Fatty Liver: ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಬಗ್ಗೆ ಎಚ್ಚೆತ್ತುಕೊಳ್ಳಿ, ಇಲ್ಲಾ ಅಂದ್ರೆ ಅಪಾಯ ತಪ್ಪಿದ್ದಲ್ಲ

ಫ್ಯಾಟಿ ಲಿವರ್ ರೋಗವನ್ನು (ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ) ಆಲ್ಕೊಹಾಲ್ ಅಲ್ಲದ ಕೊಬ್ಬಿನ ಯಕೃತ್ತಿನ ಕಾಯಿಲೆ (Fatty liver disease) ಎಂದೂ ಪರಿಗಣಿಸಲಾಗುತ್ತದೆ. ಪಿತ್ತಜನಕಾಂಗದ (ಯಕೃತ್ತಿನ) ಸಮಸ್ಯೆಯನ್ನು ಶ್ರೇಣೀಕರಿಸುವ ಆಲ್ಕೋಹಾಲ್‌ (Alcohol) ಸೇವನೆಯಿಂದ ಮಾತ್ರವೇ ಈ ಕಾಯಿಲೆ ಉಂಟಾಗುತ್ತದೆ ಎಂದಲ್ಲ. ಯಕೃತ್ತಿನಲ್ಲಿ ಹೆಚ್ಚುವರಿಯಾಗಿ ಕೊಬ್ಬು ಸಂಗ್ರಹವಾದರೆ ಫ್ಯಾಟಿ ಲಿವರ್ ಕಾಯಿಲೆ ಸಂಭವಿಸುತ್ತದೆ. ಯಕೃತ್ತಿನಲ್ಲಿ ಯಾವುದೇ ಸಮಸ್ಯೆಗಳು ಸಂಭವಿಸಿದರೆ ಅದನ್ನು ಕೂಡಲೇ ಪರಿಹರಿಸಬೇಕಾಗುತ್ತದೆ.

ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ

ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ

  • Share this:
ದೇಹದ ಪ್ರಮುಖ ಅಂಗವಾಗಿರುವ ಯಕೃತ್ತು ಆರೈಕೆಯೂ ಅಷ್ಟೇ ಮುಖ್ಯವಾಗಿರುತ್ತದೆ. ದೇಹವು ಜೀರ್ಣಗೊಂಡ ಆಹಾರವನ್ನು (Food) ಸಂಸ್ಕರಿಸುವುದು, ರಕ್ತದಲ್ಲಿನ ಕೊಬ್ಬು ಹಾಗೂ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು, ಸೋಂಕುಗಳ ವಿರುದ್ಧ ಹೋರಾಡುವುದು ಹಾಗೂ ದೇಹದಲ್ಲಿನ ವಿಷವನ್ನು ನಾಶಪಡಿಸುವಂತಹ ಕ್ರಿಯೆಗಳನ್ನು ಯಕೃತ್ತು (Liver) ಮಾಡುತ್ತದೆ. ಹೆಚ್ಚುಕಡಿಮೆ 500 ಕ್ಕೂ ಹೆಚ್ಚಿನ ಕ್ರಿಯೆಗಳನ್ನು ದೇಹದ ಈ ಅಂಗವು ನಡೆಸುತ್ತದೆ. ಫ್ಯಾಟಿ ಲಿವರ್ ರೋಗವನ್ನು (ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ) ಆಲ್ಕೊಹಾಲ್ ಅಲ್ಲದ ಕೊಬ್ಬಿನ ಯಕೃತ್ತಿನ ಕಾಯಿಲೆ (Fatty liver disease) ಎಂದೂ ಪರಿಗಣಿಸಲಾಗುತ್ತದೆ. ಪಿತ್ತಜನಕಾಂಗದ (ಯಕೃತ್ತಿನ) ಸಮಸ್ಯೆಯನ್ನು ಶ್ರೇಣೀಕರಿಸುವ ಆಲ್ಕೋಹಾಲ್‌ (Alcohol) ಸೇವನೆಯಿಂದ ಮಾತ್ರವೇ ಈ ಕಾಯಿಲೆ ಉಂಟಾಗುತ್ತದೆ ಎಂದಲ್ಲ. ಯಕೃತ್ತಿನಲ್ಲಿ ಹೆಚ್ಚುವರಿಯಾಗಿ ಕೊಬ್ಬು ಸಂಗ್ರಹವಾದರೆ ಫ್ಯಾಟಿ ಲಿವರ್ ಕಾಯಿಲೆ ಸಂಭವಿಸುತ್ತದೆ. ಯಕೃತ್ತಿನಲ್ಲಿ ಯಾವುದೇ ಸಮಸ್ಯೆಗಳು ಸಂಭವಿಸಿದರೆ ಅದನ್ನು ಕೂಡಲೇ ಪರಿಹರಿಸಬೇಕಾಗುತ್ತದೆ.

ಸಾಮಾನ್ಯವಾಗಿರುವ ರೋಗಲಕ್ಷಣಗಳು
ಕೆಲವೊಂದು ರೋಗಲಕ್ಷಣಗಳು ಎಲ್ಲರಿಗೂ ತಿಳಿದಿರುವಂಥದ್ದು ಎಂಬುದು ಕೊಂಚ ಸಮಾಧಾನಕರ ಸಂಗತಿಯಾಗಿದೆ. ಹಳದಿ ಕಾಮಾಲೆಗೆ ಸಂಬಂಧಿಸಿದ ಲಕ್ಷಣಗಳು ಅಂದರೆ ಕಣ್ಣು ಮತ್ತು ತ್ವಚೆಯು ಹಳದಿ ಬಣ್ಣಕ್ಕೆ ತಿರುಗುವುದು ಯಕೃತ್ತಿನೊಂದಿಗೆ ಸಂಪರ್ಕವನ್ನು ಹೊಂದಿದೆ.

ಕಿಬ್ಬೊಟ್ಟೆಯ ನೋವು ಹಾಗೂ ಸೆಳೆತ ಕಂಡುಬರುವುದು ಯಕೃತ್ತಿಗೆ ಸಂಬಂಧಿಸಿದ ರೋಗಲಕ್ಷಣವಾಗಿದೆ. ಆಯಾಸ ಕೂಡ ಪಿತ್ತಜನಕಾಂಗ ಕಾಯಿಲೆಯ ಮತ್ತೊಂದು ರೋಗಲಕ್ಷಣವಾಗಿದೆ.

ರೋಗಲಕ್ಷಣಗಳ ಕುರಿತಾದ ಗೊಂದಲಗಳು
ಫ್ಯಾಟಿ ಲಿವರ್ ಕಾಯಿಲೆಯ ಅತ್ಯಂತ ತೀವ್ರವಾದ ಹಂತವೆಂದರೆ ರೋಗಲಕ್ಷಣದ ಕುರಿತು ಗೊಂದಲಕ್ಕೊಳಗಾಗುವುದು. ರೋಗಲಕ್ಷಣವನ್ನು ಗಮನಿಸದೇ ಹೋದಲ್ಲಿ ರೋಗ ತೀವ್ರಗೊಳ್ಳುತ್ತದೆ ಮತ್ತು ಹಲವಾರು ಬಾರಿ ರೋಗದ ಬೆಳವಣಿಗೆಯು ಗಮನಕ್ಕೆ ಬಾರದೇ ಹೋಗಬಹುದು.ಇದು ಯಕೃತ್ತಿನ ಸಿರೋಸಿಸ್‌ಗೆ ಕಾರಣವಾಗಬಹುದು.

ಯಕೃತ್ತಿನ ಸಿರೋಸಿಸ್ ಬಗ್ಗೆ ಇನ್ನಷ್ಟು ಮಾಹಿತಿ
ಫ್ಯಾಟಿ ಲಿವರ್ ಕಾಯಿಲೆಯ ನಾಲ್ಕನೇ ಮತ್ತು ಅಂತಿಮ ಹಂತದಲ್ಲಿ ಉಂಟಾಗುವ ಪರಿಣಾಮ ಕೊಂಚ ಗಂಭೀರವಾಗಿರುತ್ತದೆ ಮತ್ತು ಯಕೃತ್ತಿನ ವೈಫಲ್ಯ ಮತ್ತು ಯಕೃತ್ತಿನ ಕ್ಯಾನ್ಸರ್‌ಗೆ ಕಾರಣವಾಗಲೂಬಹುದು. ಈ ಸಮಯದಲ್ಲಿ, ಯಕೃತ್ತಿನ ಗಾತ್ರ ಕುಗ್ಗುತ್ತದೆ ಮತ್ತು ಗಾಯ ಮತ್ತು ಗಡ್ಡೆಯಾಗುತ್ತದೆ. ಸಿರೋಸಿಸ್ನಲ್ಲಿ, ಆರೋಗ್ಯಕರ ಯಕೃತ್ತಿನ ಅಂಗಾಂಶವನ್ನು ಗಾಯಗೊಂಡಿರುವ ಅಂಗಾಂಶದಿಂದ ಬದಲಾಯಿಸಲಾಗುತ್ತದೆ. ಸಿರೋಸಿಸ್ ನಿಮ್ಮ ಯಕೃತ್ತನ್ನು ಸರಿಯಾಗಿ ಕಾರ್ಯನಿರ್ವಹಿಸಲು ಬಿಡುವುದಿಲ್ಲ ಕೊನೆಯ ಹಂತದ ಸಿರೋಸಿಸ್ ಜೀವಕ್ಕೆ ಅಪಾಯಕಾರಿಯೂ ಹೌದು.

ಇದನ್ನೂ ಓದಿ:  Insomnia: ಮಧುಮೇಹ ನಿಮಗಿದ್ಯಾ? ನಿದ್ರೆಯ ಮೇಲೆ ಪರಿಣಾಮ ಬೀರಬಹುದು ಎಚ್ಚರ!

ಪ್ರಸ್ತುತ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದರೆ ಅದು ಉಲ್ಬಣಗೊಳ್ಳದಂತೆ ತಡೆಯಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮವಾಗಿದೆ ಹಾಗೂ ಜೀವನಶೈಲಿಯನ್ನು ಬದಲಾಯಿಸುವುದೂ ಮುಖ್ಯವಾಗಿದೆ.

ಅಪಾಯಕಾರಿ ಅಂಶಗಳು

  • ಕೆಲವೊಂದು ಪರಿಸ್ಥಿತಿಗಳು ಆಲ್ಕೊಹಾಲ್ಯುಕ್ತವಲ್ಲದ ಫ್ಯಾಟಿ ಲಿವರ್ ಪರಿಸ್ಥಿತಿಯನ್ನು ಬಿಗಡಾಯಿಸಬಹುದು

  • ಅಧಿಕ ಕೊಲೆಸ್ಟ್ರಾಲ್

  • ರಕ್ತದಲ್ಲಿ ಹೆಚ್ಚಿನ ಮಟ್ಟದ ಟ್ರೈಗ್ಲಿಸರೈಡ್‌ಗಳು

  • ಬೊಜ್ಜು

  • ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್

  • ಸ್ಲೀಪ್ ಅಪ್ನಿಯ

  • ಟೈಪ್ 2 ಮಧುಮೇಹ

  • ನಿಷ್ಕ್ರಿಯ ಥೈರಾಯ್ಡ್

  • ನಿಷ್ಕ್ರಿಯ ಪಿಟ್ಯುಟರಿ ಗ್ರಂಥಿ


ಯಕೃತ್ತಿನ ಕಾಳಜಿಯನ್ನು ಹೇಗೆ ಕೈಗೊಳ್ಳಬಹುದು
ಯಕೃತ್ತಿನ ಆರೈಕೆಗಾಗಿ ಯಾರೇ ಆಗಲಿ ಆರೋಗ್ಯಕರ ತೂಕವನ್ನು ನಿರ್ವಹಿಸುವುದು ಅತಿಮುಖ್ಯವಾಗಿದೆ. ಅಧಿಕ ತೂಕ ಅಥವಾ ಬೊಜ್ಜು ಯಕೃತ್ತಿನ ಕಾಯಿಲೆಯನ್ನು ಹೊಂದಿರುವವರಲ್ಲಿ ಕಾಯಿಲೆಯನ್ನು ತೀವ್ರಗೊಳಿಸುತ್ತದೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು ಹಾಗೂ ಆರೋಗ್ಯಕರ ಕೊಬ್ಬುಗಳು ಯಥೇಚ್ಛವಾಗಿರುವ ಆಹಾರವನ್ನು ಸೇವಿಸಿ. ವ್ಯಾಯಾಮ ಮಾಡದೇ ಇರುವ ದಿನ ಅಥವಾ ಕಡಿಮೆ ಚಟುವಟಿಕೆಯಿಂದ ಇರುವ ದಿನಗಳಂದು ಅತಿಯಾದ ಆಹಾರ ಸೇವನೆ ಮಾಡಬಾರದು ಹಾಗೂ ಕಡಿಮೆ ಕ್ಯಾಲೊರಿ ಸೇವಿಸಿ. ತೀವ್ರವಾದ ದಿನಚರಿಗೆ ಮುಂದುವರಿಯಬೇಕು ಎಂದಾದಲ್ಲಿ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: Food Poison: ನಿತ್ಯ ಸೇವಿಸೋ ಆಹಾರದಲ್ಲಿರುವ ವಿಷಕಾರಿ ಅಂಶಗಳಿವು!

ಮದ್ಯಪಾನ ಸೇವಿಸಿ ಯಕೃತ್ತಿಗೆ ಇನ್ನಷ್ಟು ಒತ್ತಡವನ್ನು ಹಾಕಬೇಡಿ. ಸಂಪೂರ್ಣವಾಗಿ ಮದ್ಯಪಾನ ಸೇವಿಸದೇ ಇರುವುದು ಆರೋಗ್ಯಕರ ಯಕೃತ್ತಿಗೆ ರಹದಾರಿಯಾಗಿದೆ. ತಜ್ಞರು ತಿಳಿಸಿರುವ ಎಲ್ಲಾ ಔಷಧಿಗಳನ್ನು ಅನುಸರಿಸಿ ಅಂತೆಯೇ ಕಾಯಿಲೆಗೆ ನಿಮ್ಮಷ್ಟಕ್ಕೆ ಔಷಧಿ ತೆಗೆದುಕೊಳ್ಳುವುದು ಹಾಗೂ ಮನೆಮದ್ದುಗಳನ್ನು ಪ್ರಯತ್ನಿಸುವ ಮುನ್ನ ವೈದ್ಯರನ್ನು ಸಂಧಿಸುವುದು ಒಳ್ಳೆಯದು.
Published by:Ashwini Prabhu
First published: