Health Tips: ಅವಧಿ ಮುಗಿದ ಔಷಧ ಸೇವನೆ ಸೂಕ್ತವೇ ? ಅವಧಿ ಮುಗಿದ ಯಾವ ಮೆಡಿಸಿನ್ ಸೇವನೆ ಮಾಡಬಹುದು ?

Expiry Drugs: ನೋವಿನ ಔಷಧಗಳು, ಗಾಯದ ಕ್ರೀಮುಗಳು ಅಥವಾ ವಿಟಮಿನ್ , ಗ್ಯಾಸ್ಟ್ರಿಕ್ ನಂತಹ ಸಾಮಾನ್ಯ ರೋಗಗಳು ಅವಧೀ ಮುಗಿದ ಔಷದಿಗಳನ್ನು ವೈದ್ಯರ ಸಲಹೆ ಮೇರೆಗೆ ಮಾತ್ರ ಉಪಯೋಗಿಸಿಕೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮನುಷ್ಯನ(Human) ದೇಹವು(Body) ಅನಾರೋಗ್ಯಕ್ಕೆ(Unhealthy) ಒಳಗಾಗದೆ ಇರುವುದು ತುಂಬಾ ಕಡಿಮೆ. ಏನಾದರೊಂದು ಸಮಸ್ಯೆಯು(Problem) ಜೀವಮಾನದಲ್ಲಿ ಒಮ್ಮೆಯಾದರೂ ಬರುವುದು ಇದೆ. ಇದಕ್ಕಾಗಿ ವೈದ್ಯರ(DOctor) ಬಳಿಗೆ ಹೋಗಿ ಚಿಕಿತ್ಸೆ(Treatment) ಪಡೆಯುತ್ತೇವೆ. ಇನ್ನು ಕೆಲವೊಮ್ಮೆ ಯಾವುದಕ್ಕೂ ಮನೆಯಲ್ಲಿರಲಿ ಎಂದು ತಲೆನೋವು(Headache), ಜ್ವರ(Fever), ವಾಂತಿ, ಬೇಧಿ ಇತ್ಯಾದಿ ಇತ್ಯಾದಿ ಸಾಮಾನ್ಯ ಕಾಯಿಲೆಗಳಿಗೆ ಸಂಬಂಧಿಸಿದ ಮಾತ್ರೆಗಳನ್ನು ತಂದು ಮನೆಯಲ್ಲಿಟ್ಟುಕೊಂಡಿರುತ್ತೀವೆ.. ಆದ್ರೆ ಕಾಯಿಲೆ ಹತ್ತಿರ ಬರುವ ವೇಳೆಯಲ್ಲಿ ಮೆಡಿಸಿನ್(Medicine) ಬಾಕ್ಸ್ ತಡಕಾಡಿದರೆ ಬೇಕಾಗಿದ್ದ ಮಾತ್ರೆ ಎಕ್ಸ್‌ಪೈರ್(Expiry) ಆಗಿದೆ. ಮುಗಿದ ಗುಳಿಗೆಗಳನ್ನು ಎನೂಮಾಡುವುದು ಎಂದು ಕೆಲವೊಮ್ಮೆ ಗೊಂದಲ ಉಂಟಾಗುತ್ತದೆ. ಒಂದು ಕಡೆ ದುಡ್ಡು ಕೊಟ್ಟ ಗುಳಿಗೆಗಳನ್ನು ಎಸೆಯುವ ಮನಸಿಲ್ಲ, ಇನ್ನೊಂದು ಕಡೆ ನುಂಗುವಹಾಗು ಇಲ್ಲ. ಅವಧೀ ಮುಗಿದ ಮಾತ್ರೆಗಳನ್ನು ನುಂಗಲು ಹೋದರೆ ಎನಾದರು ಹೆಚ್ಚುಕಮ್ಮಿಯಾಗುತದ್ದೆ ಎಂಬ ಸಂದೇಹ ಇರುತ್ತದೆ.ಹೀಗಾಗಿ ಅವಧಿ ಮುಗಿದ ಮೆಡಿಸಿನ್ ಸೇವನೆ ಮಾಡಬಹುದಾ..? ಅಥವಾ ಬೇಡ್ವಾ ಎನ್ನುವ ಮಾಹಿತಿ ಇಲ್ಲಿದೆ..

  ಅವಧಿ ಮುಗಿದ ಮೆಡಿಸಿನ್ ಗಳನ್ನ ಏನು ಮಾಡಬೇಕು..?

  ಎಲ್ಲರಿಗೂ ತಿಳಿದಂತೆ ಔಷಧಿಗಳು ರಾಸಾಯನಿಕಗಳಾಗಿವೆ ಎಲ್ಲಾ ರಾಸಾಯನಿಕ ವಸ್ತುಗಳ ವಿಶೇಷತೆಯೆಂದರೆ ಅವುಗಳ ಪರಿಣಾಮವು ಕಾಲಾನಂತರದಲ್ಲಿ ಬದಲಾಗುತ್ತದೆ. ಅನೇಕ ಬಾರಿ, ಗಾಳಿ, ತೇವಾಂಶ, ಶಾಖ ಇತ್ಯಾದಿಗಳಿಂದಾಗಿ ಔಷಧಿಯಲ್ಲಿರುವ ರಾಸಾಯನಗಳು ಬದಲಾಗುತ್ತವೆ. ಔಷಧಿ ಪರಿಣಾಮ ನಿಧಾನವಾಗಿ ಕಡಿಮೆಯಾಗುತ್ತವೆ

  ಇದನ್ನೂ ಓದಿ: ಕ್ಷೇತ್ರದ 4 ಲಕ್ಷ ಜನರಿಗೆ ಉಚಿತವಾಗಿ ಆಯುರ್ವೇದ ಔಷಧ ವಿತರಣೆಗೆ ಮುಂದಾದ ಸಚಿವ ಈಶ್ವರಪ್ಪ

  ಆದ್ರೆ 2001ರಲ್ಲಿ ಅಮೇರಿಕನ್ ಮೆಡಿಕಲ್ ಅಸೋಶಿಯೆಶನ್ ಪ್ರಕಟಿಸಿದ ಅಧ್ಯಯನದಲ್ಲಿ, ಅವದೀ ಮುಗಿದ ಗುಳಿಗೆಗಳು ವಿಷವಾಗಿ ಎನೂ ಬಲಾವಣೇಯಾಗಿರಲಿಲ್ಲ ಆಶ್ಚರ್ಯಕರ ವಿಷಯವೆಂದರೆ ಶೇಕಡ 90ರಿಂದ 95ರಷ್ಟು ಶಕ್ತಿಯನ್ನು ಹಾಗೆ ಉಳಿಸಿಕೊಂಡಿದ್ದವು. ಇನ್ನು ಕೆಲವು ಔಷದಗಳು ಅವಧೀ ಮುಗಿದು ಹದಿನೈದು ವರ್ಷಗಳೇ ಕಳೆದರು ತಮ್ಮ ಶಕ್ತಿಯನ್ನು ಕಳೆದುಕೊಳ್ಳದೆ ಇರುವುದು ಕಂಡು ಬಂದಿತ್ತು.

  ಅವಧಿ ಮುಗಿದ ಯಾವ ಮೆಡಿಸಿನ್ ಬಳಸಬಹುದು..?

  . ಅವಧಿ ಮುಗಿದ ಮೆಡಿಸಿನ್  ಸೇವನೆ ಮಾಡಿದರೆ ಅದರಿಂದ ದೊಡ್ಡ ಮಟ್ಟದ ಸಮಸ್ಯೆಯು ನಿಮಗೆ ಆಗಬಹುದು. ಕೆಲವು ಮಾತ್ರೆಗಳಿಂದ ಯಾವುದೇ ಸಮಸ್ಯೆ ಆಗದೆ ಇದ್ದರೂ ಇತರ ಕೆಲವೊಂದು ಮಾತ್ರೆಗಳು ಗಂಭೀರ ಸಮಸ್ಯೆಗಳನ್ನು ಉಂಟು ಮಾಡಬಹುದು. ವಾಕರಿಕೆ, ವಾಂತಿ, ಬಳಲಿಕೆ, ಉಸಿರಾಟದ ತೊಂದರೆ, ರಕ್ತದೊತ್ತಡದಲ್ಲಿ ಏರುಪೇರು, ತೀವ್ರ ತಲೆನೋವು ಇತ್ಯಾದಿ ಕಾಡುವುದು. ನೋವಿನ ಔಷಧಗಳು, ಗಾಯದ ಕ್ರೀಮುಗಳು ಅಥವಾ ವಿಟಮಿನ್ , ಗ್ಯಾಸ್ಟ್ರಿಕ್ ನಂತಹ ಸಾಮಾನ್ಯ ರೋಗಗಳು ಅವಧೀ ಮುಗಿದ ಔಷದಿಗಳನ್ನು ವೈದ್ಯರ ಸಲಹೆ ಮೇರೆಗೆ ಮಾತ್ರ ಉಪಯೋಗಿಸಿಕೊಳ್ಳಿ

  ಅವಧಿ ಮುಗಿದ ತಕ್ಷಣ ವಿಶವಾಗುತ್ತೆ ಔಷಧಿ

  ವೈದ್ಯಕೀಯ ಸಂಘದ ಪ್ರಕಾರ, ಕೆಲವು ಔಷಧಿಗಳು ಅವಧಿ ಮುಗಿದ ನಂತರ ವಿಷವಾಗುತ್ತವೆ. ಅವಧಿ ಮುಗಿದ ನಂತರ ಅವುಗಳನ್ನು ಬಳಸಬಾರದು. ಮಧುಮೇಹದ ಔಷಧಿ, ಎದೆನೋವಿನ ಸಂದರ್ಭದಲ್ಲಿ ಹೃದಯ ರೋಗಿಗಳಿಗೆ ನೀಡಲಾಗುವ ಔಷಧಿ ಇದರಲ್ಲಿ ಸೇರಿದೆ. ಹಾಗೆ ಯಾವುದೇ ಮಾತ್ರೆಯ ರ್ಯಾಪರ್ ತೆಗೆದ ತಕ್ಷಣ ಸೇವನೆ ಮಾಡಬೇಕು. ರ್ಯಾಪರ್ ತೆಗೆದಿಟ್ಟು ದೀರ್ಘ ಸಮಯದ ನಂತರ ಅಥವಾ ಕೆಲ ದಿನಗಳ ನಂತರ ಬಳಸಬಾರದು.

  ಇದನ್ನೂ ಓದಿ: ಕೋವಿಡ್​​-19 ತಡೆಗೆ ಸ್ವದೇಶಿ ಮದ್ದು: ಆಗಸ್ಟ್​​ 15ಕ್ಕೆ ಭಾರತದ ಮೊದಲ ಲಸಿಕೆ ಬಿಡುಗಡೆ

  ಇತ್ತೀಚಿನ ದಿನಗಳಲ್ಲಿ ಗೂಗಲ್ ಸರ್ಚ್,ಜನರಿಗೆ ಆಪ್ತವಾಗಿದೆ. ವೈದ್ಯರಿಗಿಂತ,ಗೂಗಲ್ ಹೇಳುವುದನ್ನು ಜನರು ಕೇಳಲು ಶುರು ಮಾಡಿದ್ದಾರೆ. ಸಣ್ಣ ಖಾಯಿಲೆ ಕಾಣಿಸಿಕೊಂಡರೂ ಗೂಗಲ್ ನಲ್ಲಿ ಹುಡುಕಾಟ ನಡೆಸಿ,ಮಾತ್ರೆ ಸೇವನೆ ಮಾಡುತ್ತಾರೆ. ಅದರ ಅಡ್ಡ ಪರಿಣಾಮಗಳ ಬಗ್ಗೆ ಆಲೋಚನೆ ಮಾಡುವುದಿಲ್ಲ. ಇದು ಸಂಪೂರ್ಣ ತಪ್ಪು. ಯಾವುದೇ ಸಮಸ್ಯೆ ಎದುರಾದರೂ ಮೊದಲು ವೈದ್ಯರನ್ನು ಭೇಟಿಯಾಗಬೇಕು. ನಿಮ್ಮ ಬಳಿ ಮೊದಲೇ ಮಾತ್ರೆಯಿದ್ದರೂ,ಸೇವನೆಗಿಂತ ಮೊದಲು ವೈದ್ಯರ ಸಲಹೆ ಪಡೆಯಬೇಕು. ಕೆಲವೊಮ್ಮೆ ರೋಗ ಲಕ್ಷಣ ಒಂದೇ ರೀತಿಯಲ್ಲಿರುತ್ತದೆ. ಆದರೆ ರೋಗ ಬೇರೆಯಾಗಿರುತ್ತದೆ. ನೀವು ತಪ್ಪಾಗಿ ಸೇವಿಸುವ ಮಾತ್ರೆ ನಿಮ್ಮ ಆರೋಗ್ಯ ಹಾಳು ಮಾಡಬಹುದು ಎಚ್ಚರ.
  Published by:ranjumbkgowda1 ranjumbkgowda1
  First published: