ಕಳಪೆ ಜೀವನಶೈಲಿ (Bad Lifestyle), ಕೆಟ್ಟ ಆಹಾರ ಪದ್ಧತಿ (Bad Food Habit), ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೇ ಇರುವುದು, ದೈಹಿಕ ಚಟುವಟಿಕೆ (Physical Activity) ಕೊರತೆ ಇದೆಲ್ಲವೂ ಜೀರ್ಣಾಂಗ ವ್ಯವಸ್ಥೆಯಲ್ಲಿ (Digestive System) ಅನೇಕ ರೀತಿಯ ಸಮಸ್ಯೆ ಉಂಟು ಮಾಡುತ್ತವೆ. ನಾವು ಆಗಾಗ್ಗೆ ಊಟೋಪಚಾರದಲ್ಲಿ ಮಾಡುವ ಕೆಲವು ತಪ್ಪುಗಳಿಂದಾಗಿ ಆಹಾರವು ನಮ್ಮ ಕರುಳಿನಲ್ಲಿ ಅಂಟಿಕೊಳ್ಳುತ್ತದೆ. ಕರುಳಿನ ಚಲನೆ ಸರಿಯಾಗಿರದೇ ಹೋದ್ರೆ ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯ ಹೆಚ್ಚುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಈ ಬಗ್ಗೆ ಗುರುಗ್ರಾಮ್ ಪಾರಸ್ ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಪಿಯೂಷ್ ಕುಮಾರ್ ಅಗರ್ವಾಲ್, ಕೊಲೊರೆಕ್ಟಲ್ ಕ್ಯಾನ್ಸರ್ ಎಂದರೇನು ಮತ್ತು ಅದಕ್ಕೆ ಕಾರಣಗಳೇನು ಎಂಬ ಬಗ್ಗೆ ಹೇಳಿದ್ದಾರೆ.
ಕೊಲೊರೆಕ್ಟಲ್ ಕ್ಯಾನ್ಸರ್ ಉಂಟಾಗಲು ಕಾರಣವೇನು?
ಡಾ. ಪಿಯೂಷ್ ಹೇಳುವ ಪ್ರಕಾರ, ಕೊಲೊರೆಕ್ಟಲ್ ಕ್ಯಾನ್ಸರ್ ಎಂಬುದು ಕೊಲೊನ್ ಅಥವಾ ಗುದನಾಳದ ಒಳ ಪದರದ ಮೇಲೆ ಬೆಳವಣಿಗೆ ಆಗುತ್ತದೆ. ಈ ಮೂಲಕ ರೂಪುಗೊಳ್ಳುತ್ತದೆ. ಇದನ್ನು ಪಾಲಿಪ್ಸ್ ಎಂದು ಸಹ ಕರೆಯುತ್ತಾರೆ. ಎಲ್ಲಾ ಸಮಯದಲ್ಲೂ ಪಾಲಿಪ್ಸ್, ಕ್ಯಾನ್ಸರ್ ಎಂದು ಹೇಳಲಾಗುವುದಿಲ್ಲ.
ಜೀರ್ಣಾಂಗ ವ್ಯವಸ್ಥೆಯಲ್ಲಿ ಕೊಲೊನ್ ಅಥವಾ ಗುದನಾಳವು ಪ್ರಮುಖ ಪಾತ್ರ ವಹಿಸುತ್ತೆ. ಕೊಲೊನ್ ಅಥವಾ ಗುದನಾಳವು ಒಟ್ಟಾಗಿ ದೊಡ್ಡ ಕರುಳನ್ನು ರೂಪಿಸುತ್ತದೆ. ಕೊಲೊನ್ ಅಥವಾ ಗುದನಾಳದ ಒಳ ಪದರದ ಮೇಲೆ ಬೆಳವಣಿಗೆಯಾದಾಗ ರೂಪುಗೊಳ್ಳುವ ಪಾಲಿಪ್ಸ್ ಯಾವ ಪ್ರಕಾರದಲ್ಲಿದೆ ಎಂಬುದು ಕ್ಯಾನ್ಸರ್ ಬೆಳವಣಿಗೆಯನ್ನು ಸೂಚಿಸುತ್ತದೆ.
ಕೊಲೊರೆಕ್ಟಲ್ ಕ್ಯಾನ್ಸರ್ ಕೊಲೊನ್ ಅಥವಾ ಗುದನಾಳದಲ್ಲಿ ಆರಂಭವಾಗಿ ಅದು ಕರುಳಿನ ಭಾಗಕ್ಕೆ ತಗುಲಿದರೆ ಅದನ್ನು ಕೊಲೊನ್ ಕ್ಯಾನ್ಸರ್ ಎಂದು ಕರೆಯುತ್ತಾರೆ. ಇನ್ನು ಗುದನಾಳದಲ್ಲಿ ಉಂಟಾಗುವ ಕ್ಯಾನ್ಸರ್ ನ್ನು ಗುದನಾಳದ ಕ್ಯಾನ್ಸರ್ ಎನ್ನುತ್ತಾರೆ. ಕರುಳಿನ ಕ್ಯಾನ್ಸರ್ ಮತ್ತು ಗುದನಾಳದ ಕ್ಯಾನ್ಸರ್ ನಡುವೆ ಸಾಕಷ್ಟು ಸಾಮ್ಯತೆಯಿದೆ. ಇವೆರಡನ್ನೂ ಒಟ್ಟಿಗೆ ಕೊಲೊರೆಕ್ಟಲ್ ಕ್ಯಾನ್ಸರ್ ಎಂದು ಕರೆಯುತ್ತಾರೆ.
ಕೊಲೊರೆಕ್ಟಲ್ ಕ್ಯಾನ್ಸರ್ ಲಕ್ಷಣಗಳು ಹೀಗಿವೆ
ಕರುಳಿನ ಅಭ್ಯಾಸದಲ್ಲಿ ಬದಲಾವಣೆಯಾಗುವುದು, ಮಲದಲ್ಲಿ ರಕ್ತ ಮತ್ತು ನೋವು, ತೂಕ ಇಳಿಕೆ, ಆಯಾಸವಾಗುವುದು.
ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯ ಹೆಚ್ಚಿಸುವ ಸಾಮಾನ್ಯ ತಪ್ಪುಗಳು ಹೀಗಿವೆ
ಕೆಂಪು ಮಾಂಸ ಸೇವನೆ
ಡಾ.ಪಿಯೂಷ್ ಪ್ರಕಾರ, ದೀರ್ಘಕಾಲ ಹೆಚ್ಚು ಕೆಂಪು ಮಾಂಸ ಸೇವಿಸಿದರೆ ಕೊಲೊರೆಕ್ಟಲ್ ಕ್ಯಾನ್ಸರ್ ಬರುವ ಅಪಾಯವಿದೆ. ಹೆಚ್ಚಿನ ತಾಪಮಾನದಲ್ಲಿ ಕೆಂಪು ಮಾಂಸವನ್ನು ಬೇಯಿಸಿದಾಗ, ನೈಟ್ರೈಟ್ ಉತ್ಪತ್ತಿಯಾಗುತ್ತವೆ. ಇವು ದೇಹದಲ್ಲಿ ಎನ್-ನೈಟ್ರೋಸೊ ಸಂಯುಕ್ತ ರಚಿಸುತ್ತವೆ. ಈ ರಾಸಾಯನಿಕವು ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ ಸಂಸ್ಕರಿಸಿದ ಮಾಂಸದಲ್ಲಿ ಈ ಅಪಾಯ ಹೆಚ್ಚು.
ಕಡಿಮೆ ಫೈಬರ್ ಆಹಾರ ಸೇವನೆ
ಆಹಾರದಲ್ಲಿ ಫೈಬರ್ ಕೊರತೆಯು ಜೀರ್ಣಾಂಗ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಇದು ಕರುಳಿನಲ್ಲಿ ಸಮಸ್ಯೆ ಉಂಟು ಮಾಡುತ್ತದೆ. ಕಡಿಮೆ ಫೈಬರ್ ಆಹಾರ ಸೇವನೆ ಮಾಡುವುದು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಳವಾಗಿ ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ.
ಮಧುಮೇಹ ಮೆಲ್ಲಿಟಸ್ ಅಪಾಯ
ಡಾ ಪಿಯೂಷ್ ಪ್ರಕಾರ, ಕರುಳಿನ ಕ್ಯಾನ್ಸರ್ ಸಾಮಾನ್ಯ ಜನರಿಗಿಂತ ಟೈಪ್ 2 ಮಧುಮೇಹ ಹೊಂದಿರುವ ಜನರಲ್ಲಿ ಹೆಚ್ಚಾಗಿ ಅಭಿವೃದ್ಧಿಯಾಗುವ ಅವಕಾಶ ಹೆಚ್ಚು. ಹೆಚ್ಚಿನ ಕೊಬ್ಬನ್ನು ಹೊಂದಿರುವ ಅಥವಾ ಬೊಜ್ಜು ಹೊಂದಿರುವವರಲ್ಲಿ ಕೊಲೊನ್ ಮತ್ತು ಗುದನಾಳದ ಕ್ಯಾನ್ಸರ್ ಅಪಾಯ ಹೆಚ್ಚು ಎಂದಿದ್ದಾರೆ.
ಇದನ್ನೂ ಓದಿ: ಮನೆಯಲ್ಲಿ ಹಿರಿಯರಿದ್ದಾರಾ? ಚಳಿಗಾಲದಲ್ಲಿ ಅವ್ರಿಗೆ ತಪ್ಪದೇ ಈ ಪದಾರ್ಥಗಳನ್ನು ನೀಡಿ
ಧೂಮಪಾನ ಮತ್ತು ಮದ್ಯಪಾನ, ಉರಿಯೂತದ ಕರುಳಿನ ಕಾಯಿಲೆ
ಕೊಲೊನ್ನಲ್ಲಿ ಪಾಲಿಪ್ಸ್ ಬೆಳೆಯಲು ಧೂಮಪಾನ ಅಥವಾ ಮದ್ಯಪಾನ ಸಹ ಕಾರಣವಾಗಿದೆ. ಉರಿಯೂತದ ಕರುಳಿನ ಕಾಯಿಲೆ ಹೊಂದಿರುವ ರೋಗಿಗಳು ಸಾಮಾನ್ಯ ಜನಸಂಖ್ಯೆಗಿಂತ ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯ ಹೆಚ್ಚು. ಉರಿಯೂತದ ಕರುಳಿನ ಕಾಯಿಲೆ ದೀರ್ಘಾವಧಿಯದ್ದಾಗಿದ್ದರೆ ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯ 7 ಪ್ರತಿಶತ ಹೆಚ್ಚಾಗುತ್ತದೆ. ಕುಟುಂಬದ ಇತಿಹಾಸವೂ ಕಾರಣವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ