ದಿನಕ್ಕೆ ಎಷ್ಟು ಹೊತ್ತು ಮಲಗ್ತೀರಾ?; ನಿದ್ರೆ ಕಡಿಮೆಯಾದರೆ ಏನಾಗುತ್ತೆ ಗೊತ್ತಾ... ಇಲ್ಲಿದೆ ಶಾಕಿಂಗ್​ ನ್ಯೂಸ್​!

ಕೆಲವರಿಗೆ ರಾತ್ರಿ ಪಕ್ಕದ ಮನೆಯ ಬಾತ್​ರೂಂನಲ್ಲಿ ಫ್ಲಶ್​ ಮಾಡಿದ ಸಪ್ಪಳವಾದರೂ ಎಚ್ಚರವಾಗುತ್ತದೆ. ಇನ್ನು ಕೆಲವರಿಗೆ ಕಿವಿ ಪಕ್ಕದಲ್ಲಿರುವ ಅಲಾರಾಂ ಹತ್ತು ಬಾರಿ ಹೊಡೆದುಕೊಂಡರೂ ಪರಿವೆಯೇ ಇರುವುದಿಲ್ಲ. ಒಬ್ಬೊಬ್ಬರ ನಿದ್ರೆ ಒಂದೊಂದು ರೀತಿ. ಒಬ್ಬೊಬ್ಬರು ಕುಂಭಕರ್ಣನ ಅಪರಾವತಾರವಾದರೆ ಇನ್ನು ಕೆಲವರದು ಬಹಳ ಸೂಕ್ಷ್ಮ ನಿದ್ರೆ. ಯಾಕಿದೆಲ್ಲ ಹೇಳ್ತಿದ್ದೀವಿ ಅಂತ ಯೋಚನೆ ಮಾಡ್ತಿದ್ದೀರಾ?

sushma chakre | news18
Updated:February 5, 2019, 10:26 PM IST
ದಿನಕ್ಕೆ ಎಷ್ಟು ಹೊತ್ತು ಮಲಗ್ತೀರಾ?; ನಿದ್ರೆ ಕಡಿಮೆಯಾದರೆ ಏನಾಗುತ್ತೆ ಗೊತ್ತಾ... ಇಲ್ಲಿದೆ ಶಾಕಿಂಗ್​ ನ್ಯೂಸ್​!
ಸಾಂದರ್ಭಿಕ ಚಿತ್ರ
  • News18
  • Last Updated: February 5, 2019, 10:26 PM IST
  • Share this:
ನಾಳೆ ತಿಂಡಿ ಏನು ಮಾಡೋದು? ಆಫೀಸಲ್ಲಿ ಮತ್ತೆ ಬಾಸ್​ ಹತ್ರ ಬೈಸ್ಕೋಬೇಕಾ? ಕರೆಂಟ್​ ಬಿಲ್ ಕಟ್ಟಿದೀನೋ ಇಲ್ವೋ? ಇವತ್ತು ಪಕ್ಕದ ಮನೆಯವಳು ನನ್ ಹತ್ರ ಯಾಕೆ ಆ ರೀತಿ ಮಾತಾಡಿದ್ಲು? ಈ ಬಾರಿಯಾದರೂ ನನಗೆ ಪ್ರಮೋಷನ್​ ಸಿಗುತ್ತೋ ಇಲ್ವೋ.. ಈಗ ಟೈಂ ಎಷ್ಟಾಗಿರಬಹುದು? ಏಳೋ ಟೈಮ್​ ಆಗೋಯ್ತ? ಇವೆಲ್ಲ ಏನು? ಅಂತ ಯೋಚನೆ ಮಾಡ್ತಿದ್ದೀರಾ? ಬಹುತೇಕರು ರಾತ್ರಿ ಮಲಗಿದಾಗ ಇಂತಹ ಯೋಚನೆಗಳಲ್ಲೇ ರಾತ್ರಿ ಕಳೆದುಬಿಡುತ್ತಾರೆ ಎನ್ನುತ್ತದೆ ಒಂದು ಅಧ್ಯಯನ.

ನಾವು ಆರೋಗ್ಯವಾಗಿರಲು ಊಟ-ತಿಂಡಿ ಎಷ್ಟು ಮುಖ್ಯವೋ ನಿದ್ರೆ ಅದಕ್ಕಿಂತಲೂ ಮುಖ್ಯ. ಚಿಂತೆಯಿಲ್ಲದವರಿಗೆ ಸಂತೆಯಲ್ಲೂ ನಿದ್ರೆ ಅನ್ನೋ ಒಂದು ಮಾತಿದೆ. ಆದರೆ, ಈಗಿನ ಕಾಲದಲ್ಲಿ ಚಿಂತೆಯಿಲ್ಲದವರು ಯಾರಿದ್ದಾರೆ ಹೇಳಿ... ಕೆಲವರು ಏಕಾಗ್ರತೆ, ಮನಸಿಗೆ ನೆಮ್ಮದಿ ಇಲ್ಲವೆಂದು ಯೋಗ, ಧ್ಯಾನದತ್ತ ಮುಖ ಮಾಡುತ್ತಾರೆ. ಆದರೆ, ಅದೆಲ್ಲದಕ್ಕಿಂತ ಉತ್ತಮ ಆಯ್ಕೆಯೆಂದರೆ ಚೆನ್ನಾಗಿ ನಿದ್ರೆ ಮಾಡುವುದು.ಅವಳಲ್ಲಿ... ಅವನಿಲ್ಲಿ... ದೂರವಿದ್ದಷ್ಟೂ ಪ್ರೀತಿ ಜಾಸ್ತಿಯಂತೆ!

ನೀವು ರಾತ್ರಿ ಪದೇಪದೇ ಎದ್ದು ಕೂರುತ್ತೀರ? ನಿದ್ರೆ ಮಾಡಲು ಪರದಾಡುತ್ತೀರ? ಹಾಗಿದ್ದರೆ ಈ ಸ್ಟೋರಿಯನ್ನು ಓದಲೇಬೇಕು. ನಿದ್ರೆ ಕಡಿಮೆಯಾದರೆ ಅದರ ನೇರ ಪರಿಣಾಮ ನಮ್ಮ ದೇಹ ಮತ್ತು ಮನಸಿನ ಮೇಲಾಗುತ್ತದೆ. ನಿದ್ರೆ ಕಡಿಮೆಯಾದರೆ ನಾವು ಸ್ಮರಣಶಕ್ತಿಯಲ್ಲಿ ವೀಕ್​ ಆಗುತ್ತಾ ಹೋಗುತ್ತೇವೆ. ಅದೇ ಕಾರಣಕ್ಕೆ ವಿದ್ಯಾರ್ಥಿಗಳು ನಿದ್ರೆಗೆಟ್ಟು ಓದಬಾರದು ಎಂದು ಹಿರಿಯರು ಹೇಳುತ್ತಿದ್ದರು. ನಿದ್ರೆ ಮಾಡುವಾಗ ಮೆದುಳು ವಿಶ್ರಾಂತಿಯಲ್ಲಿರುತ್ತದೆ. ಆಗ ಹೊಸ ನೆನಪುಗಳನ್ನು ಹಿಡಿದಿಟ್ಟುಕೊಳ್ಳಲು ಅದು ಸಿದ್ಧಗೊಳ್ಳುತ್ತದೆ. ನಿದ್ರೆಯೇ ಬರಲಿಲ್ಲ ಎಂದರೆ ಮೆದುಳಿಗೆ ಆ ಆಯ್ಕೆಯೇ ಇರುವುದಿಲ್ಲ.ಹುಡುಗೀರಿಗೆ ಹೇಗಿದ್ರೆ ಇಷ್ಟವಾಗುತ್ತೆ ಗೊತ್ತಾ?; ಹುಡುಗರಿಗೆ ಗೊತ್ತಿಲ್ಲದ 9 ಸೀಕ್ರೆಟ್​ಗಳುನಿದ್ರಾಹೀನತೆಯಿಂದ ಮೆದುಳಿನಲ್ಲಿ ಟಾಕ್ಸಿಕ್​ ಪ್ರೋಟೀನ್​ ಹೆಚ್ಚಾಗಿ ಅಲ್ಜೀಮರ್​ ಕಾಯಿಲೆಗೂ ಕಾರಣವಾಗಬಹುದು ಎನ್ನುತ್ತದೆ ಸಮೀಕ್ಷೆ. ಅಲ್ಜೀಮರ್​ ಎಂದರೆ ಹಳೆಯದ್ದನ್ನು ಮರೆಯುವ ಒಂದು ಕಾಯಿಲೆ. ಹಾಗೇ, ಚೆನ್ನಾಗಿ ನಿದ್ರೆ ಮಾಡದೆ ಹೋದರೆ ಸಂತಾನೋತ್ಪತ್ತಿಯ ಮೇಲೂ ಪರಿಣಾಮವಾಗುತ್ತದೆ. ದಿನಕ್ಕೆ 5ರಿಂದ 6 ಗಂಟೆ ನಿದ್ರೆ ಮಾಡುವ ಪುರುಷರ ಸಂತಾನಶಕ್ತಿಯ ಮೇಲೂ ಪರಿಣಾಮ ಬೀರುತ್ತದೆ.

ಬಾಚಣಿಗೆಯಲ್ಲಿ ಕೂದಲು ಕಿತ್ತುಬರುತ್ತಾ?; ಕೂದಲು ಉದುರುವಿಕೆಗೆ ಮನೆಯಲ್ಲೇ ಇದೆ ರಾಮಬಾಣಅಷ್ಟೇ ಅಲ್ಲ. ನಿದ್ರಾಹೀನತೆಯಿಂದ ಹೃದಯ ರಕ್ತನಾಳ ವ್ಯವಸ್ಥೆಯ ಮೇಲೂ ಪ್ರಭಾವ ಬೀರಲಿದ್ದು, ಹಗಲು ನಿದ್ರೆ ಮಾಡುವುದಕ್ಕಿಂತ ರಾತ್ರಿ ವೇಳೆ ಮಾಡುವ ನಿದ್ರೆ ಆರೋಗ್ಯಕ್ಕೆ ಬಹಳ ಮುಖ್ಯ ಎಂದು ಅಮೆರಿಕದ ಸಂಶೋಧನಾ ವಿದ್ಯಾರ್ಥಿಗಳು ನಡೆಸಿದ ಅಧ್ಯಯನದಿಂದ ಸಾಬೀತಾಗಿದೆ. ನೀವು ದಿನವಿಡೀ ಎಷ್ಟೇ ಒತ್ತಡದಿಂದ ಕಳೆದಿದ್ದರೂ, ದೈಹಿಕ ಅಥವಾ ಮಾನಸಿಕವಾಗಿ ಬಳಲಿದ್ದರೂ ರಾತ್ರಿ ಕನಿಷ್ಟ 7ರಿಂದ 8 ಗಂಟೆ ನಿದ್ರೆ ಮಾಡಿದರೆ ಮಾರನೇ ದಿನ ಫ್ರೆಶ್​ ಆಗಿ ಕಾಣುತ್ತೀರಿ. ನಿದ್ರೆಯೇ ಮಾಡಲು ಸಾಧ್ಯವಾಗುವುದಿಲ್ಲ ಎಂದಾದರೆ ಧ್ಯಾನ, ಯೋಗದಿಂದ ಆ ಕೊರತೆಯನ್ನು ನೀಗಿಸಿಕೊಳ್ಳುವುದು ಅಸಾಧ್ಯ. ಹಾಗಾಗಿ, ನಿದ್ರೆ ಮಾಡಿ, ಆರೋಗ್ಯವಾಗಿರಿ!

First published:February 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ