• Home
  • »
  • News
  • »
  • lifestyle
  • »
  • Food Tips: ಹಿರಿಯರಿಗೆ ಪೋಷಕಾಂಶಯುಕ್ತ ಈ ಆಹಾರಗಳನ್ನು ನೀಡಿ..

Food Tips: ಹಿರಿಯರಿಗೆ ಪೋಷಕಾಂಶಯುಕ್ತ ಈ ಆಹಾರಗಳನ್ನು ನೀಡಿ..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Breakfast For Seniors: ಮನೆಯ ವಯಸ್ಸಾದ ರೋಗಿಗಳಲ್ಲಿ 60 ಪ್ರತಿಶತದಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇಂಥಹ ಸಮಸ್ಯೆಗೆ ಪರಿಹಾರ ಉತ್ತಮ ಉಪಹಾರ.

  • Share this:

 Food: ಹಿರಿಯರಲ್ಲಿ ಜೀರ್ಣ ಶಕ್ತಿ ಕಡಿಮೆ ಇರುತ್ತದೆ ಹಾಗೂ ಅವರಿಗೆ ಹೆಚ್ಚಿನ ಆಹಾರ ಸೇವನೆ ಮಾಡುವ ಸಾಮರ್ಥ್ಯ ಕೂಡ ಇರುವುದಿಲ್ಲ. ಇದರಿಂದಾಗಿ ಅವರಿಗೆ ಹೆಚ್ಚು ಪೋಶಕಾಂಶಗಳನ್ನು ಸೇವನೆ ಮಾಡಲು ಸಾಧ್ಯವಾಗುವುದಿಲ್ಲ. ಅದು ಅವರಲ್ಲಿ ಅನಾರೋಗ್ಯ ಮತ್ತು ಅಪೌಷ್ಟಿಕತೆಗೆ ಕಾರಣವಾಗುತ್ತದೆ. ಇದು ಅವರ ಜೀವನದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಅಮೇರಿಕನ್ ಅಕಾಡೆಮಿ ಆಫ್ ಫ್ಯಾಮಿಲಿ ಫಿಸಿಶಿಯನ್ಸ್ ಪ್ರಕಾರ, ಮನೆಯ ವಯಸ್ಸಾದ ರೋಗಿಗಳಲ್ಲಿ 60 ಪ್ರತಿಶತದಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇಂಥಹ ಸಮಸ್ಯೆಗೆ ಪರಿಹಾರ ಮೃದುವಾಗಿರುವ ಮತ್ತು ಸುಲಭವಾಗಿ ತಯಾರಿಸಲಾಗುವ ಆಹಾರ ಪದಾರ್ಥಗಳು. ಅದರಲ್ಲೂ ಅವರಿಗೆ ಬೆಳಗಿನ ತಿಂಡಿ ನೀಡುವಾಗ ಜಾಗರೂಕರಾಗಿ ನೀಡಬೇಕು. ಹಿರಿಯರಿಗೆ ಯಾವ ರೀತಿಯ ಉಪಹಾರ ನೀಡಬಹುದು ಎಂಬುದು ಇಲ್ಲಿದೆ.  


ಮೊಟ್ಟೆ


ಹಿರಿಯರಿಗೆ ಮೊಟ್ಟೆ ಅತ್ಯುತ್ತಮ ಉಪಹಾರದ ಆಯ್ಕೆ.  ಅವರಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ನಾಯುವಿನ  ನೋವನ್ನು ಅಥವಾ ಸೆಳೆತವನ್ನು ತಡೆಗಟ್ಟಲು ಅವರಿಗೆ  ಹೆಚ್ಚು ಪ್ರೋಟೀನ್ ಅಗತ್ಯವಿರುತ್ತದೆ. ಹಿರಿಯರಿಗೆ ಪ್ರತಿ ದಿನ ಪ್ರತಿ ಕಿಲೋಗ್ರಾಂ ದೇಹದ ತೂಕಕ್ಕೆ 1.0 ರಿಂದ 1.3 ಗ್ರಾಂ ಪ್ರೋಟೀನ್ ಬೇಕಾಗುತ್ತದೆ. ಮೊಟ್ಟೆಗಳಲ್ಲಿ  ಪ್ರೋಟೀನ್‌ ಸಮೃದ್ಧವಾಗಿದೆ ಹಾಗೂ ಇದನ್ನು  ತಯಾರಿಸಲು ಸುಲಭ.  ನೀವು ಕೊಲೆಸ್ಟ್ರಾಲ್ ಬಗ್ಗೆ  ಯೋಚನೆ ಮಾಡುತ್ತಿದ್ದರೇ, ಒಂದು ಮೊಟ್ಟೆ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದಿಲ್ಲ. ಹಿರಿಯರು ಕೇವಲ ಮೊಟ್ಟೆಯ ಬಿಳಿಭಾಗದ ಬದಲು ಸಂಪೂರ್ಣ ಮೊಟ್ಟಯನ್ನು ಸೇವಿಸಬಹುದು.


ಓಟ್ ಮೀಲ್


ಓಟ್ ಮೀಲ್ ಹಿರಿಯರ ಆರೋಗ್ಯ ದೃಷ್ಟಿಯಿಂದ ಅತ್ಯುತ್ತಮವಾದ ಬೆಳಗಿನ ಉಪಾಹಾರ. ಇದು ಅಗಿಯಲು ಸುಲಭ, ತಯಾರಿಸಲು ಸುಲಭ ಅಲ್ಲದೆ ಪೌಷ್ಟಿಕಾಂಶ ಹೆಚ್ಚಿರುತ್ತದೆ ಮತ್ತು ಫೈಬರ್  ಕೂಡ ಇದರಲ್ಲಿ ಅಧಿಕವಾಗಿರುತ್ತದೆ. ನ್ಯಾಷನಲ್ ಡೈಜೆಸ್ಟಿವ್ ಡಿಸೀಸಸ್ ಇನ್ಫರ್ಮೇಶನ್ ಕ್ಲಿಯರಿಂಗ್‌ಹೌಸ್ ವರದಿಯಲ್ಲಿ ಕಡಿಮೆ ಫೈಬರ್ ಇರುವ ಆಹಾರಗಳು ವಯಸ್ಸಾದವರಲ್ಲಿ ಮಲಬದ್ಧತೆಗೆ ಪ್ರಮುಖ ಕಾರಣವಾಗುತ್ತದೆ ಎಂದು ಹೇಳಲಾಗಿದೆ.  ಇನ್ಸ್ಟಿಟ್ಯೂಟ್ ಆಫ್ ಮೆಡಿಸಿನ್ 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರನ್ನು ಕನಿಷ್ಠ 30 ಗ್ರಾಂ ಫೈಬರ್ ಮತ್ತು 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಪ್ರತಿ ದಿನ ಕನಿಷ್ಠ 21 ಗ್ರಾಂ ಫೈಬರ್ ಸೇವಿಸಲು ಸಲಹೆ ನೀಡಿದೆ.


ಇದನ್ನೂ ಓದಿ: ದಿನಕ್ಕೊಂದು ಹಸಿ ಕ್ಯಾರೆಟ್ ತಿಂದರೆ ಸಾಕು ತೆಳ್ಳಗೆ-ಬೆಳ್ಳಗೆ ಇರುತ್ತೀರಿ


ಮೃದುವಾದ ತಾಜಾ ಹಣ್ಣುಗಳು


ತಾಜಾ ಹಣ್ಣುಗಳು ಹಿರಿಯರಿಗೆ ಫೈಬರ್ ಮತ್ತು ವಿಟಮಿನ್‌ಗಳ ಅತ್ಯುತ್ತಮ ಮೂಲ.  ಇದನ್ನು ಅಗಿಯಲು ಮತ್ತು ನುಂಗಲು ಸುಲಭ.  ಬೆರಿಹಣ್ಣುಗಳು, ಬಾಳೆಹಣ್ಣುಗಳು, ಪ್ಲಮ್‌ಗಳು, ತಾಜಾ ಪೀಚ್‌ಗಳು ಮತ್ತು ಕಿವಿ ಹಣ್ಣುಗಳ ಸೇವನೆ ಉತ್ತಮ. ಈ ಹಣ್ಣುಗಳನ್ನು ಸಣ್ಣದಾಗಿ ಕತ್ತರಿಸಿ ಸಾಮಾನ್ಯ ಓಟ್ ಮೀಲ್ ಅಥವಾ ಸೋಯಾ ಹಾಲಿನೊಂದಿಗೆ ಸೇರಿಸಿ ಸೇವನೆ ಮಾಡುವುದು ಒಳ್ಳೆಯದು.


ಸ್ಮೂಥಿಗಳು


ಹೆಚ್ಚಿನ ಪ್ರೋಟೀನ್ ಸ್ಮೂಥಿಗಳು ಹಿರಿಯರಿಗೆ ತ್ವರಿತ ಉಪಹಾರವಾಗುತ್ತದೆ. ಇದನ್ನು ಅಗೆಯುವ ಅಗತ್ಯವಿಲ್ಲ ಮತ್ತು ಬ್ಲೆಂಡರ್ ಬಳಸಿ ತಯಾರಿಸುವುದು ಸುಲಭ. ಬೆಳಗಿನ ಉಪಾಹಾರದಲ್ಲಿ ಸಾಮಾನ್ಯವಾಗಿ ಸೋಯಾ ಹಾಲು, ಕಡಿಮೆ ಸೋಯಾ ಮೊಸರು, ಮೃದುವಾದ ಹಣ್ಣುಗಳನ್ನು ಬಳಸಿ ತಯಾರಿಸಿ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.


 

Published by:Sandhya M
First published: