HOME » NEWS » Lifestyle » WHAT IS FLIRT MEANING WOMEN REVEAL FLIRTING TECHNIQUES WHICH ALWAYS WORK TO MOVE ON STG SCT

Flirting: ನೀವು ಪ್ರೀತಿಸುವವರು ನಿಮ್ಮೊಂದಿಗೆ ಫ್ಲರ್ಟ್​ ಮಾಡುತ್ತಿದ್ದಾರೆಂದು ತಿಳಿಯುವುದು ಹೇಗೆ?

Flirting: ಒಂದು ವೇಳೆ ನೀವು ಇಷ್ಟಪಡುವ ಹೆಣ್ಣು ಫ್ಲರ್ಟಿಂಗ್ ಮಾಡುತ್ತಿರುವುದು ನಿಮಗೆ ಗಮನಕ್ಕೆ ಬಾರದಿರಬಹುದು. ಅವಳ ಕೆಲವು ಫ್ಲರ್ಟಿಂಗ್ ತಂತ್ರಗಳು ನೀವು ತಿಳಿದುಕೊಂಡರೆ ಖಂಡಿತ ಆ ಹೆಣ್ಣು ನಿಮ್ಮನ್ನು ಫ್ಲರ್ಟಿಂಗ್ ಮಾಡುತ್ತಿರುವುದು ಖಾತರಿಯಾಗುತ್ತದೆ.

news18-kannada
Updated:March 18, 2021, 8:08 AM IST
Flirting: ನೀವು ಪ್ರೀತಿಸುವವರು ನಿಮ್ಮೊಂದಿಗೆ ಫ್ಲರ್ಟ್​ ಮಾಡುತ್ತಿದ್ದಾರೆಂದು ತಿಳಿಯುವುದು ಹೇಗೆ?
ಸಾಂದರ್ಭಿಕ ಚಿತ್ರ
  • Share this:
ಲಲ್ಲೆ ಹೊಡೆಯುವುದು, ಕಾಡುವುದು, ಛೇಡಿಸುವುದು ಮತ್ತು ತುಂಟಾಟಗಳ ಸಮ್ಮಿಶ್ರವೇ "ಫ್ಲರ್ಟಿಂಗ್". ಗಂಡು ಮತ್ತು ಹೆಣ್ಣಿನ ನಡುವಿನ ಸಂಬಂಧವೇ ಹಾಗೇ! ಅವರ ನಡುವಿನ ಆಕರ್ಷಣೆಯೇ ಅವರನ್ನು ಫ್ಲರ್ಟಿಂಗ್ ಮಾಡುವಂತೆ ಪ್ರೆರೇಪಿಸುತ್ತದೆ.

ಫ್ಲರ್ಟಿಂಗ್ ಗಂಡು ಮತ್ತು ಹೆಣ್ಣಿನಲ್ಲಿ ಪ್ರೇಮದ ಕಿಚ್ಚನ ಮದ ಹೆಚ್ಚಿಸುತ್ತದೆ. ಗಂಡು-ಹೆಣ್ಣಿನ ನಡುವೆ ಆ ಕಿಡಿಯನ್ನು ಸ್ಥಾಪಿಸಲು ಇದು ಸಹಾಯವಾಗಲಿದ್ದು, ಕೆಲವೊಮ್ಮೆ ದಾರಿ ತಪ್ಪಿಸುವ ಹಾಗೆ ಮಾಡುತ್ತದೆ. ಯಾರೊಂದಿಗಾದರೂ ಚೆಲ್ಲಾಟವಾಡುವುದರಿಂದ ನೀವು ಅವರಿಂದ ಬೇರೆ ಏನೋ ಬಯಸಬೇಕು ಎಂದಲ್ಲ. ಕೆಲವೊಮ್ಮೆ, ಇದರಿಂದ ಅವರ ಅಹಂಕಾರವನ್ನು ಹೆಚ್ಚಿಸುತ್ತದೆ.

ಒಂದು ವೇಳೆ ನೀವು ಇಷ್ಟಪಡುವ ಹೆಣ್ಣು ಫ್ಲರ್ಟಿಂಗ್ ಮಾಡುತ್ತಿರುವುದು ನಿಮಗೆ ಗಮನಕ್ಕೆ ಬಾರದಿರಬಹುದು. ಅವಳ ಕೆಲವು ಫ್ಲರ್ಟಿಂಗ್ ತಂತ್ರಗಳು ನೀವು ತಿಳಿದುಕೊಂಡರೆ ಖಂಡಿತ ಆ ಹೆಣ್ಣು ನಿಮ್ಮನ್ನು ಫ್ಲರ್ಟಿಂಗ್ ಮಾಡುತ್ತಿರುವುದು ಖಾತರಿಯಾಗುತ್ತದೆ.

ಉತ್ತಮ ಮಾತುಗಾರಿಕೆ:
ನಗುಮುಖದೊಂದಿಗೆ ಹ್ಯಾಸಭರಿತ ಸಾಲುಗಳ ಉತ್ತಮ ಮಾತುಗಾರಿಕೆಯನ್ನು ಮಹಿಳೆ ನಡೆಸುತ್ತಿದ್ದರೆ ಗಂಡಿನ ಮನಸ್ಸು ಉಲ್ಲಾಸವಾಗಿರುತ್ತದೆ. ಹಾಗೂ ಅವಳ ಸೊಗಸಾದ ಮಾತುಗಳಿಂದ ವಿಚಲಿತನಾಗುವುದಿಲ್ಲ.

ಕಣ್ಣಿನ ಸಂಪರ್ಕದ ಬೆಸುಗೆ:
ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡಿದರೆ ಗಂಡು ಮತ್ತು ಹೆಣ್ಣಿನ ಮನಸ್ಸು ತೆರೆದುಕೊಳ್ಳುತ್ತದೆ. ಇದರಿಂದ ಇಬ್ಬರಲ್ಲೂ ಆಕರ್ಷಣೆಯ ಅನುಭವ ಹೆಚ್ಚಾಗಲು ಸಹಕಾರಿಯಾಗಲಿದೆ. ಕಣ್ಣು ಕಣ್ಣು ಸೆಳೆತರೆ ಇಬ್ಬರ ನಡುವಿನ ಸಂಬಂಧವು ಇನಷ್ಟು ಹತ್ತಿರವಾಗುವ ಸಂಭವ ಹೆಚ್ಚು.ಮೊದಲ ನಡೆಗೆ ಪ್ರೇರೇಪಣೆ:
ಆಸಕ್ತಿದಾಯಕ ವಿಚಾರಗಳನ್ನು ತಮ್ಮ ಇನಿಯನೊಂದಿಗೆ ಹಂಚಿಕೊಂಡರೆ ಪರಸ್ಪರ ಹೊಂದಾಣಿಕೆಯ ಮನೋಭಾವನೆಗೆ ಸಹಾಯವಾಗುತ್ತದೆ. ಹಾಗೂ ಅವರ ಆಸಕ್ತಿಕರ ವಿಷಯದ ಮೇಲೆ ಇನಷ್ಟು ವಿಚಾರಗಳು ಇಬ್ಬರ ನಡುವೆ ವಿನಿಮಯವಾಗಲು ಪ್ರಾರಂಭವಾಗುತ್ತದೆ.

ಪ್ರೀತಿಯ ತೋರಿಕೆಯ ಲಕ್ಷಣಗಳು:
ನೀವು ಇಷ್ಟಪಡುವ ವಸ್ತುಗಳ ಬಗ್ಗೆ ತಿಳಿದುಕೊಂಡು, ನಿಮ್ಮ ಪ್ರೀಯತಮ ನಿಮಗೆ ನೀಡಿದರೆ ಅದು ತಮ್ಮಲ್ಲಿರುವ ಪ್ರೀತಿಯ ತೋರಿಕೆಯ ಲಕ್ಷಣವಾಗಿರುತ್ತದೆ. ಇದರಿಂದ ನಿಮ್ಮ ಭಾವನೆಗೆ ಹತ್ತಿರವಾಗುವ ಲಕ್ಷಣಗಳಲ್ಲಿ ಇದು ಒಂದಾಗಿದೆ.

ಮುಗುಳ್ನಗೆ ಬೀರುವುದು:
ಮುಗುಳ್ನಗೆಯು ತುಂಬಾ ಆಕರ್ಷಕವಾಗಿರುತ್ತದೆ. ನಗು ಮುಖದ ಹೆಣ್ಣನ್ನು ನೋಡುವು ಒಂದು ಚೆಂದ. ಹೆಣ್ಣು ತಾನು ಆಕರ್ಷಿತರಾಗಿರುವ ಗಂಡಿನ ಮೇಲೆ ಮುಗುಳ್ನಗೆ ನೀಡುವುದರಿಂದ ಫ್ಲರ್ಟ್ ಮಾಡುವ ಉತ್ತಮ ಮಾರ್ಗವಾಗಿದೆ.

ಅಭಿನಂದನೆ ಸಲ್ಲಿಸುವುದು:
ಸಾಮಾನ್ಯವಾಗಿ ಕೆಲವು ಹುಡುಗರಿಗೆ ಅಭಿನಂದನೆ ಇಷ್ಟಪಡುವುದಿಲ್ಲ. ಬದಲಾಗಿ ಅವರಿಗೆ ಹ್ಯಾಸ್ಯಭರಿತವಾಗಿ ಚೇಷ್ಠೆ ಮಾಡುವುದರ ಮೂಲಕ ಅಭಿನಂದನೆ ಸಲ್ಲಿಸಿದರೆ ಹುಡುಗರು ಫ್ಲರ್ಟ್ ಮಾಡಲು ಇಷ್ಟಪಡುತ್ತಾರೆ.

ಸ್ಪರ್ಶದ ಬಯಕೆ ವ್ಯಕ್ತಪಡಿಸುತ್ತಾರೆ:
ಹೆಣ್ಣು ತಾನು ಇಷ್ಟ ಪಡುವ ಗಂಡಿನ ಹತ್ತಿರವಿದ್ದಾಗ ಅವನಿಂದ ಸ್ಪರ್ಶದ ಬಯಕೆ ಇಚ್ಛಿಸುತ್ತಾಳೆ. ಅವನ ಕೈಯಿಂದ ತನ್ನ ತೋಳಿನಲ್ಲಿಡುವುದು, ಭುಜದ ಮೇಲೆ ಕೈ ಹಾಕುವುದು, ತಲೆ ಸವರುವುದು ಹೀಗೆ ಮಾಡುತ್ತಿದ್ದರೆ ಹೆಣ್ಣು ಇಷ್ಟಪಡುತ್ತಾಳೆ.

ಈ ರೀತಿಯ ಲಕ್ಷಣಗಳು ಸ್ವತಃ ಹೆಣ್ಣು ಮಕ್ಕಳು ತಮ್ಮ ಅನುಭವದಿಂದ ಹಂಚಿಕೊಂಡ ಅಭಿಪ್ರಾಯಗಳಾಗಿವೆ. ಫ್ಲರ್ಟಿಂಗ್ ಕೆಲವರಿಗೆ ಅಸೂಯೆ ತರಿಸಿದರೆ, ಕೆಲವರಿಗೆ ತಮ್ಮ ಸಂಗಾತಿಯಿಂದ ಇನ್ನಷ್ಟು ಫ್ಲರ್ಟ್ ಮಾಡಿಸಿಕೊಳ್ಳಲು ಇಷ್ಟಪಡುತ್ತಾರೆ.
Published by: Sushma Chakre
First published: March 18, 2021, 8:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories