• Home
 • »
 • News
 • »
 • lifestyle
 • »
 • Alcohol And Heart: ಏನಿದು ಹಾಲಿಡೇ ಹಾರ್ಟ್ ಸಿಂಡ್ರೋಮ್ ಕಾಯಿಲೆ, ಹೇಗೆ ಉಂಟಾಗುತ್ತದೆ?

Alcohol And Heart: ಏನಿದು ಹಾಲಿಡೇ ಹಾರ್ಟ್ ಸಿಂಡ್ರೋಮ್ ಕಾಯಿಲೆ, ಹೇಗೆ ಉಂಟಾಗುತ್ತದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಾಲಿಡೇ ಹಾರ್ಟ್ ಸಿಂಡ್ರೋಮ್ ಎಂಬುದು ಅತಿಯಾದ ಮದ್ಯ ಸೇವನೆಯಿಂದ ಉಂಟಾಗುವ ಸ್ಥಿತಿ ಆಗಿದೆ. ಈಗ ನ್ಯೂ ಇಯರ್ ಮತ್ತು ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಜನರು ಕುಡಿದ ನಶೆಯಲ್ಲಿ ಉನ್ಮತ್ತರಾಗಿ ತೇಲಾಡುತ್ತಾರೆ. ಆದರೆ ಈ ಮದ್ಯ ಸೇವನೆಯು ನಿಮ್ಮ ಹೃದಯ ಬಡಿತಕ್ಕೆ ಮಾರಕವಾಗಿ ಪರಿಣಮಿಸುತ್ತದೆ.

ಮುಂದೆ ಓದಿ ...
 • Share this:

  ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಹಾಗೂ ಹೃದಯಾಘಾತ (Heart Related Cases And Heart Attack) ಪ್ರಕರಣಗಳು ಹೆಚ್ಚುತ್ತಿವೆ. ಚಿಕ್ಕ ಮಕ್ಕಳಿಂದ ಹಿಡಿದು, ವಯಸ್ಕರರು, ವೃದ್ಧರವರೆಗೆ ಹೃದಯ ಸಂಬಂಧಿ ಕಾಯಿಲೆಗಳು ಕಾಡುತ್ತಿವೆ. ಅಷ್ಟೇ ಅಲ್ಲದೇ ಹೆಚ್ಚಿನ ಜನರು ಮದ್ಯ ಸೇವನೆಯ ಕೆಟ್ಟ ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದು ವ್ಯಕ್ತಿಯ ಆರೋಗ್ಯವನ್ನು (Health) ಮತ್ತಷ್ಟು ಕೆಟ್ಟದಾಗಿಸುತ್ತದೆ. ಹಾಲಿಡೇ ಹಾರ್ಟ್ ಸಿಂಡ್ರೋಮ್ (Holiday Heart Syndrome) ಎಂಬುದು ಅತಿಯಾದ ಮದ್ಯ ಸೇವನೆಯಿಂದ ಉಂಟಾಗುವ ಸ್ಥಿತಿ ಆಗಿದೆ. ಹಾಲಿಡೇ ಹಾರ್ಟ್ ಸಿಂಡ್ರೋಮ್ ರೋಗ ಲಕ್ಷಣವು, ಯಾವುದೇ ಹೃದಯ ಸಂಬಂಧಿ ಕಾಯಿಲೆಯ ವೈದ್ಯಕೀಯ ಇತಿಹಾಸವಿಲ್ಲದ ಜನರಲ್ಲಿಯೂ ಕಂಡು ಬರಬಹುದು ಎನ್ನುತ್ತಾರೆ ತಜ್ಞರು.


  ಹಾಲಿಡೇ ಹಾರ್ಟ್ ಸಿಂಡ್ರೋಮ್ ಕಾಯಿಲೆ


  ಇನ್ನು ಮೂರೇ ದಿನದಲ್ಲಿ ಕ್ರಿಸಮಸ್ ಹಬ್ಬ ಬರಲಿದೆ. ನಂತರ ನ್ಯೂ ಇಯರ್ ಈ ದಿನಗಳಲ್ಲಿ ಜನರು ಹೆಚ್ಚು ಪಾರ್ಟಿ ಮಾಡ್ತಾರೆ. ಆಗ ಕುಡಿತ, ಮೋಜು-ಮಸ್ತಿ ಮಾಡುತ್ತಾ ಕಾಲ ಕಳೆಯುತ್ತಾರೆ. ಪಾರ್ಟಿಯಲ್ಲಿ ಮತ್ತು ರಜಾದಿನಗಳಲ್ಲಿ, ಪ್ರವಾಸದಲ್ಲಿ ಆಲ್ಕೋಹಾಲ್ ಪ್ರಮುಖ ಭಾಗವಾಗಿರುತ್ತದೆ.


  ಈಗ ನ್ಯೂ ಇಯರ್ ಮತ್ತು ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಜನರು ಕುಡಿದ ನಶೆಯಲ್ಲಿ ಉನ್ಮತ್ತರಾಗಿ ತೇಲಾಡುತ್ತಾರೆ. ಆದರೆ ಈ ಮದ್ಯ ಸೇವನೆಯು ನಿಮ್ಮ ಹೃದಯ ಬಡಿತಕ್ಕೆ ಮಾರಕವಾಗಿ ಪರಿಣಮಿಸುತ್ತದೆ ಎಂಬುದು ನಿಮಗೆ ಗೊತ್ತಾ?
  ಎನ್ ಸಿಬಿಐ ಪ್ರಕಾರ, ಹಾಲಿಡೇ ಹಾರ್ಟ್ ಸಿಂಡ್ರೋಮ್ ಎಂಬುದು ಆಲ್ಕೋಹಾಲ್-ಇಂಡ್ಯೂಸ್ಡ್ ಆಟ್ರಿಯಲ್ ಆರ್ಹೆತ್ಮಿಯಾ ಎಂದು ಕರೆಯಲ್ಪಡುವ ಕಾಯಿಲೆ ಆಗಿದೆ. ಆಲ್ಕೋಹಾಲ್ ಸೇವನೆ ಮಾಡಿದಾಗ ದೇಹದಲ್ಲಿ ಎಥೆನಾಲ್ ಮಟ್ಟ ಹೆಚ್ಚಾಗುತ್ತದೆ. ಹಾಲಿಡೇ ಹಾರ್ಟ್ ಸಿಂಡ್ರೋಮ್ ಗೆ ಕಾರಣವಾಗುತ್ತದೆ ಅಂತಾರೆ ತಜ್ಞರು.


  ಹಾಲಿಡೇ ಹಾರ್ಟ್ ಸಿಂಡ್ರೋಮ್


  ಹಾಲಿಡೇ ಹಾರ್ಟ್ ಸಿಂಡ್ರೋಮ್ ಹೃದಯದ ಅಸ್ವಸ್ಥತೆಯ ಪ್ರಕರಣಗಳು ಹೆಚ್ಚಾಗಿ ರಜಾದಿನಗಳಲ್ಲಿ ಕಂಡು ಬಂದಿವೆ. ಹೀಗಾಗಿ ಇದನ್ನು ಹಾಲಿಡೇ ಹಾರ್ಟ್ ಸಿಂಡ್ರೋಮ್ ಎಂದು ಕರೆಯುತ್ತಾರೆ. ಈ ಹೃದಯ ಸಂಬಂಧಿ ಅಸ್ವಸ್ಥತೆಯು ಉಪ್ಪು ಆಹಾರ ಮತ್ತು ಮದ್ಯದ ಅತಿಯಾದ ಸೇವನೆಯಿಂದ ಉಂಟಾಗುತ್ತದೆ.


  ಹಾಲಿಡೇ ಹಾರ್ಟ್ ಸಿಂಡ್ರೋಮ್ ಹೆಚ್ಚಾಗಿ ಪಾರ್ಟಿಗಳು ಮತ್ತು ರಜಾದಿನಗಳಲ್ಲಿ ಹಲವು ಪ್ರಕರಣಗಳು ಕಾಣ ಸಿಗುತ್ತವೆ. ಅಪಾಯಕಾರಿ ಅಡ್ಡ ಪರಿಣಾಮ ಉಂಟು ಮಾಡುತ್ತದೆ. ಈ ಸ್ಥಿತಿಯು ತಕ್ಷಣವೇ ಜೀವಕ್ಕೆ ಅಪಾಯಕಾರಿಯಲ್ಲ. ಆದ್ರೆ ದೀರ್ಘಾವಧಿಯಲ್ಲಿ ಇದು ಹೃದಯ ವೈಫಲ್ಯ ಮತ್ತು ಪಾರ್ಶ್ವವಾಯು ಹಾಗೂ ಗಂಭೀರ ಹೃದಯ ಸಮಸ್ಯೆಗೆ ಕಾರಣವಾಗುತ್ತದೆ.


  ಸಾಂದರ್ಭಿಕ ಚಿತ್ರ


  ಹಾಲಿಡೇ ಹಾರ್ಟ್ ಸಿಂಡ್ರೋಮ್‌ ಲಕ್ಷಣಗಳು ಹೀಗಿವೆ


  ಹೃದಯ ಬಡಿತದಲ್ಲಿ ಏರು-ಪೇರಾಗುವುದು, ಹೆಚ್ಚು ದಣಿದ ಭಾವನೆ ಉಂಟಾಗುವುದು, ತಲೆ ತಿರುಗುವಿಕೆ, ಮೂರ್ಛೆ ಹೋಗುವುದು, ಎದೆ ನೋವು ಕಾಣಿಸಿಕೊಳ್ಳುವುದು, ಒತ್ತಡ, ಅಥವಾ ಅಸ್ವಸ್ಥತೆ, ವಿಶ್ರಾಂತಿ ಮಾಡುವಾಗಲೂ ಉಸಿರಾಟದ ತೊಂದರೆ ಉಂಟಾಗುತ್ತದೆ.


  ಹಾಲಿಡೇ ಹಾರ್ಟ್ ಸಿಂಡ್ರೋಮ್ ಆರೋಗ್ಯ ಅಪಾಯ ಏನು?


  ಹಾಲಿಡೇ ಹಾರ್ಟ್ ಸಿಂಡ್ರೋಮ್ ಅನ್ನು ಗುಣಪಡಿಸಬಹುದು. ಆದರೆ ಇದು ಹಲವು ಮಾರಣಾಂತಿಕ ವೈದ್ಯಕೀಯ ಪರಿಸ್ಥಿತಿಗೆ ಸಂಬಂಧ ಪಟ್ಟಿದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡದೆ ಬಿಟ್ಟರೆ, ಸ್ಥಿತಿ ಮತ್ತಷ್ಟು ಹೆಚ್ಚು ಹದಗೆಡಬಹುದು. ಇದು ಆರ್ಹೆತ್ಮಿಯಾ ಮತ್ತು ನ್ಯುಮೋನಿಯಾ ಸಮಸ್ಯೆಗೆ ಕಾರಣವಾಗುತ್ತದೆ.


  ಹಾಲಿಡೇ ಹಾರ್ಟ್ ಸಿಂಡ್ರೋಮ್ ಸಮಸ್ಯೆಯು ಥ್ರಂಬೋಎಂಬೊಲಿಸಮ್ ಸಮಸ್ಯೆ ಉಂಟು ಮಾಡುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತನಾಳಕ್ಕೆ ಅಡಚಣೆ ಉಂಟು ಮಾಡುತ್ತದೆ.


  ಹಾಲಿಡೇ ಹಾರ್ಟ್ ಸಿಂಡ್ರೋಮ್ ಅಪಾಯವು ಕ್ರಿಸ್ ಮಸ್ ಮತ್ತು ಹೊಸ ವರ್ಷದಲ್ಲಿ ಹದಿನೈದು ಪ್ರತಿಶತ ಹೆಚ್ಚುತ್ತದೆ. 75 ವರ್ಷಕ್ಕಿಂತ ಮೇಲ್ಪಟ್ಟ ಜನರು, ಮಧುಮೇಹ ಮತ್ತು ಪರಿಧಮನಿಯ ಕಾಯಿಲೆಯಿರುವ ರೋಗಿಗಳಿಗೆ ಇದು ಹೆಚ್ಚು ಅಪಾಯಕಾರಿಯಾಗಿದೆ.


  ಇದನ್ನೂ ಓದಿ: ಪ್ರತಿದಿನ ಕೇವಲ 10 ನಿಮಿಷ ವ್ಯಾಯಾಮ ಮಾಡೋದ್ರಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತಾ?


  ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಆರೋಗ್ಯಕರ ಆಹಾರ ಪದ್ಧತಿ ಫಾಲೋ ಮಾಡಿ. ಸಂಸ್ಕರಿಸಿದ, ಪ್ಯಾಕೇಜ್ ಮಾಡಿದ ಆಹಾರ, ಮದ್ಯದ ಅತಿಯಾದ ಸೇವನೆ ತಪ್ಪಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

  Published by:renukadariyannavar
  First published: