ಕರೆಯು ಸ್ನಾಯುಗಳನ್ನು ತಲುಪಿದಾಗ, ದೇಹವು ನಿರ್ಜಲೀಕರಣ ಉಂಟಾಗುತ್ತದೆ. ಆಗ ಬಾಯಾರಿಕೆ ಆಗುತ್ತದೆ. ಇದರ ನಂತರ, ನಿಮ್ಮ ದೇಹ ರಕ್ತವನ್ನು ದುರ್ಬಲಗೊಳಿಸಲು ಮತ್ತು ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ದೇಹದ ಅಂಗಾಂಶಗಳಿಂದ ದ್ರವವನ್ನು ಸೆಳೆಯುತ್ತದೆ. ಆಗ ನಿಮಗೆ ಬಾಯಾರಿಕೆ ಆಗುತ್ತದೆ.

    ತಿಂದ ನಂತರವೂ ನಿಮಗೆ ತುಂಬಾ ಹಸಿವು ಆಗಬಹುದು. ಸ್ನಾಯುಗಳು ಆಹಾರದಿಂದ ಬೇಕಾದ ಶಕ್ತಿಯನ್ನು ಪಡೆಯುವುದಿಲ್ಲ. ಹಾಗಾಗಿ ದೇಹದ ಇನ್ಸುಲಿನ್ ಪ್ರತಿರೋಧವು ಗ್ಲೂಕೋಸ್  ಸ್ನಾಯುಗಳಿಗೆ ಪ್ರವೇಶಿಸದಂತೆ ತಡೆಯುತ್ತದೆ. ಅದಕ್ಕಾಗಿ ದೇಹಕ್ಕೆ ಹೆಚ್ಚಿನ ಶಕ್ತಿಯ ಅಗತ್ಯವಿದೆ. ಆಗ ನಿಮಗೆ ಹಸಿವಗುತ್ತದೆ.

     ಸಿಹಿ ವಾಸನೆಯ ಮೂತ್ರ

    ಮೂತ್ರವು ಸಿಹಿ ವಾಸನೆ ಹೊಂದಿದ್ದರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ತುಂಬಾ ಹೆಚ್ಚಾಗಿದೆ ಎಂಬುದರ ಸಂಕೇತವಾಗಿದೆ ಎಂದು ತಜ್ಞರು ಹೇಳುತ್ತಾರೆ. ಮೂತ್ರದ ಮೂಲಕ ದೇಹದಿಂದ ಹೊರ ಹಾಕಲ್ಪಟ್ಟ ಸಕ್ಕರೆಯ ಪ್ರಮಾಣ ಕಂಡು ಹಿಡಿಯಲು ಆಗುವುದಿಲ್ಲ. ವ್ಯಕ್ತಿಯ ರಕ್ತದಲ್ಲಿನ ಸಕ್ಕರೆ ಮಟ್ಟ ಅಧಿಕವಾಗಿದ್ದರೆ, ಸಕ್ಕರೆಯು ಮೂತ್ರ ಪಿಂಡಗಳ ಮೂಲಕ ಮತ್ತು ಮೂತ್ರದ ಮೂಲಕ ರಕ್ತದಿಂದ ಹೊರ ಬರುತ್ತದೆ.

     ಮಸುಕಾದ ದೃಷ್ಟಿ

    ನಿಮ್ಮ ದೃಷ್ಟಿ ಮಂದುವಾಗಿದ್ದರೆ ಅದು ಹೈಪರ್ಗ್ಲೈಸೀಮಿಯಾದ ಲಕ್ಷಣವಾಗಿರುತ್ತದೆ. ಕೆಲಸ ಮಾಡುತ್ತಿರುವ ಪ್ರತಿ 4 ಜನರಲ್ಲಿ ಒಬ್ಬರಿಗೆ ಟೈಪ್ 2 ಮಧುಮೇಹ ಇರುತ್ತದೆ ಎಂಬುದು ತಜ್ಞರ ಮಾತು. ದೃಷ್ಟಿ ಮಂದವಾಗುವುದು ರಕ್ತದ ಸಕ್ಕರೆ ಅಧಿಕವಾಗುವ ಸಂಕೇತವಾಗಿರಬಹುದು.

    ಆಯಾಸ

    ನಿರಂತರವಾಗಿ ದಣಿವು ಇದು ಅಧಿಕ ರಕ್ತದ ಸಕ್ಕರೆಯ ಸಂಕೇತ. ಹೀಗಾದಾಗ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಏರಿಳಿತಗೊಳ್ಳುತ್ತದೆ. ರಕ್ತದಲ್ಲಿನ ಸಕ್ಕರೆಯು ತುಂಬಾ ಹೆಚ್ಚಾದಾಗ, ಜೀವಕೋಶಗಳು ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪಡೆಯುವುದಿಲ್ಲ. ಮತ್ತು ಜೀವಕೋಶಗಳು ಸರಿಯಾಗಿ ಕೆಲಸ ಮಾಡಲ್ಲ. ಹೀಗಾಗಿ ದಣಿವಾದ ಅನುಭವ ಆಗುತ್ತದೆ.

    ಇದನ್ನೂ ಓದಿ: ಕೂದಲು ಉದುರಿ ನೆತ್ತಿ ಕಾಣುತ್ತಿದೆಯೇ ಹಾಗಿದ್ದರೆ ಇಂದಿನಿಂದಲೇ ಈ ಸಲಹೆ ಪಾಲಿಸಿ

    ತೂಕ ನಷ್ಟ

    ಬೇಗನೇ ತೂಕ ಕಳೆದುಕೊಳ್ಳುವುದು ನಿರ್ಲಕ್ಷಿಸಬಾರದು. ಇದು ಅಧಿಕ ರಕ್ತದ ಸಕ್ಕರೆಯ ಸಂಕೇತವಾಗಿರಬಹುದು. ನೀವು ಯಾವುದೇ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ತೂಕವನ್ನು ಕಳೆದುಕೊಳ್ಳಲು ಪ್ರಾರಂಭಿಸಿದ್ದರೆ ವೈದ್ಯರ ಭೇಟಿ ಮಾಡಿ.
    Published by:renukadariyannavar
    First published: