• Home
  • »
  • News
  • »
  • lifestyle
  • »
  • Nature: ಪ್ರಕೃತಿಯಲ್ಲಿ ಒಂದು ಗಂಟೆಗಳ ಕಾಲ ಸಮಯ ಕಳೆಯುವುದರಿಂದ ಏನಾಗತ್ತೆ ಗೊತ್ತಾ?

Nature: ಪ್ರಕೃತಿಯಲ್ಲಿ ಒಂದು ಗಂಟೆಗಳ ಕಾಲ ಸಮಯ ಕಳೆಯುವುದರಿಂದ ಏನಾಗತ್ತೆ ಗೊತ್ತಾ?

ಸಾಂದರ್ಭಭಿಕ ಚಿತ್ರ

ಸಾಂದರ್ಭಭಿಕ ಚಿತ್ರ

Nature: ಪ್ರಕೃತಿಯ ಮಧ್ಯೆ ತುಸು ಹೊತ್ತು ಸಮಯ ಕಳೆಯುವುದು ಆತಂಕ, ಖಿನ್ನತೆ, ಹೃದಯ ಸಂಬಂಧಿ ಅಪಾಯಗಳನ್ನು ಕಡಿಮೆ ಮಾಡಿದ್ದು ಉತ್ತಮ ನಿದ್ರೆ, ಸ್ಮರಣೆ ಅಂತೆಯೇ ಮಾನಸಿಕ ಹಾಗೂ ದೈಹಿಕ ಆರೋಗ್ಯ ಪ್ರಯೋಜನಗಳಿಗೆ ಕೊಡುಗೆಯನ್ನು ನೀಡುತ್ತದೆ

  • Share this:

ಮಾನವ ಇತಿಹಾಸದತ್ತ ನೋಡಿದಾಗ ಪ್ರಕೃತಿ ಹಾಗೂ ಮಾನವನ ಸಂಬಂಧ ಅತ್ಯಂತ ಗಮನಾರ್ಹವಾದ ಪರಿಚಯವನ್ನು ಮಾಡಿಸುತ್ತದೆ. ಮಾನವ ಕೊಂಚ ಕೊಂಚ ಪ್ರಗತಿಯನ್ನು(Development) ಸಾಧಿಸಿದ್ದು ನಿಸರ್ಗದ ಕೊಡುಗೆಗಳ (Gift) ಮೂಲಕ ಎಂಬುದು ಇಲ್ಲಿ ಹೆಚ್ಚು ಆಧಾರಿತವಾದ ಮಾತಾಗಿದ್ದು ಆತನ ಪ್ರತಿಯೊಂದು ಅವಶಕ್ಯತೆಗಳಲ್ಲಿ ನಿಸರ್ಗದ ಕೊಡುಗೆ ಮಹತ್ವವಾದುದು.ಇದೀಗ ಈ ಕುರಿತು ಸಂಶೋಧನೆಯೊಂದು ಅರಣ್ಯ, ನಿಸರ್ಗ  (Nature) ಮಾನವನ ಆರೋಗ್ಯವನ್ನು(Health) ಸುಧಾರಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದೆ ಎಂಬುದನ್ನು ದೃಢೀಕರಿಸಿದೆ. ಪ್ರಕೃತಿಯ ಮಧ್ಯೆ ತುಸು ಹೊತ್ತು ಸಮಯ ಕಳೆಯುವುದು ಆತಂಕ, ಖಿನ್ನತೆ, ಹೃದಯ ಸಂಬಂಧಿ ಅಪಾಯಗಳನ್ನು ಕಡಿಮೆ ಮಾಡಿದ್ದು ಉತ್ತಮ ನಿದ್ರೆ, ಸ್ಮರಣೆ ಅಂತೆಯೇ ಮಾನಸಿಕ ಹಾಗೂ ದೈಹಿಕ ಆರೋಗ್ಯ ಪ್ರಯೋಜನಗಳಿಗೆ ಕೊಡುಗೆಯನ್ನು ನೀಡುತ್ತದೆ. ಹಾಗಿದ್ದರೆ ಇದು ಹೇಗೆ ಎಂಬುದನ್ನು ಈ ಲೇಖನದಿಂದ ತಿಳಿದುಕೊಳ್ಳೋಣ


ಗ್ರಾಮೀಣ ನಿವಾಸಿಗಳಲ್ಲಿ ಅಮಿಗ್ಡಾಲಾ ಕಡಿಮೆ ಸಕ್ರಿಯ


ಮೆದುಳಿನ ಮಧ್ಯಭಾಗದಲ್ಲಿರುವ ಅಮಿಗ್ಡಾಲಾ ಎಂಬ ಸಣ್ಣ ರಚನೆಯು ಒತ್ತಡ ಸಂಸ್ಕರಣೆ, ಭಾವನಾತ್ಮಕ ಅರಿಯುವಿಕೆ, ಸಮಸ್ಯೆಯೊಂದಿಗೆ ಹೋರಾಟ ಇಲ್ಲವೇ ಪಲಾಯನ ಪ್ರಕ್ರಿಯೆಯಲ್ಲಿ ಒಳಗೊಂಡಿರುತ್ತದೆ. ಸಂಶೋಧನೆಗಳ ಪ್ರಕಾರ ಗ್ರಾಮೀಣ ನಿವಾಸಿಗಳು ಮತ್ತು ನಗರ ನಿವಾಸಿಗಳಲ್ಲಿ ಒತ್ತಡದ ಸಮಯದಲ್ಲಿ ಅಮಿಗ್ಡಾಲಾ ಗ್ರಾಮೀಣ ನಿವಾಸಿಗಳಲ್ಲಿ ಕಡಿಮೆ ಸಕ್ರಿಯವಾಗಿದೆ ಎಂಬುದನ್ನು ಸೂಚಿಸಿದೆ.


ಇದನ್ನೂ ಓದಿ: ಹಬ್ಬಕ್ಕೆ ಭರ್ಜರಿ ಆಫರ್, ಸಾವಿರ ರೂಪಾಯಿ ಒಳಗೆ ಖರೀದಿಸಿ ಬ್ಯೂಟಿಫುಲ್ ಡ್ರೆಸ್


ಪ್ರಕೃತಿಯೊಂದಿಗೆ ಕಾಲಕಳೆಯುವವರು ಕಡಿಮೆ ರಕ್ತದೊತ್ತಡ, ಕಡಿಮೆಯಾದ ಆತಂಕ ಮತ್ತು ಖಿನ್ನತೆ, ಸುಧಾರಿತ ಮನಸ್ಥಿತಿ, ಉತ್ತಮ ಗಮನ, ಉತ್ತಮ ನಿದ್ರೆ, ಉತ್ತಮ ಜ್ಞಾಪಕಶಕ್ತಿ, ಮತ್ತು ಕಡಿಮೆ ರಕ್ತದೊತ್ತಡ ಸೇರಿದಂತೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಪ್ರಯೋಜನವನ್ನು ಪಡೆಯುತ್ತಾರೆ.


ಸಂಶೋಧನೆ ನಡೆಸಿದ ಸಂಶೋಧಕರು


ಈ ಸಂಶೋಧನೆಗಾಗಿ 63 ಆರೋಗ್ಯವಂತ ವ್ಯಕ್ತಿಗಳನ್ನು ಸಂಶೋಧಕರು ಆಯ್ಕೆಮಾಡಿದರು ಹಾಗೂ ಕೆಲವೊಂದು ಪ್ರಶ್ನೆಗಳನ್ನು ನೀಡಿ ಉತ್ತರ ತುಂಬಲು ಹೇಳಿದರು. ಅವರ ಸ್ಮರಣಾ ಶಕ್ತಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಗಮನಿಸಿದರು ಹಾಗೂ ಅವರನ್ನು ಎಮ್‌ಐಆರ್ ಸ್ಕ್ಯಾನ್‌ಗಳಿಗೆ ಒಳಗಾಗಲು ಸೂಚಿಸಿದರು.


ಸಂಶೋಧನೆಯ ಉದ್ದೇಶ ಬಹಿರಂಗಪಡಿಸಲಿಲ್ಲ


ಭಾಗವಹಿಸುವವರಿಗೆ ಅಧ್ಯಯನದಲ್ಲಿ ಎಮ್‌ಐಆರ್ ಸ್ಕ್ಯಾನ್ ಮಾಡಲಾಗುತ್ತದೆ ಹಾಗೂ ನಡಿಗೆಯ ಪ್ರಕ್ರಿಯೆ ಇರುತ್ತದೆ ಎಂದು ತಿಳಿಸಲಾಗಿತ್ತು ಆದರೆ ಸಂಶೋಧನೆಯ ನಿಜವಾದ ಉದ್ದೇಶ ಏನು ಎಂಬುದನ್ನು ಅವರಿಗೆ ಬಹಿರಂಗಪಡಿಸಿರಲಿಲ್ಲ.


ಇದನ್ನೂ ಓದಿ: ಇಂಟ್ರೋವರ್ಟ್​ಗಳನ್ನು ಡೇಟ್​ ಮಾಡ್ತಿದ್ರೆ ಅವರ ಜೊತೆ ಹೀಗಿರಬೇಕಂತೆ


ಅಧ್ಯಯನದಲ್ಲಿ ಕೆಲವರನ್ನು ನಗರದ ಕಡೆಗೆ ನಡೆದಾಡಿಕೊಂಡು ಬರಲು ತಿಳಿಸಲಾಯಿತು ಇನ್ನು ಕೆಲವರನ್ನು ಹಚ್ಚಹಸುರಿನ ಪ್ರದೇಶದಲ್ಲಿ ಒಂದು ಗಂಟೆ ಕಾಲ ನಡೆಯಲು ಕೇಳಲಾಯಿತು. ಈ ಎರಡೂ ಸ್ಥಳದಲ್ಲಿ ನಡೆಯುವವರು ನಿರ್ದಿಷ್ಟ ಮಾರ್ಗದಲ್ಲೇ ನಡೆಯಬೇಕು ಎಂದು ಸಂಶೋಧಕರು ತಿಳಿಸಿದ್ದರು. ನಡಿಗೆಯ ಸಮಯದಲ್ಲಿ ನಿರ್ದಿಷ್ಟ ಮಾರ್ಗವನ್ನು ಬಿಟ್ಟು ಬೇರೆಡೆಗೆ ಹೋಗದಂತೆ ಹಾಗೂ ಮೊಬೈಲ್‌ಗಳನ್ನು ಬಳಸದಂತೆ ಸೂಚಿಸಲಾಯಿತು. ನಡಿಗೆಯನ್ನು ಪೂರ್ತಿಗೊಳಿಸಿದ ಬಳಿಕ ಭಾಗವಹಿಸುವವರಿಗೆ ಪುನಃ ಎಮ್‌ಐಆರ್ ಸ್ಕ್ಯಾನ್ ಮಾಡಲಾಯಿತು ಹಾಗೂ ಪ್ರಶ್ನಾವಳಿಯನ್ನು ನೀಡಲಾಯಿತು.


ಪ್ರಕೃತಿಯ ನಡುವೆ ನಡಿಗೆ ಅಮಿಗ್ಡಾಲಾದಲ್ಲಿ ಕಡಿಮೆ ಚಟುವಟಿಕೆ


ಹಚ್ಚಹಸುರಿನ (ಕಾಡು, ಉದ್ಯಾನ) ಪ್ರದೇಶದಲ್ಲಿ ಓಡಾಡಿದವರ ಎಮ್‌ಆರ್‌ಐ ಸ್ಕ್ಯಾನ್‌ ಅಮಿಗ್ಡಾಲಾದಲ್ಲಿ ಕಡಿಮೆ ಚಟುವಟಿಕೆಯನ್ನು ತೋರಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ. ಒತ್ತಡದಿಂದ ಪ್ರೇರಿತಗೊಂಡಿರುವ ಮೆದುಳಿನಲ್ಲಿ ಪ್ರಕೃತಿಯು ಪ್ರಯೋಜನಕಾರಿ ಪರಿಣಾಮಗಳನ್ನು ಉಂಟುಮಾಡಿರುವುದನ್ನು ಕಂಡುಕೊಂಡಿದ್ದಾರೆ. ಅದು ಕೂಡ ಒಂದು ಗಂಟೆಯ ಅವಧಿಯಲ್ಲಿ ಎಂಬುದನ್ನು ಸಂಶೋಧಕರು ಗುರುತಿಸಿದ್ದಾರೆ.


ಇಲ್ಲಿ ಕಂಡುಬಂದಿರುವ ಫಲಿತಾಂಶಗಳು ನಿಸರ್ಗ ಹಾಗೂ ಮೆದುಳಿನ ನಡುವಿನ ಧನಾತ್ಮಕ ಸಂಪರ್ಕವನ್ನು ಬೆಂಬಲಿಸುತ್ತದೆ ಎಂದು ಪರಿಸರ ನರವಿಜ್ಞಾನಿ ಸಿಮೋನ್ ಕೋಹ್ನ್ ತಿಳಿಸಿದ್ದಾರೆ. ನಗರದಲ್ಲಿ ಓಡಾಡಿದವರಿಗಿಂತ ಪ್ರಕೃತಿಯ ಮಧ್ಯೆ ನಡೆದಾಡಿದವರು ನಡಿಗೆಯ ಹೆಚ್ಚಿನ ಆನಂದವನ್ನು ಪಡೆದಿದ್ದಾರೆ ಎಂಬುದು ಸ್ಕ್ಯಾನಿಂಗ್‌ನಿಂದ ತಿಳಿದು ಬಂದಿದೆ ಎಂದು ವಿಜ್ಞಾನಿ ತಿಳಿಸಿದ್ದಾರೆ.

First published: