ಹಲವು ರೀತಿಯ ಕ್ಯಾನ್ಸರ್ ಗಳಿವೆ (Cancer) ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕ್ಯಾನ್ಸರ್ ಗಳಲ್ಲಿ ಕೆಲವು ಆರಂಭಿಕ ಹಂತದಲ್ಲಿ ಲಕ್ಷಣಗಳನ್ನು (Symptoms) ತೋರಿಸುತ್ತವೆ. ಇದರಿಂದ ರೋಗಿಯು (Patient) ಬೇಗ ತಪಾಸಣೆ ಮೂಲಕ ಕ್ಯಾನ್ಸರ್ ಪತ್ತೆ ಮಾಡಬಹುದು. ಇನ್ನು ಕೆಲವು ಕ್ಯಾನ್ಸರ್ ಗಳಲ್ಲಿ ಯಾವುದೇ ಲಕ್ಷಣಗಳು ಪತ್ತೆಯಾಗಲ್ಲ. ಕ್ಯಾನ್ಸರ್ ಕೊನೆಯ ಹಂತಕ್ಕೆ ತಲುಪಿದಾಗ ಗೊತ್ತಾಗುತ್ತದೆ. ಆಗ ಸರಿಯಾಗಿ ಚಿಕಿತ್ಸೆ (Treatment) ಪಡೆಯಲು ಸಾಧ್ಯವಾಗಲ್ಲ. ಕೆಲವು ಕ್ಯಾನ್ಸರ್ ಗಳನ್ನು ಸಕಾಲದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಗುಣಪಡಿಸಬಹುದು. ಇನ್ನು ಕೆಲವು ಕ್ಯಾನ್ಸರ್ ಕಾಯಿಲೆಯನ್ನು (Disease) ಗುಣಪಡಿಸಲು ಸಾಧ್ಯವಿಲ್ಲ. ಇದು ಮಾರಣಾಂತಿಕ. ಅದಾಗ್ಯೂ ಕ್ಯಾನ್ಸರ್ ಗೆ ಯಾವುದೇ ರೀತಿಯ ಚಿಕಿತ್ಸೆ ಇಲ್ಲ.
ಮೂತ್ರಕೋಶದ ಕ್ಯಾನ್ಸರ್
ಸರಿಯಾದ ಚಿಕಿತ್ಸೆ, ಆತ್ಮಸ್ಥೈರ್ಯ, ಉತ್ತಮ ಜೀವನಶೈಲಿ ಮತ್ತು ಆಹಾರದ ಮೂಲಕ ಕಡಿಮೆ ಮಾಡಬಹುದಾಗಿದೆ. ಅನೇಕ ರೀತಿಯ ಕ್ಯಾನ್ಸರ್‌ಗಳಿವೆ. ಅದರಲ್ಲಿ ಮೂತ್ರಕೋಶದ ಕ್ಯಾನ್ಸರ್ ಕೂಡ ಒಂದು. ಮೂತ್ರಕೋಶ ದೇಹದ ಒಂದು ಪ್ರಮುಖ ಅಂಗ. ಇದು ದೇಹದ ತ್ಯಾಜ್ಯ ಮೂತ್ರವನ್ನು ಹೊರಗೆ ಹಾಕಲು ಸಹಾಯ ಮಾಡುತ್ತದೆ.
ಮೂತ್ರದಲ್ಲಿ ಅನೇಕ ರೀತಿಯ ತ್ಯಾಜ್ಯಗಳು ಇವೆ. ಇದೆಲ್ಲವೂ ಇದು ಮೂತ್ರಕೋಶದಲ್ಲಿ ಸಂಗ್ರಹವಾಗುತ್ತದೆ. ಈ ಅಂಶವು ಮೂತ್ರದ ಮೂಲಕ ಹೊರಗೆ ಹೋಗದೇ ಇದ್ದರೆ ಮೂತ್ರಕೋಶ, ಮೂತ್ರಪಿಂಡ, ಮೂತ್ರನಾಳ ಅಂಗಗಳು ಹಾನಿಗೆ ಒಳಗಾಗುತ್ತವೆ.
ಮೂತ್ರಕೋಶದ ಕ್ಯಾನ್ಸರ್ ಯುರೋಥೆಲಿಯಲ್ ಕೋಶಗಳಲ್ಲಿ ಪ್ರಾರಂಭವಾಗುತ್ತದೆ. ಇವು ಗಾಳಿಗುಳ್ಳೆಯ ಒಳಭಾಗದಲ್ಲಿರುವ ಜೀವಕೋಶಗಳು. ಈ ಕೋಶಗಳು ಮೂತ್ರಪಿಂಡಗಳು ಮತ್ತು ಮೂತ್ರನಾಳಗಳಲ್ಲಿಯೂ ಇವೆ. ಇವು ಮೂತ್ರಕೋಶಕ್ಕೆ ಸಂಪರ್ಕ ಹೊಂದಿವೆ. ಹೀಗಾಗಿ ಕಿಡ್ನಿ ಮತ್ತು ಮೂತ್ರನಾಳದ ಕ್ಯಾನ್ಸರ್ ಕೂಡ ಉಂಟಾಗಬಹುದು.
ಡಾ.ಪಿ.ಪಿ.ಸಿಂಗ್ ಅವರು ಮೂತ್ರಕೋಶ ಕ್ಯಾನ್ಸರ್ ನ ರೋಗ ಲಕ್ಷಣಗಳನ್ನು ಸಕಾಲದಲ್ಲಿ ಪತ್ತೆ ಹಚ್ಚಿದರೆ ಮೂತ್ರಕೋಶದ ಕ್ಯಾನ್ಸರ್ ಗುಣಪಡಿಸಬಹುದು ಎಂದು ಹೇಳಿದ್ದಾರೆ. ಇಲ್ಲಿ ನಾವು ಮೂತ್ರಕೋಶ ಕ್ಯಾನ್ಸರ್ ಲಕ್ಷಣಗಳು ಯಾವುವು ಎಂದು ನೋಡೋಣ.
ಮೂತ್ರಕೋಶ ಕ್ಯಾನ್ಸರ್ ಲಕ್ಷಣಗಳು ಯಾವವು?
ಮೂತ್ರದಲ್ಲಿ ರಕ್ತ ಹೋಗುವುದು, ಮೂತ್ರದ ಬಣ್ಣ ಮತ್ತು ಕೆಂಪು ಅಥವಾ ಕೋಲಾ ರೂಪದಲ್ಲಿ ಹೋಗುವುದು, ಇನ್ನು ಕೆಲವೊಮ್ಮೆ ಮೂತ್ರವು ಸಾಮಾನ್ಯವಾಗಿ ಹೋಗುತ್ತದೆ. ಇದನ್ನು ಟೆಸ್ಟ್ ಮಾಡಲು ಪ್ರಯೋಗಾಲಯದಲ್ಲಿ ರಕ್ತ ಕಂಡು ಹಿಡಿಯುತ್ತಾರೆ. ಆಗಾಗ್ಗೆ ಮೂತ್ರ ವಿಸರ್ಜನೆಗೆ ಹೋಗುವುದು, ಮೂತ್ರ ವಿಸರ್ಜನೆ ವೇಳೆ ನೋವು, ಬೆನ್ನು ನೋವು ಲಕ್ಷಣಗಳು ಕಂಡು ಬರುತ್ತವೆ.
ಮೂತ್ರಕೋಶ ಕ್ಯಾನ್ಸರ್ ಗೆ ಕಾರಣಗಳು ಯಾವವು?
ಜೀವಕೋಶಗಳು ತಮ್ಮ ಡಿಎನ್ಎಯನ್ನು ಬದಲಾಯಿಸಿದರೆ ಮೂತ್ರಕೋಶ ಕ್ಯಾನ್ಸರ್ ಉಂಟಾಗುತ್ತದೆ. ಈ ಜೀವಕೋಶಗಳು ಬಹಳ ವೇಗವಾಗಿ ಬೆಳೆಯುತ್ತವೆ. ಜೊತೆಗೆ ಆರೋಗ್ಯಕರ ಕೋಶಗಳನ್ನು ನಾಶ ಮಾಡುತ್ತವೆ. ವೇಗವಾಗಿ ಬೆಳೆಯುತ್ತಿರುವ ಕೋಶಗಳು ಗಡ್ಡೆ ಉಂಟು ಮಾಡುತ್ತವೆ. ಸಾಮಾನ್ಯ ದೇಹದ ಅಂಗಾಂಶವನ್ನು ಆಕ್ರಮಣ ಮಾಡಿ, ಹಾನಿಗೊಳಿಸುತ್ತವೆ.
ಮೂತ್ರಕೋಶ ಕ್ಯಾನ್ಸರ್ ಅಪಾಯ ಯಾರಿಗೆ ಹೆಚ್ಚು?
ಮೂತ್ರಕೋಶ ಸೋಂಕಿನಿಂದ ಬಳಲುತ್ತಿರುವ ಜನರು ಹೆಚ್ಚು ಅಪಾಯದಲ್ಲಿದ್ದಾರೆ. ಧೂಮಪಾನ ಮಾಡುವವರು, ವಯಸ್ಸಾದವರು, ಪುರುಷರು, ವಿವಿಧ ರೀತಿಯ ರಾಸಾಯನಿಕ ಪದಾರ್ಥಗಳಿಗೆ ಒಡ್ಡಿಕೊಳ್ಳುವುದು, ಕ್ಯಾನ್ಸರ್ಗೆ ಚಿಕಿತ್ಸೆ ಪಡೆದವರು ಮೂತ್ರಕೋಶ ಕ್ಯಾನ್ಸರ್ ಅಪಾಯ ಹೆಚ್ಚು.
ಮೂತ್ರಕೋಶ ಕ್ಯಾನ್ಸರ್ ತಡೆಗಟ್ಟುವ ಮಾರ್ಗಗಳು
ಮೂತ್ರಕೋಶ ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಧೂಮಪಾನ ತ್ಯಜಿಸಿ. ರಾಸಾಯನಿಕಗಳ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಿ. ಆಹಾರದಲ್ಲಿ ವಿವಿಧ ವರ್ಣರಂಜಿತ ಹಣ್ಣುಗಳು ಮತ್ತು ತರಕಾರಿ ಸೇರಿಸಿ. ಇವು ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಹೊಟ್ಟೆಯಲ್ಲಿ ಇಲಿ ಓಡಾಡಿದಂತೆ ಅನಿಸುತ್ತಾ? ಹಾಗಾದ್ರೆ ಈ ಹೆಲ್ದೀ ಡ್ರಿಂಕ್ ಕುಡಿಯಿರಿ
ಯಾವಾಗ ವೈದ್ಯರ ಬಳಿಗೆ ಹೋಗಬೇಕು?
ಮೂತ್ರದ ಬಣ್ಣ ಬದಲಾಗುತ್ತಿದೆದ್ದರೆ, ರಕ್ತ ಹೋದರೆ ವೈದ್ಯರ ಬಳಿಗೆ ಹೋಗಬೇಕು. ಮೇಲೆ ತಿಳಿಸಿದ ರೋಗಲಕ್ಷಣಗಳು ಕಾಣಿಸಿದರೆ ಪರೀಕ್ಷೆ ಮಾಡಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ