• Home
  • »
  • News
  • »
  • lifestyle
  • »
  • Beauty Care: ಮಹಿಳೆಯರೇ ಎಚ್ಚರ, ಈ ಫೇಸ್​ ಪ್ಯಾಕ್ ಬಳಸಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ, ಎಚ್ಚರ!

Beauty Care: ಮಹಿಳೆಯರೇ ಎಚ್ಚರ, ಈ ಫೇಸ್​ ಪ್ಯಾಕ್ ಬಳಸಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ, ಎಚ್ಚರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Menstrual Blood: ಇತ್ತೀಚಿನ ದಿನಗಳಲ್ಲಿ ಸುಂದರ ತ್ವಚೆಗೆ ಫೇಸ್ ಪ್ಯಾಕ್ ಬಳಸೋದು ತೀರಾ ಸಾಮಾನ್ಯ. ಆದರೆ ಇಲ್ಲಿ ಋತುಬಂಧ ಸಮಯದಲ್ಲಿ ಉತ್ಪತ್ತಿಯಾಗುವ ಮುಟ್ಟಿನ ರಕ್ತವನ್ನು ಫೇಸ್ ಮಾಸ್ಕ್ ಆಗಿ ಬಳಕೆ ಮಾಡುವ ಟ್ರೆಂಡ್ ಈಗ ಸಕತ್ ವೈರಲ್ ಆಗುತ್ತಿದೆ.

  • Share this:

    ಇಂದಿನ ಆಧುನಿಕ ಕಾಲದಲ್ಲಿ ಸೌಂದರ್ಯಕ್ಕೆ ಇರುವ ಮನ್ನಣೆ ಹೆಚ್ಚೆಂದೇ ಹೇಳಬಹುದು. ಮುಖ ಸುಂದರವಾಗಿರಬೇಕು ಎಂದು ಏನೇನೋ ಸರ್ಕಸ್ ಮಾಡೋರು ಕೂಡ ಈಗೀಗ ಜಾಸ್ತಿಯಾಗುತ್ತಿದ್ದಾರೆ ಎಂದರೂ ಅತಿಶೋಕ್ತಿಯೇನಲ್ಲ. ಇನ್ನು ಸೋಷಿಯಲ್ ಮೀಡಿಯಾದಲ್ಲೂ ಅಂತೂ ಕೇಳಲೇಬೇಡಿ ವಿಚಿತ್ರವಾದ, ನಂಬಲೂ ಕಷ್ಟವಾದ ತ್ವಚೆಯ ಟ್ರೆಂಡ್ ಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಆಗಿದೆ. ಇಂತಹ ವಿಲಕ್ಷಣ ಟ್ರೆಂಡ್ ಅಲ್ಲಿ ಒಂದಾದ ವಿಚಿತ್ರ ಫೇಸ್ ಮಾಸ್ಕ್ ಟ್ರೆಂಡ್ ಈಗ ಸಕತ್ ಸದ್ದು ಮಾಡ್ತಿದೆ. ಅದೇನು ಅಂತ ನೋಡೋಣ ಬನ್ನಿ.


    ಇತ್ತೀಚಿನ ದಿನಗಳಲ್ಲಿ ಸುಂದರ ತ್ವಚೆಗೆ ಫೇಸ್ ಪ್ಯಾಕ್ ಬಳಸೋದು ತೀರಾ ಸಾಮಾನ್ಯ. ಆದರೆ ಇಲ್ಲಿ ಋತುಬಂಧ ಸಮಯದಲ್ಲಿ ಉತ್ಪತ್ತಿಯಾಗುವ ಮುಟ್ಟಿನ ರಕ್ತವನ್ನು ಫೇಸ್ ಮಾಸ್ಕ್ ಆಗಿ ಬಳಕೆ ಮಾಡುವ ಟ್ರೆಂಡ್ ಈಗ ಸಕತ್ ವೈರಲ್ ಆಗುತ್ತಿದೆ.


    ಇದನ್ನೂ ಓದಿ: ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು ಮೊಡವೆಗಳು ಮಾಯವಾಗುತ್ತೆ

     ಸುಂದರವಾಗಿ ಕಾಣಬೇಕೆಂದು ಹರಸಾಹಸ ಪಡುತ್ತಿರುವವರು ಈಗ ತಮ್ಮ ತ್ವಚೆಯ ಪ್ರಯೋಜನಗಳಿಗಾಗಿ ಮುಖದ ಮೇಲೆ ಮುಟ್ಟಿನ ಸಮಯದಲ್ಲಿ ಉತ್ಪತ್ತಿಯಾದ ರಕ್ತವನ್ನು ಲೇಪನ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾ, ಅದರಲ್ಲೂ ಟಿಕ್ ಟಾಕ್ ನಲ್ಲಿ ವೈರಲ್ ಆಗ್ತಿದೆ.


    ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರ ಪ್ರಕಾರ, "ಮುಟ್ಟಿನ ಅವಧಿಯ ರಕ್ತವು ಉತ್ತಮ ಕೋಶಗಳು ಮತ್ತು ಚರ್ಮಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಸಹಜವಾಗಿ ಒಳಗೊಂಡಿದೆ" ಎಂದು ಹೇಳಿದ್ದಾರೆ.


    ಮತ್ತೊಬ್ಬ ಬಳಕೆದಾರರು "ಇದು ಒಣ ತ್ವಚೆಗೆ ಉತ್ತಮ" ಎಂದು ಹೇಳಿಕೊಂಡಿದ್ದಾರೆ. ಆದರೆ, ಇನ್ನೊಬ್ಬ ಬಳಕೆದಾರ "ನೀವು ಈ ಫೇಸ್ ಪ್ಯಾಕ್ ಅನ್ನು ಟ್ರೈ ಮಾಡಬೇಕು" ಎಂದು ಕಮೆಂಟ್ ಬರೆದಿದ್ದಾರೆ. ನೀವು ಅದನ್ನು ಪ್ರಯತ್ನಿಸಬೇಕೇ?


    ತಜ್ಞರು ಏನು ಹೇಳ್ತಾರೆ?


    “ಮುಟ್ಟಿನ ರಕ್ತವನ್ನು ಮುಖಕ್ಕೆ ಬಳಸುವುದು ಇತ್ತೀಚಿನ ಟ್ರೆಂಡ್ ಆಗಿದೆ. ಮುಟ್ಟಿನ ಅವಧಿಯ ರಕ್ತದ ಲೇಪನವನ್ನು ಚರ್ಮಕ್ಕೆ ಹಚ್ಚುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದರಿಂದ ಮೊಡವೆಗಳು ದೂರ ಆಗುತ್ತವೆ. ಇದು ಚರ್ಮಕ್ಕೆ ಬಹಳಷ್ಟು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ ಎಂದು ಜನರು ನಂಬುತ್ತಾರೆ. ಆದರೆ ಇದು ನಿಜವಲ್ಲ ಮತ್ತು ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ" ಎಂದು ಚರ್ಮರೋಗ ತಜ್ಞೆ ಡಾ. ಗೀತಿಕಾ ಮಿತ್ತಲ್ ಗುಪ್ತಾ Instagram ನಲ್ಲಿ ಹೇಳಿದ್ದಾರೆ.


    ಮುಟ್ಟಿನ ರಕ್ತವು ಸೋಂಕಿಗೆ ಕಾರಣವಾಗಬಹುದು


    ಮುಟ್ಟಿನ ರಕ್ತವು ಸೋಂಕಿಗೆ ಕಾರಣವಾಗಬಹುದು ಎಂದು ಅವರು ವಿವರಿಸಿದರು ಏಕೆಂದರೆ ಅದು ಸತ್ತ ಚರ್ಮದ ಕೋಶಗಳು ಮತ್ತು ಎಂಡೊಮೈಸಿಯಮ್ ಎಂದು ಕರೆಯಲ್ಪಡುವ ಸತ್ತ ಒಳ ಪದರದಿಂದ ಕಲುಷಿತವಾಗಿರುತ್ತದೆ ಎಂದಿದ್ದಾರೆ.


    "ಮುಟ್ಟಿನ ರಕ್ತವು ರಕ್ತದ ಎಂಡೊಮೆಟ್ರಿಯಲ್ ಅಂಗಾಂಶ ಮತ್ತು ಗರ್ಭಕಂಠದ ಮತ್ತು ಯೋನಿ ಸ್ರವಿಸುವಿಕೆಯನ್ನು ಒಳಗೊಂಡಿರುತ್ತದೆ" ಎಂದು ಬೆಂಗಳೂರಿನ ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಐವಿಎಫ್ ಸೆಂಟರ್ ನ ಲ್ಯಾಪರೊಸ್ಕೋಪಿಕ್ ಸರ್ಜನ್ ಮತ್ತು ಐವಿಎಫ್ ತಜ್ಞರು, ನಿರ್ದೇಶಕರು ಆಗಿರುವ ಡಾ.ವಿದ್ಯಾ ವಿ ಭಟ್, ಡಾ. ಗೀತಿಕಾ  ಸೂಚಿಸಿದ್ದಾರೆ.




    ಶಿಲೀಂಧ್ರವು ಚರ್ಮಕ್ಕೆ ಹಾನಿಕಾರಕ


    "ಅನೇಕ ಮಹಿಳೆಯರು ಯೋನಿ ಮತ್ತು ಗರ್ಭಕಂಠದ ಸೋಂಕುಗಳನ್ನು ಹೊಂದಿರಬಹುದು ಮತ್ತು ಎಂಡೊಮೆಟ್ರಿಟಿಸ್ ಎಂದು ಕರೆಯಲ್ಪಡುವ ಎಂಡೊಮೆಟ್ರಿಯಲ್ ಸೋಂಕುಗಳನ್ನು ಹೊಂದಿರಬಹುದು. ಮುಟ್ಟಿನ ದ್ರವದಲ್ಲಿ ಇರುವ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರವು ಚರ್ಮಕ್ಕೆ ಹಾನಿಕಾರಕವಾಗಬಹುದು ಮತ್ತು ಮೊಡವೆಗಳನ್ನು ತರಬಹುದು,” ಎಂದು ಅವರು ವಿವರಿಸಿದರು.


    "ಈ ತಂತ್ರವು ಪ್ರಯೋಜನಕಾರಿಯಲ್ಲ ಮತ್ತು ಇದು ಚರ್ಮಕ್ಕೆ ಹಾನಿಯುಂಟುಮಾಡಬಹುದು" ಎಂದು ಮುಂಬೈನ ಕನ್ಸಲ್ಟೆಂಟ್ ಕಾಸ್ಮೆಟಿಕ್ ಪ್ಲ್ಯಾಸ್ಟಿಕ್ ಸರ್ಜನ್ ಡಾ. ಪರಾಗ್ ತೆಲಾಂಗ್ ಅವರು ಒತ್ತಿ ಹೇಳಿದರು.


    "ಆರೋಗ್ಯಕರ ಅಥವಾ ಪುನರುತ್ಪಾದಕವಲ್ಲದ ಗರ್ಭಾಶಯದ ಕೋಶಗಳ ಅಂಶ ಕಾರಣದಿಂದ ಮುಟ್ಟಿನ ರಕ್ತವು ಉತ್ಪಾದನೆಯಾಗುತ್ತದೆ. ಆದ್ದರಿಂದ, ಅನುಮಾನಾಸ್ಪದ ಪ್ರಯೋಜನಗಳೊಂದಿಗೆ ಅಂತಹ ಚಿಕಿತ್ಸೆಗಳಿಂದ ದೂರವಿರುವುದು ಉತ್ತಮ" ಎಂದು ಅವರು ಹೇಳಿದರು.

    Published by:Precilla Olivia Dias
    First published: