• Home
 • »
 • News
 • »
 • lifestyle
 • »
 • Himalayan Gold: ಏನಿದು ಹಿಮಾಲಯನ್ ಗೋಲ್ಡ್ ? ಇದಕ್ಕಾಗಿ ಚೀನಾ ಭಾರತದ ಗಡಿಯಲ್ಲಿ ಅತಿಕ್ರಮಣ ಮಾಡಿತ್ತಾ?

Himalayan Gold: ಏನಿದು ಹಿಮಾಲಯನ್ ಗೋಲ್ಡ್ ? ಇದಕ್ಕಾಗಿ ಚೀನಾ ಭಾರತದ ಗಡಿಯಲ್ಲಿ ಅತಿಕ್ರಮಣ ಮಾಡಿತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಾರ್ಡಿಸೆಪ್ಸ್ ಫಂಗಸ್ ಎಷ್ಟು ಜನಪ್ರಿಯ ಹಾಗೂ ಮುಖ್ಯವಾದ ಮೂಲಿಕೆಯಾಗಿದೆ. ಭಾರತವು ಹಲವು ಗಿಡಮೂಲಿಕೆಗಳ ಸಂಪತ್ತನ್ನು ಹೊಂದಿದೆ. ಹೀಗಾಗಿ ಇಲ್ಲಿ ಯಾವುದೇ ಕಾಯಿಲೆಯಿರಲಿ ಅದಕ್ಕೆ ಆಯುರ್ವೇದವು ಪರಿಹಾರ ನೀಡುತ್ತದೆ.

 • Share this:

  ಹಿಮಾಲಯದಲ್ಲಿ (Himalaya) ಸಾಕಷ್ಟು ಔಷಧೀಯ ಮೂಲಿಕೆಗಳು (Medicinal Herbs) ಸಿಗುತ್ತವೆ ಎಂಬುದನ್ನು ನೀವು ಕೇಳಿರಬಹುದು. ಹಿಮಾಲಯದ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ (Natural) ಕಂಡು ಬರುವ ಅಮೂಲ್ಯವಾದಂತಹ ಮೂಲಿಕೆ ಅಂದ್ರೆ ಹಿಮಾಲಯನ್ ಗೋಲ್ಡ್ (Himalayan Gold). ಇದನ್ನು ಕಾರ್ಡಿಸೆಪ್ಸ್ ಫಂಗಸ್ ಹಾಗೂ ಕ್ಯಾಟರ್ಪಿಲ್ಲರ್ ಫಂಗಸ್ ಎಂದು ಕರೆಯುತ್ತಾರೆ. ಕಾರ್ಡಿಸೆಪ್ಸ್ ಫಂಗಸ್ ಹೆಚ್ಚಾಗಿ ಟಿಬೆಟ್, ಭೂತಾನ್, ಭಾರತ (India), ಚೀನಾ ಮತ್ತು ನೇಪಾಳದ ಎತ್ತರದ ಪ್ರದೇಶಗಳಲ್ಲಿ ಕಂಡು ಬರುತ್ತದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೇ ಇತ್ತೀಚೆಗೆ ಚೀನಾ ಸೈನಿಕರು, ಈ ಕಾರ್ಡಿಸೆಪ್ಸ್ ಫಂಗಸ್ ಮೂಲಿಕೆಗಾಗಿ ಭಾರತದ ಭೂಪ್ರದೇಶದೊಳಗೆ ಅತಿಕ್ರಮಣ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ.


  ಹಿಮಾಲಯನ್ ಗೋಲ್ಡ್ ಎಂಬ ಮೂಲಿಕೆ


  ಇದೊಂದೇ ಉದಾಹರಣೆ ಸಾಕು ಕಾರ್ಡಿಸೆಪ್ಸ್ ಫಂಗಸ್ ಎಷ್ಟು ಜನಪ್ರಿಯ ಹಾಗೂ ಮುಖ್ಯವಾದ ಮೂಲಿಕೆಯಾಗಿದೆ ಎಂದು ತಿಳಿಯಲು. ಭಾರತವು ಹಲವು ಗಿಡಮೂಲಿಕೆಗಳ ಸಂಪತ್ತನ್ನು ಹೊಂದಿದೆ. ಹೀಗಾಗಿ ಇಲ್ಲಿ ಯಾವುದೇ ಕಾಯಿಲೆಯಿರಲಿ ಅದಕ್ಕೆ ಆಯುರ್ವೇದವು ಪರಿಹಾರ ನೀಡುತ್ತದೆ.


  ಕೆಲವು ಮಾಧ್ಯಮ ವರದಿಗಳ ಪ್ರಕಾರ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಸೈನಿಕರು, ಈ ಬೆಲೆ ಬಾಳುವ ಹಿಮಾಲಯನ್ ಗೋಲ್ಡ್ ಮೂಲಿಕೆಗಾಗಿ ಭಾರತದ ಅರುಣಾಚಲ ಪ್ರದೇಶದಲ್ಲಿ ಅತಿಕ್ರಮಣ ಮಾಡಲು ಪ್ರಯತ್ನ ಮಾಡಿದ್ದರು ಎಂದು ಹೇಳಲಾಗಿದೆ.


  ಚೀನಾದಲ್ಲಿ ಮಧ್ಯಮ ವರ್ಗದ ಜನತೆ ಹೆಚ್ಚು ದುರ್ಬಲ ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಅಲ್ಲಿಯವರು ಪರಿಹಾರ ಹುಡುಕುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.
  ಹಿಮಾಲಯನ್ ಗೋಲ್ಡ್ ಮೂಲಿಕೆ ಆರೋಗ್ಯ ಅದ್ಭುತ ಪ್ರಯೋಜನ ನೀಡುವ ಮೂಲಿಕೆ ಆಗಿದೆ. ಹಿಮಾಲಯನ್ ಗೋಲ್ಡ್ ಮೂಲಿಕೆ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ.


  ಕಾರ್ಡಿಸೆಪ್ಸ್ ಫಂಗಸ್ ಅಥವಾ ಹಿಮಾಲಯನ್ ಗೋಲ್ಡ್ ಮೂಲಿಕೆ ಎಂದರೇನು?


  ಹಿಮಾಲಯನ್ ಗೋಲ್ಡ್ ಮೂಲಿಕೆ ಅಥವಾ ಕಾರ್ಡಿಸೆಪ್ಸ್ ಪರಾವಲಂಬಿ ಶಿಲೀಂಧ್ರದ ಮರಿಹುಳುಗಳ ಲಾರ್ವಾಗಳ ಮೇಲೆ ಬೆಳೆಯುತ್ತವೆ. ಕಾರ್ಡಿಸೆಪ್ಸ್ ಪರಾವಲಂಬಿ ಎಂಬುದು ಶಿಲೀಂಧ್ರಗಳ ಒಂದು ಕುಲ. ಇದು ಶಿಲೀಂಧ್ರವಿರುವ ಅಂಗಾಂಶದ ಮೇಲೆ ಆಕ್ರಮಣ ಮಾಡುತ್ತದೆ.


  ಇದು ನಂತರ ಬದಲಾವಣೆಯಾಗಿ ಶಿಲೀಂಧ್ರದ ದೇಹದಿಂದ ಉದ್ದ ಹಾಗೂ ತೆಳುವಾದ ಕಾಂಡಗಳು ಬೆಳೆಯುತ್ತವೆ. ಇದನ್ನೇ ಹಿಮಾಲಯನ್ ಗೋಲ್ಡ್ ಮೂಲಿಕೆ ಅಥವಾ ಕಾರ್ಡಿಸೆಪ್ಸ್ ಫಂಗಸ್ ಎಂದು ಕರೆಯುತ್ತಾರೆ.


  ಈ ಮೂಲಿಕೆಯನ್ನು ಒಣಗಿಸಿ ಹಲವು ರೋಗಗಳ ನಿವಾರಣೆಗೆ ಬಳಕೆ ಮಾಡಲಾಗುತ್ತದೆ. ಇದಕ್ಕೆ ಚೀನಾದಲ್ಲಿ ಸಾಕಷ್ಟು ಪ್ರಾಮುಖ್ಯತೆ ಇದೆ. ಚೀನಿಯರು ಇದನ್ನು ಔಷಧದಲ್ಲಿ ಶತಮಾನಗಳಿಂದ ಬಳಸುತ್ತಾ ಬಂದಿದ್ದಾರೆ. ಇದು ಚೀನಿಯರಿಗೆ ಬೇಕಾದ ಅತ್ಯಮೂಲ್ಯ ಖಾದ್ಯ ಔಷಧೀಯ ಮೂಲಿಕೆ ಆಗಿದೆ.


  ಕಾರ್ಡಿಸೆಪ್ಸ್ ಫಂಗಸ್ ಪ್ರಯೋಜನಗಳು


  ಒಂದು ವರದಿ ಪ್ರಕಾರ, ನೈಸರ್ಗಿಕ ಕಾರ್ಡಿಸೆಪ್ಸ್ ಫಂಗಸ್ ನ್ನು ವಿವಿಧ ಆರೋಗ್ಯ ಪ್ರಯೋಜನಕ್ಕಾಗಿ ಬಳಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಆದ್ರೆ ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.


  ಸಾಂದರ್ಭಿಕ ಚಿತ್ರ


  ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.


  ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಕಾರಿ.


  ದೇಹದಲ್ಲಿ ಉಂಟಾಗುವ ಗಡ್ಡೆಗಳ ಗಾತ್ರ ಕಡಿಮೆ ಮಾಡುತ್ತದೆ.


  ಶ್ವಾಸಕೋಶ ಅಥವಾ ಚರ್ಮದ ಕ್ಯಾನ್ಸರ್ ಗೆ ಔಷಧವಾಗಿ ಬಳಕೆ ಮಾಡಲಾಗುತ್ತದೆ.


  ಅಥ್ಲೆಟಿಕ್ ಕಾರ್ಯಕ್ಷಮತೆ ಹೆಚ್ಚಿಸುತ್ತದೆ.


  ಮೂತ್ರಪಿಂಡದ ಅಸ್ವಸ್ಥತೆ ಕಡಿಮೆ ಮಾಡುತ್ತದೆ.


  ಯಕೃತ್ತಿನ ಸಮಸ್ಯೆ ನಿವಾರಣೆಗೆ ಸಹಕಾರಿ.


  ಲೈಂಗಿಕ ಸಮಸ್ಯೆ ನಿವಾರಿಸಲು ಸಹಕಾರಿ.


  ಎಷ್ಟು ಪ್ರಮಾಣದಲ್ಲಿ ಹಿಮಾಲಯನ್ ಗೋಲ್ಡ್ ಸೇವಿಸುವುದು ಉತ್ತಮ


  ಹಿಮಾಲಯನ್ ಗೋಲ್ಡ್ ನ್ನು ಒಂದು ವರ್ಷದವರೆಗೆ ಪ್ರತಿದಿನ ಗರಿಷ್ಠ 6 ಗ್ರಾಂ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಇದಕ್ಕಿಂತ ಹೆಚ್ಚಿಗೆ ಸೇವಿಸಿದ್ರೆ ಅತಿಸಾರ, ಮಲಬದ್ಧತೆ ಮತ್ತು ಕಿಬ್ಬೊಟ್ಟೆಯ ಅಸ್ವಸ್ಥತೆ ಸಮಸ್ಯೆ ಅಡ್ಡ ಪರಿಣಾಮ ಉಂಟಾಗುತ್ತದೆ ಎನ್ನಲಾಗಿದೆ.


  ಇದನ್ನೂ ಓದಿ: ತ್ವಚೆಯ ಪ್ರಕಾರ ಕಂಡು ಹಿಡಿಯುವುದು ಹೇಗೆ? ಈ ಟೆಸ್ಟ್ ಮಾಡಿ ನೋಡಿ!


  ಕಾರ್ಡಿಸೆಫ್ ನ್ನು ಹಿಮಾಲಯನ್ ಗೋಲ್ಡ್ ಎಂದು ಯಾಕೆ ಕರೆಯುತ್ತಾರೆ?


  ಮಾಧ್ಯಮ ವರದಿಗಳ ಪ್ರಕಾರ, ಚೀನಾದಲ್ಲಿ ಚಿನ್ನ ಅಥವಾ ವಜ್ರಗಳಿಗಿಂತ ಹೆಚ್ಚು ಕಾರ್ಡಿಸೆಪ್ಸ್ ಫಂಗಸ್ ಅಥವಾ ಹಿಮಾಲಯನ್ ಗೋಲ್ಡ್ ದುಬಾರಿ ಆಗಿದೆ. ಇದಕ್ಕೆ ಸಾಕಷ್ಟು ಬೇಡಿಕೆಯಿದೆ. ಒಂದು ಕಿಲೋಗ್ರಾಂ ಔಷಧೀಯ ಮೂಲಿಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 65 ಲಕ್ಷ ರೂ.ಗೆ ಮಾರಾಟವಾಗುತ್ತೆ. ಹೀಗಾಗಿ ಇದನ್ನು ಹಿಮಾಲಯನ್ ಗೋಲ್ಡ್ ಎನ್ನುತ್ತಾರೆ.

  Published by:renukadariyannavar
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು