Urine Problems: ಹೆಮಟುರಿಯಾ ಎಂದರೇನು? ಮೂತ್ರದಲ್ಲಿ ರಕ್ತ ಹೋಗುವುದನ್ನು ನಿರ್ಲಕ್ಷಿಸಬೇಡಿ

ಮುಜುಗರದ ಕಾರಣದಿಂದ ಶೌಚಾಲಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಾಮಾನ್ಯವಾಗಿ ನಿರ್ಲಕ್ಷ್ಯ ಮಾಡಲಾಗುತ್ತದೆ. ಮತ್ತು ಜನರು ತಮ್ಮ ಇಂತಹ ಸಮಸ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಅನೇಕ ಜನರು (People) ಶೌಚಾಲಯಕ್ಕೆ ಹೋಗುವುದು ಮತ್ತು ಖಾಸಗಿ ಭಾಗಗಳಲ್ಲಿ (Private Parts) ಉಂಟಾಗುವ ನೋವು (Pain), ಕಾಯಿಲೆಗಳನ್ನು (Disease) ಹೇಳಿಕೊಳ್ಳಲು ಮುಜುಗರ ಪಟ್ಟುಕೊಳ್ಳುತ್ತಾರೆ. ದೇಹದ ಖಾಸಗಿ ಅಂಗಗಳು ದೇಹದ (Body) ಪ್ರಮುಖ ಭಾಗಗಳಾಗಿವೆ. ಹೆಚ್ಚಾಗಿ ಖಾಸಗಿ ಭಾಗಗಳು ಕಪ್ಪಾಗುವುದು, ತುರಿಕೆ, ದದ್ದು, ಗುಳ್ಳೆ ಉಂಟಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ಮುಜುಗರದ ಕಾರಣದಿಂದ ಶೌಚಾಲಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಾಮಾನ್ಯವಾಗಿ ನಿರ್ಲಕ್ಷ್ಯ ಮಾಡಲಾಗುತ್ತದೆ. ಮತ್ತು ಜನರು ತಮ್ಮ ಇಂತಹ ಸಮಸ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ. ಈ ಖಾಸಗಿ ಅಂಗಗಳ ಸಮಸ್ಯೆಯನ್ನು ನಿರ್ಲಕ್ಷಿಸುವುದು ಕೆಲವೊಮ್ಮೆ ಗಂಭೀರ ಕಾಯಿಲೆಯ ಅಪಾಯವನ್ನು ಉಂಟು ಮಾಡಬಹುದು.

    ಖಾಸಗಿ ಭಾಗಗಳಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆ

    ಖಾಸಗಿ ಭಾಗಗಳಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆ ಮತ್ತು ಕಾಯಿಲೆಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಗಂಭೀರ ಕಾಯಿಲೆ ಕಾಡಬಹುದು. ನೀವು ಕಾಲ ಕಾಲಕ್ಕೆ ತಪಾಸಣೆ ಮಾಡಿಸುವುದು ಉತ್ತಮ. ಇದರಿಂದ ನೀವು ಕೆಲ ಕಾಯಿಲೆಗಳನ್ನು ಸರಿಯಾದ ಸಮಯಕ್ಕೆ ನಿಯಂತ್ರಣ ಮಾಡಹುದು.

    ಖ್ಯಾತ ಬ್ರಿಟಿಷ್ ಡಾ.ಡಾ.ಮಿರಿಯಮ್ ಸ್ಟಾಪರ್ಡ್ ಅವರ ಪ್ರಕಾರ ಕೆಲವರ ಮೂತ್ರದಲ್ಲಿ ರಕ್ತ ಹೋಗುವು ಇದೆ. ಇದು ಗಂಭೀರ ಅನಾರೋಗ್ಯದ ಸಂಕೇತ ಆಗಿದೆ. ಹಾಗಾಗಿ ಮೂತ್ರ ವಿಸರ್ಜನೆಯ ಸಮಯದಲ್ಲಿ ಪ್ರತಿಯೊಬ್ಬರೂ ತಮ್ಮ ಮೂತ್ರದಲ್ಲಿ ರಕ್ತ ಹೋಗುತ್ತಿದೆಯಾ ಎಂಬ ಬಗ್ಗೆ ಗಮನ ಹರಿಸಬೇಕು.

    ಇದನ್ನೂ ಓದಿ: ಹೆವಿ ಫುಡ್ ನಂತರ ಅಸ್ವಸ್ಥತೆಯಾ? ಈ ಕೆಲವು ಡಿಟಾಕ್ಸ್ ವಾಟರ್​ ಕುಡಿದು ಲೈಟ್ ಫೀಲ್ ಮಾಡಿ

    ಮೂತ್ರದಲ್ಲಿ ರಕ್ತ ಹೋಗುವುದು ಯಾವ ರೋಗದ ಸಂಕೇತ

    ಡಾ. ಮಿರಿಯಮ್ ಸ್ಟಾಪರ್ಡ್ Mirror.co.uk ನಲ್ಲಿ ಒಂದು ಲೇಖನ ಪ್ರಕಟ ಆಗಿದೆ. ಇದರಲ್ಲಿ ಅವರು ಹೇಳುವ ಪ್ರಕಾರ, ನನ್ನ ಸ್ನೇಹಿತರೊಬ್ಬರು ಗಾಬರಿಯಿಂದ ನನಗೆ ಕರೆ ಮಾಡಿ ಅವರ ಮೂತ್ರದಲ್ಲಿ ರಕ್ತ ಬರುತ್ತಿದೆ ಎಂದು ತಿಳಿಸಿದರು. ಇದು ಯಾವ ಕಾಯಿಲೆಯ ಲಕ್ಷಣ ಎಂದು ಕೇಳಿ ಆತಂಕ ವ್ಯಕ್ತಪಡಿಸಿದ್ದರು.

    ಆಗ ನಾನು ಸ್ನೇಹಿತನಿಗೆ ನೀವು ಬೀಟ್ರೂಟ್ ಸೇವನೆ ಮಾಡಿದ್ದೀರಾ ಎಂದು ಕೇಳಿದೆ. ಆಗ ಅವರು ಹೌದು ಎಂದು ಉತ್ತರಿಸಿದರು. ನಂತರ ನಾನು ಬೀಟ್ರೂಟ್ನಿಂದ ಮೂತ್ರದ ಬಣ್ಣವು ಕೆಲವೊಮ್ಮೆ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಅದು ರಕ್ತದಂತೆಯೇ ಕಾಣುತ್ತದೆ ಎಂದು ಹೇಳಿದೆ.

    ಬೀಟ್ರೂಟ್ನ ಬಣ್ಣವು ಕೆಂಪು ಬಣ್ಣದ್ದಾಗಿರುತ್ತದೆ. ಹಾಗಾಗಿ ಮೂತ್ರ ಕೆಲವೊಮ್ಮೆ ಕೆಂಪಗೆ ಹೋಗುತ್ತದೆ ಎಂದು ನಾನು ಅವನಿಗೆ ವಿವರಿಸಿದೆ. ಬೀಟ್ರೂಟ್ ತಿಂದಾಗ ಅದು ಮೂತ್ರದಲ್ಲಿ ಅದೇ ಪ್ರಮಾಣದಲ್ಲಿ ಹರಡುತ್ತದೆ ಎಂದು ಹೇಳಿದೆ. ಅದು ರಕ್ತವಾಗಿದ್ದರೆ, ಅದು ಹೆಪ್ಪುಗಟ್ಟುವಿಕೆಯಾಗಿ ಕಾಣಿಸಿಕೊಳ್ಳುತ್ತದೆ ಮತ್ತು ಗಂಭೀರ ಅನಾರೋಗ್ಯದ ಸಂಕೇತವಾಗಿದೆ ಎಂದು ತಿಳಿಸಿದೆ ಎಂದಿದ್ದಾರೆ.

    ಹೆಮಟುರಿಯಾ ಎಂದರೇನು?

    ಮೂತ್ರ, ಪ್ರಾಸ್ಟೇಟ್ ಅಥವಾ ಮೂತ್ರಪಿಂಡದ ಕ್ಯಾನ್ಸರ್ ಪರೀಕ್ಷೆ ಮಾಡಿದ ನಂತರ ನಿಜವಾದ ವಿಷಯ ಹೊರ ಬರುತ್ತದೆ. ಗಾಳಿ ಗುಳ್ಳೆಯ ಕ್ಯಾನ್ಸರ್ನ ಸಾಮಾನ್ಯ ಲಕ್ಷಣವೆಂದರೆ ಮೂತ್ರದಲ್ಲಿ ರಕ್ತ ಹೋಗುವುದು.  ಇದನ್ನು ಹೆಮಟುರಿಯಾ ಎಂದು ಕರೆಯಲಾಗುತ್ತದೆ.

    ಲಂಡನ್‌ನ ಇಂಪೀರಿಯಲ್ ಕಾಲೇಜ್‌ನ ಅನಿಕಾ ಮದನ್ ಹೇಳುವ ಪ್ರಕಾರ, ಮೂತ್ರಕೋಶದ ಕ್ಯಾನ್ಸರ್ ಹೊಂದಿರುವ ಸುಮಾರು 80 ಪ್ರತಿಶತ ರೋಗಿಗಳಲ್ಲಿ ಮೂತ್ರದಲ್ಲಿ ರಕ್ತ ಹೋಗುವ ಈ ಸಮಸ್ಯೆ ಕಂಡು ಬರುತ್ತದೆ ಎಂದರು.

    ಪ್ರತಿಯೊಬ್ಬ ವ್ಯಕ್ತಿಗೆ ಕ್ಯಾನ್ಸರ್ ಇರಬೇಕು ಎಂಬ ಅಗತ್ಯವಿಲ್ಲ

    ಮೂತ್ರದಲ್ಲಿ ರಕ್ತ ಇರುವ ವ್ಯಕ್ತಿಗೆ ಮೂತ್ರಕೋಶದ ಕ್ಯಾನ್ಸರ್ ಇದೆ ಎಂದು ತಿಳಿಯುವುದು ತಪ್ಪು. ಇದಕ್ಕೆ ಬೇರೆ ಕೆಲವು ಕಾರಣಗಳೂ ಇರಬಹುದು. ಇದು ವಿಸ್ತರಿಸಿದ ಪ್ರಾಸ್ಟೇಟ್, ಮೂತ್ರನಾಳದ ಸೋಂಕು (UTI) ಅಥವಾ ಭಾರೀ ವ್ಯಾಯಾಮದ ಕಾರಣದಿಂದಾಗಿರಬಹುದು ಎಂದು ತಿಳಿಸಿದರು.

    UTI ಯ ಚಿಹ್ನೆಗಳ ಕಂಡು ಬಂದಾಗ

    ಮೂತ್ರದಲ್ಲಿ ನೋವು,

    ಮೂತ್ರದ ಬಣ್ಣದಲ್ಲಿ ಬದಲಾವಣೆ,

    ಆಗಾಗ್ಗೆ ಮೂತ್ರ ವಿಸರ್ಜನೆ,

    ಮೂತ್ರವನ್ನು ಹಿಡಿದಿಡಲು ಅಸಮರ್ಥತೆ ಇತ್ಯಾದಿ ಸಮಸ್ಯೆ ಕಂಡು ಬರುತ್ತವೆ.

    ಯಾವಾಗ ಮೂತ್ರದಲ್ಲಿ ರಕ್ತ ಹೋಗುತ್ತದೆ?

    ದೀರ್ಘಕಾಲದ ಓಟದಂತಹ ವ್ಯಾಯಾಮ ಅಥವಾ ಈಜು ಚಟುವಟಿಕೆಗಳು ಮೂತ್ರದಲ್ಲಿ ರಕ್ತವನ್ನು ಉಂಟು ಮಾಡಬಹುದು. ಆದರೆ ಇದು ಸಾಮಾನ್ಯವಾಗಿ 1-2 ದಿನಗಳಲ್ಲಿ ಸರಿ ಹೋಗುತ್ತದೆ. ಮೂತ್ರದಲ್ಲಿ ರಕ್ತವು ಕೆಲವು ಔಷಧಿಗಳು ಅಥವಾ ಕೆಲವು ಆಹಾರಗಳ ಸೇವನೆಯಿಂದಲೂ ಬರಬಹುದು.

    ಇದನ್ನೂ ಓದಿ: ತೂಕ ದಿಢೀರ್ ಹೆಚ್ಚುತ್ತಿದೆಯಾ? ಈ ಗಂಭೀರ ರೋಗದ ಲಕ್ಷಣವಿದು, ಪರೀಕ್ಷಿಸಿಕೊಳ್ಳಿ

    ಯಾರಾದರೂ ಬೀಟ್ಗೆಡ್ಡೆ, ಬ್ಲ್ಯಾಕ್ಬೆರಿ ಅಥವಾ ಕೆಂಪು ಆಹಾರ ಸೇವಿಸಿದರೆ, ಕೆಲವೊಮ್ಮೆ ಅವರ ಮೂತ್ರದ ಬಣ್ಣವು ಗುಲಾಬಿ ಅಥವಾ ಕೆಂಪು ಬಣ್ಣದ್ದಾಗಿರಬಹುದು. ಮುಟ್ಟಿನ ಸಮಯದಲ್ಲಿ ಯೋನಿ ರಕ್ತಸ್ರಾವದಿಂದಲೂ ಇದು ಸಂಭವಿಸಬಹುದು.
    Published by:renukadariyannavar
    First published: