Heat Stroke: ಹೀಟ್ ಸ್ಟ್ರೋಕ್​​ನಿಂದ ಹಲವು ಆರೋಗ್ಯ ಸಮಸ್ಯೆ! ಇದಕ್ಕೇನು ಪರಿಹಾರ?

ಶಾಖದ ಹೊಡೆತ ಅಥವಾ ಹೀಟ್ ಸ್ಟ್ರೋಕ್ ಸಾಮಾನ್ಯವಾಗಿ ನಿಮ್ಮ ದೇಹವು ತನ್ನ ತಾಪಮಾನವನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದಾಗ ಇದು ಸಂಭವಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ದೇಶದ (Country) ಹಲವು ರಾಜ್ಯಗಳು (States) ಬಿಸಿಲಿನ (Sunlight) ಬೇಗೆಯಿಂದ ಕೊತ ಕೊತ ಕುದಿಯುತ್ತಿವೆ. ಹೆಚ್ಚುತ್ತಿರುವ ತಾಪ ಕೆಲ ನಗರಗಳಲ್ಲಿ ತನ್ನ ಹಳೆಯ ದಾಖಲೆ (Record) ಮುರಿದಿದೆ. ಬಿಸಿಲ ಧಗೆ ಮತ್ತು ಸೆಖೆಯಿಂದ (Heat) ಜನರು ತತ್ತರಿಸಿದ್ದಾರೆ. ಕೂಲ್ (Cool) ಆಗುವ ಮಾರ್ಗ ಹುಡುಕುತ್ತಿದ್ದಾರೆ. ಜನರು ಮನೆಯಿಂದ ಹೊರಗೆ ಬರಲು ಪರದಾಡುತ್ತಿದ್ದಾರೆ. ದೇಶದ ಅನೇಕ ಪ್ರದೇಶಗಳಲ್ಲಿ ಬಿಸಿಲು 45 ಡಿಗ್ರಿ ತಲುಪಿದೆ. ಈಗ ಬಿಸಿಲಿನ ಹೊಡೆತ ಅಂದರೆ ಜನರು ಹೀಟ್ ಸ್ಟ್ರೋಕ್ ನಿಂದ ಬಚಾವಾಗಲು ಹಲವು ಮಾರ್ಗ ಹುಡುಕಿ ಅಳವಡಿಸಿಕೊಳ್ಳುತ್ತಿದ್ದಾರೆ. ಹೀಟ್ ಸ್ಟ್ರೋಕ್ ಬಗ್ಗೆ ಅನೇಕರಿಗೆ ಸರಿಯಾದ ಮಾಹಿತಿ ಇಲ್ಲ.

  ಆದ್ದರಿಂದ ಇಂದು ನಾವು ಇಲ್ಲಿ ಹೀಟ್ ಸ್ಟ್ರೋಕ್ ಎಂದರೇನು ಮತ್ತು ಅದರ ಲಕ್ಷಣಗಳು ಹಾಗೂ ಯಾವ ಮನೆಮದ್ದುಗಳು ಹೀಟ್ ಸ್ಟ್ರೋಕ್ ಅನ್ನು ತೊಡೆದು ಹಾಕುತ್ತವೆ ಎಂಬುದನ್ನು ನೋಡೋಣ.

  ಹೀಟ್ ಸ್ಟ್ರೋಕ್ ಎಂದರೇನು?

  ಶಾಖದ ಹೊಡೆತ ಅಥವಾ ಹೀಟ್ ಸ್ಟ್ರೋಕ್ ಸಾಮಾನ್ಯವಾಗಿ ನಿಮ್ಮ ದೇಹವು ತನ್ನ ತಾಪಮಾನವನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದಾಗ ಇದು ಸಂಭವಿಸುತ್ತದೆ. ಶಾಖದ ಹೊಡೆತದಲ್ಲಿ, ದೇಹದ ಉಷ್ಣತೆಯು ವೇಗವಾಗಿ ಹೆಚ್ಚಳ ಆಗುತ್ತದೆ. ಮತ್ತು ಶಾಖ ಕಡಿಮೆ ಮಾಡಲು ಸಾಧ್ಯ ಆಗುವುದಿಲ್ಲ. ಯಾರಾದರೂ ಶಾಖದ ಹೊಡೆತಕ್ಕೆ ಒಳಗಾದಾಗ ದೇಹದ ಬೆವರುವಿಕೆಯ ಕಾರ್ಯ ವಿಧಾನವೂ ವಿಫಲಗೊಳ್ಳುತ್ತದೆ.

  ಇದನ್ನೂ ಓದಿ: ಕಲ್ಲಂಗಡಿ ಬೀಜ ಎಸೆಯೋ ಬದಲು ಹೀಗೆ ತಿನ್ನಿ, ಆರೋಗ್ಯ ಲಾಭ ಬಹಳಷ್ಟಿದೆ

  ಮತ್ತು ವ್ಯಕ್ತಿಯು ಬೆವರುವುದಿಲ್ಲ. ಹೀಟ್-ಸ್ಟ್ರೋಕ್‌ ಹೊಡೆದ ನಂತರ 10 ರಿಂದ 15 ನಿಮಿಷಗಳಲ್ಲಿ ದೇಹದ ಉಷ್ಣತೆ 106 ° F ಅಥವಾ ಹೆಚ್ಚು ಆಗಿರುತ್ತದೆ. ಇದಕ್ಕೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಇದು ಮಾನವನ ಸಾವಿಗೆ ಕಾರಣವಾಗುತ್ತದೆ. ಇಲ್ಲದಿದ್ದರೆ ಅಂಗಾಂಗಗಳ ವೈಫಲ್ಯವೂ ಉಂಟಾಗಬಹುದು.

  ಹೀಟ್ ಸ್ಟ್ರೋಕ್‌ನ ಲಕ್ಷಣಗಳು ಯಾವವು?

  ಹೀಟ್ ಸ್ಟ್ರೋಕ್ನ್ ರೋಗ ಲಕ್ಷಣಗಳನ್ನು ಗುರುತಿಸಿದರೆ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲು ಮತ್ತು ಸಮಯಕ್ಕೆ ಸರಿಯಾದ ಸಹಾಯ ಮಾಡಲು ಸಹಕರಿ ಆಗುತ್ತದೆ. ಆದ್ದರಿಂದ, ಹೀಟ್ -ಸ್ಟ್ರೋಕ್ನ ಎಲ್ಲಾ ರೋಗ ಲಕ್ಷಣಗಳನ್ನು ಗುರುತಿಸುವುದು ತುಂಬಾ ಮುಖ್ಯ.

  ತಲೆನೋವು

  ಬುದ್ಧಿಮಾಂದ್ಯತೆ

  ಅಧಿಕ ಜ್ವರ

  ಪ್ರಜ್ಞೆಯ ನಷ್ಟ

  ಮಾನಸಿಕ ಸ್ಥಿತಿಯ ಕ್ಷೀಣತೆ

  ವಾಕರಿಕೆ ಮತ್ತು ವಾಂತಿ

  ಚರ್ಮದ ಕೆಂಪಾಗುವಿಕೆ

  ಹೃದಯದ ಬಡಿತ ಹೆಚ್ಚಾಗುವುದು

  ಚರ್ಮದ ಮೃದುತ್ವ ಮತ್ತು ಚರ್ಮ ಶುಷ್ಕತೆ

  ಹೀಟ್ ಸ್ಟ್ರೋಕ್ ಆಗಲು ಕಾರಣಗಳು ಯಾವವು?

  - ಬಿಸಿಯಾದ ಸ್ಥಳದಲ್ಲಿ ದೀರ್ಘಕಾಲ ಉಳಿಯುವುದು ಶಾಖದ ಹೊಡೆತ ಅಥವಾ ಹೀಟ್ ಸ್ಟ್ರೋಕ್ಗೆ ಮುಖ್ಯ ಕಾರಣ.

  - ಯಾರಾದರೂ ಹಠಾತ್ತನೆ ಶೀತ ವಾತಾವರಣದಿಂದ ಬಿಸಿಯಾದ ಸ್ಥಳಕ್ಕೆ ಹೋದರೆ ಅಂತವರಲ್ಲಿ ಶಾಖದ ಹೊಡೆತ ಪ್ರಮಾಣ ಹೆಚ್ಚಾಗಿರುತ್ತದೆ.

  - ಬಿಸಿ ವಾತಾವರಣದಲ್ಲಿ ಹೆಚ್ಚು ವ್ಯಾಯಾಮ ಮಾಡುವುದು ಕೂಡ ಶಾಖದ ಹೊಡೆತಕ್ಕೆ ಮುಖ್ಯ ಕಾರಣ.

  - ಬೇಸಿಗೆಯಲ್ಲಿ ಅತಿಯಾದ ಬೆವರುವಿಕೆ, ಸಾಕಷ್ಟು ನೀರು ಕುಡಿಯದೇ ಇರುವುದು.

  - ಯಾರಾದರೂ ಹೆಚ್ಚು ಆಲ್ಕೋಹಾಲ್ ಸೇವಿಸಿದರೆ ದೇಹವು ತನ್ನ ತಾಪಮಾನ ಸರಿಪಡಿಸುವ ಶಕ್ತಿ ಹೋಗುತ್ತದೆ.

  - ಇದು ಹೀಟ್‌ ಸ್ಟ್ರೋಕ್‌ಗೆ ಸಹ ಕಾರಣ. ಬೆವರು ಮತ್ತು ಗಾಳಿಯು ಹಾದು ಹೋಗದ ಶಾಖದಲ್ಲಿ ನೀವು ಅಂತಹ ಬಟ್ಟೆ ಧರಿಸಿದರೆ, ಅದು ಶಾಖ-ಸ್ಟ್ರೋಕ್ ಅಪಾಯ ಹೆಚ್ಚುತ್ತದೆ.

  ಹೀಟ್ ಸ್ಟ್ರೋಕ್ ನಿಂದ ರಕ್ಷಣೆ ಮಾಡಿಕೊಳ್ಳಲು ಕೆಲವು ಪರಿಹಾರಗಳು

  - ಯಾರಾದರೂ ಶಾಖದ ಹೊಡೆತಕ್ಕೆ ಒಳಗಾದರೆ ಮತ್ತು ಸಮಯಕ್ಕೆ ಚಿಕಿತ್ಸೆ ನೀಡಲು ಆಗದೇ ಹೋದರೆ  ಅಂಗಾಂಗ ವೈಫಲ್ಯ, ಸಾವು, ಮೆದುಳಿನ ದೋಷ ಸೇರಿದಂತೆ ಕೆಲವು ಗಂಭೀರ ಸಮಸ್ಯೆಗಳು ಸಂಭವಿಸುವ ಸಾಧ್ಯತೆ ಹೆಚ್ಚು.

  - ಯಾರಿಗಾದರೂ ಹೀಟ್ ಸ್ಟ್ರೋಕ್ ಇದ್ದರೆ ತಕ್ಷಣವೇ ಕೆಳಗೆ ತಿಳಿಸಲಾದ ಆರಂಭಿಕ ವಿಧಾನ ಅನುಸರಿಸಿ ಅಳವಡಿಸಿಕೊಳ್ಳಬಹುದು.

  - ಶಾಖದ ಹೊಡೆತದಿಂದ ಬಳಲುತ್ತಿರುವ ವ್ಯಕ್ತಿಯನ್ನು ಬಿಸಿಲಿನಲ್ಲಿ ಬಿಡಬೇಡಿ.

  ಇದನ್ನೂ ಓದಿ: ಏನು ಮಾಡಿದರೂ ಹೊಟ್ಟೆ ಭಾಗದ ಬೊಜ್ಜು ಕರಗುತ್ತಿಲ್ಲವೇ? ಈ ಸಿಂಪಲ್ ಟಿಪ್ಸ್ ಒಮ್ಮೆ ಟ್ರೈ ಮಾಡಿ

  - ಬಟ್ಟೆಯ ದಪ್ಪ ಪದರ ತೆಗೆದು ಹಾಕಿ ಮತ್ತು ಗಾಳಿಗೆ ಬಿಡಿ.

  - ದೇಹವನ್ನು ತಂಪಾಗಿಸಲು, ಕೂಲರ್ ಅಥವಾ ಫ್ಯಾನ್‌ನಲ್ಲಿ ಕುಳಿತು, ತಣ್ಣೀರಿನಿಂದ ಸ್ನಾನ ಮಾಡಿ, ತಣ್ಣೀರಿನ ಬಟ್ಟೆಯಿಂದ ದೇಹವನ್ನು ಒರೆಸಿ.

  - ಐಸ್ ಪ್ಯಾಕ್ ಅಥವಾ ತಣ್ಣೀರಿನಿಂದ ತೇವಗೊಳಿಸಿದ ಬಟ್ಟೆಯನ್ನು ತಲೆಯ ಮೇಲೆ ಇಟ್ಟುಕೊಳ್ಳಿ.

  - ತಣ್ಣೀರಿನಲ್ಲಿ ಅದ್ದಿದ ಟವೆಲ್ ಅನ್ನು ಇಟ್ಟುಕೊಳ್ಳಿ. ತಲೆ, ಕುತ್ತಿಗೆ, ಕಂಕುಳ ಮತ್ತು ಸೊಂಟದ ಮೇಲೆ ಇರಿಸಿ.
  Published by:renukadariyannavar
  First published: