Heart Care: ಕಾರ್ಡಿಯಕ್​ ಅರೆಸ್ಟ್​- ಹಾರ್ಟ್​ ಅಟ್ಯಾಕ್​ ನಡುವಿನ ವ್ಯತ್ಯಾಸವೇನು? ಪುನೀತ್​ಗೆ ಆಗಿದ್ದೇನು?

ಬಹುತೇಕ ಮಂದಿ ಕಾರ್ಡಿಯಾಕ್​ ಅರೆಸ್ಟ್​ ಹಾಗೂ ಹಾರ್ಟ್​ ಅಟ್ಯಾಕ್ ಒಂದೇ ಎಂದು ತಿಳಿದಿದ್ದಾರೆ. ಆದರೆ ಇವರೆಡು ಒಂದೇ ಅಲ್ಲ.

ಬಹುತೇಕ ಮಂದಿ ಕಾರ್ಡಿಯಾಕ್​ ಅರೆಸ್ಟ್​ ಹಾಗೂ ಹಾರ್ಟ್​ ಅಟ್ಯಾಕ್ ಒಂದೇ ಎಂದು ತಿಳಿದಿದ್ದಾರೆ. ಆದರೆ ಇವರೆಡು ಒಂದೇ ಅಲ್ಲ.

ಬಹುತೇಕ ಮಂದಿ ಕಾರ್ಡಿಯಾಕ್​ ಅರೆಸ್ಟ್​ ಹಾಗೂ ಹಾರ್ಟ್​ ಅಟ್ಯಾಕ್ ಒಂದೇ ಎಂದು ತಿಳಿದಿದ್ದಾರೆ. ಆದರೆ ಇವರೆಡು ಒಂದೇ ಅಲ್ಲ.

  • Share this:
    ಪುನೀತ್​ ರಾಜ್​ ಕುಮಾರ್ (Puneeth Rajkumar​, ಚಿರಂಜೀವಿ ಸರ್ಜಾ (chiranjeevi sarja), ಸಿದ್ಧಾರ್ಥ್​ ಶುಕ್ಲಾ ಅವರಂತಹ ಯುವ ವಯಸ್ಸಿನ ನಟರ ಸಾವು ಅನೇಕರಲ್ಲಿ ದಿಗ್ಭ್ರಮೆ ಮೂಡಿಸಿದೆ. ಯುವಜನತೆಯಲ್ಲಿ ಹೆಚ್ಚುತ್ತಿರುವ ಈ ಹೃದಯಾಘಾತ (Heart Attack) ಸಾಕಷ್ಟ ಆತಂಕಕ್ಕೆ ಕಾರಣವಾಗಿದೆ. ಯುವಜನತೆಯಲ್ಲಿ ಯಾವ ಕಾರಣದಿಂದಾಗಿ ಈ ಹೃದಯಾಘಾತ ಹೆಚ್ಚುತ್ತಿದೆ ಎಂಬ ಕುರಿತು ವೈದ್ಯರು ಕೂಡ ಅನೇಕ ಸ್ಪಷ್ಟನೆಗಳನ್ನು ನೀಡುತ್ತಿದ್ದಾರೆ. ಇದರ ಜೊತೆಗೆ ಅನೇಕ ಸಲಹೆಗಳು ಕೂಡ ಕೇಳಿ ಬರುತ್ತಿದೆ. ಈ ಹೃದಯಾಘಾತ ಆಗದಂತೆ ಯಾವ ರೀತಿ ಎಚ್ಚರಿಕೆವಹಿಸಬೇಕು ಎಂಬ ಕುರಿತು ಪ್ರತಿಯೊಬ್ಬರು ತಿಳಿಯುವುದು ಅವಶ್ಯವಾಗಿದೆ. ಈ ನಡುವೆ ಹೃದಯಾಘಾತ (Heart Attack)  ಮತ್ತು ಹೃದಯ ಸ್ತಂಭನದ (cardiac arrest) ಕುರಿತು ಅರಿಯುವು ಅವಶ್ಯವಾಗಿದೆ.

    ಏನಿದು ಹೃದಯಾಘಾತ ಮತ್ತು ಹೃದಯ ಸ್ತಂಭನ
    ಬಹುತೇಕ ಮಂದಿ ಕಾರ್ಡಿಯಾಕ್​ ಅರೆಸ್ಟ್​ ಹಾಗೂ ಹಾರ್ಟ್​ ಅಟ್ಯಾಕ್ ಒಂದೇ ಎಂದು ತಿಳಿದಿದ್ದಾರೆ. ಆದರೆ ಇವರೆಡು ಒಂದೇ ಅಲ್ಲ.

    ಹೃದಯಾಘಾತವೆಂದರೆ ಪರಿಧಮನಿಯ ಅಪಧಮನಿಗಳಲ್ಲಿ ಒಂದನ್ನು ನಿರ್ಬಂಧಿಸಿದಾಗ. ಹೃದಯ ಸ್ನಾಯುವು ಅದರ ಪ್ರಮುಖ ರಕ್ತ ಪೂರೈಕೆಯನ್ನು ತಡೆಯುತ್ತದೆ. ಇದಕ್ಕೆ ಚಿಕಿತ್ಸೆ ನೀಡದೆ ಬಿಟ್ಟರೆ, ಅದು ಸಾಕಷ್ಟು ಆಮ್ಲಜನಕವನ್ನು ಪಡೆಯದ ಕಾರಣ ಹೃದಯ ಸಾಯಲು ಪ್ರಾರಂಭಿಸುತ್ತದೆ.

    ಹೃದಯ ಸ್ತಂಭನ (cardiac arrest) ಎಂದರೆ ವ್ಯಕ್ತಿಯ ಹೃದಯವು ಅವರ ದೇಹದ ಸುತ್ತ ರಕ್ತವನ್ನು ಪಂಪ್ ಮಾಡುವುದನ್ನು ನಿಲ್ಲಿಸುತ್ತದೆ. ಇದರಿಂದ ಅವರು ಸಾಮಾನ್ಯವಾಗಿ ಉಸಿರಾಡುವುದನ್ನು ನಿಲ್ಲಿಸುತ್ತಾರೆ.

    ಯುವ ವಯಸ್ಕರಲ್ಲಿ ಹೃದಯ ಸ್ತಂಭನಕ್ಕೆ (cardiac arrest) ಪ್ರಮುಖ ಕಾರಣ ಈ ಹೃದಯಾಘಾತ. ಇದು ಹೆಚ್ಚು ಅಪಾಯವನ್ನು ಮಾಡುವುದರ ಜೊತೆಗೆ ಹೃದಯ ಸ್ತಂಭನಕ್ಕೆ ಕಾರಣವಾಗುತ್ತದೆ.

    ಹೃದಯಾಘಾತ ಮತ್ತು ಹೃದಯ ಸ್ತಂಭನ ಎರಡೂ ತುರ್ತು ಪರಿಸ್ಥಿತಿಗಳಾಗಿದ್ದು ತಕ್ಷಣಕ್ಕೆ ವೈದ್ಯರ ಸಂಪರ್ಕಿಸಬೇಕು.

    ಇದನ್ನು ಓದಿ: ವಿಧಿ ನಿಜಕ್ಕೂ ಕ್ರೂರಿ... ಅಪ್ಪು​ ಸಾವಿಗೆ ಪ್ರಧಾನಿ ಮೋದಿ ಸಂತಾಪ

    ವೈದ್ಯ ಅಂಜನಪ್ಪ ಹೇಳುವುದು
    ಖ್ಯಾತ ವೈದ್ಯ ಅಂಜನಪ್ಪ ಹೇಳುವ ಪ್ರಕಾರ ನಟ ಪುನೀತ್​ ರಾಜ್​ ಕುಮಾರ್​ ಅವರಿಗೆ ಕಾರ್ಡಿಯಕ್​ ಅರೆಸ್ಟ್​ ಆಗಿದೆ. ಜಿಮ್​ನಲ್ಲಿ ಬಹಳ ಅಗಾಧವಾಗಿ ಅವರು ವಸ್ತುಗಳನ್ನು ಎತ್ತಿದ ಕಾರಣಕ್ಕೆ ಈ ರೀತಿಯಾಗಿ ಹೃದಯಸ್ತಂಭನ ಆಗಿರಬಹುದು ಎಂದು ಅವರು ತಿಳಿಸುತ್ತಾರೆ. ಯಾವುದೇ ತಕ್ಷಣದ ಆಘಾತದಿಂದ ಆಗುವ ಆತಂಕಗಳು ಕಾರ್ಡಿಯಕ್​ ಅರೆಸ್ಟ್​ ಆಗುತ್ತದೆ.



    ಡಾ.ಜಗದೀಶ್​ ಚತುರ್​ ಹೇಳುವ ಪ್ರಕಾರ
    ಯುವ ಜನತೆಯಲ್ಲಿ ಹೆಚ್ಚುತ್ತಿರುವ ಈ ಹಾರ್ಟ್​ ಅಟ್ಯಾಕ್​ ಬಗ್ಗೆ ಮಾತನಾಡಿರುವ ವೈದ್ಯ ಜಗದೀಶ್​​ ಚತುರ್​, ಸಬ್​ ಕ್ಲಿನಿಕಲ್​ ಮಯೋ ಕಾರ್ಡಿಯೆಟಿಸ್ಟ್​ (Subclinical Myocarditis) ಕೋವಿಡ್​ 19 ಒಳಗಾದವರು ಹೆಚ್ಚಿನ ಜನರು ಸಬ್​ ಕ್ಲಿನಿಕಲ್​ ಮಯೋ ಕಾರ್ಡಿಯೆಟಿಸ್ಟ್​ಗೆ ಒಳಗಾಗುವ ಸಾಧ್ಯತೆ ಇದೆ. ಈ ಸಬ್​ ಕ್ಲಿನಿಕಲ್​ ಮಯೋ ಕಾರ್ಡಿಯೆಟಿಸ್ಟ್​ ಎಂದರೆ ಹೃದಯ ಯಾವಾಗ ಹೆಚ್ಚು ಒತ್ತಡಕ್ಕೆ ಒಳಗಾದಗಾ ತಕ್ಷಣಕ್ಕೆ ನಿಲ್ಲುತ್ತದೆ.  ಸಾಮಾನ್ಯ ಹೃದಯಕ್ಕೂ ಈ ರೀತಿಯ Subclinical Myocarditis ಆಗುತ್ತದೆ.




    ಕೋವಿಡ್​ 19 ಸಮಯದಲ್ಲಿ ಬಂದ್​ ಆಗಿದ್ದ ಜಿಮ್​ಗಳು ಮತ್ತೆ ತೆರೆದಾಗ ಹೆಚ್ಚಿನ ಜನರು ವಿಶ್ರಾಂತಿಯಲ್ಲಿದ್ದ ಜನರು ತಕ್ಷಣಕ್ಕೆ ವ್ಯಾಯಾಮಗಳ ಮೊರೆ ಹೋದಾಗ ಹೆಚ್ಚಿನ ಒತ್ತಡಕ್ಕೆ ಸಿಲುಕಿ ಈ ರೀತಿಯ ಸಬ್​ ಕ್ಲಿನಿಕಲ್​ ಮಯೋ ಕಾರ್ಡಿಯೆಟಿಸ್ಟ್​ ಆಗುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ.

    ಇನ್ನು ಈ ಸಬ್​ ಕ್ಲಿನಿಕಲ್​ ಮಯೋ ಕಾರ್ಡಿಯೆಟಿಸ್ಟ್​ ಕುರಿತು ಯಾವುದೇ ಮಾಹಿತಿ ಇರುವುದಿಲ್ಲ. ಆದರೆ, ಈ ಕುರಿತ ಸೂಚನೆಗಳು ಇವು. ಎದೆ ನೋವಿ, ಹೃದಯ ಬಡಿತ ಹೆಚ್ಚಳ ಆದ ಕೂಡಲೇ ತಕ್ಷಣಕ್ಕೆ ವೈದ್ಯಕೀಯ ತಪಾಸಣೆಗೆ ಒಳಪಟ್ಟು, ಇಸಿಜಿ ಮಾಡಿಸುವುದು ಉತ್ತಮ ಎನ್ನುವ ಸಲಹೆಯನ್ನು ನೀಡುತ್ತಾರೆ ವೈದ್ಯರು.
    Published by:Seema R
    First published: