Colitis: ಶಮಿತಾ ಶೆಟ್ಟಿಗೆ ಇರೋದು ಇದೇ ಖಾಯಿಲೆ ಅಂತೆ, ಅದಕ್ಕೆ ಅವ್ರು ಅನ್ನ ತಿನ್ನೋದೂ ಕಷ್ಟ!

ಬಿಗ್ ಬಾಸ್ ಮನೆಯನ್ನು ತಾತ್ಕಾಲಿಕವಾಗಿ ತೊರೆದಿದ್ದ ನಟಿ ಶಮಿತಾ ಶೆಟ್ಟಿ ಇತ್ತೀಚೆಗೆ ಟಾಪ್ 5 ಸ್ಪರ್ಧಿಗಳನ್ನು ಘೋಷಿಸುವ ಮುನ್ನ ಕಾರ್ಯಕ್ರಮಕ್ಕೆ ಮರಳಿದ್ದಾರೆ.ಒಂದು ಸಂಚಿಕೆಯಲ್ಲಿ, ಶೆಟ್ಟಿ ಸಹ-ಸ್ಪರ್ಧಿ ಅಕ್ಷರಾ ಸಿಂಗ್ ಅವರ ಬಳಿ  ಕರುಳಿನ ಉರಿಯೂತದ ಕಾಯಿಲೆಯಿಂದ ತಮ್ಮ ಸ್ಥಿತಿ ಹೇಗಾಗಿತ್ತು ಎಂದು ವಿವರಿಸಿದ್ದಾರೆ.

ನಟಿ ಶಮಿತಾ ಶೆಟ್ಟಿ

ನಟಿ ಶಮಿತಾ ಶೆಟ್ಟಿ

 • News18
 • Last Updated :
 • Share this:
  ಹಿಂದಿಯ ಬಿಗ್‌ ಬಾಸ್‌ 15ನೇ ಆವೃತ್ತಿಯಲ್ಲಿ ಇತ್ತೀಚೆಗೆ ಅನಾರೋಗ್ಯ ಸಮಸ್ಯೆಯಿಂದ ಹೊರಬಂದಿದ್ದ ಬಾಲಿವುಡ್‌ ನಟಿ ಶಮಿತಾ ಶೆಟ್ಟಿ(Shamita Shetty) ಮತ್ತೆ ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿ ಅವರು ಕೊಲೈಟಿಸ್ (colitis) ಎಂದು ಕರೆಯಲ್ಪಡುವ ಕರುಳಿನ ಉರಿಯೂತದ ಕಾಯಿಲೆಯಿಂದ ಹೇಗೆ ಸುಧಾರಿಸಿಕೊಂಡೆ ಎಂದು ತಮ್ಮ ಸಹಸ್ಪರ್ಧಿ ಜೊತೆ ಹಂಚಿಕೊಂಡಿದ್ದಾರೆ. ಕೊಲೈಟಿಸ್ ಎನ್ನುವುದು ದೊಡ್ಡ ಕರುಳಿನ ಒಳಗಿನ ಪದರ ಉರಿಯೂತವಾಗಿದೆ. ಸೋಂಕು, ರಕ್ತ ಸರಬರಾಜು ಕೆಟ್ಟದಾಗಿರುವುದು ಮತ್ತು ಪರಾವಲಂಬಿಯಿಂದಾಗಿ ಕರುಳಿನಲ್ಲಿ(intestines) ಉರಿಯೂತವು ಉಂಟಾಗುವುದು. ಇದನ್ನು ನೋಡಿಕೊಂಡು ಕೊಲೈಟಿಸ್ ನ್ನು ವಿವಿಧ ರೀತಿಯಲ್ಲಿ ವಿಂಗಡಿಸಲಾಗುತ್ತದೆ. ಕರುಳಿನ ಉರಿಯೂತದ ಕೆಲವು ಸಾಮಾನ್ಯ ಲಕ್ಷಣಗಳೆಂದರೆ(Infection) ಹೊಟ್ಟೆ ನೋವು, ಅತಿಸಾರ ಮತ್ತು ಸೆಳೆತ ಎನ್ನುತ್ತಾರೆ ತಜ್ಞರು. ಕರುಳಿನ ಒಂದು ಭಾಗಕ್ಕೆ ರಕ್ತ ಸಂಚಾರವು ಸರಿಯಾಗಿ ಇರದೆ ಇದ್ದರೆ ಅದನ್ನು ಇಸ್ಕೆಮಿಕ್ ಕೊಲೈಟಿಸ್ (ischemic colitis.)ಎಂದು ಕರೆಯಲಾಗುತ್ತದೆ.

  ಗ್ಲುಟನ್ ಮುಕ್ತ ಆಹಾರ
  ಬಿಗ್ ಬಾಸ್ ಮನೆಯನ್ನು ತಾತ್ಕಾಲಿಕವಾಗಿ ತೊರೆದಿದ್ದ ನಟಿ ಶಮಿತಾ ಶೆಟ್ಟಿ ಇತ್ತೀಚೆಗೆ ಟಾಪ್ 5 ಸ್ಪರ್ಧಿಗಳನ್ನು ಘೋಷಿಸುವ ಮುನ್ನ ಕಾರ್ಯಕ್ರಮಕ್ಕೆ ಮರಳಿದ್ದಾರೆ. ಒಂದು ಸಂಚಿಕೆಯಲ್ಲಿ, ಶೆಟ್ಟಿ ಸಹ-ಸ್ಪರ್ಧಿ ಅಕ್ಷರಾ ಸಿಂಗ್ ಅವರ ಬಳಿ  ಕರುಳಿನ ಉರಿಯೂತದ ಕಾಯಿಲೆಯಿಂದ ತಮ್ಮ ಸ್ಥಿತಿ ಹೇಗಾಗಿತ್ತು ಎಂದು ವಿವರಿಸಿದ್ದಾರೆ. 42ರ ಶೆಟ್ಟಿ ಸಾಮಾನ್ಯ ಊಟವನ್ನು ತಿನ್ನಲು ಸಾಧ್ಯವಾಗದ ಸ್ಥಿತಿಯಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡರು. ಅಲ್ಲದೇ ಅವರು ಗ್ಲುಟನ್ ಮುಕ್ತ ಆಹಾರವನ್ನು ಸೇವಿಸುವ ಬಗ್ಗೆ ತಿಳಿಸಿದರು.

  ಇದನ್ನು ಓದಿ: Hindi Bigboss: ಸಲ್ಮಾನ್​ ಖಾನ್​ ಜೊತೆ ತುಳು ಭಾಷೆಯಲ್ಲಿ ಮಾತನಾಡಿದ ಶಮಿತಾ ಶೆಟ್ಟಿ

  ವೈರಸ್, ಬ್ಯಾಕ್ಟೀರಿಯಾ ಮತ್ತು ಪರಾವಲಂಬಿಯಿಂದಾಗಿ ಕೊಲೈಟಿಸ್ ಸೋಂಕು ಉಂಟಾಗುವುದು. ಕಲುಷಿತ ನೀರು, ಆಹಾರ ಸಂಬಂಧಿ ಕಾಯಿಲೆ ಅಥವಾ ಸ್ವಚ್ಛತೆ ಇಲ್ಲದೆ ಇರುವುದರಿಂದಲೂ ಸೋಂಕಿನಿಂದ ಕೊಲೈಟಿಸ್ ಬರುವುದು ಇದೆ. ಐಬಿಡಿಯು ಜೀರ್ಣಕ್ರಿಯೆಯ ವ್ಯವಸ್ಥೆಯಲ್ಲಿ ಉರಿಯೂತವನ್ನು ಉಂಟು ಮಾಡುವುದು. ಐಬಿಡಿಗೆ ಪ್ರಮುಖ ಕಾರಣಗಳೆಂದರೆ ಕ್ರೋನ್ಸ್ ಮತ್ತು ಅಲ್ಸರೇಟಿವ್ ಕೊಲೈಟಿಸ್

  ಕರುಳಿನಲ್ಲಿ ಉರಿಯೂತ
  ಮೈಕ್ರೋಸ್ಕೋಪಿಕ್ ಕೊಲೈಟಿಸ್ (Microscopic Colitis) ಎನ್ನುವುದು ಲಿಂಫೋಸೈಟ್ಸ್ (Lymphocytes) ಹೆಚ್ಚಾಗುವ ಪರಿಣಾಮವಾಗಿ ಬರುವುದು. ಇದನ್ನು ಮೈಕ್ರೋಸ್ಕೋಪ್ ಮೂಲಕವಾಗಿ ಮಾತ್ರ ನೋಡಬಹುದಾಗಿದೆ. ಕೆಲವು ಜನರಲ್ಲಿ ಮಾತ್ರೆಗಳ ಅತಿಯಾಗಿ ಸೇವನೆಯಿಂದಾಗಿ ಕರುಳಿನಲ್ಲಿ ಉರಿಯೂತ ಕಾಣಿಸಿಕೊಳ್ಳುವುದು. ಕೊಲೈಟಿಸ್ ನ್ನು ಮಾತ್ರೆಗಳಲ್ಲಿ ಇರುವಂತಹ ಎನ್ ಎಸ್ ಎಐಡಿ ಬರುವುದು. ವಯಸ್ಸಾದವರು ಮತ್ತು ದೀರ್ಘಕಾಲದಿಂದ ಎನ್ ಎಸ್ ಎಐಡಿ ಬಳಸುವಂತಹ ಜನರಲ್ಲಿ ಔಷಧಿ ಸಂಬಂಧ ಕೊಲೈಟಿಸ್ ಕಂಡುಬರುವುದು. ವಿವಿಧ ಕಾರಣದಿಂದಾಗಿ ಕರುಳಿನ ಸೋಂಕು ಉಂಟಾಗುವುದು. ಸೋಂಕು ಭಿನ್ನವಾಗಿ ಇರುವ ಕಾರಣಧಿಂದಾಗಿ ಇದರ ಲಕ್ಷಣಗಳು ಕೂಡ ತುಂಬಾ ಭಿನ್ನವಾಗಿ ಇರಬಹುದು. ಕೆಲವೊಂದು ಲಕ್ಷಣಗಳು ಸಾಮಾನ್ಯವಾಗಿ ಇರುವ ಸಾಧ್ಯತೆಗಳು ಇವೆ. ಅವುಗಳು ಯಾವುವೆಂದರೆ ಮಲದಲ್ಲಿ ರಕ್ತದೊಂದಿಗೆ ಅತಿಸಾರ, ಹೊಟ್ಟೆ ನೋವು, ಜ್ವರ, ಮಲ ವಿಸರ್ಜನೆಗೆ ಅವಸರ, ವಾಕರಿಕೆ, ತೂಕ ಇಳಿಕೆ, ನಿಶ್ಯಕ್ತಿ ಎಂದು ಪೌಷ್ಟಿಕತಜ್ಞ ಡಾ. ಪೂಜಾ ಬೊಹೊರಾ ಹೇಳುತ್ತಾರೆ.

  ಆಹಾರ ಕ್ರಮದಲ್ಲಿ ಬದಲಾವಣೆ
  ಮೇಯೊ ಕ್ಲಿನಿಕ್ ಮತ್ತು ಕ್ರೋನ್ಸ್ ಮತ್ತು ಕೊಲೈಟಿಸ್ ಫೌಂಡೇಶನ್ ಪ್ರಕಾರ, ಗ್ಲುಟನ್ ಅನ್ನು ತೋರಿಸುವ ಯಾವುದೇ ಖಚಿತವಾದ ಪುರಾವೆಗಳಿಲ್ಲದಿದ್ದರೂ, IBD ರೋಗಲಕ್ಷಣಗಳು ಉಲ್ಬಣಗೊಳ್ಳುತ್ತಿದ್ದಂತೆ, IBD ಯೊಂದಿಗಿನ ಹೆಚ್ಚಿನ ಜನರು ಕೆಲವು ಆಹಾರಗಳು ಉಲ್ಬಣಗಳನ್ನು ಪ್ರಚೋದಿಸುತ್ತವೆ ಎಂದು ಕಂಡುಕೊಳ್ಳುತ್ತಾರೆ. ಮತ್ತು ನಿಮ್ಮ ಆಹಾರದಿಂದ ಆ ಉದ್ರೇಕಕಾರಿಗಳನ್ನು ಕಡಿತಗೊಳಿಸುವುದು ಸಹಾಯ ಮಾಡುತ್ತದೆ, ಇದು ಸೂಚಿಸುತ್ತದೆ.

  ಇದನ್ನು ಓದಿ: ಬಿಗ್​ಬಾಸ್​-15 ಹಿಂದಿ ಅವತರಣಿಕೆ: ಮತ್ತೆ ಬಂದ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಕಾಲೆಳೆದ ಟ್ರೋಲ್​ ಪಡೆ

  ಆಹಾರ ಕ್ರಮದಲ್ಲಿ ಬದಲಾವಣೆ ಮತ್ತು ಔಷಧಿಯಿಂದ ಹೆಚ್ಚಿನ ಕೊಲೈಟಿಸ್ ಸಮಸ್ಯೆ ನಿವಾರಣೆ ಆಗುವುದು. ಕೆಲವೊಂದು ಲಕ್ಷಣಗಳನ್ನು ಉಂಟು ಮಾಡುವಂತಹ ಕರುಳಿನ ಉರಿಯೂತವನ್ನು ಕಡಿಮೆ ಮಾಡುವುದು ಈ ಚಿಕಿತ್ಸೆಯ ಗುರಿಯಾಗಿದೆ ಎಂದು ತಜ್ಞರಯ ಎಚ್ಚರಿಸಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟ ಇರ್ಫಾನ್ ಖಾನ್ ಕರುಳಿನ ಸೋಂಕಿನಿಂದ ಮೃತಪಟ್ಟಿದ್ದರು.
  Published by:vanithasanjevani vanithasanjevani
  First published: