Green Tea or Black Tea; ಇವೆರಡರಲ್ಲಿ ಯಾವುದು ಬೆಸ್ಟ್? ಹೆಚ್ಚು ಆರೋಗ್ಯದಾಯಕ ಯಾವುದು?

ಗ್ರೀನ್ ಟೀ ಹಾಗೂ ಬ್ಲ್ಯಾಕ್ ಟೀ ಇವೆರಡನ್ನು ಹೋಲಿಸಿದರೆ ಇದರಲ್ಲಿ ಯಾವುದು ಹೆಚ್ಚು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂಬ ಪ್ರಶ್ನೆ, ಗೊಂದಲ ಹಲವರ ಮನದಲ್ಲಿ ಇಂದಿಗೂ ಇದೆ. ಆ ನಿಟ್ಟಿನಲ್ಲಿ ನಿಮಗೆ ಈ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳಲು ಅನುಕೂಲವಾಗುವಂತೆ ನಾವು ಇಂದಿನ ಲೇಖನದಲ್ಲಿ ಕೆಲ ಮಾಹಿತಿ ನೀಡುತ್ತಿದ್ದೇವೆ.

ಗ್ರೀನ್ ಟೀ ಮತ್ತು ಬ್ಲಾಕ್ ಟೀ

ಗ್ರೀನ್ ಟೀ ಮತ್ತು ಬ್ಲಾಕ್ ಟೀ

  • Share this:
ಇಂದು ಸಾಕಷ್ಟು ಜನರು ತಮ್ಮ ಆರೋಗ್ಯದೆಡೆ (Health) ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ವ್ಯಾಯಾಮ, ಕಸರತ್ತು ಒಂದೆಡೆಯಾದರೆ ಡಯಟ್ (Diet) ಹಾಗೂ ಇಂಥದ್ದೆ ಆಹಾರ ತಿನ್ನಬೇಕು ಎಂಬುದರ ಬಗ್ಗೆಯೂ ಸಾಕಷ್ಟು ಒತ್ತು ನೀಡುತ್ತಿದ್ದಾರೆ. ಆದರೆ, ಇದು ಕೇವಲ ವ್ಯಾಯಾಮ (Exercise) ಹಾಗೂ ತಿನ್ನುವುದಕ್ಕೆ ಸೀಮಿತವಾಗಿಲ್ಲ, ಬದಲಾಗಿ ನಾವು ಸೇವಿಸುವ ಚಹಾದವರೆಗೂ (Tea) ಜನರು ತಮ್ಮದೆ ಆದ ಅರೋಗ್ಯಕ್ಕೆ ಪ್ರಯೋಜನಕಾರಿಯಾಗುವಂತಹ ಚಹಾ ಸೇವಿಸಲು ಬಯಸುತ್ತಾರೆ. ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಚಹಾಗಳ ಬಗ್ಗೆ ಮಾತು ಬಂದಾಗ ಕೆಲವರು ಗ್ರೀನ್ ಟೀ (Green Tea) ಬಗ್ಗೆ ಮತ ಚಲಾಯಿಸಿದರೆ ಇನ್ನೂ ಹಲವರು ಬ್ಲ್ಯಾಕ್ ಟೀ (Black Tea) ಅಭಿಮಾನಿಗಳಾಗಿದ್ದಾರೆ ಎಂದರೆ ತಪ್ಪಾಗಲಾರದು.

ಅಷ್ಟಕ್ಕೂ, ಗ್ರೀನ್ ಟೀ ಹಾಗೂ ಬ್ಲ್ಯಾಕ್ ಟೀ ಇವೆರಡನ್ನು ಹೋಲಿಸಿದರೆ ಇದರಲ್ಲಿ ಯಾವುದು ಹೆಚ್ಚು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂಬ ಪ್ರಶ್ನೆ, ಗೊಂದಲ ಹಲವರ ಮನದಲ್ಲಿ ಇಂದಿಗೂ ಇದೆ. ಆ ನಿಟ್ಟಿನಲ್ಲಿ ನಿಮಗೆ ಈ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳಲು ಅನುಕೂಲವಾಗುವಂತೆ ನಾವು ಇಂದಿನ ಲೇಖನದಲ್ಲಿ ಕೆಲ ಮಾಹಿತಿ ನೀಡುತ್ತಿದ್ದೇವೆ.

ಗ್ರೀನ್ ಟೀ ಅಥವಾ ಬ್ಲಾಕ್ ಟೀ ?
ಮೂಲತಃ ಗ್ರೀನ್ ಆಗಲಿ ಅಥವಾ ಬ್ಲ್ಯಾಕ್ ಆಗಲಿ ಈ ಎರಡೂ ಟೀಗಳು ಒಂದೇ ಸಸ್ಯವಾದ ಕ್ಯಾಮೆಲಿಯಾ ಸೈನೆನ್ಸಿಸ್ ನಿಂದ ಮಾಡಲ್ಪಡುತ್ತವೆ. ಇವೆರಡರಲ್ಲಿ ಇರುವ ಒಂದು ಪ್ರಮುಖ ವ್ಯತ್ಯಾಸವೆಂದರೆ ಬ್ಲ್ಯಾಕ್ ಟೀ ಆಕ್ಸಿಡೈಸ್ ಆಗಿದ್ದರೆ ಗ್ರೀನ್ ಟೀ ಆಕ್ಸಿಡೈಸ್ ಆಗಿರುವುದಿಲ್ಲ.

ಬ್ಲ್ಯಾಕ್ ಟೀ ಮಾಡಲು, ಮೊದಲಿಗೆ ಎಲೆಗಳನ್ನು ಹರಡಿಸಿ ಅವನ್ನು ಗಾಳಿಗೆಂದು ಬಿಡುತ್ತಾರೆ. ಈ ವಿಧಾನದಲ್ಲಿ ಆಕ್ಸಿಡೇಷನ್ ಪ್ರಕ್ರಿಯೆ ಉಂಟಾಗುತ್ತದೆ. ಇದರಿಂದ ಈ ಚಹಾ ಎಲೆಗಳು ಗಾಢವಾದ ಕಂದು ಬಣ್ಣಕ್ಕೆ ತಿರುಗುತ್ತವೆ ಮತ್ತು ಹೆಚ್ಚು ಸಾಂದ್ರೀಕೃತ ಪ್ರಭಾವವನ್ನು ಬೀರಲು ಶಕ್ತವಾಗುತ್ತವೆ. ಇನ್ನೊಂದೆಡೆ ಗ್ರೀನ್ ಟೀನಲ್ಲಿ ಆಕ್ಸಿಡೇಷನ್ ಪ್ರಕ್ರಿಯೆ ಆಗುವುದನ್ನು ತಪ್ಪಿಸಲು ಅದನ್ನು ಸಂಸ್ಕರಿಸಲಾಗುತ್ತದೆ. ಹಾಗಾಗಿ ಇದರ ಬಣ್ಣ ಅಥವಾ ಗಾಢತೆಯು ತುಂಬ ಹಗುರ ಅಥವಾ ಮೈಲ್ಡ್ ಎನ್ನುವ ರೀತಿಯಲ್ಲಿ ಇರುತ್ತದೆ.

ಗ್ರೀನ್ ಟೀ
ಗ್ರೀನ್ ಟೀ ಪ್ರಮುಖವಾಗಿ ಇಜಿಸಿಜಿ ಎಂಬ ಆಂಟಿ ಆಕ್ಸಿಡೆಂಟ್ ಹೊಂದಿರುತ್ತದೆ. ಇದಲ್ಲದೆ ಇದರಲ್ಲಿ ಕ್ಯಾಟೆಚಿನ್ ಹಾಗೂ ಗಾಲಿಕ್ ಆಮ್ಲಗಳಂತಹ ಪಾಲಿಫಿನಾಲುಗಳಿವೆ. ಗ್ರೀನ್ ಟೀಯಿಂದ ದೊರಕುವ ಅನೇಕ ಆರೋಗ್ಯ ಪ್ರಯೋಜನಗಳಿಗೆ ಪ್ರಮುಖ ಕಾರಣ ಇದರಲ್ಲಿರುವ ಇಜಿಸಿಜಿ ಆಂಟಿ ಆಕ್ಸಿಡೆಂಟ್ ಅಂಶವೇ ಆಗಿದೆ.

ಇದನ್ನೂ ಓದಿ: Liver And Health: ಯಕೃತ್ತಿನ ಅನಾರೋಗ್ಯ ಈ ಸಮಸ್ಯೆಗಳನ್ನು ಹೆಚ್ಚಿಸುತ್ತದೆ, ಕೊಬ್ಬಿನ ಪಿತ್ತಜನಕಾಂಗ ಕಾಯಿಲೆ ತಪ್ಪಿಸುವ ಬಗೆ ಇಲ್ಲಿದೆ

ಪ್ರಯೋಜನಗಳು:

  • ಕ್ಯಾನ್ಸರ್ : ಟೆಸ್ಟ್ ಟ್ಯೂಬ್ ಪ್ರಯೋಗಗಳಲ್ಲಿ ಇಲ್ಲಿಯವರೆಗೆ ಗ್ರೀನ್ ಟೀನಲ್ಲಿರುವ ಇಜಿಸಿಜಿ ಅಂಶವು ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಗಟ್ಟಿ ಅವುಗಳನ್ನು ಕೊಲ್ಲಲು ಸಮರ್ಥವಾಗಿರುತ್ತವೆ ಎಂದು ತಿಳಿದುಬಂದಿದೆ. ಹಾಗಾಗಿ ಕ್ಯಾನ್ಸರ್ ಬರುವ ಅಪಾಯವನ್ನು ತಗ್ಗಿಸುವ ಅದ್ಭುತ ಸಾಧ್ಯತೆ ಗ್ರೀನ್ ಟೀ ಹೊಂದಿದೆ ಎನ್ನಬಹುದಾಗಿದೆ.

  • ಅಲ್ಝೈಮರ್ : ಅಲ್ಝೈಮರ್ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ಸಾಮಾನ್ಯವಾಗಿ ಎಮಿಲಾಯ್ಡ್ ಪ್ಲೇಕುಗಳು ಸಂಗ್ರಹಗೊಳ್ಳುತ್ತಿರುತ್ತವೆ. ಇದು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಗ್ರೀನ್ ಟೀನಲ್ಲಿರುವ ಇಜಿಸಿಜಿ ಅಂಶವು ಈ ಪ್ಲೇಕುಗಳ ಹಾನಿಗಳನ್ನು ಶಮನಗೊಳಿಸುವಲ್ಲಿ ಪರಿಣಾಮಕಾರಿಯಾಗಿದೆ.

  • ಲಿವರ್ ಸುರಕ್ಷತೆ : ಫ್ಯಾಟಿ ಲಿವರ್ ಆಗುವ ಅಪಾಯವನ್ನು ಇಜಿಸಿಜಿಯು ಗಮನಾರ್ಹವಾಗಿ ತಗ್ಗಿಸುತ್ತದೆ ಎನ್ನಲಾಗಿದೆ. ಇದು ಇಲಿಗಳ ಮೇಲೆ ಮಾಡಿರುವ ಪ್ರಯೋಗದಿಂದ ದೃಢಪಟ್ಟಿದೆ ಎನ್ನಲಾಗಿದೆ.

  • ಆಂಟಿ ಮೈಕ್ರೋಬಿಯಲ್ : ಈ ಆಂಟಿ ಆಕ್ಸಿಡೆಂಟ್ ಗುಣವುಳ್ಳ ಗ್ರೀನ್ ಟೀಯ ಇಜಿಸಿಜಿ ಅಂಶವು ಕೆಲ ಬ್ಯಾಕ್ಟೀರಿಯ ಕೋಶ ಗೋಡೆಗಳಿಗೆ ಹಾನಿ ಮಾಡಿ ವೈರಾಣುಗಳ ಪ್ರಸರಣಕ್ಕೆ ಅಡ್ಡಿ ಪಡಿಸುತ್ತವೆ ಎನ್ನಲಾಗಿದೆ.


ಇದರಲ್ಲಿರುವ ಇಜಿಸಿಜಿ ಮನುಷ್ಯನ ಮೆದುಳಿನಲ್ಲಿರುವ ರಿಸೆಪ್ಟರ್ ಗಳೊಂದಿಗೆ ಸಂವಹನ ನಡೆಸುವ ಮೂಲಕ ಒತ್ತಡ ನಿವಾರಿಸಿ ಆರಾಮದಾಯಕವಾದಂತಹ ಅನುಭವ ಕರುಣಿಸಲು ಶಕ್ತವಾಗಿದೆ.

ಬ್ಲ್ಯಾಕ್ ಟೀ
ಬ್ಲ್ಯಾಕ್ ಟೀನಲ್ಲಿ ಪ್ರಮುಖವಾಗಿ ಕಂಡುಬರುವ ಅಂಶವೆಂದರೆ ಥೆಫ್ಲಾವೀನುಗಳು. ಇದು ಪಾಲಿಫೇನಾಲುಗಳ ಅನನ್ಯ ಗುಂಪಾಗಿದ್ದು ಬ್ಲ್ಯಾಕ್ ಟೀನಲ್ಲಿ ಮಾತ್ರ ಕಂಡುಬರುತ್ತವೆ. ಆಕ್ಸಿಡೇಷನ್ ಪ್ರಕ್ರಿಯೆ ನಡೆದಾಗ ಇವು ಉತ್ಪತ್ತಿಯಾಗಿರುತ್ತವೆ. ಸಶಕ್ತ ಆಂಟಿ-ಆಕ್ಸಿಡೆಂಟ್ ಗುಣ ಹೊಂದಿರುವ ಥೆಫ್ಲಾವೀನುಗಳು ಆರೋಗ್ಯಕ್ಕೆ ಅನೇಕ ಬಗೆಯಲ್ಲಿ ಪ್ರಯೋಜನಗಳನ್ನು ಒದಗಿಸುತ್ತವೆ ಎನ್ನಲಾಗಿದೆ.

ಇದನ್ನೂ ಓದಿ:  Turmeric Water: ಅರಿಶಿನ ನೀರಿನ 6 ಆರೋಗ್ಯಕರ ಪ್ರಯೋಜನಗಳಿವು

ಪ್ರಯೋಜನಗಳು:

  • ಬ್ಲ್ಯಾಕ್ ಟೀನಲ್ಲಿರುವ ಥೆಫ್ಲಾವೀನುಗಳು ಮುಕ್ತ ಧಾತುಗಳೊಂದಿಗೆ ಹೋರಾಡುವ ಮೂಲಕ ನಿಮ್ಮಲ್ಲಿ ಅತ್ಯುತ್ತಮ ಆಂಟಿ ಆಕ್ಸಿಡೆಂಟ್ ಗುಣಗಳು ವೃದ್ಧಿಯಾಗುವಂತೆ ಸಹಕರಿಸುತ್ತವೆ.

  • ನಿಮ್ಮ ಹೃದಯ ಮತ್ತು ರಕ್ತನಾಳಗಳ ಸುರಕ್ಷತೆಗೆ ಬ್ಲ್ಯಾಕ್ ಟೀ ಸಹಕಾರಿಯಾಗಿದೆ.

  • ಪ್ರಾಣಿಗಳ ಮೇಲೆ ನಡೆಸಲಾದ ಒಂದು ಅಧ್ಯಯನದಲ್ಲಿ ಥೆಫ್ಲಾವೀನುಗಳು ರಕ್ತ ನಾಳಗಳಲ್ಲಿ ಪ್ಲೇಕ್/ಗಂಟುಗಳು ಉಂಟಾಗದಂತೆ ತಡೆಯಲು ಸಹಾಯ ಮಾಡುತ್ತವೆ ಎಂದು ಕಂಡುಕೊಳ್ಳಲಾಗಿದೆ.

  • ಇದಲ್ಲದೆ, ಥೆಫ್ಲಾವೀನುಗಳು ಕೊಲೆಸ್ಟ್ರಾಲುಗಳನ್ನು ತಗ್ಗಿಸುವುದಲ್ಲದೆ, ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಯಂತ್ರಣಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತದೆ ಎನ್ನಲಾಗಿದೆ.

  • ಬೊಜ್ಜನ್ನು ತ್ವರಿತವಾಗಿ ಕರಗಿಸುವ ಸಾಮರ್ಥ್ಯ ಹೊಂದಿರುವ ಬ್ಲ್ಯಾಕ್ ಟೀಯನ್ನು ಬೊಜ್ಜು ನಿರ್ವಹಣೆಯಲ್ಲೂ ಸಹ ಶಿಫಾರಸ್ಸು ಮಾಡಲಾಗುತ್ತದೆ ಎನ್ನಲಾಗಿದೆ.


ಒಟ್ಟಿನಲ್ಲಿ ಹೃದಯ ಸುರಕ್ಷತೆ, ಬೊಜ್ಜು ನಿರ್ವಹಣೆ, ಇತ್ಯಾದಿ ಆರೋಗ್ಯದ ಕೆಲ ಪ್ರಮುಖ ವಿಚಾರಗಳಿಗೆ ಸಂಬಂಧಿಸಿದಂತೆ ಬ್ಲ್ಯಾಕ್ ಹಾಗೂ ಗ್ರೀನ್ ಟೀ ಹೆಚ್ಚುಕಡಿಮೆ ಒಂದೇ ರೀತಿಯ ಪ್ರಯೋಜನಗಳನ್ನು ಹೊಂದಿವೆ ಎಂದೇ ಪರಿಣಿತರ ಅಭಿಪ್ರಾಯವಾಗಿದೆ.

ಒಂದೇ ರೀತಿಯ ಆರೋಗ್ಯ ಪ್ರಯೋಜನಗಳನ್ನೇ ಹೊಂದಿರುವ ಎರಡೂ ಟೀಗಳು
ಆದಾಗ್ಯೂ, ಕ್ಯಾಫಿನ್ ಪ್ರಮಾಣ ಹೆಚ್ಚು ಬಯಸದೆ ಇರುವವರು ಬ್ಲ್ಯಾಕ್ ಟೀಗೆ ಹೋಲಿಸಿದರೆ ಗ್ರೀನ್ ಟೀ ಬಳುಸುವುದು ಸೂಕ್ತ. ಕೆಲ ಸಂಶೋಧನೆಗಳು ಗ್ರೀನ್ ಟೀ, ಬ್ಲ್ಯಾಕ್ ಟೀಗಿಂತಲೂ ಅಧಿಕವಾದ ಆಂಟಿ-ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ ಎಂದು ತಿಳಿಸಿವೆ. ಇನ್ನು ಕೆಲವರು ಕಾಫಿನಲ್ಲಿರುವಂತಹ ಕ್ಯಾಫಿನ್ ಪ್ರಮಾಣ ಬಯಸುವುದಿಲ್ಲ, ಆದರೆ, ತಮ್ಮನ್ನು ತಾವು ಹುರುಪುಗೊಳಿಸಿಕೊಳ್ಳುವ ಮಟ್ಟಿಗೆ ಮಿತ ಪ್ರಮಾಣದ ಕ್ಯಾಫಿನ್ ಯುಕ್ತ ಪೇಯ ಕುಡಿಯಲು ಬಯಸುತ್ತಾರೆ. ಅಂತಹವರು ಬ್ಲ್ಯಾಕ್ ಟೀನತ್ತ ಹೊರಳಬಹುದು.

ಇದನ್ನೂ ಓದಿ:  Weight Loss Story: ಅತಿಯಾದ ತೂಕ ತಂದಿಟ್ಟ ಮುಜುಗರದಿಂದ ಜೀವನಶೈಲಿ ಬದಲಾಯಿಸಿಕೊಂಡ ಯುವತಿಯ ಸ್ಟೋರಿ ಇದು

ಒಟ್ಟಿನಲ್ಲಿ ಬ್ಲ್ಯಾಕ್ ಹಾಗೂ ಗ್ರೀನ್ ಟೀ ಹೆಚ್ಚು-ಕಡಿಮೆ ಒಂದೇ ರೀತಿಯ ಆರೋಗ್ಯ ಪ್ರಯೋಜನಗಳನ್ನೇ ಹೊಂದಿವೆ. ಅಷ್ಟಕ್ಕೂ ಇದನ್ನು ಅವರವರ ಸ್ವಾದಕ್ಕನುಸಾರವಾಗಿ ಸೇವಿಸಬಹುದು. ಆದರೆ ನೆನಪಿಡಿ, ಬ್ಲ್ಯಾಕ್ ಆಗಲಿ ಅಥವಾ ಗ್ರೀನ್ ಆಗಲಿ ಇವೆರಡೂ ಚಹಾ ಟ್ಯಾನಿನ್ ಅಂಶಗಳನ್ನು ಹೊಂದಿರುತ್ತವೆ ಹಾಗೂ ಈ ಟ್ಯಾನಿನ್ ಸಾಮಾನ್ಯವಾಗಿ ಮಿನೆರಲ್ ಗಳೊಂದಿಗೆ ಸೇರಿ ಅವುಗಳ ಹೀರಿಕೊಳ್ಳುವ ಸಾಮರ್ಥವನ್ನು ಕಡಿತಗೊಳಿಸುತ್ತವೆ. ಹಾಗಾಗಿ ಎರಡು ಊಟಗಳ ಮಧ್ಯದ ಅಂತರದಲ್ಲಷ್ಟೇ ಈ ಟೀಗಳನ್ನು ಸೇವಿಸಿ.
Published by:Ashwini Prabhu
First published: