Parenting: ಮಕ್ಕಳನ್ನು ಹೇಗೆ ಬೆಳೆಸೋದು? ಉತ್ತಮ ಪೋಷಕರಾಗಲು ಏನ್ ಮಾಡ್ಬೇಕು ಗೊತ್ತಾ? ಈ ಟಿಪ್ಸ್ ಫಾಲೋ ಮಾಡಿ

ಅಧ್ಯಯನಗಳ ಪ್ರಕಾರ, ಅಸಮರ್ಪಕ ಪೋಷಣಾ ಶೈಲಿಯು, ನಿರ್ದಿಷ್ಟವಾಗಿ ಹೇಳುವುದಾದಲ್ಲಿ ಮಕ್ಕಳ ಮೇಲೆ ಬಾಲಾಪರಾಧಕ್ಕೆ ಕಾರಣವಾಗುವ ಬಾಹ್ಯ ವರ್ತನೆಯ ದೊಡ್ಡ ಕಾರಣಗಳಲ್ಲಿ ಒಂದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಕ್ಕಳ ಪರಿಪಾಲನೆ (Child Care) ಅನ್ನುವುದು ತುಂಬಾ ವೈಯಕ್ತಿಕ ವಿಚಾರ. ಹಾಗೆಯೇ ತಮ್ಮ ಮಕ್ಕಳನ್ನು ಯಾವ ರೀತಿಯಲ್ಲಿ ಬೆಳೆಸಬೇಕು ಎಂದು ನಿರ್ಧರಿಸುವ ಹಕ್ಕು ಪ್ರತಿಯೊಬ್ಬ ಹೆತ್ತವರಿಗೂ (Parenting) ಇದೆ ಅಲ್ಲವೇ..?ಇದರ ಹೊರತಾಗಿಯೂ, ತಜ್ಞರು ಇದನ್ನು ನಮ್ಮ ಸಮಾಜ ಎದುರಿಸುತ್ತಿರುವ ಅತ್ಯಂತ ಕ್ಲಿಷ್ಟ ಸಮಸ್ಯೆಗಳಲ್ಲಿ ಒಂದು ಎಂದು ಪರಿಗಣಿಸುತ್ತಾರೆ.ಅಸಮರ್ಪಕ ಪೋಷಕತ್ವವು ಕೇವಲ ಮಕ್ಕಳ ಮೇಲೆ ಮಾತ್ರವಲ್ಲದೆ ಇಡೀ ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ದೈಹಿಕ ಕಿರುಕುಳ (Physical Abuse) ಅಥವಾ ಭಾವನಾತ್ಮಕ ನಿರ್ಲಕ್ಷ್ಯದಂತಹ ಅಸಮರ್ಪಕ ಪೋಷಕತ್ವವು ಮಗುವಿನ ಬೆಳವಣಿಗೆಯ (Development) ಮೇಲೆ ಹಾನಿಯನ್ನುಂಟು ಮಾಡುವುದರ ಜೊತೆಗೆ ಇತರರನ್ನು ಕೂಡ ಅಪಾಯಕ್ಕೆ ತಳ್ಳಬಹುದು.

ಅಸಮರ್ಪಕ ಪಾಲನಾ ಶೈಲಿ
ಮಾನಸಿಕ ಆರೋಗ್ಯ 2 ಮತ್ತು ಬೆಳವಣಿಗೆಯ 3 ರಂತಹ ಸಮಸ್ಯೆಗಳು ಪೋಷಕರ ಅಸಮರ್ಪಕ ಪಾಲನಾ ಶೈಲಿಗೆ ಸಂಬಂಧಿಸಿವೆ. ಅಸಮರ್ಪಕ ಪೋಷಣಾ ಶೈಲಿಯು ಎರಡು ಪ್ರಮುಖ ಮಾನಸಿಕ ಆರೋಗ್ಯ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.

ಖಿನ್ನತೆ, ಆತಂಕ ಮತ್ತು ವ್ಯಕ್ತಿತ್ವ ಅಸ್ವಸ್ಥತೆಗಳಂತಹ ಆಂತರಿಕ ಸಮಸ್ಯೆಗಳು ಹಾಗೆಯೇ ಆಕ್ರಮಣಕಾರಿ ನಡವಳಿಕೆ ಮತ್ತು ಹಿಂಸಾಚಾರದಂತಹ ಬಾಹ್ಯ ಸಮಸ್ಯೆಗಳು. ಅಧ್ಯಯನಗಳ ಪ್ರಕಾರ, ಅಸಮರ್ಪಕ ಪೋಷಣಾ ಶೈಲಿಯು, ನಿರ್ದಿಷ್ಟವಾಗಿ ಹೇಳುವುದಾದಲ್ಲಿ ಮಕ್ಕಳ ಮೇಲೆ ಬಾಲಾಪರಾಧಕ್ಕೆ ಕಾರಣವಾಗುವ ಬಾಹ್ಯ ವರ್ತನೆಯ ದೊಡ್ಡ ಕಾರಣಗಳಲ್ಲಿ ಒಂದಾಗಿದೆ.

ಸುರಕ್ಷತೆಯ ಮೇಲೆ ಪರಿಣಾಮ
ಕೆಟ್ಟ ಬಾಲ್ಯವನ್ನು ಹೊಂದಿದ ಮಕ್ಕಳು ಪ್ರೌಢಾವಸ್ಥೆಗೆ ತಲುಪಿದಾಗ ಅಪರಾಧಿಗಳು, ಮಾದಕ ವ್ಯಸನಿಗಳು ಅಥವಾ ಮದ್ಯದ ವ್ಯಸನಿಗಳಾಗುವ ಸಾಧ್ಯತೆಗಳು ಹೆಚ್ಚು. ಹದಿಹರೆಯದ ಗರ್ಭಧಾರಣೆ, ಮಾದಕ ವ್ಯಸನ, ಗೈರುಹಾಜರಿ, ಮತ್ತು ಇತರ ಶಾಲಾ-ಸಂಬಂಧಿತ ಸಮಸ್ಯೆಗಳಿಗೆ ಇದು ಕಾರಣವಾಗಬಹುದು.
ನಿಷ್ಪರಿಣಾಮಕಾರಿ ಪೋಷಕರನ್ನು ಗುರುತಿಸುವುದು ಮತ್ತು ತಡೆಯುವುದು ಇನ್ನು ಮುಂದೆ ಕೇವಲ ವೈಯಕ್ತಿಕ ಆದ್ಯತೆಯ ವಿಷಯವಲ್ಲ.

ಇದನ್ನೂ ಓದಿ: Parenting: ಒಡಹುಟ್ಟಿದವರ ನಡುವೆ ಉತ್ತಮ ಬಾಂಧವ್ಯ ಬೆಳೆಸಲು ಪೋಷಕರಿಗೆ ಇಲ್ಲಿದೆ ಟಿಪ್ಸ್

ಇದು ಸಮಾಜದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಸಮಾಜದ ಸ್ಥಿರತೆ ಮತ್ತು ಸುರಕ್ಷತೆಯ ಮೇಲೆ ಕೂಡ ಪರಿಣಾಮ ಬೀರಬಹುದು. ಅಸಮರ್ಪಕ ಪೋಷಕರನ್ನು ವ್ಯಾಖ್ಯಾನಿಸಲು ಎರಡು ಮಾರ್ಗಗಳಿವೆ: ಪೋಷಕರ ನಡವಳಿಕೆಯಿಂದ ಅಥವಾ ಮಕ್ಕಳ ನಡವಳಿಕೆಯಿಂದ. ಈ ಎರಡೂ ರೀತಿಯ ವ್ಯಾಖ್ಯಾನಗಳಲ್ಲಿ, ಹಲವು ಸಮಸ್ಯೆಗಳಿವೆ.

ಉತ್ತಮ ಪೋಷಕರಾಗುವುದು ಹೇಗೆ
ಮೊದಲನೆಯದಾಗಿ ಪೋಷಕರ ನಡವಳಿಕೆಗಳು ಸಾಮಾನ್ಯವಾಗಿ ಅವರ ಮೂಲ ಉದ್ದೇಶವನ್ನು ಪ್ರತಿಬಿಂಬಿಸುವುದಿಲ್ಲವಾದ್ದರಿಂದ ನಡವಳಿಕೆಯ ಆಧಾರದ ಮೇಲೆ ಪೋಷಕರನ್ನು ಅನ್ಯಾಯವಾಗಿ ತೀರ್ಪಿಗೆ ಒಳಪಡಿಸುತ್ತೇವೆ. ಉತ್ತಮ ಪೋಷಕರಾಗುವುದು ಹೇಗೆ? ಎಂದು ಶಾಲೆಯು ನಮಗೆ ಕಲಿಸಲಿಲ್ಲ.

ಹೊಸ ಪೋಷಕರು ತಮ್ಮ ಸ್ವಂತ ಅನುಭವದ ಮೂಲಕ ಅಥವಾ ಇತರರನ್ನು ನೋಡುವ ಅಥವಾ ಕೇಳುವ ಮೂಲಕ, ತಮಗೆ ತಿಳಿದಿರುವ ರೀತಿಯಲ್ಲಿ ವರ್ತಿಸುವುದು ಸಾಮಾನ್ಯವಾಗಿದೆ. ಉದ್ದೇಶಗಳು ಸರಿಯಾಗಿದ್ದರೂ ಸಹ ಪೋಷಕರು ತಪ್ಪುಗಳನ್ನು ಮಾಡುವುದು ಸಹಜ. ತಿಳುವಳಿಕೆ ಇಲ್ಲದೆ ಅವರು ಮಾಡಿದ ತಪ್ಪುಗಳು ಅವರನ್ನು ಕೆಟ್ಟ ಪೋಷಕರನ್ನಾಗಿ ಕಟಕಟೆಯಲ್ಲಿ ನಿಲ್ಲಿಸುವುದಿಲ್ಲ.

ಮಕ್ಕಳ ಕೆಟ್ಟ ನಡವಳಿಕೆ
ಎರಡನೆಯದಾಗಿ, ಮಗುವಿನ ನಡವಳಿಕೆ, ಯಶಸ್ಸು ಅಥವಾ ವೈಫಲ್ಯದ ಮೇಲೆ ಪ್ರಭಾವ ಬೀರುವ ಹಲವು ಅಂಶಗಳಿವೆ, ಆದ್ದರಿಂದ ಪೋಷಕರ ಗುಣಮಟ್ಟವನ್ನು ನಿರ್ಧರಿಸಲು ಆ ಅಂಶಗಳನ್ನು ಬಳಸುವುದು ತಪ್ಪು . ಅಸಮರ್ಪಕ ಪೋಷಕತ್ವದ ಹೊರತಾಗಿಯೂ ಮಕ್ಕಳು ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಅದೇ ರೀತಿಯಲ್ಲಿ ಉತ್ತಮ ಪಾಲನೆಯ ಹೊರತಾಗಿಯೂ ಮಕ್ಕಳು ಕೆಟ್ಟ ನಡವಳಿಕೆಯನ್ನು ಹೊಂದಬಹುದು.

ಇದನ್ನೂ ಓದಿ: Weird Trend: ಮಕ್ಕಳ ತಲೆ ಗುಂಡಗೆ ಮಾಡಲು ಚೀನೀಯರು ಅಚ್ಚುಗಳನ್ನು ತಯಾರಿಸ್ತಿದ್ದಾರಂತೆ!

ಕಳಪೆ ಪೋಷಕತ್ವದ ಹೊರತಾಗಿಯೂ ತಮ್ಮ ಮಕ್ಕಳು ಯಶಸ್ವಿನ ಮೆಟ್ಟಿಲು ಏರಿದಾಗ ಪೋಷಕರು ಆ ಯಶಸ್ಸಿಗೆ ಮನ್ನಣೆ ತೆಗೆದುಕೊಳ್ಳುವುದು ಸಾಮಾನ್ಯ ಪ್ರವೃತ್ತಿಯಾಗಿದೆ . ತಮ್ಮ ನಡವಳಿಕೆಯಿಂದ , ಆರ್ಥಿಕವಾಗಿ ಅಥವಾ ವೃತ್ತಿಪರವಾಗಿ ಮಕ್ಕಳು ಸಾಧಿಸುವ ಯಶಸ್ಸನ್ನು ಅವರ ಕಳಪೆ ಪೋಷಕರನ್ನು ಸಮರ್ಥಿಸಲು ಬಳಸಲಾಗುತ್ತದೆ.

ಮತ್ತೊಂದೆಡೆ, ಕೆಲವು ಮಕ್ಕಳು ತಮ್ಮ ಪೋಷಕರು ಅತ್ಯುತ್ತಮವಾಗಿದ್ದರೂ ಸಹ ಜೀವನದಲ್ಲಿ ಕಷ್ಟಗಳನ್ನೂ ಎದುರಿಸುತ್ತಾರೆ. ಏಕೆಂದರೆ ಇತರ ಅಂಶಗಳು ಅವರ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ಎಷ್ಟೇ ಪ್ರಯತ್ನಿಸಿದರು ಕೂಡ ಪೋಷಕರು ತಮ್ಮ ಮಕ್ಕಳ ಜೀವನದಲ್ಲಿ ಎಲ್ಲವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ.
Published by:vanithasanjevani vanithasanjevani
First published: