Hair Care Tips: ಕೊಲೆಸ್ಟ್ರಾಲ್ ಕೂದಲಿನ ಚಿಕಿತ್ಸೆ ಎಂದರೇನು? ಮನೆಯಲ್ಲಿಯೇ ಈ ಕ್ರೀಂ ತಯಾರಿಸುವುದು ಹೇಗೆ?

ಕೂದಲು ಉದುರುವಿಕೆ ತಡೆಯಲು ಕೆಲವು ಮನೆಮದ್ದುಗಳು ನಿಮಗೆ ಸಹಾಯ ಮಾಡುತ್ತದೆ. ಆದರೂ ಈ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಕೂದಲನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡಲು ಕೊಲೆಸ್ಟ್ರಾಲ್ ಕೂದಲಿನ ಚಿಕಿತ್ಸೆ ಪ್ರಯತ್ನಿಸಿ. ಮನೆಯಲ್ಲಿಯೂ ಕೊಲೆಸ್ಟ್ರಾಲ್ ಕೂದಲಿನ ಚಿಕಿತ್ಸೆ ಮಾಡಬಹುದು. ಇದಕ್ಕಾಗಿ ನಿಮಗೆ ಕೆಲವೇ ಪದಾರ್ಥಗಳು ಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ತಿನ್ನುವ ಆಹಾರ (Food), ಅನಾರೋಗ್ಯಕರ ಪದಾರ್ಥಗಳ (Unhealthy Ingredients) ಸೇವನೆ ಮಾಡುವುದು, ಕೆಟ್ಟ ಜೀವನಶೈಲಿ (Bad Lifestyle) ಮತ್ತು ಮಾಲಿನ್ಯ, ವಾತಾವರಣ, ಧೂಳು, ಕೊಳಕು, ಶಾಖ, ಚಳಿ, ಮಳೆ ಮತ್ತು ಸೂರ್ಯನ ಕಿರಣಗಳು ಸೇರಿದಂತೆ ಸಾಕಷ್ಟು ಅಂಶಗಳು ಕೂದಲು ಆರೈಕೆಗೆ ಸಾಕಷ್ಟು ಅಡ್ಡಿ ಉಂಟು ಮಾಡುತ್ತದೆ. ಕೂದಲು ಸಂಪೂರ್ಣವಾಗಿ ಒಣಗುವುದು ಮತ್ತು ಹಾನಿಯಾಗುವುದನ್ನು ತಡೆಯಲು ಕೆಲವು ಮನೆ ಮದ್ದುಗಳು ಮತ್ತು ಸಲಹೆಗಳನ್ನು ಪಾಲಿಸುವುದು ತುಂಬಾ ಅವಶ್ಯಕ. ಅಂತಹ ಸ್ಥಿತಿಯಲ್ಲಿ ನಿಮ್ಮ ಕೂದಲಿನ ಸೌಂದರ್ಯ ಮತ್ತು ಆರೋಗ್ಯವನ್ನು ಕಾಪಾಡುವುದು ತುಂಬಾ ಮುಖ್ಯ. ಮಾರುಕಟ್ಟೆಯಲ್ಲಿ ಸಿಗುವ ಅನೇಕ ರಾಸಾಯನಿಕ ಭರಿತ ಉತ್ಪನ್ನ ಬಳಕೆ ಮಾಡಿರಬಹುದು.

    ಕೊಲೆಸ್ಟ್ರಾಲ್ ಚಿಕಿತ್ಸೆ

    ಕೂದಲು ಉದುರುವಿಕೆ ತಡೆಯಲು ಕೆಲವು ಮನೆಮದ್ದುಗಳು ನಿಮಗೆ ಸಹಾಯ ಮಾಡುತ್ತದೆ. ಆದರೂ ಈ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಕೂದಲನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡಲು, ಕೊಲೆಸ್ಟ್ರಾಲ್ ಕೂದಲಿನ ಚಿಕಿತ್ಸೆ ಪ್ರಯತ್ನಿಸಿ.

    ಕೊಲೆಸ್ಟ್ರಾಲ್ ಪ್ರಾಣಿಗಳು ಮತ್ತು ಮಾನವರಲ್ಲಿ ಇರುವ ಮೇಣದಂಥ ಮತ್ತು ಕೊಬ್ಬಿನ ವಸ್ತು ಆಗಿದೆ. ದೇಹ ಮತ್ತು ಕೂದಲಿನ ಆರೋಗ್ಯ ಕಾಪಾಡಲು ಅವುಗಳನ್ನು ಬಳಕೆ ಮಾಡಬಹುದು. ಆದಾಗ್ಯೂ ಕೊಲೆಸ್ಟ್ರಾಲ್ ಹೇರ್ ಟ್ರೀಟ್ಮೆಂಟ್ ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.

    ಇದನ್ನೂ ಓದಿ: ನಾಲಿಗೆ ಮೇಲೆ ಈ ರೀತಿ ಆದಲ್ಲಿ ವಿಟಮಿನ್ ಡಿ ಕೊರತೆಯಂತೆ, ಎಚ್ಚರ ವಹಿಸಿ

    ಮನೆಯಲ್ಲಿಯೇ ಕೊಲೆಸ್ಟ್ರಾಲ್ ಕೂದಲಿನ ಚಿಕಿತ್ಸೆ ಮಾಡುವುದು

    ಪಾರ್ಲರ್‌ಗಳಲ್ಲಿ ಸುಲಭವಾಗಿ ಚಿಕಿತ್ಸೆ ಸಿಗುತ್ತದೆ. ಆದರೆ ಈ ಚಿಕಿತ್ಸೆಯು ತುಂಬಾ ದುಬಾರಿ ಆಗಿದೆ. ಇದು ನಿಮ್ಮ ಜೇಬಿಗೆ ಕತ್ತರಿ ಉಂಟು ಮಾಡುತ್ತದೆ. ಹಾಗಾಗಿ ನೀವು ಮನೆಯಲ್ಲಿಯೂ ಕೊಲೆಸ್ಟ್ರಾಲ್ ಕೂದಲಿನ ಚಿಕಿತ್ಸೆ ಮಾಡಬಹುದು. ಇದಕ್ಕಾಗಿ ನಿಮಗೆ ಕೆಲವೇ ಪದಾರ್ಥಗಳು ಬೇಕು.

    ಇವು ನಿಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುತ್ತವೆ. ಹಾಗಾದರೆ ಕೊಲೆಸ್ಟ್ರಾಲ್ ಚಿಕಿತ್ಸೆ ಎಂದರೇನು ಮತ್ತು ಅದು ಕೂದಲಿಗೆ ಅದು ಹೇಗೆ ಪ್ರಯೋಜನಕಾರಿ ಎಂದು ತಿಳಿಯೋಣ. ನಂತರ ಅದನ್ನು ಹೇಗೆ ಅನ್ವಯಿಸಬೇಕು ಎಂದು ತಿಳಿಯೋಣ.

    ಕೊಲೆಸ್ಟ್ರಾಲ್ ಹೇರ್ ಟ್ರೀಟ್ಮೆಂಟ್ ಎಂದರೇನು?

    ಕೊಲೆಸ್ಟ್ರಾಲ್ ಹೇರ್ ಟ್ರೀಟ್ ಮೆಂಟ್ ಕೂದಲಿನ ಆರೋಗ್ಯ ದೀರ್ಘಕಾಲ ಕಾಪಾಡುತ್ತದೆ. ಇದನ್ನು ತಯಾರಿಸಲು ಬಳಸುವ ಎಲ್ಲಾ ಪದಾರ್ಥಗಳು ಮೇಯನೇಸ್, ಮೊಟ್ಟೆಯ ಹಳದಿ ಲೋಳೆ ಮತ್ತು ಆಲಿವ್ ಎಣ್ಣೆ ಕೊಬ್ಬಿನಿಂದ ಸಮೃದ್ಧವಾಗಿವೆ. ಕೊಲೆಸ್ಟ್ರಾಲ್ ಚಿಕಿತ್ಸೆಯು ಹಾನಿಗೊಳಗಾದ ಕೂದಲನ್ನು ಸರಿಪಡಿಸುತ್ತದೆ.

    ಮತ್ತು ಶಾಖದಿಂದ ಹಾನಿಗೊಳಗಾದ ಕೂದಲನ್ನು ಪುನಃಸ್ಥಾಪಿಸುತ್ತದೆ. ಅಲ್ಲದೆ ಕೂದಲನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ. ಕೊಲೆಸ್ಟ್ರಾಲ್ ಕೂದಲಿನ ಚಿಕಿತ್ಸೆಯು ಕೂದಲಿನ ತೇವಾಂಶ ಸಂಗ್ರಹಿಸಲು ಸಹಾಯ ಮಾಡುತ್ತದೆ. ಅದೇ ವೇಳೆ ಹಾನಿಗೊಳಗಾದ ಮತ್ತು ನಿರ್ಜಲೀಕರಣಗೊಂಡ ಕೂದಲಿಗೆ ಇದು ಪ್ರಯೋಜನಕಾರಿ.

    ಕೂದಲಿನ ಆರೋಗ್ಯಕ್ಕೆ ಕೊಲೆಸ್ಟ್ರಾಲ್ ಚಿಕಿತ್ಸೆಯು ಹೇಗೆ ಪ್ರಯೋಜನಕಾರಿ?

    ಕೊಲೆಸ್ಟ್ರಾಲ್ ಚಿಕಿತ್ಸೆಯು ಕೂದಲನ್ನು ಮೃದುವಾಗಿಸುತ್ತದೆ. ಕೊಲೆಸ್ಟ್ರಾಲ್ ಕೂದಲಿನ ಹಾನಿ ತಡೆಯುತ್ತದೆ. ಮತ್ತು ಒಣ ಕೂದಲಿನ ಮೇಲೆ ರಕ್ಷಣಾತ್ಮಕ ಪದರ ಒದಗಿಸುತ್ತದೆ. ಇದು ಕೂದಲಿನ ಒರಟುತನ ಹೋಗಲಾಡಿಸುತ್ತದೆ. ಮತ್ತು ಕೂದಲು ಮೃದುವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.

     ಕೂದಲನ್ನು ಹೈಡ್ರೇಟ್ ಮಾಡುತ್ತದೆ

    ಕೊಲೆಸ್ಟ್ರಾಲ್ ಹೇರ್ ಟ್ರೀಟ್ಮೆಂಟ್ ಕೂದಲಿನ ತೇವಾಂಶ ಕಾಪಾಡುತ್ತದೆ. ಕೊಲೆಸ್ಟ್ರಾಲ್ ಕೂದಲಿನ ಚಿಕಿತ್ಸೆಯು ನಿಮ್ಮ ಕೂದಲಿನ ಮೃದುತ್ವ ಕಾಪಾಡುತ್ತದೆ.

    ಗುಂಗುರು ಕೂದಲಿಗೆ ಮೇದೋಗ್ರಂಥಿಗಳ ಸ್ರಾವ ಮತ್ತು ನೈಸರ್ಗಿಕ ಎಣ್ಣೆಯ ಕೊರತೆ ಕಾರಣ. ಕೊಲೆಸ್ಟ್ರಾಲ್ ಚಿಕಿತ್ಸೆಯಲ್ಲಿ ಇರುವ ತೈಲವು ಕೂದಲಿನ ಮೇದೋಗ್ರಂಥಿಗಳ ಸ್ರಾವ ಉಳಿಸುತ್ತದೆ. ಈಗ ನೀವು ಮನೆಯಲ್ಲಿ ಕೊಲೆಸ್ಟ್ರಾಲ್ ಕೂದಲಿನ ಚಿಕಿತ್ಸೆ ಹೇಗೆ ಮಾಡಬಹುದು ಎಂದು ತಿಳಿಯಿರಿ.

    ಕೊಲೆಸ್ಟ್ರಾಲ್ ಟ್ರೀಟ್ಮೆಂಟ್ ಹೇರ್ ಕ್ರೀಮ್ ಮನೆಯಲ್ಲೇ ತಯಾರಿಸಿ

    ಮೇಯನೇಸ್, ಆಲಿವ್ ಎಣ್ಣೆ ಬಳಸಿ ಕೊಲೆಸ್ಟ್ರಾಲ್ ಟ್ರೀಟ್ಮೆಂಟ್ ಹೇರ್ ಕ್ರೀಮ್ ತಯಾರಿಸಿ. ಇದನ್ನು ತಯಾರಿಸಲು ನಿಮ್ಮ ಕೂದಲಿನ ಉದ್ದ ಮತ್ತು ಸಾಂದ್ರತೆಗೆ ಅನುಗುಣವಾಗಿ ಮೇಯನೇಸ್ ಅನ್ನು ಬಟ್ಟಲಿನಲ್ಲಿ ತೆಗೆದುಕೊಳ್ಳಿ.

    ಇದನ್ನೂ ಓದಿ: ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ಮಜ್ಜಿಗೆ ಬಳಸ್ತೀರಾ? ಹಾಗಾದ್ರೆ ತಪ್ಪದೇ ಓದಿ

    ಈಗ ಅದಕ್ಕೆ ಆಲಿವ್ ಎಣ್ಣೆ ಮತ್ತು ಬಾದಾಮಿ ಎಣ್ಣೆ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಈ ರೀತಿ ಕೂದಲಿನ ಮೇಲೆ ಅನ್ವಯಿಸಿ. ಈ ಕ್ರೀಮ್ ಅನ್ನು ನಿಮ್ಮ ಕೂದಲಿಗೆ ಹಚ್ಚಿ. ಈಗ ನಿಮ್ಮ ಕೂದಲನ್ನು ಶವರ್ ಕ್ಯಾಪ್ನಿಂದ ಮುಚ್ಚಿ. ಕೂದಲಿನ ಮೇಲೆ 20 ರಿಂದ 25 ನಿಮಿಷ ಬಿಡಿ. ನಂತರ ಕೂದಲನ್ನು ಚೆನ್ನಾಗಿ ಶಾಂಪೂವಿನಿಂದ ತೊಳೆಯಿರಿ.
    Published by:renukadariyannavar
    First published: