Cancer: ಮೂಳೆ ಕ್ಯಾನ್ಸರ್ ಎಂದರೇನು? ಲಕ್ಷಣಗಳು ಏನು?

Bone cancer: ಕ್ಯಾನ್ಸರ್ ಔಷಧಿಗಳ ಸೇವನೆ ಇವುಗಳಿಂದಲೂ ಮೂಳೆ ಕ್ಯಾನ್ಸರ್ ಉಂಟಾಗುತ್ತದೆ. ಮಕ್ಕಳು ಮತ್ತು ಯುವಜನರಲ್ಲಿ ಮೂಳೆಗಳು ಬೆಳವಣಿಗೆಯಾಗುತ್ತಿರುವುದರಿಂದ ಅವರು ಮೂಳೆ ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯ ಹೆಚ್ಚಾಗಿರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇತ್ತೀಚಿನ ದಿನಗಳಲ್ಲಿ ಬಿಪಿ(BP), ಶುಗರ್(Sugar) ನಂತೆಯೇ ಸಾಮಾನ್ಯವಾಗಿ ಕಂಡು ಬರುವ ಆರೋಗ್ಯ ಸಮಸ್ಯೆಗಳಲ್ಲಿ(Health Problem) ಕ್ಯಾನ್ಸರ್(Cancer) ಕೂಡ ಒಂದಾಗಿದೆ. .ಸಾಮಾನ್ಯವಾಗಿ ಈ ಕಾಯಿಲೆಯ ಬಗ್ಗೆ ಹಲವರಲ್ಲಿ ತಪ್ಪಾದ ಕಲ್ಪನೆ ಇದೆ. ಒಮ್ಮೆ ಈ ಕಾಯಿಲೆ ಬಂತೆಂದರೆ ಅದನ್ನು ಗುಣಪಡಿಸಲು ಸಾಧ್ಯವೇ ಇಲ್ಲ ಎಂದು ಕೆಲವರು ನಂಬಿದ್ದಾರೆ. ಇನ್ನೂ ಕೆಲವರು ಕ್ಯಾನ್ಸರ್ ಸಿರಿವಂತರ(Rich) ಕಾಯಿಲೆ, ಬಡವರು(Poor) ಇಂತಹ ಕಾಯಿಲೆಗೆ ಚಿಕಿತ್ಸೆ ಪಡೆಯಲು ಸಾಧ್ಯವೇ ಎಂದು ಯೋಚಿಸುವುದೂ ಉಂಟು. ಆದರೆ ಆರಂಭಿಕ ಹಂತದಲ್ಲಿಯೇ ಇದನ್ನು ಪತ್ತೆ ಹಚ್ಚಿದರೆ ಇದನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ವೈದ್ಯಕೀಯ ಜಗತ್ತು ಹೇಳುತ್ತದೆ.ಕ್ಯಾನ್ಸರ್‌ನಲ್ಲಿ ಹಲವು ವಿಧಗಳಿವೆ. ಅದರಲ್ಲಿ ಬ್ಲಡ್ ಕ್ಯಾನ್ಸರ್ ಲಂಗ್ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಸೇರಿ ಹೀಗೆ ನಾನಾ ಬಗೆಯ ಕ್ಯಾನ್ಸರ್ ಗಳಿವೆ.. ಇದಲ್ಲಿ ಮಾರಕ ಎನ್ನುವಂತಹ ಕ್ಯಾನ್ಸರ್ ಗಳಲ್ಲಿ ಮೂಳೆ ಕ್ಯಾನ್ಸರ್ ಕೂಡ ಒಂದು

  ಮೂಳೆ ಕ್ಯಾನ್ಸರ್ ಎಂದರೇನು..?

  ನಾರಿನ ಅಂಗಾಂಶ, ಕಾರ್ಟಿಲೆಜ್ ಮತ್ತು ಕ್ಯಾಲ್ಸಿಯಂ ಮೂಳೆಗಳನ್ನು ರೂಪಿಸುತ್ತದೆ, ಮತ್ತು ಕ್ಯಾನ್ಸರ್-ಕೋಶಗಳು ಈ ಭಾಗಗಳನ್ನು ಗುರಿಯಾಗಿಸುತ್ತವೆ. ಕ್ಯಾನ್ಸರ್ ಕೋಶಗಳು ನಿಷ್ಕರುಣೆಯಾಗುತ್ತವೆ ಮತ್ತು ಈ ಕ್ಯಾನ್ಸರ್ ಕಣಗಳು ಹರಡಿ ಮೂಳೆಗಳಿಗೆ ತಲುಪುತ್ತದೆ.

  ಇದು ಮೂಳೆ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಆಸ್ಟಿಯೊಸಾರ್ಕೊಮಾದ ಸಾಮಾನ್ಯವಾದದ್ದು,ಗೆಡ್ಡೆಯ ರೂಪ, ಇನ್ನೊಂದು ಕಾರ್ಟಿಲೆಜ್ ಮೇಲೆ, ಮೂರನೆಯದು ಮೂಳೆಯೊಳಗೆ ಬೆಳವಣಿಗೆಯಾಗುತ್ತದೆ, ಮತ್ತು ನಾಲ್ಕನೆಯದು ತಲೆಬುರುಡೆಯ ಬೇಸ್ ಮತ್ತು ಬೆನ್ನುಮೂಳೆಯ ಮೇಲೆ ಪರಿಣಾಮ ಬೀರುತ್ತದೆ.

  ಇದನ್ನೂ ಓದಿ: ಬೆಳ್​ ಬೆಳಗ್ಗೆ ತಲೆನೋವು ಬರೋದು ಇದೇ ಕಾರಣಕ್ಕೆ

  ಮೂಳೆ ಕ್ಯಾನ್ಸರ್ ವಿಧಗಳು..

  1)ಆಸ್ಟಿಯೋಸರ್ಕೋಮಾ: ಇದು ಅತ್ಯಂತ ಸಾಮಾನ್ಯ ರೂಪದ ಮೂಳೆ ಕ್ಯಾನ್ಸರ್ ಆಗಿದ್ದು,ಹೆಚ್ಚಾಗಿ 10ರಿಂದ 30 ವರ್ಷ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ. ಹೆಚ್ಚಾಗಿ ಕೈಗಳು,ಪಾದಗಳು ಮತ್ತು ಅಸ್ಥಿಕುಹರ ಮೂಳೆ ಕ್ಯಾನ್ಸರ್‌ಗೆ ಗುರಿಯಾಗುತ್ತದೆ

  2)ಇವಿಂಗ್ಸ್ ಸರ್ಕೋಮಾ: ಇದು ಕೂಡ ಹೆಚ್ಚಾಗಿ ಮಕ್ಕಳು ಮತ್ತು ಯುವಜನರಲ್ಲಿ ಕಾಣಿಸಿಕೊಳ್ಳುತ್ತದೆ. ಕೈಗಳು,ಕಾಲುಗಳು, ಎದೆ, ಅಸ್ಥಿ ಕುಹರ ಮತ್ತು ತೊಡೆಸಂಧಿಯಲ್ಲಿ ಇದು ಆರಂಭವಾಗುತ್ತದೆ.

  3)ಕೊಂಡ್ರೊ ಸರ್ಕೋಮಾ: 40 ವರ್ಷಕ್ಕಿಂತ ಹೆಚ್ಚಿನ ಪ್ರಾಯದವರು ಈ ವಿಧದ ಮೂಳೆಕ್ಯಾನ್ಸರ್‌ಗೆ ಗುರಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ಸಾಮಾನ್ಯವಾಗಿ ಕೈಗಳು,ಪಾದಗಳು ಮತ್ತು ಅಸ್ಥಿಕುಹರದಲ್ಲಿ ಕಾಣಿಸಿಕೊಳ್ಳುತ್ತದೆ.

  ಮೂಳೆ ಕ್ಯಾನ್ಸರ್ ಲಕ್ಷಣಗಳು

  1)ನಿರಂತರ ನೋವು: ಮೊಣಕೈ, ಗಂಟುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡರೆ ಸರಿಹೋಗುತ್ತದೆ. ಆದರೆ ಮೂಳೆಯ ಕ್ಯಾನ್ಸರ್​ ಆಗಿದ್ದರೆ ಮೊಣಕೈ ಸೇರಿದಂತೆ ದೇಹದ ಗಂಟುಗಳಲ್ಲಿ ವಿಪರೀತ ಮತ್ತು ನಿರಂತರ ನೋವು ಕಾಣಿಸಿಕೊಳ್ಳುತ್ತದೆ. ಈ ರೀತಿ ನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳಿತಾಗಿದೆ.

  2)ಮೂಳೆ ಮುರಿತ: ಕ್ಯಾನ್ಸರ್ ಗಡ್ಡೆಯು ಮೂಳೆಗಳನ್ನು ದುರ್ಬಲವಾಗಿಸುತ್ತದೆ,ಪರಿಣಾಮವಾಗಿ ಅದು ಸುಲಭವಾಗಿ ಮುರಿತಕ್ಕೊಳಗಾಗುತ್ತದೆ. ಯಾವುದೇ ಮೂಳೆಯ ಮೇಲೆ ಉಂಡೆ ಕಟ್ಟಿದಂತಹ ಬೆಳವಣಿಗೆ,ದಣಿವು,ಬಳಲಿಕೆ,ಮೂಳೆಯ ಭಾಗದಲ್ಲಿ ಊತ ಅಥವಾ ಕೆಂಪಗಾಗುವಿಕೆ,ಯಾವುದೇ ಕಾರಣವಿಲ್ಲದೆ ತೂಕ ಇಳಿಕೆ ಇವೆಲ್ಲ ಮೂಳೆ ಕ್ಯಾನ್ಸರ್‌ನ್ನು ಸೂಚಿಸಬಹುದು.

  3)ಮರಗಟ್ಟುವಿಕೆ: ಕೆಲವೊಮ್ಮೆ ನಿಶ್ಯಕ್ತಿಯಿಂದಲೂ ದೇಹದ ಭಾಗಗಳಲ್ಲಿ ಮರಗಟ್ಟುವಿಕೆ ಕಾಣಿಸಿಕೊಳ್ಳುತ್ತದೆ. ಇದು ಅತಿಯಾದರೆ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳುವುದು ಉತ್ತಮ. ಏಕೆಂದರೆ ಈ ರೀತಿ ದೇಹದ ವಿವಿಧ ಭಾಗಗಳಲ್ಲಿ ಆಗಾಗ ಮರಗಟ್ಟುವಿಕೆ ಕಾಣಿಸಿಕೊಳ್ಳುವುದೂ ಕೂಡ ಮೂಳೆಗಳ ಕ್ಯಾನ್ಸರ್​ನ ಒಂದು ಲಕ್ಷಣವಾಗಿದೆ. ಹೀಗಾಗಿ ಆರೊಗ್ಯ, ದೈನಂದಿನ ಚಲನವಲದಲ್ಲಿ ಸ್ವಲ್ಪ ಬದಲಾವಣೆಯಾಗುತ್ತಿದ್ದರೂ ಹೆಚ್ಚು ಗಮನಹರಿಸಿ.

  4)ಬಿಗಿತದ ಅನುಭವ: ಮೂಳೆಗಳಲ್ಲಿ ಆಗಾಗ ಬಿಗಿದ ಅನುಭವವಾಗುತ್ತದೆ. ಅಂದರೆ ಸಂಧಿಗಳಲ್ಲಿ ನೋವು ಕಾಣಿಸಿಕೊಂಡು ದೇಹದ ಭಾಗಗಳನ್ನು ಅಲುಗಾಡಿಸಲೂ ಕಷ್ಟ ಎನ್ನಿಸುವ ಸ್ಥಿತಿ ಎದುರಾಗುತ್ತದೆ. ಈ ರೀತಿಯ ಲಕ್ಷಣಗಳನ್ನು ನಿರ್ಲಕ್ಷಿಸಿವುದು ಒಳಿತಲ್ಲ. ಹೀಗಾಗಿ ಅಂತಹ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲೇಬೇಕು.

  5)ನೋವು: ಇದು ಮೊದಲ ಸಂಕೇತವಾಗಿದೆ. ನಿಧಾನವಾಗಿ ಆರಂಭಗೊಳ್ಳುವ ನೋವು ಕಾಲಕ್ರಮೇಣ ತೀವ್ರಗೊಳ್ಳುತ್ತದೆ ಮತ್ತು ಯಾವುದೇ ಚಿಕಿತ್ಸೆಗೂ ಬಗ್ಗುವುದಿಲ್ಲ. ಆದರೆ ಇಂತಹ ನೋವಿಗೆ ಕ್ಯಾನ್ಸರ್ ಅಲ್ಲದೆ ಸಂಧಿವಾತದಂತಹ ಇತರ ಕಾಯಿಲೆಗಳೂ ಕಾರಣವಾಗುತ್ತವೆ. ಹೀಗಾಗಿ ಇಂತಹ ನೋವಿನಿಂದ ನರಳುತ್ತಿದ್ದರೆ ಅದರ ಸ್ವರೂಪವನ್ನು ತಿಳಿದುಕೊಳ್ಳಲು ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ.

  ಇದನ್ನೂ ಓದಿ: ಜ್ಯೋತಿಷ್ಯದ ಪ್ರಕಾರ ದಂಪತಿಗಳು ವ್ಯಾಲೆಂಟೈನ್ಸ್​ ಡೇಯನ್ನು ಹೀಗೆ ಆಚರಿಸಬೇಕಂತೆ

  ಮೂಳೆ ಕ್ಯಾನ್ಸರ್ ಯಾವಾಗ ಉಂಟಾಗುತ್ತದೆ?

  ಮೂಳೆಗಳ ವಿರೂಪ ಮತ್ತು ಉರಿಯೂತ ಲಕ್ಷಣಗಳಿಂದ ಗುರುತಿಸಲಾಗುವ ಪ್ಯಾಗೆಟ್ಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳು ಈ ಪೈಕಿ ಯಾವುದೇ ಕ್ಯಾನ್ಸರ್‌ಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದಲ್ಲದೆ ಕ್ಯಾನ್ಸರ್‌ಗೆ ಚಿಕಿತ್ಸೆ,ವಿಕಿರಣಕ್ಕೆ ಹೆಚ್ಚು ಒಡ್ಡಿಕೊಳ್ಳುವಿಕೆ,ಕೆಲವು ಕ್ಯಾನ್ಸರ್ ಔಷಧಿಗಳ ಸೇವನೆ ಇವುಗಳಿಂದಲೂ ಮೂಳೆ ಕ್ಯಾನ್ಸರ್ ಉಂಟಾಗುತ್ತದೆ.

  ಮಕ್ಕಳು ಮತ್ತು ಯುವಜನರಲ್ಲಿ ಮೂಳೆಗಳು ಬೆಳವಣಿಗೆಯಾಗುತ್ತಿರುವುದರಿಂದ ಅವರು ಮೂಳೆ ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯ ಹೆಚ್ಚಾಗಿರುತ್ತದೆ.
  Published by:ranjumbkgowda1 ranjumbkgowda1
  First published: