• Home
  • »
  • News
  • »
  • lifestyle
  • »
  • Health Tips: ವ್ಯಾಯಾಮವನ್ನು ಮಧ್ಯದಲ್ಲಿ ನಿಲ್ಲಿಸಿದರೆ ಏನಾಗುತ್ತೆ? ದೇಹದಲ್ಲಿ ಹೆಚ್ಚುತ್ತಾ ಕೊಬ್ಬು?

Health Tips: ವ್ಯಾಯಾಮವನ್ನು ಮಧ್ಯದಲ್ಲಿ ನಿಲ್ಲಿಸಿದರೆ ಏನಾಗುತ್ತೆ? ದೇಹದಲ್ಲಿ ಹೆಚ್ಚುತ್ತಾ ಕೊಬ್ಬು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Health Tips: ನಮ್ಮ ದೇಹವು ವರ್ಕ್‌ವೌಟ್‌ ಮಾಡೋದು ಬಿಟ್ಟ ತಕ್ಷಣ ಕೊಬ್ಬು ಹೆಚ್ಚಾಗುವುದಿಲ್ಲ. ಆದ್ರೆ ನಿಯಮಿತವಾಗಿ ದೇಹ ದಂಡಿಸುತ್ತಿರುವವರು ಸಡನ್‌ ಆಗಿ ವ್ಯಾಯಾಮ ಮಾಡೋದು ಬಿಟ್ರೆ ದೇಹದಲ್ಲಿ ಏರುಪೇರು ಆಗೋದು ಸಹಜ.

  • Trending Desk
  • 2-MIN READ
  • Last Updated :
  • Share this:

ಪ್ರತಿದಿನವೂ ಜಿಮ್‌, ವರ್ಕ್‌ವೌಟ್‌ ಮತ್ತು ಡಯೆಟ್‌ ಅಂತ ಫಾಲೋ ಮಾಡೋರು ಈಗ ಅಧಿಕ ಎಂದೇ ಹೇಳಬಹುದು. ಏಕೆಂದರೆ ಈಗೀನ ಲೈಫ್‌ಸ್ಟೈಲ್‌ (Lifestyle) ಹಾಗಿದೆ. ಯಾವಾಗಲೂ ಕಂಪ್ಯೂಟರ್‌ ಮುಂದೆ ಕುತ್ಕೊಂಡು ವರ್ಕ್‌ (Work) ಮಾಡೋದು, ಇದರಿಂದ ಹೆಚ್ಚಿನ ಕಸರತ್ತು ದೇಹಕ್ಕೆ (Body) ಸಿಗುತ್ತಿಲ್ಲ. ಆದ್ರಿಂದ ಎಲ್ಲರೂ ತಮ್ಮ ದೇಹವನ್ನು ಫಿಟ್‌ (Fit) ಆಗಿರಿಸಲು ಒಂದಲ್ಲ ಒಂದು ದೈಹಿಕ ಕಸರತ್ತು ನಡೆಸೇ ನಡೆಸುತ್ತಾರೆ. ಆದ್ರೆ ಎಲ್ಲರಿಗೂ ಒಂದು ಯೋಚ್ನೆ. ಅದು ಏನಪ್ಪ ಅಂದ್ರೆ ಈಗ ದಿನಾಲೂ ವ್ಯಾಯಾಮ, ಜಿಮ್‌, ವರ್ಕ್‌ವೌಟ್ ಮಾಡ್ತಾ ಇರ್ತಿವಿ ಆದ್ರೆ ಅದನ್ನು ಸಡನ್‌ ಆಗಿ ಸ್ವಲ್ಪ ದಿನ ನಿಲ್ಲಿಸಿದ್ರೆ ನಮ್ಮ ಸ್ನಾಯುಗಳಲ್ಲಿ ಕೊಬ್ಬು ಶೇಖರಣೆ ಆಗುತ್ತಾ? ನಾವು ಮುಂಚೆಗಿಂತ ದಪ್ಪ ಆಗ್ತಿವಾ ಅಂತ ಕೆಲವರ ಟೆನ್ಷನ್‌ ಆಗಿರುತ್ತೆ. ಅದಕ್ಕೆ ತಜ್ಞರ ಉತ್ತರ ಏನಿದೆ ಅಂತ ಇಲ್ಲಿ ತಿಳಿಯೋಣ.


ತಜ್ಞರ ಅಭಿಪ್ರಾಯವೇನು?:


“ನಮ್ಮ ದೇಹವು ವರ್ಕ್‌ವೌಟ್‌ ಮಾಡೋದು ಬಿಟ್ಟ ತಕ್ಷಣ ಕೊಬ್ಬು ಹೆಚ್ಚಾಗುವುದಿಲ್ಲ. ಆದ್ರೆ ನಿಯಮಿತವಾಗಿ ದೇಹ ದಂಡಿಸುತ್ತಿರುವವರು ಸಡನ್‌ ಆಗಿ ವ್ಯಾಯಾಮ ಮಾಡೋದು ಬಿಟ್ರೆ ದೇಹದಲ್ಲಿ ಏರುಪೇರು ಆಗೋದು ಸಹಜ. ಅನೇಕ ಬದಲಾವಣೆಗಳು ಕೂಡ ಆಗುತ್ತವೆ. ಆಗ ಸ್ನಾಯುಗಳು ಕುಗ್ಗುತ್ತವೆ, ತಮ್ಮ ದ್ರವ್ಯರಾಶಿಯನ್ನು ಕಳೆದುಕೊಳ್ಳುತ್ತವೆ ಮತ್ತು ಅಲ್ಲಿ ಕೊಬ್ಬಿನಾಂಶ ಹೆಚ್ಚು ಸಂಗ್ರಹವಾಗುತ್ತದೆ. ಇದು ನಿಜವಾದ ಕಾರಣವಾಗಿದೆ” ಎಂದು ದೆಹಲಿಯ ಸಾಕೇತ್‌ನ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ನಿರ್ದೇಶಕ ಡಾ.ರೊಮೆಲ್ ಟಿಕೂ ಹೇಳುತ್ತಾರೆ.


ಸ್ನಾಯುಗಳು ಕೊಬ್ಬಾಗಿ ಬದಲಾಗುತ್ತವೆಯೇ?:


ನೀವು ವ್ಯಾಯಾಮವನ್ನು ನಿಲ್ಲಿಸಿದಾಗ ದೇಹದ ಸ್ನಾಯುಗಳು ಕೊಬ್ಬುಗಳಾಗಿ ಬದಲಾಗುತ್ತವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಆದರೆ ಇದು ನಿಮ್ಮ ವ್ಯಾಯಾಮದ ಪರಿಣಾಮವಾಗಿದೆ. ನೀವು ವ್ಯಾಯಾಮ ಮಾಡುವುದನ್ನು ನಿಲ್ಲಿಸಿದಾಗ, ನಿಮ್ಮ ಜೀವನಶೈಲಿ ಅಥವಾ ಕೆಲಸದ ದಿನಚರಿಯಲ್ಲಿ ಬದಲಾವಣೆ ಅಥವಾ ದೈಹಿಕ ಸ್ಥಿತಿ ಅಥವಾ ಅನಾರೋಗ್ಯದ ಕಾರಣ, ನಿಮ್ಮ ದೇಹದ ಸಂಯೋಜನೆಯು ಬದಲಾಗಲು ಪ್ರಾರಂಭಿಸುತ್ತದೆ.


ಇದನ್ನೂ ಓದಿ: Christmas Gift Idea: ಈ ಬಾರಿ ಕ್ರಿಸ್​ಮಸ್​ಗೆ ವಿಭಿನ್ನವಾದ ಗಿಫ್ಟ್ ಕೊಡಿ, ಇಲ್ಲಿದೆ ನೋಡಿ ಸೂಪರ್ ಐಡಿಯಾ


ಸಡನ್ ಆಗಿ ವ್ಯಾಯಾಮ ನಿಲ್ಲಿಸುವುದರಿಂದ ಕಡಿಮೆ ದೈಹಿಕ ಚಟುವಟಿಕೆಯುಂಟಾಗಿ, ನಿಮ್ಮ ಸ್ನಾಯುಗಳು ಕುಗ್ಗುತ್ತವೆ ಮತ್ತು ಕೊಬ್ಬನ್ನು ವೇಗವಾಗಿ ಕರಗಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಕಡಿಮೆ ಕ್ಯಾಲೊರಿಗಳು ಬರ್ನ್‌ ಆಗುವುದರಿಂದ ಕೊಬ್ಬಿನಾಂಶಗಳು ಹೆಚ್ಚಾಗುತ್ತವೆ. ಈ ಪ್ರಕ್ರಿಯೆಯು ಸಾಮಾನ್ಯವಾಗಿ ನೀವು ವ್ಯಾಯಾಮ ಮಾಡುವಾಗ ಎಷ್ಟು ಕ್ಯಾಲೋರಿಗಳ ಆಹಾರ ಸೇವನೆ ಮಾಡುವಿರೋ ವ್ಯಾಯಾಮ ನಿಲ್ಲಿಸಿದಾಗಲೂ ಕೂಡ ಹಾಗೆ ಮಾಡಿದರೆ ಅದು ಕೊಬ್ಬಾಗಿ ಪರಿವರ್ತನೆಗೊಳ್ಳುತ್ತದೆ.


ಇದಕ್ಕೆ ಪರಿಹಾರವೇನು?:


ನಾವು ವ್ಯಾಯಾಮ ನಿಲ್ಲಿಸಿದಾಗಲೂ ನಮ್ಮ ಸ್ನಾಯುಗಳಲ್ಲಿ ಕೊಬ್ಬು ಸಂಗ್ರಹವಾಗಬಾರದೆಂದರೆ, ನಾವು ಒಂದು ನಿರ್ದಿಷ್ಟ ಜೀವನಶೈಲಿಯನ್ನು ರೂಢಿ ಮಾಡಿಕೊಳ್ಳಬೇಕು. ಸ್ನಾಯುಗಳಲ್ಲಿ ಕೊಬ್ಬು ಶೇಖರವಾಗಬಾರದೆಂದರೆ ನಾವು ನಿಧಾನವಾಗಿ ಸ್ನಾಯುಗಳಿಗೆ ತರಬೇತಿ ನೀಡಬೇಕು. ನಿಧಾನವಾದ ತರಬೇತಿ ಅಂದರೆ ಮೊದಲಿಗೆ ಜಿಮ್‌ ಹೋಗುವ ಬದಲು ನಡಿಗೆಯೊಂದಿಗೆ ನಿಮ್ಮ ದೈಹಿಕ ಕಸರತ್ತನ್ನು ಪ್ರಾರಂಭಿಸಿ, ಆ ಸಮಯವನ್ನು 15 ನಿಮಿಷಗಳಿಂದ 30 ನಿಮಿಷಗಳು, ನಂತರ 45 ನಿಮಿಷಗಳು, ಅದರ ನಂತರ ಒಂದು ಗಂಟೆಯವರೆಗೆ ಹೆಚ್ಚಿಸಿಕೊಳ್ಳಿ.


ಇದರ ನಂತರ ನಿಮ್ಮ ವೈಯಕ್ತಿಕ ಸಾಮರ್ಥ್ಯವನ್ನು ಅವಲಂಬಿಸಿ ಜಾಗಿಂಗ್ ಮತ್ತು ರನಿಂಗ್‌ ಆರಂಭಿಸಬಹುದು. ನಂತರ ದೇಹವು ಪ್ರಾಥಮಿಕವಾಗಿ ಮತ್ತು ದೈನಂದಿನ ಜೀವನಶೈಲಿಗೆ ಒಗ್ಗಿಕೊಂಡಾಗ ನೆಕ್ಸ್ಟ್‌ ಲೆವೆಲ್‌ ವ್ಯಾಯಾಮಗಳನ್ನು ಮಾಡಬಹುದು. ತಜ್ಞರ ಹೆಚ್ಚಿನ ಶಿಫಾರಸುಗಳು 30 ನಿಮಿಷಗಳ ನಡಿಗೆ ಮತ್ತು ಮಧ್ಯಮ ವ್ಯಾಯಾಮವು ದೇಹಕ್ಕೆ ಹೆಚ್ಚು ಸೂಕ್ತ ಎಂದು ಹೇಳುತ್ತವೆ. ಅದರಲ್ಲೂ ಮುಂಜಾನೆಯ ಸಮಯ ಅರ್ಧ ಗಂಟೆ ವಾಕ್‌ ಮಾಡೋದು ನಿಜಕ್ಕೂ ದೇಹದ ಆರೋಗ್ಯಕ್ಕೆ ಬಹಳ ಮುಖ್ಯ.


ಅಲ್ಲದೆ, ನೀವು 40 ರ ನಂತರ ವಯಸ್ಸಾದಾಗ ಕೆಲವು ಸ್ನಾಯುಗಳ ಶಕ್ತಿ ಕುಂದುತ್ತಾ ಬರುತ್ತದೆ. ಇದನ್ನು ಸಾರ್ಕೊಪೆನಿಯಾ ಎಂದು ಕರೆಯಲಾಗುತ್ತದೆ. ಆದ್ದರಿಂದ ಸ್ನಾಯುಗಳು ತಮ್ಮ ಶಕ್ತಿಯನ್ನು ಕುಂದಿಸುವ ಮೊದಲು ಅದನ್ನು ತಡೆಯಲು ಸಕ್ರಿಯ ದಿನಚರಿಯು ಹೆಚ್ಚು ಅಗತ್ಯವಾಗುತ್ತದೆ.

Published by:shrikrishna bhat
First published: