ಉತ್ತಮ ನಿದ್ರೆ (Good Sleep) ಮಾಡುವುದು ಆರೋಗ್ಯಕ್ಕೆ (Health) ಬಹಳ ಮುಖ್ಯ. ನಿದ್ರಾಹೀನತೆ (Sleeping Disorder) ಸಮಸ್ಯೆ ಹೊಂದಿರುವ ಅನೇಕ ಜನರನ್ನು (People) ಕಾಣಬಹುದು. ಅವರು ತಡರಾತ್ರಿಯವರೆಗೆ ಎಚ್ಚರವಾಗಿದ್ದು, ಬೆಳಗಿನ ಜಾವದಲ್ಲಿ ಮಲಗುತ್ತಾರೆ. ಹಾಗಾಗಿ ಬೆಳಗ್ಗೆ ಲೇಟಾಗಿ ಏಳುತ್ತಾರೆ. ಅಥವಾ ಸ್ವಲ್ಪ ಸಮಯದವರೆಗೆ ಮಲಗುತ್ತಾರೆ. ಈ ರೀತಿಯ ನಿದ್ದೆ ಹಾಗೂ ನಿದ್ರೆಯ ಕೊರತೆಯು ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ತಜ್ಞರು ಪ್ರತಿದಿನ 7-8 ಗಂಟೆಗಳ ಆಳವಾದ ನಿದ್ರೆ ತೆಗೆದುಕೊಳ್ಳಲು ಶಿಫಾರಸು ಮಾಡುತ್ತಾರೆ. ನಿದ್ರೆ ಅಥವಾ ನಿದ್ರೆಯ ಕೊರತೆಗೆ ನಾವು ತಿನ್ನುವ ಹಾಗೂ ಕುಡಿಯುವ ಆಹಾರ ಪದಾರ್ಥಗಳು ತುಂಬಾ ಮುಖ್ಯವಾದ ಪಾತ್ರ ವಹಿಸುತ್ತವೆ.
ನಿದ್ದೆ ಮಾಡುವ ಮೊದಲು ಏನು ತಿನ್ನಬೇಕು ಮತ್ತು ಏನು ತಿನ್ನಬಾರದು
ಜೊತೆಗೆ ಅಷ್ಟೇ ಪರಿಣಾಮ ಬೀರುತ್ತವೆ. ಕೆಲವು ಆಹಾರ ಪದಾರ್ಥಗಳನ್ನು ತಿಂದರೆ ನಿದ್ದೆ ಬರುವುದಿಲ್ಲ. ಇನ್ನು ಕೆಲವು ಆಹಾರ ಪದಾರ್ಥಗಳು ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತವೆ. ಇತ್ತೀಚೆಗೆ, ಪೌಷ್ಟಿಕಾಂಶ ಮತ್ತು ನಿದ್ರೆ ತಜ್ಞರು, ಮಲಗುವ ಮೊದಲು ಏನು ತಿನ್ನುವುದನ್ನು ತಪ್ಪಿಸಬೇಕು ಮತ್ತು ಏನು ತಿನ್ನಬೇಕು ಎಂದು ಹೇಳಿದ್ದಾರೆ.
ಮಲಗುವ ಮುನ್ನ ಏನು ತಿನ್ನಬಾರದು
ಪೌಷ್ಟಿಕಾಂಶ ಮತ್ತು ನಿದ್ರೆ ತಜ್ಞ ಡೇನಿಯಲ್ ಪೆರೆಜ್ ವಿಡಾಲ್ ಹೇಳುವ ಪ್ರಕಾರ, ರಾತ್ರಿ ಮಲಗುವ ಮುನ್ನ ಐಸ್ ಕ್ರೀಂ ಸೇವಿಸಬಾರದು ಎಂದು ಹೇಳಿದ್ದಾರೆ. ಐಸ್ ಕ್ರೀಮ್ ಬಹಳಷ್ಟು ಸಕ್ಕರೆ ಹೊಂದಿರುತ್ತದೆ, ಇದು ಇನ್ಸುಲಿನ್ ಸ್ಪೈಕ್ ಉಂಟು ಮಾಡುತ್ತದೆ. ಹಾಗಾಗಿ ನಿದ್ದೆ ಮಾಡುವ ಮೊದಲು ಐಸ್ ಕ್ರೀಂ ತಿನ್ನಬಾರದು.
ಇದನ್ನೂ ಓದಿ: ಮೇಕೆ ಹಾಲು ಕುಡಿದರೆ ಗ್ಯಾಸ್ಟ್ರಿಕ್ ಇರಲ್ಲ, ಮಕ್ಕಳಿಗೆ ಕೊಟ್ಟರೆ ಸಿಗೋ ಆರೋಗ್ಯ ಲಾಭಗಳಿವು
ಸಕ್ಕರೆ, ಕೆಫೀನ್ ನಂತಹ ಸಾಕಷ್ಟು ಉತ್ತೇಜಕ ಪದಾರ್ಥಗಳನ್ನು ಮಲಗುವ ಮೊದಲು ಸೇವಿಸಬಾರದು. ಮಲಗುವ ಸಮಯಕ್ಕೆ 4-6 ಗಂಟೆಗಳ ಮೊದಲು ಕೆಫೀನ್ ಸೇವಿಸುವುದರಿಂದ ನಿದ್ರೆ ಬರುವುದಿಲ್ಲ ಎಂದು ಎಲ್ಲರಿಗೂ ಚೆನ್ನಾಗಿ ತಿಳಿದಿದೆ. ರಾತ್ರಿ ಮಲಗುವ ಮೊದಲು ಪನೀರ್ ಆಹಾರ, ಮಸಾಲೆಯುಕ್ತ ಆಹಾರ, ಕೇಕ್ ಮತ್ತು ಗ್ರೇವಿ ಭಕ್ಷ್ಯಗಳನ್ನು ತಿನ್ನುವುದನ್ನು ತಪ್ಪಿಸಿ.
ರಾತ್ರಿ ಮಲಗುವ ಮುನ್ನ ಟೀ ಕುಡಿಯಬೇಡಿ. ಚಹಾದಲ್ಲಿ ಕೆಫೀನ್ ಕೂಡ ಇರುತ್ತದೆ. ಆದ್ದರಿಂದ, ಮಲಗುವ ಮೊದಲು, ಐಸ್ ಟೀ, ತಂಪು ಪಾನೀಯಗಳು, ಚಾಕೊಲೇಟ್ ತಿನ್ನುವುದನ್ನು ತಪ್ಪಿಸಿ.
ಯಾಕೆ ಈ ಪದಾರ್ಥಗಳನ್ನು ತಿನ್ನಬಾರದು
ಡೇನಿಯಲ್ ಪೆರೆಜ್ ಪ್ರಕಾರ, ಮಲಗುವ ಮುನ್ನ 4-6 ಗಂಟೆಗಳ ಕಾಲ ಈ ಆಹಾರವನ್ನು ಸೇವಿಸದಂತೆ ಶಿಫಾರಸು ಮಾಡುತ್ತೇವೆ. ನೀವು ಈ ಆಹಾರವನ್ನು ಸೇವಿಸಿದಾಗ, ದೇಹವು ಈ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ ಮತ್ತು ದೇಹದಲ್ಲಿನ ಶಕ್ತಿಯಿಂದಾಗಿ, ನಿದ್ರೆಯಲ್ಲಿ ಸಮಸ್ಯೆ ಉಂಟಾಗುತ್ತದೆ.
ಆಹಾರ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಸಹ ಉಂಟು ಮಾಡಬಹುದು. ಮಸಾಲೆಯುಕ್ತ ಗ್ರೇವಿ ಮತ್ತು ಮಸಾಲೆಯುಕ್ತ ಆಹಾರಗಳು ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ ಮತ್ತು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದು ನಿದ್ರಾಹೀನತೆಗೆ ಕಾರಣವಾಗುತ್ತದೆ.
ನೀವು ಮಲಗುವ ಮೊದಲು ಮಸಾಲೆಯುಕ್ತ ಆಹಾರ ಸೇವಿಸಿದರೆ ದೇಹದ ಉಷ್ಣತೆಯು ಸ್ವಾಭಾವಿಕವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ, ಆಗಲೂ ಮಲಗಲು ತೊಂದರೆ ಉಂಟಾಗುತ್ತದೆ. ಪನೀರ್ ಖಾದ್ಯವನ್ನು ಸೇವಿಸಿದಾಗ, ಹೊಟ್ಟೆ ಉಬ್ಬುವುದು, ಗ್ಯಾಸ್ ಜೊತೆಗೆ ಹೊಟ್ಟೆ ಉಬ್ಬರಕ್ಕೆ ಸಂಬಂಧಿಸಿದ ಸಮಸ್ಯೆಗಳು ಪ್ರಾರಂಭವಾಗುತ್ತವೆ.
ಇದು ನಿದ್ರೆಯ ಸಮಸ್ಯೆ ಇರುತ್ತದೆ. ಅಮೈನೋ ಆಮ್ಲ ಟೈರಮೈನ್ ಚೀಸ್ ನಲ್ಲಿ ಕಂಡು ಬರುತ್ತದೆ. ಇದು ನೊರ್ಪೈನ್ಫ್ರಿನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ, ಇದು ಮಾನಸಿಕ ಜಾಗರೂಕತೆಯನ್ನು ಹೆಚ್ಚಿಸುತ್ತದೆ.
ಮಲಗುವ ಮುನ್ನ ಈ ಪದಾರ್ಥಗಳನ್ನು ಸೇವಿಸಿ
ಮಲಗುವ ಮೊದಲು ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಹೊಂದಿರುವ ವಸ್ತುಗಳನ್ನು ಸೇವಿಸಬೇಕು. ಇದು ನಿದ್ರಿಸಲು ಸಹಾಯ ಮಾಡುತ್ತದೆ. ಮಲಗುವ ಮುನ್ನ ಬಾಳೆಹಣ್ಣು, ಅಡಿಕೆ, ಬಾದಾಮಿ, ಹಾಲು ಸೇವಿಸಬಹುದು.
ಇದನ್ನೂ ಓದಿ: ನಿಮ್ಮ ತ್ವಚೆಯ ಗುಣ ಯಾವುದು? ಈ ತರದ ಸ್ಕಿನ್ ಇದ್ದೋರು ತೆಂಗಿನೆಣ್ಣೆ ಬಳಸೋ ಮುನ್ನ ಎಚ್ಚರ ವಹಿಸಿ
ಕ್ಯಾಲ್ಸಿಯಂ ದೇಹ ಮತ್ತು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಟ್ರಿಪ್ಟೊಫಾನ್ ಹಾರ್ಮೋನ್ ಅನ್ನು ಮೆಲಟೋನಿನ್ ಆಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಇದು ನಿದ್ರೆ ಉತ್ತೇಜಿಸಲು ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ