Skin Care: ಚರ್ಮಕ್ಕೆ ಒಳ್ಳೆಯದಂತೆ ಆ್ಯಕ್ಟಿವೇಟೆಡ್ ಚಾರ್ಕೋಲ್? ಇದರಿಂದಾಗುವ ಲಾಭಗಳೇನು..?

ಆ್ಯಕ್ಟಿವೇಟೆಡ್ ಚಾರ್ಕೋಲ್ ಎಲ್ಲ ಬಗೆಯ ಚರ್ಮಗಳಿಗೆ ಬಳಸಲು ಸೂಕ್ತವಾಗಿದೆ. ಇದು ನೀವು ಒಣ ಚರ್ಮ ಹೊಂದಿದ್ದರೂ ಸರಿ ಅದರಲ್ಲಿ ನೀರಿನಂಶವಿರುವಂತೆ ನೋಡಿಕೊಳ್ಳುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಾರ್ಕೋಲ್  (Charcoal) ಅಥವಾ ಇದ್ದಿಲು ಬಗ್ಗೆ ಯಾರು ತಾನೇ ಕೇಳಿಲ್ಲ ಹೇಳಿ. ನಾವು ಒಲೆ ಹೊತ್ತಿಸಲು, ಮನೆಗಳಲ್ಲಿ ಧೂಪ ಹಾಕಲು ಸಾಮಾನ್ಯವಾಗಿ ಬಳಸುತ್ತೇವೆ. ಆದರೆ, ಈ ಕಲ್ಲಿದ್ದಲಿನಿಂದ ಅನೇಕ ಇತರೆ ಲಾಭಗಳಿವೆ ( Benefits) ಎಂಬುದು ನಿಮಗೆ ಗೊತ್ತೇ..?ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಆತ್ಯಾಧುನಿಕ ಪ್ರಗತಿಯ ಕಾರ್ಯಗಳು ಆಗಿರುವುದನ್ನು ಕಾಣಬಹುದು. ಆದರೆ ವಿಶ್ವದಲ್ಲಿ  (Wold Technology) ತಂತ್ರಜ್ಞಾನ ಆತ್ಯಾಧುನಿಕವಾಗುತ್ತಿರುವಂತೆ ಅದರಿಂದ ಜಾಗತೀಕರಣ, ನಗರೀಕರಣಗಳು ವಿಪರೀತವಾಗುತ್ತಿದ್ದು ಇವೆಲ್ಲವು ಸೇರಿ ಜಾಗತಿಕ ತಪಮಾನದಲ್ಲಿ ಏರಿಕೆ ಹಾಗೂ ಮಾಲಿನ್ಯ (Pollution) ಹೆಚ್ಚಾಗುತ್ತಿರುವಂತೆ ಮಾಡುತ್ತಿರುವುದು ಸುಳ್ಳಲ್ಲ. ಇದರಿಂದಾಗಿ ಮನುಷ್ಯನ ಆರೋಗ್ಯದ ಮೇಲೆ ಅದರಲ್ಲೂ ವಿಶೇಷವಾಗಿ ಚರ್ಮದ ಆರೋಗ್ಯದ (Skin Health)  ಮೇಲೆ ಸಾಕಷ್ಟು ಪರಿಣಾಮಗಳು ಉಂಟಾಗುವಂತಾಗಿದೆ.

ಅತಿಶಯವಾದ ಕೈಗಾರಿಕಾಕರಣದಿಂದಾಗಿ ಹೊರಬರುವ ಹಾನಿಕಾರಕ ಅನಿಲಗಳು ವಾತಾವರಣದ ಗಾಳಿಯೊಂದಿಗೆ ಸೇರಿದಾಗ ವಾಯು ಮಾಲಿನ್ಯ ಉಂಟಾಗುವಂತೆ ಮಾಡುತ್ತದೆ. ಈ ಮಾಲಿನ್ಯಯುಕ್ತ ಗಾಳಿ ಸೇವನೆ ಮನುಷ್ಯರ ಆರೋಗ್ಯ ಹಾಗೂ ಚರ್ಮದ ಆರೋಗ್ಯಕ್ಕೂ ಮಾರಕವಾಗಿದೆ. ಅಲ್ಲದೆ ವಾತಾವರಣದಲ್ಲಿರುವ ಧೂಳು ಕಣಗಳು ಮನುಷ್ಯನ ಚರ್ಮದ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಇಂದು ಮಾರುಕಟ್ಟೆಯಲ್ಲಿ ಅದೇಷ್ಟೋ ವಿವಿಧ ಬಗೆಯ ಕ್ರೀಮುಗಳು ಲಭ್ಯವಿದೆಯಾದರೂ ಪ್ರತಿಯೊಬ್ಬರಿಗೂ ಅದು ಸರಿ ಹೊಂದುತ್ತದೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಕೆಲವರ ಮೇಲೆ ಅವು ಅಡ್ಡ ಪರಿಣಾಮಗಳನ್ನೂ ಉಂಟು ಮಾಡಬಹುದು.

ಇದನ್ನೂ ಓದಿ: Health tips: ಒಳ್ಳೆ ಆಹಾರ ತಿಂದ್ರೆ ಚರ್ಮದ ಸೌಂದರ್ಯ ಚೆನ್ನಾಗಿರೋದು ನಿಜಾನಾ?

ಹಾಗಾದರೆ ಇದಕ್ಕೆ ಪರಿಹಾರ ಏನು..? ಇದಕ್ಕೆ ಪರಿಣಾಮಕಾರಿ ಪರಿಹಾರ ಎಂದರೆ ಇಂಗಾಲದ ಅತಿಶುದ್ಧವಾದ ರೂಪವಾದ ಚಾರ್ಕೋಲ್ ಅಥವಾ ಇದ್ದಿಲು. ಏಕೆಂದರೆ ಇದು ಇಂಗಾಲದ ಮಲಿನ ಅಂಶಗಳು, ಧೂಳಿನ ಕಣಗಳು ಹಾಗೂ ಇತರೆ ಚರ್ಮಕ್ಕೆ ಹಾನಿ ಮಾಡಬಹುದಾದ ಅಂಶಗಳನ್ನು ಹೀರಿಕೊಳ್ಳುತ್ತದೆ. ಇದರಿಂದಾಗಿ ಆ ಮಲಿನ ಅಂಶಗಳು ಚರ್ಮದ ರಂಧ್ರಗಳಲ್ಲಿ ಉಳಿಯುವುದಿಲ್ಲ.

ಆ್ಯಕ್ಟಿವೇಟೆಡ್ ಚಾರ್ಕೋಲ್ ಎಂದರೇನು..?

ಸಂಸ್ಕರಿಸಲ್ಪಟ್ಟ ಚಾರ್ಕೋಲ್‌ನಲ್ಲಿ ಇಂಗಾಲದ ಅತಿ ಸಣ್ಣ ಕಣಗಳು ಸಕ್ರಿಯಗೊಂಡಿರುತ್ತವೆ. ಸಕ್ರಿಯಗೊಂಡ ಇಂಗಾಲದ ಕಣಗಳು ಹೆಚ್ಚಿನ ಕಾರ್ಯಕ್ಷಮತೆ ಹೊಂದಿದ್ದು ಇವು ಚರ್ಮದ ಒಳಗಿನ ರಂಧ್ರಗಳಲ್ಲಿ ಸೇರಿಕೊಂಡ ಎಲ್ಲ ರೀತಿಯ ಮಲಿನ ಕಣಗಳು/ಅಂಶಗಳನ್ನು ಹೀರಿಕೊಂಡು ಚರ್ಮವು ಸ್ವಚ್ಛವಾಗುವಂತೆ ಮಾಡುವುದಲ್ಲದೆ ಸಹಜವಾದ ಕಾಂತಿಯುಕ್ತವಾಗಿ ಕಾಣುವಂತೆ ಮಾಡುತ್ತದೆ. ಚಾರ್ಕೋಲ್‌ಯುಕ್ತ ಚರ್ಮಕ್ಕೆ ಬಳಸಬಹುದಾದ ಉತ್ಪನ್ನಗಳೆಂದರೆ ಫೇಸ್ ಮಾಸ್ಕ್, ಫೇಸ್ ಸ್ಕ್ರಬ್, ಫೇಸ್ ವಾಶ್ ಹಾಗೂ ಸಾಬೂನುಗಳು.

ಆ್ಯಕ್ಟಿವೇಟೆಡ್ಚಾರ್ಕೋಲ್‌ನಿಂದಾಗುವ ಲಾಭಗಳು

ರಂಧ್ರಗಳ ಮುಚ್ಚುವಿಕೆ:ಚರ್ಮದ ರಂಧ್ರಗಳು ಇತರೆ ಮಲಿನ ಕಣಗಳಿಂದ ಮುಚ್ಚಿಹೋಗದಂತೆ ತಡೆಯುತ್ತದೆ. ಇದರಿಂದ ಚರ್ಮ ಶುದ್ಧವಾಗುತ್ತದೆ ಹಾಗೂ ಸೋಂಕಿನಿಂದಾಗುವ ಮೊಡವೆಗಳು ನಿಯಂತ್ರಿತವಾಗುತ್ತವೆ.

ಒಣಗಿದ/ಸತ್ತ ಕೋಶಗಳ ಸುಲಿತ: ನಿಮ್ಮ ಚರ್ಮ ಹೇಗೆ ಇರಲಿ ಆಗಾಗ ಚರ್ಮದ ಕೋಶಗಳು ಒಣಗಿದಾಗ ಚರ್ಮ ಕಳೆಗುಂದಿದವರಂತೆ ಕಾಣುತ್ತಿರುತ್ತದೆ. ಹಾಗಾಗಿ ಈ ಅನವಶ್ಯಕ ಒಣಗಿದ ಕೋಶಗಳು ಸುಲಿದು ಹೋಗಿ ತಾಜಾ ಚರ್ಮ ಕಾಣುವಂತೆ ಮಾಡಿಕೊಂಡಾಗ ಮುಖವು ಕಾಂತಿಯುಕ್ತವಾಗಿ ಕಾಣುತ್ತದೆ. ಈ ಚಾರ್ಕೋಲ್‌ನಲ್ಲಿರುವ ಅಂಶವು ಹೀಗೆ ಒಣಗಿದ ಕೋಶಗಳು ಸುಲಿದು ಹೋಗುವಂತೆ ಸಹಕರಿಸುತ್ತದೆ.

ಮೊಡವೆಗಳ ನಿಯಂತ್ರಣ: ಚಾರ್ಕೋಲ್‌ಯುಕ್ತ ಫೇಸ್ ಉತ್ಪನ್ನಗಳನ್ನು ಮುಖದ ಚರ್ಮಕ್ಕೆ ಬಳಸಿದಾಗ ಅದು ಮೊಡವೆಗಳುಂಟಾಗದಂತೆ ಮಾಡುತ್ತದೆ ಅಥವಾ ಅವುಗಳ ಉತ್ಪತ್ತಿಯನ್ನು ಗರಿಷ್ಠ ಮಟ್ಟದಲ್ಲಿ ನಿಯಂತ್ರಿಸುತ್ತದೆ. ಗಾಯ, ಬೆವರುವಿಕೆ ಹೀಗೆ ಹಲವು ಕಾರಣಗಳಿಂದ ಮೊಡವೆ ಉಂಟಾಗಬಹುದು. ಆ್ಯಕ್ಟಿವೇಟೆಡ್ ಚಾರ್ಕೋಲ್‌ ಬಳಕೆಯಿಂದಾಗಿ ಚರ್ಮದಲ್ಲಿ ಮೊಡವೆಗೆ ಕಾರಣವಾಗಬಹುದಾದ ಮಲಿನ ಅಂಶಗಳು ಹೀರಲ್ಪಟ್ಟು ಚರ್ಮ ಶುದ್ಧವಾಗುತ್ತದೆ.

ಇದನ್ನೂ ಓದಿ: Health Tips: ಹೊಕ್ಕಳಿಗೆ ಜೇನುತುಪ್ಪ ಹಚ್ಚುವುದರಿಂದ ಎಷ್ಟೆಲ್ಲಾ ಲಾಭಗಳಿವೆ ನೋಡಿ..

ನೀರಿನಂಶ ಸಮತೋಲನ :ಆ್ಯಕ್ಟಿವೇಟೆಡ್ ಚಾರ್ಕೋಲ್ ಎಲ್ಲ ಬಗೆಯ ಚರ್ಮಗಳಿಗೆ ಬಳಸಲು ಸೂಕ್ತವಾಗಿದೆ. ಇದು ನೀವು ಒಣ ಚರ್ಮ ಹೊಂದಿದ್ದರೂ ಸರಿ ಅದರಲ್ಲಿ ನೀರಿನಂಶವಿರುವಂತೆ ನೋಡಿಕೊಳ್ಳುತ್ತದೆ. ಆ್ಯಕ್ಟಿವೇಟೆಡ್ ಚಾರ್ಕೋಲ್ ಜೊತೆ ಅಲೋವೆರಾ ಬಳಸಿದರಂತೂ ಚರ್ಮಕ್ಕೆ ಅದ್ಭುತವಾದ ಸೊಬಗನ್ನೇ ನೀಡುತ್ತದೆ.
Published by:vanithasanjevani vanithasanjevani
First published: