ಬಾದಾಮಿ (Almonds) ಸೇವನೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ (Health Benefits). ಬಾದಾಮಿಯಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಇ, ಪ್ರೋಟೀನ್ ಮತ್ತು ಫೈಬರ್ (Protein And Fiber) ಅಧಿಕವಾಗಿದೆ. ಹಾಗಾಗಿ ಈ ಪೌಷ್ಟಿಕ-ಸಮೃದ್ಧ ಬಾದಾಮಿ ಯಾವುದೇ ಡಯೆಟ್‌ಗೆ (Diet) ಅತ್ಯುತ್ತಮವಾದ ಸೇರ್ಪಡೆಯಾಗಿದೆ. ಕೆಲವರು ಎದ್ದ ತಕ್ಷಣ ನೆನಸಿದ ಬಾದಾಮಿ ತಿನ್ನುತ್ತಾರೆ. ಇದು ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿ. ಆದರೆ ಊಟಕ್ಕೆ ಮುಂಚೆ ಬಾದಾಮಿ (Almonds Eating) ತಿನ್ನೋದ್ರಿಂದ ಏನಾಗುತ್ತದೆ? ಅದರಲ್ಲೂ ಮಧುಮೇಹಿಗಳು (Diabetics) ಊಟಕ್ಕೆ ಮೊದಲು ಬಾದಾಮಿ ತಿನ್ನಬಹುದಾ? ಇದಕ್ಕೆ ತಜ್ಞರು ಏನಂತಾರೆ ಅನ್ನೋದನ್ನು ತಿಳಿಯೋಣ.
ಮಧುಮೇಹ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತೆ!
ಊಟಕ್ಕೆ ಮುಂಚೆ ಬಾದಾಮಿ ತಿನ್ನುವುದರಿಂದ ಮಧುಮೇಹ ನಿಯಂತ್ರಣಕ್ಕೆ ಸಹಾಯವಾಗುತ್ತದೆ. ಊಟಕ್ಕೆ ಮೊದಲು ಸೇವಿಸುವ ಬಾದಾಮಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ತೋರಿಸಿವೆ.
ಮುಧುಮೇಹದ ಅಪಾಯದ ಕಡಿಮೆ
ಹೌದು, ಊಟಕ್ಕೆ ಮುಂಚೆ ಬಾದಾಮಿ ತಿನ್ನುವುದು ಮಧುಮೇಹ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗಿದೆ. ಪ್ರಿಡಿಯಾಬಿಟಿಸ್ ಮತ್ತು ಬೊಜ್ಜು ಹೊಂದಿರುವ ಭಾರತೀಯರು ಊಟಕ್ಕೆ ಮೊದಲು ಬಾದಾಮಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮಾಡಬಹುದು ಎಂದು ಹೊಸ ಸಂಶೋಧನಾ ಅಧ್ಯಯನಗಳು ತೋರಿಸಿದೆ.
ಈ ಎರಡು ಹೊಸ ಅಧ್ಯಯನಗಳು ಒಂದು ದೀರ್ಘಾವಧಿಯ ಮೂರು ತಿಂಗಳುಗಳು ಮತ್ತು ಇನ್ನೊಂದು, ಅಲ್ಪಾವಧಿಯ ಮೂರು ದಿನಗಳವರೆಗೆ ಅದ್ಭುತವಾದ ಚಿಕಿತ್ಸೆಯನ್ನು ನೀಡುತ್ತವೆ ಎಂದು ಹೇಳಿವೆ.
ಊಟಕ್ಕೂ 30 ನಿಮಿಷ ಮೊದಲು
ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ 30 ನಿಮಿಷಗಳ ಮೊದಲು ಒಂದು ಹಿಡಿ ಬಾದಾಮಿ (20 ಗ್ರಾಂ) ಸೇವಿಸುವುದು ಚಿಕಿತ್ಸೆಯಾಗಿತ್ತು ಎಂದು ಡಾ. ಅನೂಪ್ ಮಿಶ್ರಾ ಮತ್ತು ಡಾ. ಸೀಮಾ ಗುಲಾಟಿ ಹೇಳಿದ್ದಾರೆ. ಕ್ಯಾಲಿಫೋರ್ನಿಯಾದ ಆಲ್ಮಂಡ್ ಬೋರ್ಡ್ ಇದಕ್ಕೆ ಧನಸಹಾಯ ಮಾಡಿದೆ.
ಎರಡೂ ಅಧ್ಯಯನಗಳು ರ್‍ಯಾಂಡಮ್ ಪ್ರಯೋಗಗಳಾಗಿವೆ. ಇದರಲ್ಲಿ ಪ್ರಮುಖ, ಊಟಗಳ ಮೊದಲು ಬಾದಾಮಿ ತಿನ್ನುವುದು, "ಪ್ರಿಲೋಡಿಂಗ್" ಎಂದು ಕರೆಯಲ್ಪಡುತ್ತದೆ. ಇದು ಊಟದ ನಂತರ ಗ್ಲೂಕೋಸ್ ಮತ್ತು ಇನ್ಸುಲಿನ್ ಏರಿಳಿತಗಳನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಊಹಿಸಿದ್ದಾರೆ.
ಇದನ್ನೂ ಓದಿ: Health Tips: ನಿಮ್ಗೆ ಚಿಕನ್ ಅಂದ್ರೆ ತುಂಬಾ ಇಷ್ಟನಾ? ಇದರ ಪ್ರಯೋಜನಗಳು ತಿಳಿದ್ರೆ ದಿನವೂ ತಿಂತೀರಾ!
ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಕಾರಿ
"ನಮ್ಮ ಅಧ್ಯಯನದ ಫಲಿತಾಂಶಗಳು, ಬಾದಾಮಿಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸೂಚಿಸಿವೆ ಎಂದು ನದೆಹಲಿಯ ಫೋರ್ಟಿಸ್-ಸಿ-ಡಿಒಸಿ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಡಯಾಬಿಟಿಸ್‌ನ ಪ್ರೊಫೆಸರ್ ಮತ್ತು ಅಧ್ಯಕ್ಷ ಡಾ.ಅನೂಪ್ ಮಿಶ್ರಾ ಹೇಳುತ್ತಾರೆ.
ಈ ಫಲಿತಾಂಶಗಳ ಪ್ರಕಾರ ಪ್ರತಿ ಊಟಕ್ಕೂ ಮೊದಲು ಸ್ವಲ್ಪ ಬಾದಾಮಿಯನ್ನು ಸರಳವಾಗಿ ಸೇರಿಸುವುದರಿಂದ ಕೇವಲ ಮೂರು ದಿನಗಳಲ್ಲಿ ಪ್ರೀಡಯಾಬಿಟಿಕ್ ಏಷ್ಯನ್ ಭಾರತೀಯರಲ್ಲಿ ಗ್ಲೈಸೆಮಿಕ್ ನಿಯಂತ್ರಣವನ್ನು ತ್ವರಿತವಾಗಿ ಮತ್ತು ತೀವ್ರವಾಗಿ ಸುಧಾರಿಸಬಹುದು ಎಂದು ಡಾ. ಅನೂಪ್ ಮಿಶ್ರಾ ಹೇಳಿದ್ದಾರೆ.
ಊಟಕ್ಕೆ 30 ನಿಮಿಷ ಮೊದಲು 20 ಗ್ರಾಂ ಬಾದಾಮಿ ತಿನ್ನಿ!
ಅಲ್ಲದೇ, "ಊಟಕ್ಕೂ 30 ನಿಮಿಷಗಳ ಮೊದಲು 20 ಗ್ರಾಂ ಬಾದಾಮಿ ತಿನ್ನುವುದು ರಕ್ತದಲ್ಲಿನ ಸಕ್ಕರೆ ಮತ್ತು ಹಾರ್ಮೋನುಗಳಲ್ಲಿ ಗಮನಾರ್ಹ ಇಳಿಕೆಯನ್ನು ತೋರಿಸಿದೆ ಎಂದು ಡಾ ಮಿಶ್ರಾ ಹೇಳಿದ್ದಾರೆ.
ಫೈಬರ್, ಮೊನೊಸಾಚುರೇಟೆಡ್ ಕೊಬ್ಬುಗಳು, ಸತು ಮತ್ತು ಮೆಗ್ನೀಸಿಯಮ್ ಹೊಂದಿರುವ ಬಾದಾಮಿಗಳ ಪೌಷ್ಟಿಕಾಂಶದ ಮೇಕ್ಅಪ್ ಉತ್ತಮ ಗ್ಲೈಸೆಮಿಕ್ ನಿಯಂತ್ರಣವನ್ನು ಒದಗಿಸಲು ಮತ್ತು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ".
"ಬಾದಾಮಿ ಹೊಟ್ಟೆ ಖಾಲಿಯಾಗುವುದನ್ನು ನಿಧಾನಗೊಳಿಸುತ್ತದೆ, ಇದು ತೂಕ ನಿರ್ವಹಣೆಯನ್ನು ಉತ್ತೇಜಿಸಲು ಕೂಡ ಸಹಕಾರಿ. ಏಕೆಂದರೆ ಕಡಿಮೆ ಆಹಾರ ಮತ್ತು ಕಡಿಮೆ ಕ್ಯಾಲೊರಿಗಳನ್ನು ಸೇವಿಸಲು ಸಹಾಯ ಮಾಡುತ್ತದೆ. ಇದು ಪ್ರಿಡಿಯಾಬಿಟಿಸ್ ಕೋರ್ಸ್ ಅನ್ನು ಸಾಮಾನ್ಯಗೊಳಿಸಲು, ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಹಿಂತಿರುಗಿಸಲು ಸಹಾಯ ಮಾಡುತ್ತದೆ" ಎಂದು ಡಾ ಮಿಶ್ರಾ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ