ದೇಹದ (Body) ಪ್ರಮುಖ ಅಂಗಗಳಲ್ಲಿ ಕಿಡ್ನಿ (Kidney) ಕೂಡ ಒಂದು. ಇದು ವಿಶ್ವದ (World) ಜನಸಂಖ್ಯೆಯ ಸುಮಾರು ಶೇಕಡಾ 10 ರಷ್ಟು ಜನರ (People) ಮೇಲೆ ಪರಿಣಾಮ (Effect) ಬೀರುವ ಸಾಮಾನ್ಯ ಸಮಸ್ಯೆ ಆಗಿದೆ. ಕಿಡ್ನಿ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವವರು ತಮ್ಮ ಆಹಾರ (Food) ಮತ್ತು ಪಾನೀಯಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ತುಂಬಾ ಮುಖ್ಯ. ನೀವು ಏನು ತಿನ್ನುತ್ತೀರಿ, ಏನು ಕುಡಿಯುತ್ತೀರಿ ಎಂಬುದು ಮೂತ್ರಪಿಂಡದ ಕಾಯಿಲೆಗಳ ಲಕ್ಷಣಗಳನ್ನು ಕಡಿಮೆ ಮಾಡಲು ಅಥವಾ ಹೆಚ್ಚಿಸಲು ಕಾರಣ ಆಗುತ್ತವೆ. ನೀವು ಯಾವುದೇ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರೆ ನಿಮ್ಮ ಆಹಾರ ಮತ್ತು ಪಾನೀಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಲೇಬೇಕು.
ಮೂತ್ರಪಿಂಡ ಕಾಯಿಲೆ ಲಕ್ಷಣಗಳ ಬಗ್ಗೆ ಮಾತನಾಡುವುದಾದರೆ, ಸಾಕಷ್ಟು ಸಂದರ್ಭಗಳಲ್ಲಿ ಸಮಸ್ಯೆ ಗಂಭೀರ ಆಗುವವರೆಗೆ ರೋಗಿಗೆ ರೋಗ ಲಕ್ಷಣಗಳು ತಿಳಿಯುವುದೇ ಇಲ್ಲ. ಸರಿಯಾದ ಚಿಕಿತ್ಸೆ ನೀಡಲು ರೋಗ ಲಕ್ಷಣಗಳನ್ನು ಸಮಯೋಚಿತವಾಗಿ ಗುರುತಿಸುವುದು ಅತೀ ಅವಶ್ಯಕ ಆಗಿದೆ.
ಕಿಡ್ನಿಯ ಸಾಮಾನ್ಯ ರೋಗ ಲಕ್ಷಣಗಳೆಂದರೆ
ತೂಕ ನಷ್ಟ ಮತ್ತು ಹಸಿವು ಕಡಿಮೆ ಆಗುವುದು, ಮೊಣಕಾಲುಗಳು, ಪಾದಗಳು ಅಥವಾ ಕೈಗಳ ಊತ, ಸುಸ್ತು, ನಿಮ್ಮ ಮೂತ್ರದಲ್ಲಿ ರಕ್ತ, ಮೂತ್ರ ವಿಸರ್ಜನೆಯ ತೊಂದರೆ, ಸ್ನಾಯು ಸೆಳೆತ ಮತ್ತು ಚರ್ಮದ ತುರಿಕೆ.
ಇದನ್ನೂ ಓದಿ: ಪದೇ ಪದೇ ಕಾಣಿಸಿಕೊಳ್ಳೋ ಮೊಡವೆ ನಿವಾರಣೆಗೆ ತ್ವಚೆಯ ಹೊರಗಲ್ಲ ಒಳಗಿಂದಲೇ ಮದ್ದು ಮಾಡಿ
ಮೂತ್ರಪಿಂಡದ ಕಾಯಿಲೆ ಚಿಕಿತ್ಸೆ ಬಗ್ಗೆ ಹೇಳುವುದಾದರೆ, ಔಷಧದಲ್ಲಿ ಇದಕ್ಕೆ ಹಲವಾರು ಚಿಕಿತ್ಸೆಗಳು ಇವೆ. ಆದರೂ ನೀವು ಈ ರೋಗ ಲಕ್ಷಣಗಳಿಂದ ತ್ವರಿತ ಪರಿಹಾರ ಪಡೆಯಬಹುದು ಅಥವಾ ನಿಮ್ಮ ಆಹಾರ ಮತ್ತು ಪಾನೀಯ ಕ್ರಮ ಮತ್ತು ಪದ್ಧತಿ ಬದಲಾಯಿಸುವ ಮೂಲಕ ಮೂತ್ರಪಿಂಡದ ಕಾಯಿಲೆ ತಪ್ಪಿಸಬಹುದು.
ಪ್ರಶಸ್ತಿ ವಿಜೇತ ಪೌಷ್ಟಿಕತಜ್ಞ ಲವನೀತ್ ಬಾತ್ರಾ ಅವರು, ಕಿಡ್ನಿ ಸಂಬಂಧಿತ ಕೆಲವು ಆಹಾರ ಪದಾರ್ಥಗಳ ಬಗ್ಗೆ ನಿಮಗೆ ತಿಳಿಸುತ್ತಾರೆ. ಅದರ ಮೂಲಕ ಮೂತ್ರ ಪಿಂಡಗಳನ್ನು ಶುದ್ಧ, ಆರೋಗ್ಯಕರ ಮತ್ತು ಬಲಶಾಲಿ ಮಾಡಲು ಇದು ಸಹಕಾರಿ ಆಗುತ್ತದೆ.
ಹೂಕೋಸು
ವಿಟಮಿನ್ ಸಿ, ಫೋಲೇಟ್ ಮತ್ತು ಫೈಬರ್ನ ಉತ್ತಮ ಮೂಲವಾಗಿದೆ ಹೂಕೋಸು. ಇದು ಇಂಡೋಲ್ ಗಳು, ಗ್ಲುಕೋಸಿನೋಲೇಟ್ ಗಳು ಮತ್ತು ಥಿಯೋಸೈನೇಟ್ ಗಳಿಂದ ಕೂಡಿದೆ. ಜೀವಕೋಶ ಪೊರೆಗಳು ಮತ್ತು ಡಿಎನ್ಎಗೆ ಹಾನಿ ಮಾಡುವ ಜೀವಾಣು ವಿಷವನ್ನು ಯಕೃತ್ತು ತಟಸ್ಥಗೊಳಿಸಲು ಸಹಾಯ ಮಾಡುವ ವಸ್ತುಗಳು ಇವುಗಳು ಆಗಿವೆ.
ಸೇಬು
ಪೊಟ್ಯಾಸಿಯಮ್, ರಂಜಕ ಮತ್ತು ಸೋಡಿಯಂನಿಂದ ಸೇಬುಗಳಲ್ಲಿ ಕಡಿಮೆ ಇರುತ್ತದೆ. ಆದ್ದರಿಂದ ಅವು ಮೂತ್ರಪಿಂಡದ ರೋಗಿಗಳಿಗೆ ಉತ್ತಮ ಆಯ್ಕೆ ಆಗಿದೆ. ಕಿಡ್ನಿ ಸಂಬಂಧಿ ಸಮಸ್ಯೆಗಳಿಂದ ಪರಿಹಾರ ಪಡೆಯಲು ಸೇಬು ಸೇವನೆ ಮಾಡಿ.
ಬೆಳ್ಳುಳ್ಳಿ
ನೀವು ಉಪ್ಪಿನ ಬದಲು ಬೆಳ್ಳುಳ್ಳಿ ಬಳಸಬಹುದು. ಇದು ಆಹಾರದ ರುಚಿ ಹೆಚ್ಚಿಸುತ್ತದೆ. ಮತ್ತು ಪೌಷ್ಟಿಕಾಂಶದ ಪ್ರಯೋಜನ ನೀಡುತ್ತದೆ. ಇದು ಮ್ಯಾಂಗನೀಸ್, ವಿಟಮಿನ್ ಸಿ ಮತ್ತು ವಿಟಮಿನ್ ಬಿ 6 ನ ಉತ್ತಮ ಮೂಲವಾಗಿದೆ. ಉರಿಯೂತದ ಗುಣ ಲಕ್ಷಣಗಳನ್ನು ಹೊಂದಿರುವ ಸಲ್ಫರ್ ಸಂಯುಕ್ತಗಳನ್ನು ಹೊಂದಿದೆ.
ಕ್ಯಾಪ್ಸಿಕಂ
ಕ್ಯಾಪ್ಸಿಕಂನಲ್ಲಿ ಪೊಟ್ಯಾಸಿಯಮ್ ಪ್ರಮಾಣವು ಕಡಿಮೆ ಇರುತ್ತದೆ. ಇದರಿಂದಾಗಿ ಇದು ಮೂತ್ರಪಿಂಡ ರೋಗಿಗಳಿಗೆ ಉತ್ತಮ ಆಹಾರವಾಗಿದೆ. ವಿಟಮಿನ್ ಸಿ ಮತ್ತು ವಿಟಮಿನ್ ಎ ಮತ್ತು ವಿಟಮಿನ್ ಬಿ 6, ಫೋಲಿಕ್ ಆಸಿಡ್ ಮತ್ತು ಫೈಬರ್ ಸಹ ಇದರಲ್ಲಿ ಕಂಡು ಬರುತ್ತದೆ.
ಇದನ್ನೂ ಓದಿ: ಸುಡು ಬಿಸಿಲು, ಮಕ್ಕಳ ಆಹಾರದಲ್ಲಿ ಈ ಪದಾರ್ಥಗಳನ್ನು ಮಿಸ್ ಮಾಡಲೇಬೇಡಿ
ಈರುಳ್ಳಿ
ಕಿಡ್ನಿ ರೋಗಿಗಳು ಸೋಡಿಯಂ ಭರಿತ ಪದಾರ್ಥಗಳ ಬದಲಿಗೆ ಈರುಳ್ಳಿ ಸೇವಿಸಬೇಕು. ಅಂತಹ ಜನರಿಗೆ ಉಪ್ಪು ಸೇವನೆಯು ಕಡಿಮೆ ಹಾನಿಕಾರಕ ಆಗಿದೆ. ಬೆಳ್ಳುಳ್ಳಿ ಮತ್ತು ಆಲಿವ್ ಎಣ್ಣೆಯೊಂದಿಗೆ ಈರುಳ್ಳಿ ತಿನ್ನುವುದು ಹೆಚ್ಚು ಪ್ರಯೋಜನ ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ