• Home
  • »
  • News
  • »
  • lifestyle
  • »
  • Dopamine Dressing: ಈ ಬೇಸಿಗೆಗೆ ಹೊಸಾ ಬಗೆಯ ಫ್ಯಾಷನ್ ಟ್ರೆಂಡ್ ಬಂದಿದೆ, ಎಲ್ಲಾ ನಟಿಯರ ಈ ಸ್ಟೈಲ್ ನೀವೂ ಫಾಲೋ ಮಾಡ್ಬಹುದು ನೋಡಿ

Dopamine Dressing: ಈ ಬೇಸಿಗೆಗೆ ಹೊಸಾ ಬಗೆಯ ಫ್ಯಾಷನ್ ಟ್ರೆಂಡ್ ಬಂದಿದೆ, ಎಲ್ಲಾ ನಟಿಯರ ಈ ಸ್ಟೈಲ್ ನೀವೂ ಫಾಲೋ ಮಾಡ್ಬಹುದು ನೋಡಿ

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

Bollywood Celebrities: ಅಲ್ಲದೇ, ಆರೋಗ್ಯವನ್ನು ಸುಧಾರಿಸಲು ವರ್ಣರಂಜಿತ ಉಡುಪುಗಳನ್ನು ಧರಿಸುವುದರೊಂದಿಗೆ ಈ ಡೋಪಾಮೈನ್ ಡ್ರೆಸ್ಸಿಂಗ್ ಸಂಬಂಧಿಸಿದೆ. ಇದರಲ್ಲಿ ಹಲವಾರು ಅದ್ಭುತ ವಿನ್ಯಾಸಗಳು, ಮಾದರಿಗಳು ಮತ್ತು  ಬಣ್ಣಗಳು ಲಭ್ಯವಿದೆ. 

  • Share this:

ಆರಾಮದಾಯಕ ಉಡುಪುಗಳು (Comfort Dress) ಈ ಕೊರೊನಾ (Corona) ಕಾಲದಲ್ಲಿ ಹೆಚ್ಚು ಪ್ರಸಿದ್ಧವಾಗಿದೆ. ವಿಭಿನ್ನ ಶೈಲಿಗಳು ಈ ಸಮಯದಲ್ಲಿ ಪ್ರಚಲಿತವಾಗಿದೆ. ನಮ್ಮ ಮಾನಸಿಕ ಆರೋಗ್ಯಕ್ಕೆ ಫ್ಯಾಶನ್ ಅನ್ನು (Fashion) ಲಿಂಕ್ ಮಾಡುವ ಪ್ರವೃತ್ತಿ ಕೂಡ ಆರಂಭವಾಗಿದೆ. ಒಂದು ರೀತಿಯಲ್ಲಿ ನಮ್ಮ ಮಾನಸಿಕ ಆರೋಗ್ಯದ (Mental Health) ಮೇಲೆ ಈ ಫ್ಯಾಶನ್​ ಪರಿಣಾಮ ಬೀರುತ್ತದೆ. ಇದನ್ನು "ಡೋಪಾಮೈನ್ ಡ್ರೆಸ್ಸಿಂಗ್" (Dopamine Dressing) ಎಂದು ಕರೆಯಲಾಗುತ್ತದೆ. ಈ ಫ್ಯಾಶನ್​ ಒಬ್ಬ ವ್ಯಕ್ತಿಯ ಮಾನಸಿಕವಾಗಿ ಯಾವ ರೀತಿ ಭಾವನೆಯನ್ನು ಹೊಂದಿದ್ದಾನೆ ಎಂಬುದನ್ನ ತೋರಿಸುತ್ತದೆ.


ಅಲ್ಲದೇ, ಆರೋಗ್ಯವನ್ನು ಸುಧಾರಿಸಲು ವರ್ಣರಂಜಿತ ಉಡುಪುಗಳನ್ನು ಧರಿಸುವುದರೊಂದಿಗೆ ಈ ಡೋಪಾಮೈನ್ ಡ್ರೆಸ್ಸಿಂಗ್ ಸಂಬಂಧಿಸಿದೆ. ಇದರಲ್ಲಿ ಹಲವಾರು ಅದ್ಭುತ ವಿನ್ಯಾಸಗಳು, ಮಾದರಿಗಳು ಮತ್ತು  ಬಣ್ಣಗಳು ಲಭ್ಯವಿದೆ. ದೀಪಿಕಾ ಪಡುಕೋಣೆಯಿಂದ ಹಿಡಿದು ಅನನ್ಯಾ ಪಾಂಡೆಯವರೆಗೆ ಹಲವಾರು ಬಾಲಿವುಡ್ ಸೂಪರ್‌ಸ್ಟಾರ್‌ಗಳು ಈ ರೀತಿಯ ಬಟ್ಟೆಯನ್ನು ಧರಿಸಿರುವುದು ಕಂಡುಬಂದಿದೆ.


ಯಾವ್ಯಾವ ಸ್ಟಾರ್​ಗಳು ಯಾವ ರೀತಿ ಬಟ್ಟೆ ಧರಿಸಿದ್ದರು ಎಂಬುದು ಇಲ್ಲಿದೆ.  


ಅನನ್ಯಾ ಪಾಂಡೆ 


ಅನನ್ಯಾ ಪಾಂಡೆ ಯಾವಾಗಲೂ ತಮ್ಮ ವಿಭಿನ್ನ ರೀತಿಯ ಫ್ಯಾಶನ್​ ಟ್ರೆಂಡ್​ಗೆ ಫೇಮಸ್​ ಆಗಿದ್ದಾರೆ. ಈ ಬಾರಿ ಧರಿಸಿದ್ದ ಬಾರ್ಬಿ ಶೈಲಿಯ  ಬಬಲ್ಗಮ್ ಲ್ಯಾಟೆಕ್ಸ್ ಬಟ್ಟೆ ಅವರನ್ನು Gen Z ಡಿಸ್ನಿ ರಾಜಕುಮಾರಿಯಂತೆ ಕಂಗೊಳಿಸುವಂತೆ ಮಾಡಿತ್ತು. ಈ ಡ್ರೆಸ್​ ಆರಾಮದಾಯಕ ಮಾತ್ರವಲ್ಲದೇ, ವಿಭಿನ್ನ ಕೂಡ.




ಜಾನ್ವಿ ಕಪೂರ್ 




ಜಾನ್ವಿ ಕಪೂರ್ ಅವರ ಪಾಸ್ಟೆಲ್ ಗ್ರೀನ್​  ಡ್ರೆಸ್​ ಶಾಮತ ಮತ್ತು ನೆಮ್ಮದಿಯ ಬಣ್ಣ ಎನ್ನಬಹುದು. ಈ ಸುಂದರವಾದ ಸೂಟ್​ನಲ್ಲಿ ಸಣ್ಣ ಹೂವಿನ ಡಿಸೈನ್​ಗಳು ನಿಜಕ್ಕೂ ಬೆರಗು ಮೂಡಿಸುವಂತಿತ್ತು. ಈ ಬಣ್ಣ ಮತ್ತು ಬಣ್ಣ ಮನಸ್ಸಿಗೆ ಮುದ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.




ಸೋನಮ್ ಕಪೂರ್ ಅಹುಜಾ




ಸೋನಮ್ ಕಪೂರ್ ಅಹುಜಾ ಅವರನ್ನು ಬಾಲಿವುಡ್​ನಲ್ಲಿ ಫ್ಯಾಶನ್​ ಐಕಾನ್​ ಎಂದು ಕರೆಯಲಾಗುತ್ತದೆ, ಅವರು ಧರಿಸುವ ಬಟ್ಟೆಗಳು ಎಲ್ಲರನ್ನೂ ಆಕರ್ಷಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಬಾರಿ  ಸೋನಮ್ ಧರಿಸಿದ್ದ ಜಾಕೆಟ್​ ಎಲ್ಲರ ಗಮನ ಸೆಳೆದಿತ್ತು, ಹಲವು ಬಣ್ಣಗಳು ಮಿಕ್ಸ್ ಆಗಿರುವ ಈ ಜಾಕೆಟ್​ ಜೊತೆ ಹಳದಿ ಸ್ಕರ್ಟ್ ಆರಾಮದಾಯಕ ಬಟ್ಟೆಗಳಲ್ಲಿ ಒಂದು. ಅಲ್ಲದೇ ಈ ಬೇಸಿಗೆಯ ಸಮಯ ಈ ಬಟ್ಟೆಗಳನ್ನು ಧರಿಸಲು ಉತ್ತಮ ಸಮಯ ಎನ್ನಬಹುದು.


ಕರೀನಾ ಕಪೂರ್ ಖಾನ್ 


ಕರೀನಾ ಕಪೂರ್ ಖಾನ್ ಅವರ ಉಡುಗೆಯು ಸುಂದರ ಬಣ್ಣಗಳನ್ನು ಹೈಲೈಟ್ ಮಾಡುತ್ತದೆ, ಈ ಕೆಂಪ್ಪು  ಸ್ಪೋರ್ಟ್ಸ್ ಬ್ರಾ ಮತ್ತು ಕೆಂಪು ಪ್ಯಾಂಟ್​ ಕರೀನಾ ಅವರ ಸೌಂದರ್ಯವನ್ನು ಹೆಚ್ಚು ಮಾಡಿತ್ತು ಎನ್ನಬಹುದು. ಇದನ್ನು ಧರಿಸಿ ಬಂದ ಕರೀನಾ ಅವರ ಮೇಲೆ ಎಲ್ಲರ ಕಣ್ಣುಗಳಿತ್ತು ಎನ್ನಬಹುದು.


 ದೀಪಿಕಾ ಪಡುಕೋಣೆ




ದೀಪಿಕಾ ಪಡುಕೋಣೆ ಯುವಕರ ಹಾಟ್​ ಫೇವರೇಟ್​ ನಟಿ ಎನ್ನಬಹುದು. ಅವರ ಸೌಂದರ್ಯವನ್ನು ವರ್ಣಿಸುವುದು ಸುಲಭವಲ್ಲ.ಇತ್ತೀಚೆಗೆ ಅವರು ಧರಿಸಿದ್ದ ಪೂರ್ಣ ನೀಲಿ ಬಣ್ಣದ ಉಡುಗೆ ನಿಮಗೆ ಇಷ್ಟವಾಗದೇ ಇರಲಾರದು.

Published by:Sandhya M
First published: