• Home
  • »
  • News
  • »
  • lifestyle
  • »
  • Abdu Rozik: ಬಿಗ್‌ಬಾಸ್‌ ಸ್ಪರ್ಧಿ ಅಬ್ದು ರೋಝಿಕ್ ಬಳಲುತ್ತಿರುವುದು ಇದೇ ಸಮಸ್ಯೆಯಿಂದ, ಇದರ ಸಂಪೂರ್ಣ ಮಾಹಿತಿ ಇಲ್ಲಿದೆ

Abdu Rozik: ಬಿಗ್‌ಬಾಸ್‌ ಸ್ಪರ್ಧಿ ಅಬ್ದು ರೋಝಿಕ್ ಬಳಲುತ್ತಿರುವುದು ಇದೇ ಸಮಸ್ಯೆಯಿಂದ, ಇದರ ಸಂಪೂರ್ಣ ಮಾಹಿತಿ ಇಲ್ಲಿದೆ

ಅಬ್ದು ರೋಝಿಕ್

ಅಬ್ದು ರೋಝಿಕ್

What is Growth Hormone Deficiency: ಎಲ್ಲಾ ಮಕ್ಕಳು ಬೆಳವಣಿಗೆಯ ಹಾರ್ಮೋನ್ ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸುವುದಿಲ್ಲ ಮತ್ತು GH ಚಿಕಿತ್ಸೆಯಿಂದ ಚಿಕಿತ್ಸೆ ಪಡೆದ ಮಗುವು ಅವನ ಅಥವಾ ಅವಳ ಪೋಷಕರಿಗಿಂತ ಎತ್ತರವಾಗಿರಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಾರೆ.

  • Share this:

ಸಲ್ಮಾನ್ ಖಾನ್ (Salman Khan) ನಡೆಸಿಕೊಡುವ ಹಿಂದಿಯ ಬಿಗ್ ಬಾಸ್  (Bigg Boss)ಜನ್ನ ಮನ್ನಣೆಯ ರಿಯಾಲಿಟಿ ಶೋ (Reality Show) ಎಂದರೆ ಅತಿಶೋಕ್ತಿಯಲ್ಲ. ಇತ್ತಿಚೀಗೆ ಬಿಗ್ ಬಾಸ್ ಸೀಸನ್ 16 ಕೂಡ ಆರಂಭವಾಗಿದೆ. ಈ ಶೋ ನಲ್ಲಿ ಭಾಗವಹಿಸುವವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರೇ ಆಗಿರುತ್ತಾರೆ ಎಂಬುದು ವಿಶೇಷ. ಅಕ್ಟೋಬರ್ 1 ರಂದು ಕಲರ್ಸ್ ಟಿವಿಯಲ್ಲಿ (colors)  ಪ್ರೀಮಿಯರ್ ಆಗಿರುವ ಬಿಗ್ ಬಾಸ್ ಸೀಸನ್ 16 ರಲ್ಲಿ ಈಗ ವಿಶ್ವದ ಅತಿ ಚಿಕ್ಕ ಗಾಯಕ ಮತ್ತು ಸಾಮಾಜಿಕ ಮಾಧ್ಯಮದ ಸೆನ್ಸೆಷನ್ ಆಗಿರುವ ಅಬ್ದು ರೋಝಿಕ್ (Abdu Rozik) ತಮ್ಮ ಗಾಯನದಿಂದಲೇ ಅಭಿಮಾನಿಗಳ ಹೃದಯಗಳನ್ನು ಗೆಲ್ಲುತ್ತಿದ್ದಾರೆ.


ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ಇವರು 8 ಅಥವಾ 9 ವರ್ಷದ ಮಗುವಿನಂತೆ ಕಾಣುವ ಮೋಹಕವಾದ ಸ್ಪರ್ಧಿ ಎಂದರೆ ತಪ್ಪಾಗಲಾರದು. ಆದರೆ ಇವರು ವಾಸ್ತವವಾಗಿ 19 ವರ್ಷ ವಯಸ್ಸಿನವರಾಗಿದ್ದು ಮತ್ತು 94 ಸೆಂ ಎತ್ತರವಿದ್ದಾರೆ.


ಅಬ್ದು ರೋಝಿಕ್‌ನ ಕುಟುಂಬದ ಹಿನ್ನೆಲೆ


ಅಬ್ದು ರೋಝಿಕ್ ಅವರು ಸಾವ್ರಿಕುಲ್ ಮತ್ತು ಶ್ರೀಮತಿ ರೂಹ್ ಅಫ್ಜಾ ದಂಪತಿಗೆ ಜನಿಸಿದರು. ಇವರ ಮೊದಲ ಹೆಸರು ಸವ್ರಿಕುಲ್ ಮುಹಮ್ಮದ್ ರೋಜಿಕಿ ಎಂಬುದಾಗಿತ್ತು. ಇವರು ತಜಕಿಸ್ತಾನದ ಒಂದು ಸಣ್ಣ ಹಳ್ಳಿಯಿಂದ ಬಂದವರು.


ಸಂಗೀತದ ಸಾಧನೆಯಲ್ಲಿರುವ ಈತನು ಏಕೆ ಅಷ್ಟು ಕುಳ್ಳನಾಗಿದ್ದಾನೆ ಎಂದು ರಿಯಾಲಿಟಿ ಶೋ ನೋಡುವ ಪ್ರತಿಯೊಬ್ಬರಿಗೂ ಅನಿಸಿರುತ್ತದೆ. ಹೌದು ಅಲ್ವಾ, ಇವರು ಒಬ್ಬರೇ ಅಲ್ಲ ನಮ್ಮ ಸುತ್ತ ಮುತ್ತ ಕೂಡ ಇಂತಹ ಕುಳ್ಳಗಿರುವ ವ್ಯಕ್ತಿಗಳು ಆಗಾಗ ಕಾಣಿಸುತ್ತಲೇ ಇರುತ್ತಾರೆ. ಆಗ ಹಿರಿಯರು ಹೇಳುವ ಮಾತೆಂದರೇ ಅವರ ಬೆಳವಣಿಗೆ ಆಗಿಲ್ಲ. ಅದಕ್ಕೆ ಅವರು ಅಷ್ಟು ಕುಳ್ಳಗೆ ಇದ್ದಾರೆ ಎನ್ನುತ್ತಾರೆ.


ಹಾಗಿದ್ರೆ ಈ ಬೆಳವಣಿಗೆ ಆಗಿಲ್ಲ ಎಂದ್ರೆ ವೈದ್ಯಕೀಯ ಭಾಷೆಯಲ್ಲಿ ಅದನ್ನು ಏನಂತ ಕರೆಯುತ್ತಾರೆ ಇಲ್ಲಿ ತಿಳಿಯೋಣ ಬನ್ನಿ. ವೈದ್ಯಕೀಯ ಭಾಷೆಯಲ್ಲಿ ಈ ರೀತಿಯ ಸಮಸ್ಯೆಗೆ ಬೆಳವಣಿಗೆ ಹಾರ್ಮೋನ್ ಕೊರತೆ ಎಂದು ಕರೆಯುತ್ತಾರೆ.


ಅಬ್ದು ಅವರು ಬೆಳವಣಿಗೆಯ ಹಾರ್ಮೋನ್ ಕೊರತೆ ಎಂಬ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಾಲ್ಯದಲ್ಲಿಯೇ ಅವರ ಬೆಳವಣಿಗೆ ಕುಂಠಿತವಾಯಿತು. ಆಗ ಅವರ ಪೋಷಕರು ವೈದ್ಯರನ್ನು ಸಂಪರ್ಕಿಸಿದಾಗ ಅಬ್ದು ಅವರಿಗೆ ರಿಕೆಟ್ಸ್ ಕಾಯಿಲೆ ಇರುವುದು ಪತ್ತೆಯಾಯಿತು.


ಆದರೆ ಅವರ ಕುಟುಂಬಕ್ಕೆ ಅಬ್ದು ಅವರ ಚಿಕಿತ್ಸೆಗೆ ಬೇಕಾಗುವಷ್ಟು ಹಣಕಾಸಿನ ವ್ಯವಸ್ಥೆ ಇರಲಿಲ್ಲ. ಇದರಿಂದ ಅಬ್ದು ಅವರು ತಮ್ಮ ಕಾಯಿಲೆಯ ಜೊತೆಗೆ ಬೆಳೆದರು. ಈಗ ಅವರ ವಯಸ್ಸು 19 ಆದರೂ ಸಹ ಇನ್ನು 9 ನೇ ವರ್ಷದ ಮಗುವಿನ ದೇಹವನ್ನು ಹೊಂದಿದ್ದಾರೆ.
ಬೆಳವಣಿಗೆಯ ಹಾರ್ಮೋನ್ ಕೊರತೆ (GH) ಎಂದರೇನು?


"ಸೊಮಾಟೊಟ್ರೋಪಿನ್ ಎಂದು ಕರೆಯಲ್ಪಡುವ ಬೆಳವಣಿಗೆಯ ಹಾರ್ಮೋನ್ ಪಿಟ್ಯುಟರಿ ಗ್ರಂಥಿಯ ಮುಂಭಾಗದ ಹಾಲೆಯಿಂದ ಸ್ರವಿಸುವ ಹಾರ್ಮೋನ್ ಆಗಿದೆ.


ಅದರ ಪ್ರಚೋದನೆಯು ದೇಹದ ಬೆಳವಣಿಗೆಗೆ ಅಗತ್ಯವಾದ ಹಾರ್ಮೋನ್ ಗಳನ್ನು ಸ್ರವಿಸುತ್ತದೆ. GH ಕೊರತೆಯು ಸಣ್ಣ ನಿಲುವು ಮತ್ತು ಕುಬ್ಜತೆಗೆ ಕಾರಣವಾಗುತ್ತದೆ.ಈ ಕೊರತೆ ಉಂಟಾಗಲು ಇರುವ ಮುಖ್ಯ ಕಾರಣವೆಂದರೇ ಈ ಬೆಳವಣಿಗೆ ಹಾರ್ಮೋನ್ ಉತ್ಪತ್ತಿಯಾಗದೇ ಇರುವುದು.


"ಅನುವಂಶಿಕ ರೂಪಾಂತರವು ದೋಷಯುಕ್ತ ಬೆಳವಣಿಗೆಗೆ ಕಾರಣವಾಗುತ್ತದೆ. ಹಾರ್ಮೋನ್ ಉತ್ಪಾದನೆ, ಅಪರೂಪವಾಗಿ ಬೆಳವಣಿಗೆ ಹೊಂದುವ ಹಾರ್ಮೋನ್‌ಗೆ ಜೀವಕೋಶಗಳ ಅನುವಂಶಿಕ ಸಂವೇದನಾಶೀಲತೆ ಇರುತ್ತದೆ" ಎಂದು ನವಿ ಮುಂಬೈನ ಅಪೋಲೋ ಆಸ್ಪತ್ರೆಯ ಮಕ್ಕಳ ವೈದ್ಯಕೀಯ ಸಲಹೆಗಾರ ಡಾ.ಅಶೋಕ್ ಗಾವಡಿ ಹೇಳುತ್ತಾರೆ.


"ಮಾನವನ ದೇಹದ ಪಿಟ್ಯುಟರಿ ಗ್ರಂಥಿಯು ಸಾಕಷ್ಟು ಬೆಳವಣಿಗೆಯ ಹಾರ್ಮೋನ್ ಅನ್ನು ಉತ್ಪಾದಿಸದಿದ್ದಾಗ ಬೆಳವಣಿಗೆಯ ಹಾರ್ಮೋನ್ (GH) ಕೊರತೆಯ ಸಮಸ್ಯೆ ಉಂಟಾಗುತ್ತದೆ.


ಇದನ್ನೂ ಓದಿ: ಮಶ್ರೂಮ್​ ಸಸ್ಯಾಹಾರನಾ ಅಥವಾ ಮಾಂಸಾಹಾರನಾ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ


GH ಕೊರತೆಯು ಪಿಟ್ಯುಟರಿ ಗ್ರಂಥಿ ಅಥವಾ ಹೈಪೋಥಾಲಮಸ್ ಎಂಬ ಇನ್ನೊಂದು ಗ್ರಂಥಿಗೆ ಹಾನಿಯಾಗುವುದರಿಂದ ಉಂಟಾಗಬಹುದು. ಈ ಹಾನಿಯು ಜನನದ ಮೊದಲು (ಜನ್ಮಜಾತ) ಅಥವಾ ಇತರ ಸಮಯದಲ್ಲಿ ಸಂಭವಿಸಬಹುದು. ಅಥವಾ ಜನನದ ನಂತರ ಉಂಟಾಗಬಹುದು.


"ಪಿಟ್ಯುಟರಿ ಗ್ರಂಥಿಯು ಮೆದುಳಿನ ತಳದಲ್ಲಿ ಇರುವ ಬಟಾಣಿ ಗಾತ್ರದ ಗ್ರಂಥಿಯಾಗಿದೆ ಮತ್ತು ಇದು ದೇಹದಲ್ಲಿನ ಮಾಸ್ಟರ್ ಎಂಡೋಕ್ರೈನ್ ಗ್ರಂಥಿಯಾಗಿದೆ. ಮೂಳೆ ಮತ್ತು ಇತರ ಅಂಗಾಂಶಗಳ ಬೆಳವಣಿಗೆಯನ್ನು ಉತ್ತೇಜಿಸಲು GH ಅತಿ ಅಗತ್ಯವಾದ ಹಾರ್ಮೋನ್ ಆಗಿದೆ.


ಆದರೆ ಅನೇಕ ಸಂದರ್ಭಗಳಲ್ಲಿ, GH ಕೊರತೆಗೆ ಮೂಲ ಕಾರಣವೇ ತಿಳಿಯುವುದಿಲ್ಲ" ಎಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕ್ಲೌಡ್‌ನೈನ್ ಗ್ರೂಪ್ ಆಫ್ ಹಾಸ್ಪಿಟಲ್ ನ ಹಿರಿಯ ಸಲಹೆಗಾರರು ಮತ್ತು ಶಿಶು ವೈದ್ಯರು ಡಾ. ಸಂಜೀವ್ ಮನಗೋಳಿ, ಅವರು ಹೇಳಿದರು.


"ಮಗುವಿನ ಮಿದುಳಿಗೆ ಗಾಯವಾದರೆ, ಮೆದುಳಿನಲ್ಲಿ ಗೆಡ್ಡೆ ಇದ್ದರೆ, ತಲೆಗೆ ವಿಕಿರಣ ಚಿಕಿತ್ಸೆಗೆ ಒಳಗಾಗಿದ್ದರೆ, ಮಗುವಿಗೆ GH ಕೊರತೆಯ ಅಪಾಯ ಹೆಚ್ಚು" ಎಂದು ಡಾ.ಮನಗೋಳಿ ಹೇಳುತ್ತಾರೆ.


ಬೆಳವಣಿಗೆಯ ಹಾರ್ಮೋನ್ ಕೊರತೆಯ ಲಕ್ಷಣಗಳು


"ಪ್ರತ್ಯೇಕವಾದ GH ಕೊರತೆಯಿರುವ ಮಕ್ಕಳು ಸಾಮಾನ್ಯವಾಗಿ ಜನನದ ಸಮಯದಲ್ಲಿ ಸಾಮಾನ್ಯ ಗಾತ್ರದಲ್ಲಿ ಜನಿಸುತ್ತಾರೆ ಆದರೆ ಬೆಳವಣಿಗೆಯ ಕುಂಠಿತವು ಜೀವನದ ಮೊದಲ ಎರಡು ವರ್ಷಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ.


ಪಿಟ್ಯುಟರಿಯು ಇತರ 16 ಹಾರ್ಮೋನುಗಳನ್ನು ಸ್ರವಿಸುತ್ತದೆ, ಇತರ ಹಾರ್ಮೋನ್ ಗಳ ಕೊರತೆಯು, ಇತರ ಚಿಹ್ನೆಗಳು ಮತ್ತು ರೋಗಲಕ್ಷಣಗಳಿಗೆ ಕಾರಣವಾಗಬಹುದು" ಡಾ ಗಾವಡಿ ಹೇಳುತ್ತಾರೆ.


"ಈ ಸ್ಥಿತಿಯ ಲಕ್ಷಣಗಳ ಬಗ್ಗೆ ಮಾತನಾಡುತ್ತಾ, GH ಕೊರತೆಯಿರುವ ಮಗುವಿಗೆ ಕಿರಿಯ ಮುಖ, ದುಂಡುಮುಖದ ಮೈಕಟ್ಟು, ದುರ್ಬಲಗೊಂಡ ಕೂದಲು ಬೆಳವಣಿಗೆ ಮತ್ತು ಪ್ರೌಢಾವಸ್ಥೆಯ ವಿಳಂಬ ಸಹ ಹೊಂದಿರಬಹುದು. ಆದರೆ ಇದು ಮಗುವಿನ ಬುದ್ಧಿಮತ್ತೆ ಮೇಲೆ ಪರಿಣಾಮ ಬೀರುವುದಿಲ್ಲ" ಎಂದು ಡಾ. ಮನಗೋಳಿ ಹೇಳುತ್ತಾರೆ.


ಬೆಳವಣಿಗೆಯ ಹಾರ್ಮೋನ್ ಕೊರತೆಯ ರೋಗನಿರ್ಣಯ


"ಸಾಮಾನ್ಯವಾಗಿ ಎಕ್ಸ್-ರೇ ನೋಡುವುದರ ಮೂಲಕ ರೋಗನಿರ್ಣಯವನ್ನು ಮಾಡುತ್ತಾರೆ. ಅಲ್ಲಿ ಮೂಳೆಯ ವಯಸ್ಸು ಕಾಲಾನುಕ್ರಮದ ವಯಸ್ಸಿಗಿಂತ ಕಡಿಮೆಯಿರುತ್ತದೆ ಮತ್ತು ರೋಗನಿರ್ಣಯದ ದೃಢೀಕರಣಕ್ಕಾಗಿ ಬೆಳವಣಿಗೆಯ ಹಾರ್ಮೋನ್ ಮಟ್ಟವನ್ನು ಬಳಸಲಾಗುತ್ತದೆ" ಎಂದು ಡಾ.ಗಾವಡಿಯವರು ಹೇಳುತ್ತಾರೆ.


"GH ಕೊರತೆಯನ್ನು ಪತ್ತೆಹಚ್ಚಲು, ಬೆಳವಣಿಗೆಯ ಸಾಮಾನ್ಯ ವ್ಯತ್ಯಾಸಗಳು, ಕೌಟುಂಬಿಕದಲ್ಲಿ ಇರುವ ಕಡಿಮೆ ನಿಲುವು, ಇತರ ಅಸ್ವಸ್ಥತೆಗಳು, ಉದಾಹರಣೆಗೆ ಥೈರಾಯ್ಡ್ ಹಾರ್ಮೋನ್ ಕೊರತೆ ಅಥವಾ ಮೂತ್ರಪಿಂಡದ ಕಾಯಿಲೆ ಮತ್ತು ಆನುವಂಶಿಕ ಪರಿಸ್ಥಿತಿಗಳಂತಹ ಇತರ ಪರಿಸ್ಥಿತಿಗಳನ್ನು ವೈದ್ಯರು ಪರಿಶೀಲಿಸಬೇಕು.


ವೈದ್ಯರು ರೋಗಲಕ್ಷಣಗಳು ಮತ್ತು ಆರೋಗ್ಯದ ಬಗ್ಗೆ ಕೇಳುತ್ತಾರೆ. ಆನುವಂಶಿಕತೆ ಮತ್ತು ಕುಟುಂಬದ ಆರೋಗ್ಯದ ಬಗ್ಗೆ ಹಲವು ದೈಹಿಕ ಪರೀಕ್ಷೆಯನ್ನು ಸಹ ಮಾಡುತ್ತಾರೆ. ಹಲವು ತಿಂಗಳುಗಳವರೆಗೆ ಆರೋಗ್ಯ ಮತ್ತು ಬೆಳವಣಿಗೆಯನ್ನು ಸಹ ಪರಿಶೀಲನೆ ನಡೆಸುತ್ತಾರೆ" ಎಂದು ಡಾ.ಮನಗೋಳಿ ಹೇಳುತ್ತಾರೆ.ಈ ಕೊರತೆಯನ್ನು ಪತ್ತೆ ಹಚ್ಚಲು ಇರುವ ಪ್ರಯೋಗಾಲಯ ಪರೀಕ್ಷೆಗಳು


ಬೆಳವಣಿಗೆಯ ಹಾರ್ಮೋನ್ ಮತ್ತು ಇತರ ಸಂಬಂಧಿತ ಹಾರ್ಮೋನ್ ಮಟ್ಟವನ್ನು ಪರೀಕ್ಷಿಸಲು ರಕ್ತ ಪರೀಕ್ಷೆಗಳು ಮೊದಲ ಹಂತ ಎಂದು ಹೇಳಬಹುದು.
ನಿಮ್ಮ ಮಗುವಿಗೆ ಸಾಮಾನ್ಯವಾಗಿ ಬೆಳವಣಿಗೆಯ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುವ ಔಷಧಿಯನ್ನು ನೀಡಿದ ನಂತರ ಕೆಲವೊಮ್ಮೆ ರಕ್ತ ಪರೀಕ್ಷೆಗಳನ್ನು ಮಾಡಲಾಗುತ್ತದೆ.
ಮಗುವಿನ ಮೂಳೆ ವಯಸ್ಸನ್ನು ಅಂದಾಜು ಮಾಡಲು ಎಡಗೈ ಮತ್ತು ಮಣಿಕಟ್ಟಿನ ಎಕ್ಸ್-ರೇ ಅನ್ನು ಮಾಡಲಾಗುತ್ತದೆ.
ಮೆದುಳಿನ ಎಂಆರ್‌ಐ ಮಾಡಲಾಗುತ್ತದೆ. ಇದು ಪಿಟ್ಯುಟರಿ ಗ್ರಂಥಿ ಮತ್ತು ಇತರ ಯಾವುದೇ ವಿರೂಪಗಳು ಅಥವಾ ಬೆಳವಣಿಗೆಗಳ ಪರಿಶೀಲನೆ ನಡೆಸಲಾಗುತ್ತದೆ.
ಚಿಕಿತ್ಸೆ


"ಈ ಬೆಳವಣಿಗೆಯ ಹಾರ್ಮೋನ್ ಕೊರತೆಗೆ ಸಂಶ್ಲೇಷಿತ ಚುಚ್ಚುಮದ್ದಿನ ಬೆಳವಣಿಗೆಯ ಹಾರ್ಮೋನ್ ಲಭ್ಯವಿದೆ ಮತ್ತು ಮರುಸಂಯೋಜಕ DNA ತಂತ್ರಜ್ಞಾನದಿಂದ ಸಂಶ್ಲೇಷಣೆಯಾಗಿದೆ" ಎಂದು ಡಾ.ಗಾವಡಿ ಹೇಳುತ್ತಾರೆ.


"ಸಂಶ್ಲೇಷಿತ ಹಾರ್ಮೋನುಗಳನ್ನು ನೀಡಿದ ಮಕ್ಕಳು ಅದಕ್ಕೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಾರೆ ಮತ್ತು ಸಾಮಾನ್ಯ ಎತ್ತರವನ್ನು ಪಡೆಯುವಲ್ಲಿ ಯಶಸ್ವಿ ಆಗುತ್ತಾರೆ" ಎಂದು ಅವರು ಭರವಸೆ ನೀಡುತ್ತಾರೆ.


ಇದನ್ನೂ ಓದಿ: ಡಯಾಬಿಟಿಸ್​ ರೋಗಿಗಳಲ್ಲಿ ವಿಟಮಿನ್ ಬಿ 12 ಕಡಿಮೆಯಾಗೋಕೆ ಇದೇ ಕಾರಣವಂತೆ


"ಆದರೆ ಸಿಂಥೆಟಿಕ್ GH ಚಿಕಿತ್ಸೆಯು ಅತ್ಯಂತ ದುಬಾರಿಯಾದ ಚಿಕಿತ್ಸೆ ಆಗಿದೆ ಮತ್ತು ಇದನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು" ಎಂದು ಅವರು ಹೇಳುತ್ತಾರೆ.


"ಈ ಚಿಕಿತ್ಸೆ ಪ್ರಾರಂಭವಾದ 3 ರಿಂದ 4 ತಿಂಗಳ ನಂತರ ಇದರ ಫಲಿತಾಂಶಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಇದರ ಚಿಕಿತ್ಸೆಯು ಹಲವಾರು ವರ್ಷಗಳವರೆಗೆ ಇರುತ್ತದೆ. ಅದರೆ ಸಾಮಾನ್ಯವಾಗಿ ಬೆಳವಣಿಗೆಯ ಕೊನೆ ಅದರೆ ಮಗುವಿನ ಪ್ರೌಢಾವಸ್ಥೆಯ ತನಕ ಈ ಚಿಕಿತ್ಸೆಯು ಇರುತ್ತದೆ.


ಈ ಚಿಕಿತ್ಸೆಯು ಮಗುವಿನ ಚಿಕ್ಕ ವಯಸ್ಸಿನಲ್ಲಿಯೇ ಪ್ರಾರಂಭವಾದರೂ ಸಹ ಮಗುವಿನ ಪ್ರೌಢವಸ್ಥೆಯವರೆಗೂ ಇದರ ಚಿಕಿತ್ಸೆಯನ್ನು ಮುಂದುವರಿಸಲಾಗುತ್ತದೆ. ಇದಕ್ಕೆ ಕಾರಣವೆಂದರೆ ಮಗುವಿಗೆ ಸಾಮಾನ್ಯ ಅಥವಾ ಅವನ ಅಥವಾ ಅವಳ ಕುಟುಂಬದ ಮಾದರಿಗೆ ಹೊಂದಿಕೆಯಾಗುವ ಸಾಮಾನ್ಯ ವಯಸ್ಕ ಎತ್ತರದ ಬೆಳವಣಿಗೆ ಉಂಟಾಗುವುದೇ ಈ ಪ್ರೌಡಾವಸ್ಥೆಯಲ್ಲಿ ಎಂಬುದು ವಿಶೇಷ ಆಗಿದೆ" ಡಾ. ಮನಗೋಳಿ ಹೇಳುತ್ತಾರೆ.


ಪೋಷಕರು ಎಚ್ಚರ ವಹಿಸಬೇಕು


ಎಲ್ಲಾ ಮಕ್ಕಳು ಬೆಳವಣಿಗೆಯ ಹಾರ್ಮೋನ್ ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸುವುದಿಲ್ಲ ಮತ್ತು GH ಚಿಕಿತ್ಸೆಯಿಂದ ಚಿಕಿತ್ಸೆ ಪಡೆದ ಮಗುವು ಅವನ ಅಥವಾ ಅವಳ ಪೋಷಕರಿಗಿಂತ ಎತ್ತರವಾಗಿರಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಾರೆ.


ಮಗುವಿಗೆ GH ನ ಚಿಕಿತ್ಸೆಯನ್ನು ನೀಡಿದಾಗ, ತೀವ್ರವಾಗಿ ಕೊರತೆಯಿರುವ ಮಗು ತಿಂಗಳೊಳಗೆ ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತದೆ.


ಚಿಕಿತ್ಸೆಯ ಮೊದಲ ವರ್ಷದಲ್ಲಿ, ಇತರ ಸಾಮಾನ್ಯ ಮಕ್ಕಳು ಎರಡು ಪಟ್ಟು ವೇಗವಾಗಿ ಬೆಳೆದರೆ ಆದರೆ ಈ ಬೆಳವಣಿಗೆಯ ಹಾರ್ಮೋನ್ ಚಿಕಿತ್ಸೆ ಪಡೆದ ಮಕ್ಕಳು ಅರ್ಧದಷ್ಟು ವೇಗವಾಗಿ ಬೆಳೆಯಬಹುದು (ಉದಾಹರಣೆಗೆ, ವರ್ಷಕ್ಕೆ 1 ಇಂಚು ಅಥವಾ 4 ಇಂಚುಗಳು, ಅಥವಾ 2.5 ಸೆಂ ನಿಂದ 10) ಹೀಗೆ ಬೆಳವಣಿಗೆ  ಆಗಬಹುದು.


ನಂತರದ ವರ್ಷಗಳಲ್ಲಿ ಬೆಳವಣಿಗೆಯು ಸಾಮಾನ್ಯವಾಗಿ ನಿಧಾನಗೊಳ್ಳುತ್ತದೆ. ಆದರೆ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಲ್ಲಿ ಈ ಸಮಯದಲ್ಲಿ ಬೆಳವಣಿಗೆಯು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ.


ಇದರಿಂದಾಗಿ ಹಲವಾರು ವರ್ಷಗಳಿಂದ ತನ್ನ ಎತ್ತರದಲ್ಲಿ ತುಂಬಾ ಹಿಂದೆ ಬಿದ್ದಿರುವ ಮಗು ಆ ಸಮಯದಲ್ಲಿ ಸಾಮಾನ್ಯ ಎತ್ತರದ ಶ್ರೇಣಿಯನ್ನು ತಲುಪಬಹುದು. ಈ ಸಮಯದಲ್ಲಿ ಚಿಕಿತ್ಸೆಯ ಸಹಾಯದಿಂದ ಹೆಚ್ಚುವರಿ ಅಡಿಪೋಸ್ ಅಂಗಾಂಶವನ್ನು ಕಡಿಮೆ ಮಾಡಬಹುದು.


GH ಕೊರತೆಯಿರುವ ವಯಸ್ಕರ ಲಕ್ಷಣಗಳು


GH ಕೊರತೆಯಿರುವ ವಯಸ್ಕರಿಗೆ, ಕ್ರಮೇಣವಾಗಿ ಶಕ್ತಿಯು ಕಡಿಮೆಯಾಗುತ್ತದೆ. ಇದರಿಂದ ಮೂಳೆ ಸಾಂದ್ರತೆಯಂತಹ ಸಮಸ್ಯೆಗಳಿಗೆ ಇವರು ಗುರಿಯಾಗುತ್ತಾರೆ. ಅಡಿಪೋಸ್ ಅಂಗಾಂಶದ ಸ್ನಾಯುವಿನ ದ್ರವ್ಯರಾಶಿ ಹೆಚ್ಚಾಗಬಹುದು.


ಈ GH ಕೊರತೆ ಇರುವ ವಯಸ್ಕರು ಕಡಿಮೆ ಜೀವಿತಾವಧಿಯನ್ನು ಹೊಂದಿರುತ್ತಾರೆ ಮತ್ತು ಹೃದಯರಕ್ತನಾಳದ ಮರಣದ ಪ್ರಮಾಣವು ಎರಡು ಪಟ್ಟು ಹೆಚ್ಚಿನದಾಗಿರುತ್ತದೆ ಎಂದು ಹೇಳಲಾಗುತ್ತದೆ.


ಇದರ ಜೊತೆಗೆ ಚಿಕಿತ್ಸೆಯಿಂದ ರಕ್ತದ ಲಿಪಿಡ್ ಮಟ್ಟಗಳು ಸುಧಾರಿಸುತ್ತವೆ. ಅಂತೆಯೇ, ಚಿಕಿತ್ಸೆಯೊಂದಿಗೆ ಮೂಳೆ ಸಾಂದ್ರತೆಯ ಮಾಪನಗಳು ಸುಧಾರಿಸುತ್ತವೆಯಾದರೂ, ಮುರಿತಗಳ ದರಗಳು ಸುಧಾರಿಸುವುದು ಕಷ್ಟವೆನಿಸುತ್ತದೆ.


ಈ ಕೊರತೆ ಇರುವ ವಯಸ್ಕ ವ್ಯಕ್ತಿಗಳ ಜೀವನದ ಗುಣಮಟ್ಟದ ಮೇಲೆ ಪರಿಣಾಮಗಳು ಬೀರುತ್ತವೆ ಎಂಬುದು ಎಲ್ಲಿಯೂ ಸಾಬೀತಾಗಿಲ್ಲ.


GH ಕೊರತೆಯಿರುವ ವಯಸ್ಕರು ಬೇಸ್‌ಲೈನ್‌ನಲ್ಲಿ QoL ನ (ಹಾರ್ಮೋನ್‌ ಕೊರತೆ) ಸಾಮಾನ್ಯ ಸೂಚಕಗಳನ್ನು ಹೊಂದಿರುತ್ತಾರೆ. ಅನೇಕರು ಹಳೆಯ ಡೋಸಿಂಗ್ ತಂತ್ರಗಳನ್ನು ಬಳಸುತ್ತಾರೆ ಎಂದು ಹಲವಾರು ಅಧ್ಯಯನಗಳು ಹೇಳುತ್ತವೆ. ಆದರೆ ಚಿಕಿತ್ಸೆಯ ಪ್ರಾರಂಭದಲ್ಲಿ ಕಡಿಮೆ QoL ಹೊಂದಿರುವ ವಯಸ್ಕರು ಚಿಕಿತ್ಸೆಯ ಪ್ರಯೋಜನವನ್ನು ಪಡೆಯುತ್ತಾರೆ ಎಂದು ವೈದ್ಯರು ಸೂಚಿಸುತ್ತಾರೆ.


ಮಗುವಿನಲ್ಲಿ GH ಕೊರತೆಯ ಸಂಭವನೀಯ ಸಮಸ್ಯೆಗಳು ಇವು


ಇದಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದರೆ, GH ಕೊರತೆಯು ಮಗುವಿಗೆ ತನ್ನ ಸಾಮಾನ್ಯ ವಯಸ್ಕ ಎತ್ತರವನ್ನು ತಲುಪಲು ಸಾಧ್ಯವಾಗದೇ ಇರಬಹುದು. ಇದು ಪ್ರಮುಖ ತೊಡಕಾರಣವಾಗಬಹುದು.


ಇದನ್ನೂ ಓದಿ: ಈ ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಸಾಂಬಾರ್ ರುಚಿಕರವಾಗುತ್ತೆ


ನಾವು GH ಕೊರತೆ ಇರುವ ಮಗುವಿಗೆ ಎಲ್ಲರಂತೆ ಬದುಕಲು ಹೇಗೆ ಸಹಾಯ ಮಾಡಬಹುದು?


"ತಮ್ಮ ಗೆಳೆಯರಿಗಿಂತ ಚಿಕ್ಕ ವಯಸ್ಸಿನಂತೆ ಕಾಣುವ ಮಕ್ಕಳು ಆತ್ಮವಿಶ್ವಾಸದ ಕೊರತೆ ಮತ್ತು ಖಿನ್ನತೆಯನ್ನು ಹೊಂದಿರಬಹುದು. ಆದ್ದರಿಂದ ನಿಮ್ಮ ಮಗು ಮತ್ತು ನಿಮ್ಮ ಮಗುವಿನ ಆರೋಗ್ಯ ರಕ್ಷಣೆ ನೀಡುಗರೊಂದಿಗೆ ಈ ಸಮಸ್ಯೆಗಳ ಬಗ್ಗೆ ಮಾತನಾಡುವುದು ಮುಖ್ಯವಾಗಿದೆ.


ನಿಮ್ಮ ಸಲಹೆಗಾರರು ನಿಮಗೆ ಮತ್ತು ನಿಮ್ಮ ಮಗುವಿಗೆ ಸಮಾಲೋಚನೆ ಅಥವಾ ಬೆಂಬಲವನ್ನು ಶಿಫಾರಸು ಮಾಡಬಹುದು. ಅವರೊಂದಿಗೆ ಮಾತನಾಡಿ ನಿಮ್ಮ ಮಗುವಿನ ಸಂಭಾವ್ಯ ವಯಸ್ಕ ಎತ್ತರದ ಕುರಿತು ಮತ್ತು ನಿಮ್ಮ ಮಗುವಿನ ಆರೋಗ್ಯದ ರಕ್ಷಣೆ ಕುರಿತು ಆಗಾಗ ಸಮಾಲೋಚನೆ ನಡೆಸುತ್ತಿರಿ" ಎಂದು ಡಾ. ಮನಗೋಳಿ ಅವರು ಸಲಹೆ ಸೂಚನೆಗಳನ್ನು ನೀಡಿದ್ದಾರೆ.

Published by:Sandhya M
First published: