Burnout Problem: ಬರ್ನೌಟ್ ಸಮಸ್ಯೆ ಎಂದರೇನು? ಮಾನಸಿಕವಾಗಿಯೂ ಭಾರೀ ಡೇಂಜರ್ ಇದು

ಬರ್ನೌಟ್ ಎಂಬುದು ಈಗ ಕೆಲಸದ ಸ್ಥಳದಲ್ಲಿ ಕೆಲಸಗಾರರನ್ನು ಬಹುವಾಗಿ ಕಾಡುವ ಸಮಸ್ಯೆ ಆಗಿದೆ. ಸರಿಯಾದ ಸಮಯಕ್ಕೆ ಮುಗಿಯದ ಕೆಲಸ, ಪೂರ್ಣವಾಗದ ಟಾರ್ಗೆಟ್ಸ್ ಎಂಪ್ಲಾಯಿಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಾಧಿಸುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೆಲಸದ (Work) ಸ್ಥಳದಲ್ಲಿ (Place) ವರ್ಕ್ ಲೋಡ್ (Work Load) ಹೆಚ್ಚಾದಾಗ ತುಂಬಾ ಸ್ಟ್ರೆಸ್ (Stress) ಆಗುತ್ತದೆ. ಒತ್ತಡ ಕೆಲಸಗಾರರನ್ನು (Employee) ಹೈರಾಣಾಗಿಸುತ್ತದೆ. ಅದೊಂದು ಮಾನಸಿಕ ವ್ಯಾಕುಲತೆ ಕಾಡಲು ಶುರುವಾಗಿ ಭಯ ಮೂಡುತ್ತದೆ. ಬರ್ನೌಟ್ ಎಂಬುದು ಈಗ ಕೆಲಸದ ಸ್ಥಳದಲ್ಲಿ ಕೆಲಸಗಾರರನ್ನು ಬಹುವಾಗಿ ಕಾಡುವ ಸಮಸ್ಯೆ ಆಗಿದೆ. ಸರಿಯಾದ ಸಮಯಕ್ಕೆ ಮುಗಿಯದ ಕೆಲಸ, ಪೂರ್ಣವಾಗದ ಟಾರ್ಗೆಟ್ಸ್ ಎಂಪ್ಲಾಯಿಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಾಧಿಸುತ್ತವೆ. ಬರ್ನೌಟ್ ಒಂದು ಸಮಸ್ಯೆಯಾಗಿದೆ. ಇದನ್ನು ಗುರುತಿಸುವುದು ಸುಲಭದ ಕೆಲಸವಲ್ಲ. ಬರ್ನೌಟ್ ಸಮಸ್ಯೆ ಇದು ಮನಸ್ಸು ಮತ್ತು ದೇಹದ ಮೇಲೆ ತುಂಬಾ ಕೆಟ್ಟ  ಪರಿಣಾಮ ಬೀರುತ್ತದೆ.

  ಕೆಲಸದ ಒತ್ತಡದಿಂದ ಇರುವ ಜನರಲ್ಲಿ ಬರ್ನೌಟ್ ಸಮಸ್ಯೆ

  ಸದಾ ಕೆಲಸದ ಒತ್ತಡದಿಂದ ಇರುವ ಜನರು ಬರ್ನೌಟ್ ಸಮಸ್ಯೆ ಎದುರಿಸುತ್ತಿದ್ದಾರೆ. ಇತ್ತ ಕೊರೊನಾ ಲಾಕ್ ಡೌನ್ ನಂತರ ಹೆಚ್ಚಿನ ಜನರು ತುಂಬಾ ಸಂದರ್ಭಗಳಲ್ಲಿ ಬರ್ನೌಟ್ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ಇಂದು ನಾವು ಇಲ್ಲಿ ಬರ್ನೌಟ್ ಲಕ್ಷಣಗಳು ಮತ್ತು ಅದನ್ನು ತಪ್ಪಿಸುವ ಮಾರ್ಗಗಳ ಬಗ್ಗೆ ತಿಳಿಸಲಿದ್ದೇವೆ.

  ಬರ್ನೌಟ್ ಸಮಸ್ಯೆ ಎಲ್ಲರಲ್ಲೂ ಒಂದಲ್ಲ ಒಂದು ಹಂತದಲ್ಲಿ ಅಥವಾ ಇನ್ಯಾವುದೋ ಕಾರಣಕ್ಕೆ ಸಂಭವಿಸಿರುತ್ತದೆ. ನಮ್ಮ ಜೀವನವು ಈ ಬರ್ನೌಟ್ ಸಮಸ್ಯೆ ನಿಭಾಯಿಸುವುದರಲ್ಲೇ ನಮಗೆ ಗೊತ್ತಾಗದಂತೆ ಮುಳುಗಿ ಬಿಟ್ಟಿರುತ್ತದೆ.

  ಇದನ್ನೂ ಓದಿ: ಗರ್ಭಾಶಯ ಡಿಡೆಲ್ಫಿಸ್ ಎಂದರೇನು? ಈ ಕಾಯಿಲೆ ಇದ್ದರೆ ಗರ್ಭಧಾರಣೆ ಕಷ್ಟಕರ ಏಕೆ?

  ಕೆಲಸ ಮಾಡುವುದು, ಇತರರಿಗೆ ಸಹಾಯ ಮಾಡುವುದು ಅಥವಾ ನಮ್ಮ ಕುಟುಂಬಗಳನ್ನು ನೋಡಿಕೊಳ್ಳುವುದು. ಕೆಲವೊಮ್ಮೆ ತುಂಬಾ ಕಾರ್ಯ ನಿರತರಾಗುವುದು ಹಾಗೂ ಒಂದು ಹೆಜ್ಜೆ ಹಿಂದಕ್ಕೆ ಹೋಗಿ ನಾವು ವಿಶ್ರಾಂತಿ ಪಡೆಯುವುದನ್ನೇ ಮರೆತು ಬಿಡುತ್ತೇವೆ. ಆಗ ಈ ಬರ್ನೌಟ್ ಸಮಸ್ಯೆ ಕಾಡುತ್ತದೆ.

  ಬರ್ನೌಟ್ ಮಾನಸಿಕ ಲಕ್ಷಣಗಳು

  ಬರ್ನೌಟ್ ನ ದೊಡ್ಡ ಮತ್ತು ಮೊದಲ ಮುಖ್ಯ ಲಕ್ಷಣವೆಂದರೆ

  - ವ್ಯಕ್ತಿಯಲ್ಲಿ ಯಾವುದೇ ಕೆಲಸ ಮಾಡುವ ಮನಸ್ಸು ಇರುವುದಿಲ್ಲ. ಹಾಗೆ ಕಣ್ಣುಗಳನ್ನು ಮುಚ್ಚಿ ಹಾಸಿಗೆಯ ಮೇಲೆ ಹಾಯಾಗಿ ಮಲಗಲು ಮನಸ್ಸಾಗುತ್ತದೆ.

  - ನೀವು ಎಲ್ಲಾ ಸಮಯದಲ್ಲೂ ಮಾನಸಿಕವಾಗಿ ದಣಿದಿರುತ್ತೀರಿ.

  - ಯಾವುದೇ ನಿರ್ಧಾರ ತೆಗೆದುಕೊಳ್ಳುವಲ್ಲಿ ತೊಂದರೆ ಅನುಭವಿಸುವುದು.

  - ನಿಮ್ಮಲ್ಲಿ ಹಿಂಜರಿಕೆ ಕಾಡುತ್ತದೆ.

  - ಮೂಡ್ ಸ್ವಿಂಗ್ಸ್ ಸಾಮಾನ್ಯ ಸಮಸ್ಯೆಯಾಗಿ ಕಾಡುತ್ತದೆ.

  - ಯಾವುದೇ ಕೆಲಸದಲ್ಲಿ ಏಕಾಗ್ರತೆ ಸಾಧಿಸಲು ತೊಂದರೆಯಾಗುವುದು

  - ಆತಂಕ ಮತ್ತು ಪ್ಯಾನಿಕ್ ಅಟ್ಯಾಕ್ ಸಮಸ್ಯೆ

  - ಅಭದ್ರತೆಯ ಭಾವನೆ ಕಾಡುವುದು

  - ನೀವು ಎಲ್ಲಾ ಸಮಯದಲ್ಲೂ ತೊಂದರೆಗೀಡಾಗುವುದು

  - ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ಕಡಿಮೆಯಾಗುವುದು

  ಅತಿ ಮತ್ತು ದೀರ್ಘ ಕಾಲದ ಭಾವನಾತ್ಮಕ, ದೈಹಿಕ ಮತ್ತು ಮಾನಸಿಕ ಒತ್ತಡದ ಪರಿಣಾಮ ಮತ್ತು ನೀವು ಜೀವನದ ನಿರಂತರ ಬೇಡಿಕೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಹೋದಾಗ ಬರ್ನೌಟ್ ಸಮಸ್ಯೆ ಉದ್ಭವಿಸುತ್ತದೆ.

  ದೈಹಿಕ ಲಕ್ಷಣಗಳು ಯಾವವು?

  - ಸಾರ್ವಕಾಲಿಕ ದಣಿದ ಭಾವನೆ ಉಂಟಾಗುತ್ತದೆ.

  - ಎಲ್ಲಾ ಸಮಯದಲ್ಲೂ ನಿದ್ದೆ ಬರುವ ಭಾವನೆ ಅಥವಾ ನಿದ್ದೆ ಮಾಡಲು ಸಾಧ್ಯವಾಗದಿರುವಿಕೆ

  - ನರಗಳ ಸೆಳೆತ

  - ಕರುಳಿನ ಮತ್ತು ಜೀರ್ಣಕಾರಿ ಸಮಸ್ಯೆ

  - ತ್ವರಿತ ಹೃದಯ ಬಡಿತ

  - ತ್ವರಿತ ಉಸಿರಾಟ

  - ಹೃದಯ ಬಡಿತ ಮತ್ತು ಉಸಿರಾಟ ದೀರ್ಘ ಮತ್ತು ಆಳವಾಗಿರುವುದು.

  ಬರ್ನೌಟ್ ಪರಿಹಾರ ಏನು?

  ಮೊದಲು ನಿಮ್ಮ ಕೆಲಸದ ಹೊರೆ ಕಡಿಮೆ ಮಾಡಲು ಪ್ರಯತ್ನಿಸಿ. ನಿಮ್ಮ ಕಾರ್ಯ, ಜವಾಬ್ದಾರಿಯನ್ನು ಆಪ್ತರ ಜೊತೆ ಶೇರ್ ಮಾಡಿ. ಕೆಲಸಕ್ಕೆ ಸಂಬಂಧಿಸಿದ ಒತ್ತಡ ಹೆಚ್ಚು ಇದ್ದರೆ ನಿಮ್ಮ ತಂಡದ ನಾಯಕ ಮತ್ತು ಸಹೋದ್ಯೋಗಿಗಳ ಜೊತೆ ಮುಕ್ತವಾಗಿ ಮಾತನಾಡಿ.

  ಇದನ್ನೂ ಓದಿ: ಬಾಲಿವುಡ್ ನಟಿ ಮಹಿಮಾ ಮಕ್ವಾನಾ ಗ್ಲಾಮರಸ್ ಲುಕ್ ಮತ್ತು ಅಂದದ ತ್ವಚೆಯ ರಹಸ್ಯ ಇಲ್ಲಿದೆ

  ಇದು ನಿಮ್ಮ ಬರ್ನೌಟ್ ಸಮಸ್ಯೆ ಪರಿಹಾರ ಮಾಡುವ ಮುಖ್ಯ ಪರಿಹಾರವಾಗಿದೆ. ಅಪಾಯವಿದೆ ಎಂದು ತೋರುತ್ತಿದ್ದರೆ ಮನೋವೈದ್ಯರನ್ನು ಭೇಟಿ ಮಾಡಿ.
  Published by:renukadariyannavar
  First published: