Cryotherapy Benefits: ಕ್ರೈಯೊಥೆರಪಿಯಿಂದ ಸ್ನಾಯು ನೋವು, ಸಂಧಿವಾತ ವಾಸಿ! ಏನಿದು?

ಕ್ರೈಯೊಥೆರಪಿ ದೇಹ ಕಾಪಾಡಿಕೊಳ್ಳಲು ಸಹಕಾರಿ. ಕ್ರೈಯೊಥೆರಪಿಯನ್ನು ಶೀತ ಚಿಕಿತ್ಸೆ ಎಂದು ಕರೆಯುತ್ತಾರೆ. ಅನೇಕ ವೈದ್ಯರು ರೋಗಿಗಳ ಚಿಕಿತ್ಸೆಗೆ ಇದನ್ನು ಬಳಸುತ್ತಾರೆ. ಕ್ರೈಯೊಥೆರಪಿ ಮತ್ತು ಐಸ್ ಬಾತ್ ಎರಡೂ ವಿಭಿನ್ನವಾಗಿವೆ. ಕ್ರೈಯೊಥೆರಪಿಯು ಐಸ್ ಸ್ನಾನಕ್ಕಿಂತ ಹೆಚ್ಚಿನ ಪ್ರಯೋಜನ ನೀಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬಾಲಿವುಡ್ ಸೆಲೆಬ್ರಿಟಿ (Bollywood Celebrity) ಅಥವಾ ಹಾಲಿವುಡ್ ಸೆಲೆಬ್ರಿಟಿಯೇ ಆಗಿರಲಿ, ಪ್ರತಿಯೊಬ್ಬರೂ ನಾಯಕ ನಟರಂತೆ (Actor) ಬಾಡಿ ಬಿಲ್ಡ್ (Body Build) ಮಾಡುವ ಮೂಲಕ ಆಕರ್ಷಕವಾಗಿ ಕಾಣಲು ಬಯಸುತ್ತಾರೆ. ಸೆಲೆಬ್ರಿಟಿಗಳಂತೆ ಫಿಟ್‌ನೆಸ್ ಪಡೆಯಲು ಅನೇಕರು ತಮ್ಮ ಡಯಟ್ ಮತ್ತು ವರ್ಕೌಟ್ ಪ್ಲಾನ್ ಅನುಸರಿಸುತ್ತಾರೆ. ಆದರೂ ಸಹ ಅವರಂತೆ ದೇಹ ಬಿಲ್ಡ್ ಮಾಡಲು ಸಾಧ್ಯವಾಗಲ್ಲ. ಇದಕ್ಕೆ ಮುಖ್ಯ ಕಾರಣ ಅಂದ್ರೆ ಪ್ರತಿಯೊಬ್ಬ ವ್ಯಕ್ತಿಯ ದೇಹ, ಹಾರ್ಮೋನುಗಳು, ಜೀವನಶೈಲಿ. ಇದು ವ್ಯಕ್ತಿಯಿಂದ ವ್ಯಕ್ತಿಯಲ್ಲಿ ವಿಭಿನ್ನವಾಗಿರುತ್ತದೆ. ಆದ್ದರಿಂದ ಒಂದೇ ರೀತಿಯ ಆಹಾರ ಮತ್ತು ವ್ಯಾಯಾಮ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಒಂದೇ ರೀತಿಯ ಪರಿಣಾಮ ಬೀರುವುದಿಲ್ಲ.

    ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಕ್ರೈಯೊಥೆರಪಿ

    ವಿಶ್ವದ ಅತ್ಯುತ್ತಮ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ, ಕೆಲವು ಸಮಯದ ಹಿಂದೆ ತಮ್ಮ 11 ವರ್ಷದ ಮಗನೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಕ್ರೈಯೊಥೆರಪಿ ಚೇಂಬರ್‌ನ ಹೊರಗೆ ನಿಂತಿದ್ದಾರೆ.

    ಯೊಥೆರಪಿ ದೇಹ ಕಾಪಾಡಿಕೊಳ್ಳಲು ಸಹಕಾರಿ. ಇಂಡಿಪೆಂಡೆಂಟ್ ಡಾಟ್ ಕೋ.ಯುಕೆ ಪ್ರಕಾರ, ಅವರು ಈ ನಿರ್ದಿಷ್ಟ ಕೋಣೆಗೆ ಸುಮಾರು 48-50 ಲಕ್ಷ ರೂ. ಖರ್ಚು ಮಾಡಿದ್ದಾರೆ. ಹಾಗಿದ್ದರೆ ನಾವು ಇಲ್ಲಿ ಕ್ರೈಯೊಥೆರಪಿ ಚೇಂಬರ್ ಎಂದರೇನು ಮತ್ತು ಅದರ ವಿಶೇಷತೆಗಳ ಬಗ್ಗೆ ತಿಳಿಯೋಣ.

    ಇದನ್ನೂ ಓದಿ: ಎಣ್ಣೆಯುಕ್ತ ಮುಖದಲ್ಲಿ ಕಾಣಿಸುವ ಬಿಳಿ ಮೊಡವೆ ತೆಗೆಯಲು ಸುಲಭ ಟಿಪ್ಸ್, ಟ್ರೈ ಮಾಡಿ

    ಕ್ರೈಯೊಥೆರಪಿ ಎಂದರೇನು?

    ಕ್ರೈಯೊಥೆರಪಿಯನ್ನು ಶೀತ ಚಿಕಿತ್ಸೆ ಎಂದು ಕರೆಯುತ್ತಾರೆ. ಅನೇಕ ವೈದ್ಯರು ರೋಗಿಗಳ ಚಿಕಿತ್ಸೆಗೆ ಇದನ್ನು ಬಳಸುತ್ತಾರೆ. ಕ್ರೈಯೊಥೆರಪಿ ಮತ್ತು ಐಸ್ ಬಾತ್ ಎರಡೂ ವಿಭಿನ್ನವಾಗಿವೆ. ಕ್ರೈಯೊಥೆರಪಿಯು ಐಸ್ ಸ್ನಾನಕ್ಕಿಂತ ಹೆಚ್ಚಿನ ಪ್ರಯೋಜನ ನೀಡುತ್ತದೆ.

    ಜಪಾನಿನ ಸಂಧಿವಾತಶಾಸ್ತ್ರಜ್ಞ ತೋಶಿಮಾ ಯಮಗುಚಿ ಪರಿಚಯಿಸಿದರು

    ಕ್ರೈಯೊಥೆರಪಿಯನ್ನು 1970 ರ ದಶಕದಲ್ಲಿ ಜಪಾನಿನ ಸಂಧಿವಾತಶಾಸ್ತ್ರಜ್ಞ ತೋಶಿಮಾ ಯಮಗುಚಿ ರಚಿಸಿದರು. ಮತ್ತು 1980-1990 ರ ದಶಕದಲ್ಲಿ ಯುರೋಪ್, ಅಮೇರಿಕಾ ಮತ್ತು ಆಸ್ಟ್ರೇಲಿಯಾಕ್ಕೆ ಪರಿಚಯಿಸಿದರು. ಕ್ರೈಯೊಥೆರಪಿ ಸ್ನಾಯು ನೋವನ್ನು ನಿವಾರಣೆ ಮತ್ತು ಖಿನ್ನತೆ ಕಡಿಮೆ ಮಾಡಲು  ಬಳಸಲಾಗುತ್ತದೆ.

    ಕ್ರೈಯೊಥೆರಪಿಯನ್ನು ಮೃದು ಅಂಗಾಂಶಗಳ ಹಾನಿ ಸರಿಪಡಿಸಲು ಮತ್ತು ಸ್ನಾಯು ನೋವು ನಿವಾರಣೆ, ಉಳುಕು ಮತ್ತು ಊತ ಕಡಿಮೆ ಮಾಡಲು ಬಳಸುತ್ತಾರೆ. ಹೈಪೋಕ್ಸಿಕ್ ಕೋಶಗಳನ್ನು ಕೊಲ್ಲಲು, ಉರಿಯೂತ ಹೆಚ್ಚಿಸಲು ಮತ್ತು ಸ್ನಾಯು ಸೆಳೆತ ಕಡಿಮೆ ಮಾಡಲು ಕ್ರೈಯೊಥೆರಪಿ ಬಳಸುತ್ತಾರೆ.

    ಸ್ನಾಯು ಅಂಗಾಂಶದ ಉಷ್ಣತೆ ಕಡಿಮೆ ಮಾಡಲು ಸಹಕಾರಿ

    ಇದರಿಂದ ಸ್ನಾಯು ಅಂಗಾಂಶದ ಉಷ್ಣತೆ ಕಡಿಮೆಯಾಗಿ ಚೇತರಿಕೆ ವೇಗವಾಗುತ್ತದೆ. ಫಿಟ್‌ನೆಸ್ ಉದ್ಯಮದಲ್ಲಿ ಕ್ರೈಯೊಥೆರಪಿಯನ್ನು ವ್ಯಾಯಾಮದ ನಂತರ ವೇಗವಾಗಿ ಚೇತರಿಸಿಕೊಳ್ಳಲು ಕ್ರೀಡಾಪಟುಗಳು ದೀರ್ಘ ಕಾಲದವರೆಗೆ ಕ್ರೈಯೊಥೆರಪಿ ಬಳಸುತ್ತಾರೆ. ಕ್ರೈಯೊಥೆರಪಿಯನ್ನು ಫಿಟ್‌ನೆಸ್ ಉದ್ಯಮದಲ್ಲಿ ಕ್ರೈಯೊಥೆರಪಿ ಚೇಂಬರ್ ಅಥವಾ ಕ್ರಯೋಚೇಂಬರ್ ಆಗಿ ಬಳಸುತ್ತಾರೆ.

    ಕ್ರಯೋಚೇಂಬರ್ ಹೆಚ್ಚಾಗಿ ಟ್ಯೂಬ್-ಆಕಾರದಲ್ಲಿದೆ. ಇದರಲ್ಲಿ ಒಬ್ಬ ವ್ಯಕ್ತಿಯು ಆರಾಮವಾಗಿ ಕುಳಿತುಕೊಳ್ಳಬಹುದು. ಇದರ ಉಷ್ಣತೆಯು ಮೈನಸ್ 93 ಡಿಗ್ರಿ ಸೆಲ್ಸಿಯಸ್ ನಿಂದ ಮೈನಸ್ 150 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ. 3-5 ನಿಮಿಷಗಳಿಗಿಂತ ಹೆಚ್ಚು ಕಾಲ ಈ ಕೋಣೆಯಲ್ಲಿ ಕುಳಿತುಕೊಳ್ಳಬೇಡಿ.

    ಸ್ನಾಯು ನೋವು ಮತ್ತು ಕೀಲು ನೋವನ್ನು ಕಡಿಮೆ ಮಾಡಲು ಬಳಸುತ್ತಾರೆ

    ಸ್ನಾಯು ನೋವನ್ನು ಕಡಿಮೆ ಮಾಡಲು, ನೋವು ಪರಿಹಾರ ಮತ್ತು ಸ್ನಾಯು ನೋವು ವಾಸಿ ಮಾಡಲು ಕ್ರೈಯೊಥೆರಪಿ ಬಳಸುತ್ತಾರೆ. ಸ್ನಾಯುಗಳು ಅಥವಾ ಕೀಲುಗಳಲ್ಲಿ ನೋವು ಉಂಟಾದಾಗ ಐಸ್ ಪ್ಯಾಕ್ಗಳೊಂದಿಗೆ ಕುಗ್ಗಿಸಲು ವೈದ್ಯರು ಶಿಫಾರಸು ಮಾಡುತ್ತಾರೆ. ಆದರೆ ಐಸ್ ಪ್ಯಾಕ್‌ಗಳಿಗಿಂತ ಕ್ರೈಯೊಥೆರಪಿ ಸಾವಿರ ಪಟ್ಟು ಉತ್ತಮವಾಗಿದೆ.

    ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ

    ಕ್ರೈಯೊಥೆರಪಿ ತೂಕವನ್ನು ಕಡಿಮೆ ಮಾಡುವುದಿಲ್ಲ ಆದರೆ ತೂಕವನ್ನು ಕಳೆದುಕೊಳ್ಳುವ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ. ಹೆಚ್ಚು ಕ್ಯಾಲೊರಿಗಳನ್ನು ಸುಡುತ್ತದೆ. ಕೆಲ ನಿಮಿಷದ ಕ್ರೈಯೊಥೆರಪಿ ಚಯಾಪಚಯ ಹೆಚ್ಚಿಸುತ್ತದೆ.

    ಇದನ್ನೂ ಓದಿ: ವಯಸ್ಸಾಗುತ್ತಾ ಹೋದಂತೆ ಹೆಚ್ಚುವ ಬುದ್ಧಿಮಾಂದ್ಯತೆ ಕಡಿಮೆ ಮಾಡಲು ಯಾವ ವಿಧಾನ ಪ್ರಯೋಜನಕಾರಿ?

    ವ್ಯಾಯಾಮದ ನಂತರ ಸ್ನಾಯುಗಳು ಊದಿಕೊಳ್ಳುತ್ತವೆ. ಉರಿಯೂತವು ಕ್ಯಾನ್ಸರ್, ಮಧುಮೇಹ, ಖಿನ್ನತೆ, ಬುದ್ಧಿಮಾಂದ್ಯತೆ ಮತ್ತು ಸಂಧಿವಾತದಂತಹ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ಕ್ರೈಯೊಥೆರಪಿ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
    Published by:renukadariyannavar
    First published: