• Home
  • »
  • News
  • »
  • lifestyle
  • »
  • Cholesterol: ನೀವು ಕೊಲೆಸ್ಟ್ರಾಲ್‌ ನಿಂದ ಬಳಲುತ್ತಿದ್ದೀರಾ? ಮಾತ್ರೆಗಳನ್ನು ನಿಲ್ಲಿಸುವ ಮುನ್ನ ಇರಲಿ ಎಚ್ಚರ!

Cholesterol: ನೀವು ಕೊಲೆಸ್ಟ್ರಾಲ್‌ ನಿಂದ ಬಳಲುತ್ತಿದ್ದೀರಾ? ಮಾತ್ರೆಗಳನ್ನು ನಿಲ್ಲಿಸುವ ಮುನ್ನ ಇರಲಿ ಎಚ್ಚರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Health Tips: ಕೊಲೆಸ್ಟ್ರಾಲ್​ ಇಂದ ಬಳಲುತ್ತಿದ್ದವರು ಮಾತ್ರೆಗಳನ್ನು ಸೇವಿಸುತ್ತಾರೆ. ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದವರು ಒಮ್ಮೆಗೆ ಇದನ್ನು ಬಿಡಬಾರದು. ಹಾಗೆ ಮಾಡಿದರೆ ಏಬೆಲ್ಲಾ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದು ತಿಳಿಯೋಣ.

  • Share this:

ಅಧಿಕ ರಕ್ತದೊತ್ತಡ (Bp), ಮಧುಮೇಹ (Diabetes), ಕೊಲೆಸ್ಟ್ರಾಲ್ (Cholesterol)‌, ಹಾರ್ಮೋನ್‌ ಅಸಮತೋಲನ ಇವೆಲ್ಲ ಇಂದಿನ ಕಾಲದ ಕಾಮನ್‌ ಆರೋಗ್ಯ ಸಮಸ್ಯೆಗಳು ಎಂಬಂತಾಗಿವೆ. ಆರೋಗ್ಯ ತೊಂದರೆ ಅಂದ್ಮೇಲೆ ವೈದ್ಯರಲ್ಲಿಗೆ ಹೋಗಿ ಮಾತ್ರೆಗಳನ್ನು ತೆಗೆದುಕೊಳ್ಳೋದು ಅಗತ್ಯವೇ.ಆದರೆ ಕೆಲವೊಂದಿಷ್ಟು ಜನರು ಮತ್ಯಾಕೆ ವೈದ್ಯರು… ಅಂದುಕೊಂಡು ಸ್ವಯಂ ವೈದ್ಯ ಮಾಡಿಕೊಳ್ಳೋಕೆ ಹೋಗ್ತಾರೆ. ತಾವೇ ಮಾತ್ರೆಗಳನ್ನು ತೆಗೆದುಕೊಳ್ಳೋದ. ಮಾತ್ರೆಗಳನ್ನು ನಿಲ್ಲಿಸೋದು.ಇಂಥವೆಲ್ಲ ಪ್ರಯೋಗಗಳನ್ನು ಮಾಡ್ತಾರೆ. ಆದ್ರೆ ನಿಮಗೆ ಗೊತ್ತಿರಲಿ ಇಂಥ ಕಾಯಿಲೆಗಳ ಮಾತ್ರೆಗಳನ್ನು ಏಕಾಏಕಿ ನಿಲ್ಲಿಸೋದು ತುಂಬಾ ಅಪಾಯಕಾರಿ! ಇತ್ತೀಚಿನ ದಿನಗಳಲ್ಲಿ ಕೊಲೆಸ್ಟ್ರಾಲ್‌ ಕೂಡ ಸಾಮಾನ್ಯ ಎಂಬಂಥ ಕಾಯಿಲೆಯಾಗಿದೆ. ಅಧಿಕ ಕೊಲೆಸ್ಟ್ರಾಲ್‌ ʼಸೈಲೆಂಟ್‌ ಕಿಲ್ಲರ್‌ʼ ಥರ ಕೆಲಸ ಮಾಡುತ್ತೆ. ಹೃದಯ ರೋಗಗಳಿಗೆ ಕಾರಣವಾಗುವ ಈ ಅಧಿಕ ಕೊಲೆಸ್ಟ್ರಾಲ್‌, ಹೃದಯಾಘಾತ ಹಾಗೂ ಪಾರ್ಶ್ವವಾಯು ಅಪಾಯವನ್ನೂ ಸಹ ಹೆಚ್ಚು ಮಾಡುತ್ತವೆ.


ಈ ಮಧ್ಯೆ ಸ್ಟ್ಯಾಟಿನ್‌ಗಳು ಕಡಿಮೆ-ಸಾಂದ್ರತೆಯ ಲಿಪೊಪ್ರೋಟೀನ್ (LDL) ಕೊಲೆಸ್ಟ್ರಾಲ್‌ ನಿಯಂತ್ರಣದಲ್ಲಿಡಲು ಸಹಾಯ ಮಾಡುವ ಔಷಧಿಗಳಾಗಿವೆ. ಇದನ್ನು ಸಾಮಾನ್ಯವಾಗಿ 'ಕೆಟ್ಟ' ಕೊಲೆಸ್ಟ್ರಾಲ್ (LDL) ಎಂದು ಕರೆಯಲಾಗುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಉತ್ಪಾದನೆಯನ್ನು ನಿಲ್ಲಿಸುವುದರ ಜೊತೆಗೆ, ಸ್ಟ್ಯಾಟಿನ್ಗಳು ಅಪಧಮನಿಯ ಗೋಡೆಗಳಲ್ಲಿ ಪ್ಲೇಕ್ಗಳನ್ನು ನಿರ್ಮಿಸುವ ಮೇಣದಂಥ ವಸ್ತುವನ್ನು ಪುನಃ ಹೀರಿಕೊಳ್ಳಲು ಸಹಾಯ ಮಾಡುತ್ತದೆ.


ಸ್ಟ್ಯಾಟಿನ್‌ ಗಳು ಹೇಗೆ ಕೆಲಸ ಮಾಡುತ್ತವೆ?


ಆನ್‌ಕ್ವೆಸ್ಟ್ ಲ್ಯಾಬೋರೇಟರೀಸ್ ಲಿಮಿಟೆಡ್ ನ ಲ್ಯಾಬ್ ಡೈರೆಕ್ಟರ್ ಡಾ ಶಿವಾಲಿ ಅಹ್ಲಾವತ್ ಅವರ ಪ್ರಕಾರ, ಸ್ಟ್ಯಾಟಿನ್‌ಗಳು ಲಿಪಿಡ್-ಕಡಿಮೆಗೊಳಿಸುವ ಔಷಧಿಗಳ ವರ್ಗಕ್ಕೆ ಸೇರಿದ್ದು, ಇದು ಹೃದಯರಕ್ತನಾಳದ ಕಾಯಿಲೆಯ ಹೆಚ್ಚಿನ ಅಪಾಯವಿರುವ ಜನರಲ್ಲಿ ಮರಣ ಮತ್ತು ಅನಾರೋಗ್ಯವನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ: ರಸಗುಲ್ಲಾದಿಂದ ಸಂದೇಶ್​ವರೆಗೆ, ಬೆಂಗಳೂರಿನಲ್ಲಿ ಬೆಸ್ಟ್ ಬಂಗಾಳಿ ಸ್ವೀಟ್ಸ್ ಸಿಗುವ ಬೇಕರಿಗಳಿವು


ಅವರ ಪ್ರಕಾರ, ರಕ್ತದಲ್ಲಿನ ಕೊಲೆಸ್ಟ್ರಾಲ್‌ನ ಭಾಗವು ಆಹಾರದಿಂದ ಪಡೆಯಲ್ಪಟ್ಟಿದೆಯಾದರೂ, ಕೆಲವೊಬ್ಬರ ಯಕೃತ್ತು ಅದರ ಹೆಚ್ಚಿನ ಭಾಗವನ್ನು ಉತ್ಪಾದಿಸುತ್ತದೆ. ಯಕೃತ್ತು ಉತ್ಪಾದಿಸುವ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಮತ್ತು ರಕ್ತದಿಂದ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುವಲ್ಲಿ ಯಕೃತ್ತಿಗೆ ಸಹಾಯ ಮಾಡುವ ಮೂಲಕ ಸ್ಟ್ಯಾಟಿನ್ಗಳು ಕಾರ್ಯನಿರ್ವಹಿಸುತ್ತವೆ ಎಂದು ಅವರು ವಿವರಿಸುತ್ತಾರೆ.


ಸ್ಟ್ಯಾಟಿನ್‌ ಗಳ ಸೈಡ್‌ ಇಫೆಕ್ಟ್‌ !


ಆದರೆ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸ್ಟ್ಯಾಟಿನ್‌ಗಳಂತಹ ಔಷಧಿಗಳು ಎಷ್ಟು ಸಹಾಯಕವಾಗಿವೆಯೋ, ಅದು ಉಂಟುಮಾಡುವ ಅಡ್ಡಪರಿಣಾಮಗಳೂ ಅಷ್ಟೇ ಇವೆ. ರಕ್ತದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸ್ಟ್ಯಾಟಿನ್ಗಳು ಅನಿರ್ದಿಷ್ಟ ಚಿಕಿತ್ಸಾ ಪರಿಹಾರವಾಗಿದೆ.


ಈ ಔಷಧಿಯನ್ನು ಪ್ರಾರಂಭಿಸುವ ಅನೇಕರು, ದೀರ್ಘಕಾಲದವರೆಗೆ ಅದನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುವುದಿಲ್ಲ ಎಂದು ಫೋರ್ಟಿಸ್ ಎಸ್ಕಾರ್ಟ್ಸ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನ ಇಂಟರ್ವೆನ್ಷನಲ್ ಕಾರ್ಡಿಯಾಲಜಿಯ ಪ್ರಧಾನ ನಿರ್ದೇಶಕ ಡಾ.ನಿಶಿತ್ ಚಂದ್ರ ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, 5-10% ಪ್ರಕರಣಗಳಲ್ಲಿ ಕೆಲವು ಅಡ್ಡ ಪರಿಣಾಮಗಳು ಸಂಭವಿಸಬಹುದು ಎನ್ನುತ್ತಾರೆ."ಈ ಸ್ಟ್ಯಾಟಿನ್‌ ಗಳಿಂದ ಆಗುವಂತಹ ಸಾಮಾನ್ಯ ಅಡ್ಡ ಪರಿಣಾಮವೆಂದರೆ ಸಾಮಾನ್ಯೀಕರಿಸಿದ ದೇಹ ಮತ್ತು ಸ್ನಾಯು ನೋವು. ಈ ಅಡ್ಡ ಪರಿಣಾಮಗಳು ವಿಶೇಷವಾಗಿ ಹೈಪೋಥೈರಾಯ್ಡಿಸಮ್ ಅಥವಾ ಆಲ್ಕೋಹಾಲ್ ತೆಗೆದುಕೊಳ್ಳುವವರಲ್ಲಿ ಕಂಡುಬರುತ್ತದೆ. ಸುಸ್ತು, ತಲೆನೋವು ಅಥವಾ ಕೆಲವು ಜೀರ್ಣಕಾರಿ ಸಮಸ್ಯೆಗಳು ಇದರ ಅಡ್ಡ ಪರಿಣಾಮಗಳಾಗಿವೆ" ಎಂದು ಅವರು ಹೇಳುತ್ತಾರೆ.


ಇದಲ್ಲದೆ, ಕೆಲವು ಜನರು ತಲೆತಿರುಗುವಿಕೆ, ವಾಕರಿಕೆ, ವೀಕ್‌ ನೆಸ್‌, ಸ್ನಾಯುವಿನ ಅಸ್ವಸ್ಥತೆ, ನಿದ್ರೆಯ ಸಮಸ್ಯೆಗಳು ಮತ್ತು ಕಡಿಮೆ ರಕ್ತದ ಪ್ಲೇಟ್‌ಲೆಟ್ ಎಣಿಕೆಯನ್ನು ಅನುಭವಿಸಬಹುದು ಎಂದು ಡಾ ಅಹ್ಲಾವತ್ ಹೇಳುತ್ತಾರೆ.


ವೈದ್ಯರ ಸಲಹೆ ಪಡೆದೇ ಸ್ಟ್ಯಾಟಿನ್‌ ಗಳನ್ನು ನಿಲ್ಲಿಸಿ!


ಹಿಂದಿನ ಹಲವಾರು ಅಧ್ಯಯನಗಳು ಕೊಲೆಸ್ಟ್ರಾಲ್-ಕಡಿಮೆಗೊಳಿಸುವ ಸ್ಟ್ಯಾಟಿನ್ ಚಿಕಿತ್ಸೆಯನ್ನು ನಿಲ್ಲಿಸುವುದು ಅಪಾಯ ಎಂದಿವೆ. ಅನೇಕ ಸಂಶೋಧಕರು ಹೃದ್ರೋಗಕ್ಕೆ ಸಂಬಂಧಿಸಿದ ಸಾವಿನ ಹೆಚ್ಚಿನ ಅಪಾಯದೊಂದಿಗೆ ಅದನ್ನು ಲಿಂಕ್ ಮಾಡಿದ್ದಾರೆ.


ಡಾ ಚಂದ್ರರ ಪ್ರಕಾರ, ಒಬ್ಬ ವ್ಯಕ್ತಿಯು ಸ್ಟ್ಯಾಟಿನ್‌ ತೆಗೆದುಕೊಳ್ಳುವುದನ್ನು ನಿಲ್ಲಿಸಿದರೆ, ಅವರ ಕೊಲೆಸ್ಟ್ರಾಲ್ ಮತ್ತೆ ಹೆಚ್ಚಾಗಬಹುದು. ಅಪಧಮನಿ ಹೃದ್ರೋಗವನ್ನು ಅಭಿವೃದ್ಧಿಪಡಿಸುವ ಅಪಾಯ ಉಂಟುಮಾಡುತ್ತದೆ.


ಅದಕ್ಕಾಗಿಯೇ ಅವರು ಒಮ್ಮೆಲೇ ಸ್ಟ್ಯಾಟಿನ್ಗಳನ್ನು ನಿಲ್ಲಿಸಬಾರದು. ಬದಲಾಗಿ ವೈದ್ಯರ ಸಲಹೆ ಪಡೆಯಬೇಕು ಎಂದು ಅವರು ಹೇಳುತ್ತಾರೆ. ಸ್ಟ್ಯಾಟಿನ್‌ಗಳ ಗಂಭೀರ ಅಡ್ಡಪರಿಣಾಮಗಳ ಸಂದರ್ಭದಲ್ಲಿ, ವೈದ್ಯರು ಅವುಗಳನ್ನು ನಿಲ್ಲಿಸಲು ಶಿಫಾರಸು ಮಾಡಬಹುದು.


ಸ್ಟ್ಯಾಟಿನ್‌ ನಿಲ್ಲಿಸಿದಾಗ ಏನಾಗುತ್ತದೆ?


"ಸ್ಟ್ಯಾಟಿನ್‌ಗಳು ಜೀವಿತಾವಧಿಯನ್ನು ಹೆಚ್ಚಿಸುತ್ತವೆ ಮತ್ತು ಆರೋಗ್ಯವನ್ನು ಸುಧಾರಿಸುತ್ತವೆ. ಅವು ಅತಿಯಾದ ಕೊಲೆಸ್ಟ್ರಾಲ್ ಹೊಂದಿರುವವರಲ್ಲಿ ಮರಣ ಪ್ರಮಾಣವನ್ನು ಕಡಿಮೆ ಮಾಡುತ್ತವೆ. ಆದ್ರೆ ನೆನಪಿರಲಿ, ನೀವು ಸ್ಟ್ಯಾಟಿನ್ ಅನ್ನು ಹಠಾತ್ತನೆ ನಿಲ್ಲಿಸುವುದು ತುಂಬಾ ಅಪಾಯಕಾರಿ. ಇದು ಹೃದಯ ಕಾಯಿಲೆ, ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ಇತರ ಅಧಿಕ ಕೊಲೆಸ್ಟ್ರಾಲ್-ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ" ಎಂದು ಡಾ ಅಹ್ಲಾವತ್ ಅಭಿಪ್ರಾಯ ಪಡ್ತಾರೆ.


ನಮ್ಮ ದೇಹದಲ್ಲಿರುವ ಲಿವರ್‌ ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುತ್ತದೆ. ಅದು ರಕ್ತದಲ್ಲಿನ ಪ್ರೋಟೀನ್‌ಗಳಿಂದ ದೇಹದಾದ್ಯಂತ ಸಾಗಿಸಲ್ಪಡುತ್ತದೆ. ನಂತರ ಉತ್ಪತ್ತಿಯಾಗುವ ಕೊಲೆಸ್ಟ್ರಾಲ್ ಅನ್ನು ದೇಹವು ಆರೋಗ್ಯಕರ ಕೋಶಗಳನ್ನು ನಿರ್ಮಿಸಲು ಬಳಸುತ್ತದೆ.


ಆದಾಗ್ಯೂ, ವ್ಯಕ್ತಿಯ ಜೀವನಶೈಲಿ ಮತ್ತು ತಳಿಶಾಸ್ತ್ರವನ್ನು ಅವಲಂಬಿಸಿ, ದೇಹದಲ್ಲಿ ಅತಿಯಾದ ಕೊಲೆಸ್ಟ್ರಾಲ್ ಉತ್ಪಾದನೆಯಾಗಬಹುದು. ಅದು ಸಂಭವಿಸುವುದನ್ನು ತಡೆಯಲು, ಸ್ಟ್ಯಾಟಿನ್ಗಳು ನಿರ್ಣಾಯಕವಾಗಿವೆ. ಆದ್ದರಿಂದ, ಈ ಔಷಧಿಯ ಸೇವನೆಯನ್ನು ಇದ್ದಕ್ಕಿದ್ದಂತೆ ನಿಲ್ಲಿಸುವುದರಿಂದ ಈ ಮಟ್ಟಗಳು ಹೆಚ್ಚಾಗಬಹುದು, ಪರಿಧಮನಿಯ ಹೃದಯ ಕಾಯಿಲೆ, ಹೃದಯಾಘಾತ ಅಥವಾ ಪಾರ್ಶ್ವವಾಯುಗಳಿಗೆ ಕಾರಣವಾಗಬಹುದು ಎಂದು ಅವರು ವಿವರಿಸುತ್ತಾರೆ.


ಸ್ಟ್ಯಾಟಿನ್‌ ಗಳನ್ನು ಸುರಕ್ಷಿತವಾಗಿ ನಿಲ್ಲಿಸುವುದು ಹೇಗೆ?


ಹಾಗಿದ್ರೆ ಈ ಮಾತ್ರೆಗಳನ್ನು ನಿಲ್ಲಿಸುವುದು ಹೇಗೆ ಅನ್ನೋ ಪ್ರಶ್ನೆ ಬರುವುದು ಸಹಜ. ಅಡ್ಡ ಪರಿಣಾಮಗಳ ಭಯದಿಂದ, ನಿರ್ಲಕ್ಷ್ಯದಿಂದ ಜನರು ಇನ್ನು ಮುಂದೆ ಔಷಧಿಗಳ ಅಗತ್ಯವಿಲ್ಲ ಎಂದುಕೊಂಡು ಸ್ಟ್ಯಾಟಿನ್‌ ಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿಬಿಡಬಹುದು. ಆದರೆ ಹಾಗೆ ಮಾಡಲೇಬಾರದು. ಹಾಗೂ ನಿಮಗೆ ಇದನ್ನು ನಿಲ್ಲಿಸಬೇಕೆಂದು ಅನ್ನಿಸಿದಾಗ ಖಂಡಿತವಾಗಿಯೂ ವೈದ್ಯರ ಸಲಹೆ ಪಡೆಯುವುದು ರೋಗಿಯ ಹಿತದೃಷ್ಟಿಯಿಂದ ಒಳ್ಳೆಯದು.


ಸಹಿಸಿಕೊಳ್ಳಲು ಸಾಧ್ಯವಾಗದ ಸಂದರ್ಭಗಳಲ್ಲಿ ಅಥವಾ ಅಡ್ಡ ಪರಿಣಾಮಗಳಿಂದಾಗಿ ಅವರು ಸ್ಟ್ಯಾಟಿನ್‌ಗಳನ್ನು ನಿಲ್ಲಿಸಬೇಕಾದರೆ, ವೈದ್ಯರು ಮೊದಲಿಗೆ ಡೋಸ್ ಅನ್ನು ಕಡಿಮೆ ಮಾಡಬಹುದು ಅಥವಾ ಬೇರೆ ಸ್ಟ್ಯಾಟಿನ್‌ಗೆ ಬದಲಾಯಿಸಬಹುದು.


ಅಡ್ಡಪರಿಣಾಮಗಳು ಮುಂದುವರಿದರೆ, ನಂತರ ವೈದ್ಯರು ಕೆಲವು ಪರ್ಯಾಯ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸೂಚಿಸಬಹುದು. Ezetimibe, Bempedoic ಆಮ್ಲ ಅಥವಾ PCSK9 ಪ್ರತಿರೋಧಕ ಔಷಧಿಗಳಂತಹ ಔಷಧಿಗಳನ್ನು ಸೂಚಿಸಬಹುದು ಎಂದು ಡಾ ಚಂದ್ರ ಹೇಳುತ್ತಾರೆ.


ಇಷ್ಟೇ ಅಲ್ಲದೇ, ಸ್ಟ್ಯಾಟಿನ್‌ಗಳ ಸೇವನೆ, ಸಾಮರ್ಥ್ಯ ಬದಲಾವಣೆ ಅಥವಾ ಸ್ಥಗಿತಗೊಳಿಸುವಿಕೆಯ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ರೋಗಿಗಳು ತಮ್ಮ ಹೃದ್ರೋಗ ತಜ್ಞರೊಂದಿಗೆ ಸಮಾಲೋಚಿಸಬೇಕೆಂದು ಡಾ ಅಹ್ಲಾವತ್ ಸಲಹೆ ನೀಡ್ತಾರೆ.


"ವೈದ್ಯರು ಡೋಸೇಜ್ ಅನ್ನು ಕಡಿಮೆ ಮಾಡಲು ಸಲಹೆ ನೀಡಬಹುದು, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮತ್ತೊಂದು ಔಷಧಿಯೊಂದಿಗೆ ಸ್ಟ್ಯಾಟಿನ್ ಅನ್ನು ಬಳಸುತ್ತಾರೆ ಅಥವಾ ಸಂಪೂರ್ಣವಾಗಿ ಬೇರೆ ಔಷಧಿಗೆ ಬದಲಾಯಿಸಬಹುದು" ಎಂದು ಅವರು ಹೇಳುತ್ತಾರೆ.


ಇದನ್ನೂ ಓದಿ: ದೀಪಗಳ ಹಬ್ಬದ ಮಹತ್ವ, ಆಚರಣೆಯ ವಿಧಿ ವಿಧಾನ ಇಲ್ಲಿದೆ


ಒಟ್ಟಿನಲ್ಲಿ ಸ್ವಯಂ ವೈದ್ಯ ಮಾಡೋದಕ್ಕಿಂತ ಮೊದಲು ವೈದ್ಯರ ಸಲಹೆ ಪಡೆಯೋದು ಉತ್ತಮ ಅನ್ನೋದು ತಜ್ಞರ ಅಭಿಪ್ರಾಯ. ಬಹಳಷ್ಟು ಜನರು ಆರೋಗ್ಯ ವಿಚಾರದಲ್ಲೂ ಹೀಗೆಯೇ ಸ್ವಯಂ ನಿರ್ಧಾರ ತೆಗೆದುಕೊಳ್ತಾರೆ. ಮೆಡಿಕಲ್‌ ಶಾಪ್‌ ಗಳಲ್ಲಿ ಕೇಳುವುದೋ ಅಥವಾ ತಮಗೆ ಪರಿಚಯದವರನ್ನು ಕೇಳುವುದೋ ಮಾಡ್ತಾರೆ.


ಹಾಗೆಯೇ ಔಷಧಗಳನ್ನು ತೆಗೆದುಕೊಳ್ಳುವುದು, ನಿಲ್ಲಿಸುವುದು ಮಾಡ್ತಾರೆ. ಆದ್ರೆ ಇದು ಯಾವತ್ತಿಗೂ ಅಪಾಯ ಅನ್ನೋದನ್ನು ನೆನಪಿಡಬೇಕು. ಇದು ಮತ್ತೊಂದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತೆ ಅನ್ನೋದನ್ನು ಮರೆಯಬಾರದು. ಆದ್ದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ವೈದ್ಯರ ಅಭಿಪ್ರಾಯ ಪಡೆಯಬೇಕು ಅನ್ನೋದು ನೆನಪಿರಲಿ.

First published: