ನಟಿ ಸಮಂತಾ ರುತ್ ಪ್ರಭು (Actress Samantha Ruth Prabhu) ಫಿಟ್ನೆಸ್ (Fitness) ಫ್ರೀಕ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಸಮಂತಾ ಅವರು ತಮ್ಮ ದೈನಂದಿನ ವರ್ಕೌಟ್ ಗೆ (Workout) ಸಂಬಂಧಪಟ್ಟ ಹಲವು ವೀಡಿಯೊಗಳನ್ನು (Videos) ಸಾಮಾಜಿಕ ಜಾಲತಾಣದಲ್ಲಿ (Social Media) ಶೇರ್ ಮಾಡುತ್ತಲೇ ಇರುತ್ತಾರೆ. ಜೊತೆಗೆ ಯಾವಾಗಲೂ ಫಿಟ್ನೆಸ್ ಕಾಪಾಡಿಕೊಳ್ಳುವಂತೆ ಅಭಿಮಾನಿಗಳಿಗೆ ಪ್ರೇರಣೆ ನೀಡುತ್ತಾರೆ. ನಟಿ ಸಮಂತಾ ರುತ್ ಪ್ರಭು ಮೈಯೋಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಈ ಮಧ್ಯೆ ನಟಿ ಸಮಂತಾ ತಾವು ಆಟೋಇಮ್ಯೂನ್ ಡಯಟ್ (Autoimmune Diet) ಫಾಲೋ ಮಾಡುತ್ತಿರುವುದಾಗಿ ಹೇಳಿದ್ದಾರೆ. ತಾವು ವರ್ಕೌಟ್ ಮಾಡುತ್ತಿರುವ ವಿಡಿಯೋದಲ್ಲಿ ಆಟೋಇಮ್ಯೂನ್ ಡಯಟ್ ಬಗ್ಗೆ ಹೇಳಿದ್ದಾರೆ.
ಆಟೋಇಮ್ಯೂನ್ ಡಯಟ್ ಫಾಲೋ ಮಾಡ್ತಿದ್ದಾರೆ ನಟಿ ಸಮಂತಾ ರುತ್ ಪ್ರಭು
ನಟಿ ಸಮಂತಾ ರುತ್ ಪ್ರಭು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವರ್ಕೌಟ್ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಅವರು ತುಂಬಾ ಬೆವರು ಹರಿಸಿದ್ದಾರೆ. ಪುಲ್‌ಅಪ್ ಮಾಡುತ್ತಿದ್ದಾರೆ. ಗ್ರಾವಿಟಿ ಎಂಬ ಮ್ಯೂಸಿಕ್ ಬ್ಯಾಂಡ್‌ಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಜೊತೆಗೆ ತಾವು ಆಟೋಇಮ್ಯೂನ್ ಆಹಾರ ಫಾಲೋ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ವಿಡಿಯೋ ಜೊತೆಗೆ ನೋಟ್ ಕೂಡ ಬರೆದಿದ್ದಾರೆ ಸಮಂತಾ. ಅದರಲ್ಲಿ ತಾವು ಗ್ರಾವಿಟಿಗೆ ಧನ್ಯವಾದ ಹೇಳುವುದಾಗಿ ತಿಳಿಸಿದ್ದಾರೆ. ಗ್ರಾವಿಟಿ ಮ್ಯೂಸಿಕ್ ತಮಗೆ ಸ್ಫೂರ್ತಿ ನೀಡುತ್ತವೆ.
ಗ್ರಾವಿಟಿ ಮ್ಯೂಸಿಕ್ ಮತ್ತು ಆಟೋಇಮ್ಯೂನ್ ಆಹಾರದಿಂದಾಗಿ ಜೀವನದ ಕೆಲವು ಕಠಿಣ ದಿನಗಳನ್ನು ಜಯಿಸಿ ಬಂದಿದ್ದೇನೆ ಎಂದು ಹೇಳಿದ್ದಾರೆ.
ಏನಿದು ಆಟೋಇಮ್ಯೂನ್ ಡಯಟ್ ?
ದೇಹಕ್ಕೆ ರೋಗ ನಿರೋಧಕ ಶಕ್ತಿ ಅತ್ಯಗತ್ಯವಾಗಿ ಬೇಕು. ಇದು ದೇಹದ ಆರೋಗ್ಯಕರ ಕೋಶಗಳನ್ನು ರಕ್ಷಿಸುತ್ತದೆ. ಆಟೋಇಮ್ಯೂನ್ ಪ್ರೊಟೋಕಾಲ್ ಡಯಟ್ ಎಂಬುದು ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ದೇಹದಲ್ಲಿ ಕಂಡು ಬರುವ ವಿದೇಶಿ ಹಾಗೂ ಹಾನಿಕಾರಕ ಕೋಶಗಳನ್ನು ತಡೆಯಲು ಪ್ರತಿಕಾಯಗಳನ್ನು ಉತ್ಪತ್ತಿ ಮಾಡುವ ಆಹಾರ ಕ್ರಮವೇ ಆಟೋಇಮ್ಯೂನ್ ಡಯಟ್ ಆಗಿದೆ. ಈ ಆಟೋಇಮ್ಯೂನ್ ಡಯಟ್ ನಲ್ಲಿ ಕೆಲವು ಪದಾರ್ಥಗಳನ್ನು ತಿನ್ನುವುದು ಕಡ್ಡಾಯ ಹಾಗೂ ಕೆಲವು ಖಾದ್ಯಗಳ ಸೇವನೆಯನ್ನು ಕಡ್ಡಾಯವಾಗಿ ತಪ್ಪಿಸಬೇಕಾಗುತ್ತದೆ ಅಂತಾರೆ ತಜ್ಞರು.
View this post on Instagram
ಮೊದಲನೆ ಹಂತ
ಇದರಲ್ಲಿ ಕರುಳಿನ ಉರಿಯೂತಕ್ಕೆ ಕಾರಣವಾಗುವ ಔಷಧ ಮತ್ತು ಆಹಾರ ಸೇವನೆ ಮಾಡಬಾರದು. ಧಾನ್ಯಗಳು, ದ್ವಿದಳ ಧಾನ್ಯಗಳು, ಬೀಜಗಳು, ನೈಟ್‌ಶೇಡ್ ತರಕಾರಿ, ಮೊಟ್ಟೆ ಮತ್ತು ಡೈರಿ ಪದಾರ್ಥಗಳ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು.
ತಂಬಾಕು, ಆಲ್ಕೋಹಾಲ್, ಕಾಫಿ, ತೈಲ, ಸಂಸ್ಕರಿಸಿದ ಆಹಾರ ಮತ್ತು ಸಂಸ್ಕರಿಸಿದ ಸಕ್ಕರೆ, ನಾನ್ ಸ್ಟಿರಾಯ್ಡ್ ಉರಿಯೂತದ ಔಷಧ ಸೇವನೆ ಮಾಡಬಾರದು.
ಅಕ್ಕಿ, ಗೋಧಿ, ಓಟ್ಸ್, ಬಾರ್ಲಿ, ರೈ, ಇತ್ಯಾದಿ. ಪಾಸ್ತಾ, ಬ್ರೆಡ್ ಮತ್ತು ಉಪಹಾರ ಧಾನ್ಯಗಳು, ಬೇಳೆ ಕಾಳು, ಬೀನ್ಸ್, ಬಟಾಣಿ, ಕಡಲೆಕಾಯಿ, ಕಡಲೆಕಾಯಿ ಬೆಣ್ಣೆ, ಬಿಳಿಬದನೆ, ಮೆಣಸು, ಆಲೂಗಡ್ಡೆ, ಟೊಮ್ಯಾಟೊ, ಟೊಮ್ಯಾಟೊ.
ಕೆಂಪುಮೆಣಸು, ಮಸಾಲೆ, ಮೊಟ್ಟೆ, ಮೊಟ್ಟೆಯ ಬಿಳಿ ಭಾಗ, ಹಸು, ಮೇಕೆ, ಅಥವಾ ಕುರಿ ಹಾಲು, ಹಾಲಿನ ಕೆನೆ, ಚೀಸ್, ಬೆಣ್ಣೆ, ತುಪ್ಪ, ಡೈರಿ ಆಧಾರಿತ ಪ್ರೋಟೀನ್ ಪೌಡರ್, ಪೂರಕ ಸೇವನೆ ತಪ್ಪಿಸಬೇಕು.
ಹಿಟ್ಟು, ಬೆಣ್ಣೆ, ಕೊತ್ತಂಬರಿ, ಜೀರಿಗೆ, ಸೋಂಪು, ಫೆನ್ನೆಲ್, ಮೆಂತ್ಯ, ಸಾಸಿವೆ ಮತ್ತು ಜಾಯಿಕಾಯಿ ಮುಂತಾದ ಕೋಕೋ ಮತ್ತು ಬೀಜ ಆಧಾರಿತ ಮಸಾಲೆ ತಪ್ಪಿಸಬೇಕು.
ಸಂಸ್ಕರಿಸಿದ ಸಕ್ಕರೆ, ಕಬ್ಬು ಅಥವಾ ಬೀಟ್ ಸಕ್ಕರೆ, ಕಾರ್ನ್ ಸಿರಪ್, ಬ್ರೌನ್ ರೈಸ್ ಸಿರಪ್ ಮತ್ತು ಬಾರ್ಲಿ ಮಾಲ್ಟ್ ಸಿರಪ್, ಸಿಹಿ ತಿಂಡಿ, ಸೋಡಾ, ಕ್ಯಾಂಡಿ, ಹೆಪ್ಪುಗಟ್ಟಿದ ಸಿಹಿ ತಿಂಡಿ, ಚಾಕೊಲೇಟ್, ಕೃತಕ ಸಿಹಿಕಾರಕ, ಟ್ರಾನ್ಸ್ ಕೊಬ್ಬು, ಕೃತಕ ಸಿಹಿಕಾರಕ ಸೇವನೆ ಮಾಡುವಂತಿಲ್ಲ.
ಆಟೋಇಮ್ಯೂನ್ ಡಯಟ್ ನಲ್ಲಿ ಯಾವ ಪದಾರ್ಥಗಳ ಸೇವನೆ ಮಾಡಬೇಕು?
ಪಾಚಿ ಆಹಾರ ಸೆವನೆ, ವಿವಿಧ ತಾಜಾ ಹಣ್ಣುಗಳು, ಸಿಹಿ ಆಲೂಗಡ್ಡೆ, ಟ್ಯಾರೋ, ಯಾಮ್ಸ್, ಹಾಗೆಯೇ ಜೆರುಸಲೆಮ್ ಅಥವಾ ಚೀನೀ ಪಲ್ಲೆಹೂವು, ಕನಿಷ್ಠ ಸಂಸ್ಕರಿಸಿದ ಮಾಂಸ, ಮೀನು, ಸಮುದ್ರಾಹಾರ, ಅಂಗ ಮಾಂಸ ಮತ್ತು ಕೋಳಿ, ಕೊಂಬುಚಾ, ಕಿಮ್ಚಿ, ಸೌರ್‌ಕ್ರಾಟ್,
ಉಪ್ಪಿನಕಾಯಿ ಮತ್ತು ತೆಂಗಿನಕಾಯಿ ಕೆಫೀರ್ ಡೈರಿ ಆಧಾರಿತವಲ್ಲದ ಹುದುಗಿಸಿದ ಆಹಾರ, ಪ್ರೋಬಯಾಟಿಕ್ ಪೂರಕ, ಆಲಿವ್ ಎಣ್ಣೆ, ಆವಕಾಡೊ ಎಣ್ಣೆ, ಅಥವಾ ತೆಂಗಿನ ಎಣ್ಣೆ, ಗಿಡಮೂಲಿಕೆಗಳು ಮತ್ತು ಮಸಾಲೆ, ಆಪಲ್ ಸೈಡರ್ ಮತ್ತು ರೆಡ್ ವೈನ್ ವಿನೆಗರ್ ಸೇವಿಸಿ.
ಮೇಪಲ್ ಸಿರಪ್ ಮತ್ತು ಜೇನುತುಪ್ಪ, ದಿನಕ್ಕೆ ಸರಾಸರಿ 3 ಕಪ್ ಹಸಿರು ಮತ್ತು ಕಪ್ಪು ಚಹಾ, ತಾಜಾ ಹಾಗೂ ಪೌಷ್ಟಿಕಾಂಶ ಭರಿತ ಆಹಾರ, ಕಡಿಮೆ ಸಂಸ್ಕರಿಸಿದ ಮಾಂಸ, ಒತ್ತಡ, ನಿದ್ರೆ ಮತ್ತು ದೈಹಿಕ ಚಟುವಟಿಕೆ ಸುಧಾರಣೆಗೆ ಒತ್ತು ನೀಡಿ. ತುಳಸಿ, ಕರಿಮೆಣಸು, ಕೊತ್ತಂಬರಿ, ಜೀರಿಗೆ, ಬೆಳ್ಳುಳ್ಳಿ, ಶುಂಠಿ, ಸೇವಿಸಿ.
ಆಟೋಇಮ್ಯುನೋ ಡಯಟ್ ನಲ್ಲಿ ಈ ಜೀವನಕ್ರಮ ಫಾಲೋ ಮಾಡಿ
ಬೆಳಿಗ್ಗೆ ಹಲ್ಲುಜ್ಜುವ ಮೊದಲು ಖಾಲಿ ಹೊಟ್ಟೆಯಲ್ಲಿ 2 ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಆಮ್ಲಾ ಮತ್ತು ಅಲೋವೆರಾ ಜ್ಯೂಸ್ ಸೇವನೆ ವ್ಯಾಯಾಮ, ವಾಕಿಂಗ್ ಮಾಡಿ.
ದಿನವೂ ಧ್ಯಾನ ಮತ್ತು ಯೋಗಾಭ್ಯಾಸ, ತಾಜಾ ಮತ್ತು ಹಗುರ ಬಿಸಿ ಆಹಾರ ಸೇವನೆ, ಮೂರರಿಂದ ನಾಲ್ಕು ಬಾರಿ ತಿನ್ನಬೇಕು. ಅತಿಯಾಗಿ ತಿನ್ನುವುಉ, ಊಟ ಬಿಡುವುದು ಮಾಡಬಾರದು. ವಾರಕ್ಕೊಮ್ಮೆ ಉಪವಾಸ ಮಾಡಿ.
ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ತಯಾರಿಸಿ ವೆಜ್ ಪರೋಟ, ಸಲಾಡ್, ಇಲ್ಲಿದೆ ರೆಸಿಪಿ!
ಆಹಾರವನ್ನು ಸರಿಯಾಗಿ ಅಗಿಯಿರಿ. ಆಹಾರ ಸೇವನೆ ನಂತರ ಐದು ನಿಮಿಷ ವಾಕಿಂಗ್ ಮಾಡಿ. ಪ್ರಾಣಾಯಾಮ ಮಾಡುವುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ