• Home
  • »
  • News
  • »
  • lifestyle
  • »
  • Sexual wellness: ಹುಡುಗರು ಪ್ರೌಢಾವಸ್ಥೆಗೆ ಬಂದಾಗ ಆಗುವ ಬದಲಾವಣೆಗಳೇನು?

Sexual wellness: ಹುಡುಗರು ಪ್ರೌಢಾವಸ್ಥೆಗೆ ಬಂದಾಗ ಆಗುವ ಬದಲಾವಣೆಗಳೇನು?

ಹುಡುಗ ಮತ್ತು ಹುಡುಗಿಯರಲ್ಲಿ ಆಗುವ ಬದಲಾವಣೆಯ ಹಂತಗಳು.

ಹುಡುಗ ಮತ್ತು ಹುಡುಗಿಯರಲ್ಲಿ ಆಗುವ ಬದಲಾವಣೆಯ ಹಂತಗಳು.

ಈ ಬದಲಾವಣೆ ಹಂತದಲ್ಲಿ ಸ್ವಾಭಿಮಾನ, ಖಿನ್ನತೆ, ಆತಂಕ, ಕೋಪದ ಸಮಸ್ಯೆಗಳು, ಮನಸ್ಥಿತಿ ಬದಲಾವಣೆಗಳಂತಹ ಅನೇಕ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇವು ಹದಿಹರೆಯದ ವರ್ಷಗಳಲ್ಲಿ ಸಾಮಾನ್ಯವಾಗಿರುತ್ತವೆ. ಇಂತಹ ಬದಲಾವಣೆ ಸಾಮಾನ್ಯವಾಗಿ ತೋರದಿದ್ದಾಗ ತಜ್ಞ ವೈದ್ಯರನ್ನು ಸಂಪರ್ಕಿಸಿ.

ಮುಂದೆ ಓದಿ ...
  • Share this:

ಹುಡುಗಿಯರು ಪ್ರೌಢಾವಸ್ಥೆಗೆ ಬಂದಾಗ ಆಗುವ ಬದಲಾವಣೆಗೆ ಬಗ್ಗೆ ಮಾಹಿತಿಯಿದೆ. ಆದರೆ ಹುಡುಗರು ಪ್ರೌಢಾವಸ್ಥೆಗೆ ಬಂದಾಗ ಆಗುವ ಬದಲಾವಣೆಗಳೇನು? 


ಪುರುಷ ಪ್ರೌಢಾವಸ್ಥೆಯ ಬಗ್ಗೆ ನಿಖರ ಚಿಹ್ನೆಗಳು ಮತ್ತು ಪರಿಣಾಮಗಳೇನು ಎಂಬುದರ ಬಗ್ಗೆ ಮಾಹಿತಿ ಮತ್ತು ಅರಿವಿನ ಕೊರತೆಯಿದೆ. ಪ್ರೌಢಾವಸ್ಥೆಯು ಮಗುವಿನಿಂದ ವಯಸ್ಕನಾಗಿ ಬದಲಾದಾಗ ಮೂಲ ಲಕ್ಷಣಗಳು ಒಂದೇ ಆಗಿದ್ದರೂ, ಕೆಲವು ಮಕ್ಕಳಲ್ಲಿ ಇತರರಿಗಿಂತ ಹೆಚ್ಚು ತೀವ್ರವಾಗಿರಬಹುದು. ಸರಾಸರಿ ಹುಡುಗರು ಪ್ರೌಢಾವಸ್ಥೆಯ ಆರಂಭಿಕ ಲಕ್ಷಣಗಳನ್ನು ಕೇವಲ 12-14 ವರ್ಷ ವಯಸ್ಸಿನವರಲ್ಲೇ ತೋರಿಸುತ್ತಾರೆ. ಹುಡುಗರಲ್ಲಿ ಪ್ರೌಢಾವಸ್ಥೆಯ ಕೆಲವು ಮೊದಲ ಚಿಹ್ನೆಗಳು ಹೀಗಿವೆ.


ಒಂದು ವರ್ಷ ಅಥವಾ ನಂತರ, ಮುಂದಿನ 4-5 ವರ್ಷಗಳವರೆಗೆ, ಹುಡುಗನ ದೇಹದ ಬೆಳವಣಿಗೆ ಆದಂತೆ ಈ ಕೆಳಗಿನ ದೈಹಿಕ ರೂಪಾಂತರಗಳು ಆಗುತ್ತವೆ.


  • ಮುಖದ ಮೇಲೆ ಕೂದಲು ಬೆಳೆಯುತ್ತದೆ.

  • ಶಿಶ್ನ ಮತ್ತು ವೃಷಣಗಳು ಬೆಳೆಯುತ್ತವೆ

  • ‘ಕಂಕಳು ಹಾಗೂ ಕೆಳ ಭಾಗದಲ್ಲಿ ಕೂದಲು ಬೆಳೆಯುತ್ತವೆ.

  • ಹುಡುಗರ ಧ್ವನಿ ಒಡೆಯುತ್ತದೆ.

  • ಮೊಡವೆ ಬೆಳೆಯುತ್ತದೆ

  • ಹುಡುಗರು ಸರಾಸರಿ 7-8 ಸೆಂಟಿ ಮೀಟರ್ ಬೆಳೆಯುತ್ತಾರೆ

  • ಕಾಮಪ್ರಚೋದಕ ಸ್ವಭಾವದ ಕನಸುಗಳನ್ನು ಕಾಣಲು ಆರಂಭಿಸುತ್ತಾರೆ. ಮತ್ತು ನಿದ್ರೆಯಲ್ಲಿ ಸ್ಖಲನ ಸಾಧ್ಯತೆ ಇದೆ.


ಸುಮಾರು ನಾಲ್ಕರಿಂದ ಐದು ವರ್ಷಗಳ ಪ್ರೌಢಾವಸ್ಥೆಯ ನಂತರ, ಹೆಚ್ಚಿನ ಹುಡುಗರು 18ನೇ ವಯಸ್ಸಿನಲ್ಲಿ ಪ್ರಬುದ್ಧತೆಯ ಹಂತ ತಲುಪುತ್ತಾರೆ. ಅವರ ಜನನಾಂಗಗಳು ವಯಸ್ಕರಂತೆ ಕಾಣುತ್ತವೆ ಮತ್ತು ಒಳ ತೊಡೆಗಳಿಗೆ ಕೂದಲು ಹರಡುತ್ತದೆ. ಮುಖದ ಮೇಲಿನ ಕೂದಲು ದಪ್ಪವಾಗುತ್ತದೆ ಮತ್ತು ಮುಖದ ಕೆಳಭಾಗವನ್ನು ತುಂಬುತ್ತದೆ. ಇವು
ಹುಡುಗರಲ್ಲಿ ಪ್ರೌಢಾವಸ್ಥೆಯ ದೈಹಿಕ ಲಕ್ಷಣಗಳು.


ಇದನ್ನು ಓದಿ: Sexual wellness: ವಿವಾಹಕ್ಕೂ ಮುನ್ನ ಲೈಂಗಿಕ ಸಂಬಂಧ ಹೊಂದಲು ನಮ್ಮಲ್ಲಿ ಮುಕ್ತ ಅವಕಾಶ ಏಕಿಲ್ಲ?


ಹೆಚ್ಚುವರಿಯಾಗಿ ಪೋಷಕರು ತಮ್ಮ ಮಕ್ಕಳಲ್ಲಿ ಆಗುವ ಈ ದೈಹಿಕ ಬದಲಾವಣೆಗಳು ಅವರ ಮೇಲೆ ಬೀರುವ ಭಾವನಾತ್ಮಕ ಮತ್ತು ಮಾನಸಿಕ ಒತ್ತಡದ ಬಗ್ಗೆ ಜಾಗೃತರಾಗಿರುವುದು ಬಹಳ ಮುಖ್ಯ. ಈ ಬದಲಾವಣೆ ಹಂತದಲ್ಲಿ ಸ್ವಾಭಿಮಾನ, ಖಿನ್ನತೆ, ಆತಂಕ, ಕೋಪದ ಸಮಸ್ಯೆಗಳು, ಮನಸ್ಥಿತಿ ಬದಲಾವಣೆಗಳಂತಹ ಅನೇಕ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇವು ಹದಿಹರೆಯದ ವರ್ಷಗಳಲ್ಲಿ ಸಾಮಾನ್ಯವಾಗಿರುತ್ತವೆ. ಇಂತಹ ಬದಲಾವಣೆ ಸಾಮಾನ್ಯವಾಗಿ ತೋರದಿದ್ದಾಗ ತಜ್ಞ ವೈದ್ಯರನ್ನು ಸಂಪರ್ಕಿಸಿ.

Published by:HR Ramesh
First published: