ತಂದೆ ತಾಯಿಗಳಿಗೆ (Parents) ತಮ್ಮ ಮಕ್ಕಳೇ (Children's) ಪ್ರಪಂಚವಾಗಿರುತ್ತಾರೆ. ತಮ್ಮ ಮಕ್ಕಳು ಏನು ಮಾಡಿದರೂ ಚೆಂದ ಎಂಬ ಮನೋಭಾವ ಕೆಲವೊಂದು ಪೋಷಕರಲ್ಲಿರುತ್ತದೆ. ಮಕ್ಕಳನ್ನು ತುಂಬಾ ಮುದ್ದಾಗಿ ಬೆಳೆಸುವುದರಿಂದ ಅವರಲ್ಲಿರುವ ನ್ಯೂನತೆಗಳು (Flaw) ತಪ್ಪುಗಳು ಪೋಷಕರ ಅರಿವಿಗೆ ಬರುವುದಿಲ್ಲ. ಆದರೆ ಎಲಿಫೆಂಟ್ ಪೇರೆಂಟಿಂಗ್ (Elephant Parenting) ಎನ್ನುವುದು ಪ್ರತ್ಯೇಕ ಪೋಷಣೆಯ ಹಂತವಾಗಿದ್ದು (Steps), ಇಲ್ಲಿ ಮಗು ಹಾಗೂ ತಂದೆ ತಾಯಿಯ ನಡುವೆ ಭಾವನಾತ್ಮಕ ಅನುಬಂಧ ಏರ್ಪಡುತ್ತದೆ.
ಎಲಿಫೆಂಟ್ ಪೇರೆಂಟಿಂಗ್ ಎಂದರೇನು?
ಇಂದಿನ ಲೇಖನದಲ್ಲಿ ಕೂಡ ನಾವು ಇದೇ ಬಗೆಯ ಪೋಷಕತ್ವದ ಕುರಿತು ಕೆಲವೊಂದು ವಿವರಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಮಕ್ಕಳ ಭಾವನಾತ್ಮಕ ಸ್ವಾಸ್ಥ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವುದು ಹಾಗೂ ಹೆಚ್ಚು ಕಟ್ಟುಪಾಡುಗಳಿಲ್ಲದೆ ಸ್ವತಂತ್ರರಾಗಿ ಬೆಳೆಸುವುದೇ ಎಲಿಫೆಂಟ್ ಪೇರೆಂಟಿಂಗ್ ಆಗಿದೆ.
ಅವರನ್ನು ಕಠಿಣವಾಗಿ ನಿಯಮ ಬದ್ಧರಾಗಿ ಬೆಳೆಸುವ ಬದಲಿಗೆ ಮಕ್ಕಳಿಗೆ ಆಸಕ್ತಿಗಳನ್ನು ಮುಂದುವರಿಸಲು ಎಲಿಫೆಂಟ್ ಪೇರೆಂಟ್ಸ್ ತಮ್ಮ ಮಕ್ಕಳಿಗೆ ಹೆಚ್ಚಿನ ಅವಕಾಶವನ್ನು ನೀಡುತ್ತಾರೆ.
ಈ ರೀತಿಯ ಪೇರೆಂಟಿಂಗ್ ಮಗು ಮತ್ತು ಪೋಷಕರ ನಡುವಿನ ಭಾವನಾತ್ಮಕ ಸಂಪರ್ಕಕ್ಕೆ ಮಹತ್ವ ನೀಡುತ್ತದೆ. ಇದರಿಂದ ಅವರಿಗೆ ಹೆಚ್ಚಿನ ಒತ್ತಡವಿಲ್ಲದೆ ಮುಕ್ತವಾಗಿ ಬೆಳೆಯಲು ಸಾಧ್ಯವಾಗುತ್ತದೆ ಹಾಗೂ ಮಕ್ಕಳಾಗಿಯೇ ಇರಲು ಅನುಕೂಲವಾಗುತ್ತದೆ.
ನೀವು ಎಲಿಫೆಂಟ್ ಪೇರೆಂಟ್ ಎಂಬುದನ್ನು ಸೂಚಿಸಲು ಇಲ್ಲಿದೆ ಐದು ಅಂಶಗಳು
ಮಕ್ಕಳ ಭಾವನಾತ್ಮಕ ಸ್ವಾಸ್ಥ್ಯಕ್ಕೆ ಆದ್ಯತೆ ನೀಡುವ ಪೋಷಕರು ನೀವಾಗಿರುತ್ತಿರಿ
ಈ ಬಗೆಯ ಪೋಷಕರು ಮಕ್ಕಳಿಗೆ ಎಲ್ಲಾ ಬಗೆಯ ಸ್ವಾತಂತ್ರ್ಯವನ್ನು ನೀಡುತ್ತಾರೆ ಹಾಗೂ ಅವರು ಭಾವನಾತ್ಮಕವಾಗಿ ಆರೋಗ್ಯವಂತರಾಗಿರಬೇಕು ಎಂದು ಬಯಸುತ್ತಾರೆ.
ಮಕ್ಕಳಿಗೆ ಒತ್ತಡ ಹೇರುವುದಿಲ್ಲ ಹಾಗೂ ಅವರಿಗೆ ಯಾವುದು ಇಷ್ಟವೋ ಅದನ್ನು ಮುಂದುವರಿಸಲು ಬೆಂಬಲ ನೀಡುತ್ತಾರೆ. ಮಕ್ಕಳು ತಮ್ಮಷ್ಟಕ್ಕೆ ಆನಂದ ಕಂಡುಕೊಳ್ಳಬೇಕು ಎಂದು ಬಯಸುವವರು ನೀವಾಗಿರುತ್ತೀರಿ ಹಾಗೂ ಮಕ್ಕಳು ಬಾಲ್ಯವನ್ನು ಆನಂದಿಸಬೇಕು ಎಂದು ಬಯಸುವ ಪೋಷಕರಾಗಿರುತ್ತೀರಿ.
ಮಕ್ಕಳ ಆದ್ಯತೆಗಳಿಗೆ ಮಹತ್ವ ನೀಡುವುದು
ಎಲಿಫೆಂಟ್ ಪೇರೆಂಟಿಂಗ್ ಎನ್ನುವುದು ಪೋಷಕರು ಹಾಗೂ ಮಗುವಿನ ನಡುವಿನ ಸಂಬಂಧದ ಭಾವನಾತ್ಮಕ ಅನುಬಂಧಕ್ಕೆ ಮಹತ್ವ ನೀಡುತ್ತದೆ. ಮಕ್ಕಳನ್ನು ಹೆಚ್ಚು ಅಳಿಸುವುದಿಲ್ಲ ಅವರ ಸಂತೋಷಕ್ಕೆ ಆದ್ಯತೆ ನೀಡುತ್ತಾರೆ. ತಮ್ಮ ಮಕ್ಕಳಿಗೆ ಸಹಾಯ ಮಾಡಲು ಯಾವಾಗಲೂ ಬಯಸುತ್ತಾರೆ
ಮಗುವಿಗೆ ಸಾಂತ್ವಾನ ನೀಡುವ ಪೋಷಕರು
ಈ ರೀತಿಯ ಪೋಷಕರು ಮಕ್ಕಳಿಗೆ ರಕ್ಷಣೆ ಹಾಗೂ ಸೌಕರ್ಯ ಒದಗಿಸುವಲ್ಲಿ ಹೆಚ್ಚು ಬದ್ಧರಾಗಿರುತ್ತಾರೆ. ಅವರನ್ನು ಹೆಚ್ಚು ಕಾಳಜಿಯಿಂದ ಪ್ರೀತಿಯಿಂದ ನೋಡಿಕೊಳ್ಳುವ ಪೋಷಕರಾಗಿರಬೇಕು ಎಂದು ಬಯಸುತ್ತಾರೆ. ಜೀವನದಲ್ಲಿ ಮಕ್ಕಳಿಗೆ ಕಷ್ಟಗಳೇ ಉಂಟಾಗಬಾರದು ಎಂದು ಬಯಸುವ ಪೋಷಕರು ಅವರಾಗಿರುತ್ತಾರೆ.
ಸ್ವಾತಂತ್ರ್ಯಕ್ಕೆ ಧಕ್ಕೆಯನ್ನುಂಟು ಮಾಡುವುದಿಲ್ಲ
ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಪೋಷಕರು ನೀವಾಗಿರುತ್ತೀರಿ. ಮಕ್ಕಳು ಅವರಷ್ಟಕ್ಕೆ ಬೆಳೆಯಬೇಕು ಹಾಗೂ ಪೋಷಕರ ಒತ್ತಡದಲ್ಲಿ ಬೆಳೆಯಬಾರದೆಂಬ ಆಶಯವನ್ನು ಹೊಂದಿರುತ್ತಾರೆ. ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುತ್ತಾರೆ.
ನಿಯಮಗಳನ್ನು ಹೇರುವುದಿಲ್ಲ
ಮಕ್ಕಳ ಅಗತ್ಯಗಳಿಗೆ ಆದ್ಯತೆ ನೀಡಬೇಕು ಹಾಗೂ ಅವರ ಬೆಂಬಲಕ್ಕೆ ತಾವು ಸದಾ ಸಿದ್ಧರಾಗಬೇಕು ಎಂಬ ಆಶಯವನ್ನು ಹೊಂದಿರುತ್ತಾರೆ. ಮಕ್ಕಳಿಗೆ ಯಾವುದೇ ನಿಯಮಗಳನ್ನು ಹೇರುವುದಿಲ್ಲ ಹಾಗೂ ಮಕ್ಕಳ ಸಂತೋಷಕ್ಕೆ ಆದ್ಯತೆ ನೀಡುವ ಪೋಷಕರಾಗಿರುತ್ತಾರೆ.
ಇದನ್ನೂ ಓದಿ:Mother Care: ಮಕ್ಕಳ ನಡುವೆ ಕೋಪ ಮತ್ತು ಪೈಪೋಟಿ ಬರುವುದೇಕೆ; ತಾಯಿಯಾದವಳು ಇದನ್ನು ಹೇಗೆ ನಿಭಾಯಿಸಬೇಕು?
ಪೋಷಕರು ಎಲಿಫೆಂಟ್ ಪೇರೆಂಟ್ ಆಗಿರುವುದು ಒಳ್ಳೆಯದೇ ಕೆಟ್ಟದ್ದೇ?
ಮಗುವಿನೊಂದಿಗೆ ಪೋಷಕರ ಸಂಬಂಧವನ್ನು ಉತ್ತಮಗೊಳಿಸುವ ಹಾಗೂ ಸುಧಾರಿಸುವ ಯಾವುದೇ ಪೋಷಕ ವಿಧಾನ ಮಕ್ಕಳ ಅಭಿವೃದ್ಧಿ, ದೀರ್ಘಾವಧಿಯ ಯಶಸ್ಸಿಗೆ ಉತ್ತಮವಾಗಿರುತ್ತದೆ.
ಎಲಿಫೆಂಟ್ ಪೇರೆಂಟಿಂಗ್ ಮಕ್ಕಳ ಹಾಗೂ ಪೋಷಕರ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಆದರೆ ಮಕ್ಕಳಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುವ ಸಮಯದಲ್ಲಿ ಕೆಲವೊಂದು ಕಟ್ಟುಪಾಡುಗಳನ್ನು ವಿಧಿಸಬೇಕು ಎಂಬುದು ತಜ್ಞರ ಸಲಹೆಯಾಗಿದೆ.
ಕೆಲವೊಂದು ನಿಯಮಗಳನ್ನು ಮಕ್ಕಳಿಗೆ ವಿಧಿಸುವುದು ಅವರನ್ನು ಶಿಸ್ತುಬದ್ಧರಾಗಿ ರೂಪಿಸುತ್ತವೆ ಎಂಬುದು ತಜ್ಞರ ವಾದವಾಗಿದೆ. ಹಾಗಾಗಿ ಎಲಿಫೆಂಟ್ ಪೇರೆಂಟಿಂಗ್ ಅನ್ನು ಆರಿಸುವ ಯಾವುದೇ ಪೋಷಕರು ಮಕ್ಕಳಲ್ಲಿ ಉತ್ತಮ ಗುಣಗಳನ್ನು, ನಡವಳಿಕೆಯನ್ನು ಪ್ರೋತ್ಸಾಹಿಸುವವರಾಗಿರಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ