Vitamin B12: ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಿದ್ದರೆ ಯಾವ ಆರೋಗ್ಯ ತೊಂದರೆ ಕಾಣಿಸಿಕೊಳ್ಳುತ್ತವೆ?

ರಕ್ತಹೀನತೆಯನ್ನು ಪರೀಕ್ಷೆಯಿಲ್ಲದೆ ಗುರುತಿಸಲು ಕಷ್ಟ. ಉತ್ತರ ಭಾರತದಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಜನಸಂಖ್ಯೆಯ 47 ಪ್ರತಿಶತದಷ್ಟು ಜನರು ವಿಟಮಿನ್ ಬಿ 12 ಕೊರತೆಯಿಂದ ಬಳಲುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಉತ್ತಮ ಆರೋಗ್ಯ (Health) ಕಾಪಾಡಿಕೊಳ್ಳಲು ದೇಹದಲ್ಲಿ (Body) ವಿಟಮಿನ್ ಬಿ 12 (Vitamin B 12) ಸರಿಯಾದ ಪ್ರಮಾಣದಲ್ಲಿ ತೆಗೆದುಕೊಲ್ಳುವುದು ತುಂಬಾ ಅಗತ್ಯವಿದೆ. ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಕೆಂಪು ರಕ್ತ ಕಣಗಳ (Red Blood Cells) ರಚನೆಗೆ ಹೆಚ್ಚು ಅಡ್ಡಿ ಉಂಟು ಮಾಡುತ್ತದೆ. ಇದನ್ನು ರಕ್ತಹೀನತೆ ಎಂದು ಕರೆಯುತ್ತಾರೆ. ರಕ್ತಹೀನತೆ ಉಂಟಾದಾಗ ದೇಹವು ಜಡವಾಗುತ್ತ ಹೋಗುತ್ತದೆ. ವಯಸ್ಸಿನೊಂದಿಗೆ, ಈ ವಿಟಮಿನ್ ಅನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ. ಹಾಗಾಗಿ ವಯಸ್ಸಾಗುತ್ತಾ ಹೋದಂತೆ ನಿಮಗೆ ಅನವಶ್ಯಕವಾಗಿ ದಣಿವು ಅಥವಾ ದೌರ್ಬಲ್ಯ ಶುರು ಆಗುತ್ತದೆ. ಮುಂದೆ ಒಮ್ಮೆ ರಕ್ತ ತಪಾಸಣೆ ಮಾಡಿಸಿ. ಇದರ ಆರಂಭಿಕ ಲಕ್ಷಣಗಳು ತುಂಬಾ ಸಾಮಾನ್ಯ ಆಗಿದೆ.

    ರಕ್ತಹೀನತೆಯನ್ನು ಪರೀಕ್ಷೆಯಿಲ್ಲದೆ ಗುರುತಿಸಲು ಕಷ್ಟ. ಉತ್ತರ ಭಾರತದಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಜನಸಂಖ್ಯೆಯ 47 ಪ್ರತಿಶತದಷ್ಟು ಜನರು ವಿಟಮಿನ್ ಬಿ 12 ಕೊರತೆಯಿಂದ ಬಳಲುತ್ತಿದ್ದಾರೆ. ನಿಮ್ಮ ದೇಹಕ್ಕೆ ಸಾಕಷ್ಟು ವಿಟಮಿನ್ ಬಿ 12 ಸಿಗುತ್ತಿದೆಯೇ ಎಂಬುದರ ಬಗ್ಗೆ ನೀವು ಗಮನಹರಿಸಬೇಕು.

    ಯಾವ ವಯಸ್ಸಿನವರಿಗೆ ಎಷ್ಟು ಪ್ರಮಾಣದ ವಿಟಮಿನ್ ಬೇಕು

    6 ತಿಂಗಳ ಶಿಶುಗಳು - 0.4 ಮೈಕ್ರೋಗ್ರಾಂಗಳು (mcg)

    7-12 ತಿಂಗಳ ಶಿಶುಗಳು - 0.5 ಮೈಕ್ರೋಗ್ರಾಂಗಳು (mcg)

    1-3 ವರ್ಷ ವಯಸ್ಸಿನ ಮಕ್ಕಳು - 0.9 ಮೈಕ್ರೋಗ್ರಾಂಗಳು (mcg)

    4-8 ವರ್ಷ ವಯಸ್ಸಿನ ಮಕ್ಕಳು -1.2 ಮೈಕ್ರೋಗ್ರಾಂಗಳು (mcg)

    ಇದನ್ನೂ ಓದಿ: ಸರಿಯಾಗಿ ನೆನಪಿಡಿ, ನೀವು ಮಾಡೋ ಈ ತಪ್ಪುಗಳು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಿಸುತ್ತೆ

    9-13 ವರ್ಷ ವಯಸ್ಸಿನ ಮಕ್ಕಳು - 1.8 ಮೈಕ್ರೋಗ್ರಾಂಗಳು (mcg)

    14-18 ವರ್ಷ ವಯಸ್ಸಿನ ಹದಿಹರೆಯದವರು - 2.4 ಮೈಕ್ರೋಗ್ರಾಂಗಳು (mcg)

    ವಯಸ್ಕರು: 2.4 ಮೈಕ್ರೋಗ್ರಾಂಗಳು (mcg)

    ಗರ್ಭಿಣಿಯಾಗಿದ್ದರೆ ದಿನಕ್ಕೆ 2.6 mcg ಮತ್ತು ಹಾಲುಣಿಸುವ ವೇಳೆ ದಿನಕ್ಕೆ 2.8 mcg

    ವಿಟಮಿನ್ B12 ಕೊರತೆಗೆ ಕಾರಣವೇನು?

    ತೂಕ ನಷ್ಟ ಶಸ್ತ್ರಚಿಕಿತ್ಸೆ

    ಹೊಟ್ಟೆಯ ಭಾಗದ ಶಸ್ತ್ರಚಿಕಿತ್ಸೆ

    ಅತಿಯಾದ ಮದ್ಯ ಸೇವನೆ

    ವಿನಾಶಕಾರಿ ರಕ್ತಹೀನತೆ

    ಕರುಳಿನ ರೋಗ

    ಪ್ರತಿರಕ್ಷಣಾ ವ್ಯವಸ್ಥೆಯ ಅಸ್ವಸ್ಥತೆ

    ವಿಟಮಿನ್ ಬಿ 12 ಹೀರಿಕೊಳ್ಳುವಿಕೆ ಅಡ್ಡಿಪಡಿಸುವ ಔಷಧಿ

    ವಿಟಮಿನ್ ಬಿ 12 ಕೊರತೆಯನ್ನು ಗುರುತಿಸುವುದು ಹೇಗೆ?

    ದೌರ್ಬಲ್ಯ

    ಆಯಾಸ

    ಉಸಿರಾಟದ ತೊಂದರೆ

    ತೆಳು ಚರ್ಮ

    ನಾಲಿಗೆ ಜಿಡ್ಡು

    ಮಲಬದ್ಧತೆ

    ಹಸಿವಿನ ನಷ್ಟ

    ಅನಿಲ

    ದೇಹದ ಯಾವುದೇ ಭಾಗದಲ್ಲಿ ಜುಮ್ಮೆನ್ನುವುದು

    ಸ್ನಾಯು ದೌರ್ಬಲ್ಯ ಮತ್ತು ನಡೆಯಲು ತೊಂದರೆ

    ದೃಷ್ಟಿ ಅಡಚಣೆ

    ಖಿನ್ನತೆ

    ಜ್ಞಾಪಕ ಶಕ್ತಿ ನಷ್ಟ

    ವರ್ತನೆಯ ಬದಲಾವಣೆ

    ಮಾನಸಿಕ ಸಮಸ್ಯೆ

    ವಿಟಮಿನ್ ಬಿ 12 ಕೊರತೆ ಪೂರ್ಣಗೊಳಿಸುವುದು ಹೇಗೆ?

    ವಿಟಮಿನ್ ಬಿ 12 ಡೈರಿ ಉತ್ಪನ್ನ ಮತ್ತು ಮಾಂಸದಲ್ಲಿ ಸಮೃದ್ಧವಾಗಿದೆ. ಮಾಂಸ, ಕೋಳಿ, ಸಮುದ್ರಾಹಾರ, ಡೈರಿ ಉತ್ಪನ್ನ ಮತ್ತು ಮೊಟ್ಟೆ ತಿನ್ನುವ ಮೂಲಕ ವಿಟಮಿನ್ ಬಿ 12 ಕೊರತೆ ತಡೆಯಬಹುದು.

    ಆದರೆ ನೀವು ಮಾಂಸಾಹಾರ ಸೇವನೆ ಮಾಡದೇ ಇದ್ದರೆ ಈ ಎಲ್ಲಾ ಆಹಾರಗಳನ್ನು ನಿಷೇಧಿಸುವ ವೈದ್ಯಕೀಯ ಸ್ಥಿತಿ ನೀವು ಅನುಭವಿಸುತ್ತಿದ್ದರೆ ನೀವು ಸಸ್ಯಾಹಾರ ಸೇವನೆ ಮಾಡಬೇಕು. ಪಾಲಕ್, ಬೀಟ್ರೂಟ್, ಕಡಲೆ, ಮೊಸರು, ಅಣಬೆ ಸೇವನೆ ಮಾಡುವ ಮೂಲಕ ವಿಟಮಿನ್ ಬಿ 12 ಸೇವನೆ ಮಾಡಿ.

    ಇದನ್ನೂ ಓದಿ: ಹಾರ್ಟ್​ ಫೇಲ್ ತಡೆಗೆ ವೈದ್ಯರು ಸೂಚಿಸಿದ ಪ್ರಮುಖ ಸಲಹೆಗಳು! ತಿಳಿದಿರುವುದು ಅಗತ್ಯ

    ಅದೇ ವೇಳೆ ನೀವು ವಿಟಮಿನ್ ಬಿ 12 ಹೀರಿಕೊಳ್ಳುವಲ್ಲಿ ತೊಂದರೆ ಹೊಂದಿದ್ದರೆ ವಿಟಮಿನ್ ಸೇವನೆ ಬಗ್ಗೆ ಖಂಡಿತವಾಗಿ ಉತ್ತಮ ವೈದ್ಯರನ್ನು ಸಂಪರ್ಕಿಸಿ.
    Published by:renukadariyannavar
    First published: