ಇತ್ತೀಚಿನ ವರ್ಷಗಳಲ್ಲಿ (Years) ದೇಶದಲ್ಲಿ (Country) ಮಧುಮೇಹ ರೋಗಿಗಳ (Patient) ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ (Increase). ಮಧುಮೇಹ (Diabetes) ರೋಗಿಗಳು ಹೆಚ್ಚಳವಾಗಲು ಕೆಟ್ಟ ಜೀವನಶೈಲಿ (Bad Lifestyle), ದೈಹಿಕ ಚಟುವಟಿಕೆ ಕೊರತೆ, ಒತ್ತಡ ಮತ್ತು ಕೆಟ್ಟ ಆಹಾರ ಪದ್ಧತಿಯೇ ಕಾರಣ ಆಗಿದೆ. ಮಧುಮೇಹದಲ್ಲಿ ಟೈಪ್ 1 ಡಯಾಬಿಟಿಸ್ ಮತ್ತು ಟೈಪ್ 2 ಡಯಾಬಿಟಿಸ್ ಎರಡು ವಿಧಗಳಿವೆ. ಟೈಪ್ 1 ಮಧುಮೇಹದಲ್ಲಿ ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ (Insulin) ಉತ್ಪಾದನೆ ಮಾಡುವುದಿಲ್ಲ. ಆದರೆ ಟೈಪ್ 2 ಡಯಾಬಿಟಿಸ್ನಲ್ಲಿ ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಸಣ್ಣ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತದೆ. ಪ್ರತಿ 15 ಜನರಲ್ಲಿ ಒಬ್ಬರಿಗೆ ಮಧುಮೇಹ ಕಾಯಿಲೆ ಇರುತ್ತದೆ ಎಂದು ಕೆಲವು ಸಂಶೋಧನೆಗಳು ಹೇಳಿವೆ.
ಡಯಾಬಿಟಿಸ್ ಮೆಲ್ಲಿಟಸ್ ಅಥವಾ ಮಧುಮೇಹವನ್ನು ಅರ್ಥ ಮಾಡಿಕೊಳ್ಳುವುದು ಒಳಿತು. ಅದು ಅಧಿಕ ರಕ್ತದ ಸಕ್ಕರೆಯೊಂದಿಗೆ ದೀರ್ಘ ಕಾಲದವರೆಗೆ ಇರುತ್ತದೆ. ಅಂದರೆ ಹೈಪರ್ಗ್ಲೈಸೆಮಿಯಾ. ಮಧುಮೇಹದ ಬಗ್ಗೆ ಕೆಲವು ಸತ್ಯ ಸಂಗತಿಯ ಬಗ್ಗೆ ಪ್ರತಿಯೊಬ್ಬರೂ ತಿಳಿಯಬೇಕು.
ಮಧುಮೇಹ ಇರುವವರು ಸಕ್ಕರೆ ತಿನ್ನಬಾರದು
Diabetes.co.uk ಪ್ರಕಾರ, ಮಧುಮೇಹಿಗಳು ಸಕ್ಕರೆ ಅಥವಾ ಸಿಹಿಕಾರಕ ಪದಾರ್ಥ ಸೇವಿಸಲು ಸಾಧ್ಯವಿಲ್ಲ ಎಂಬುದು ಸಾಮಾನ್ಯ ನಂಬಿಕೆ ಆಗಿದೆ. ಮಧುಮೇಹ ರೋಗಿಗಳು ಸಮತೋಲಿತ ಆಹಾರ ಸೇವನೆ ಮಾಡಬೇಕು. ಇದು ಅಲ್ಪ ಪ್ರಮಾಣದ ಸಕ್ಕರೆ ಅಂಶವನ್ನು ಒಳಗೊಂಡಿರಬೇಕು. ರಕ್ತದ ಸಕ್ಕರೆಯ ಮಟ್ಟವು ಸಮತೋಲನದಲ್ಲಿಟ್ಟುಕೊಳ್ಳಬೇಕು. ತಮ್ಮ ವೈದ್ಯರ ಸಲಹೆ ಪಡೆಯುವುದು ಬೆಸ್ಟ್.
ಇದನ್ನೂ ಓದಿ: ಏನು ಮಾಡಿದರೂ ಹೊಟ್ಟೆ ಭಾಗದ ಬೊಜ್ಜು ಕರಗುತ್ತಿಲ್ಲವೇ? ಈ ಸಿಂಪಲ್ ಟಿಪ್ಸ್ ಒಮ್ಮೆ ಟ್ರೈ ಮಾಡಿ
ಟೈಪ್ 2 ಮಧುಮೇಹ ಬೊಜ್ಜು ಹೊಂದಿರುವವರಲ್ಲಿ ಹೆಚ್ಚು ಕಂಡು ಬರುತ್ತದೆ
ಸ್ಥೂಲಕಾಯ ಅಥವಾ ಅಧಿಕ ತೂಕ ಹೊಂದಿರುವವರಲ್ಲಿ ಹೆಚ್ಚಾಗಿ ಟೈಪ್ 2 ಡಯಾಬಿಟಿಸ್ ಸಂಭವಿಸುತ್ತದೆ ಎಂದು ದೀರ್ಘ ಕಾಲದ ನಂಬಿಕೆ ಇದೆ. ಆದರೆ ಇದು ತಪ್ಪು. Diabetes.co.uk ಪ್ರಕಾರ, ಟೈಪ್ 2 ಡಯಾಬಿಟಿಸ್ ಹೊಂದಿರುವ ವಿಶ್ವದ ಸುಮಾರು 20 ಪ್ರತಿಶತದಷ್ಟು ಜನರು ಸಾಮಾನ್ಯ ಅಥವಾ ಕಡಿಮೆ ತೂಕ ಹೊಂದಿರುವವರು ಆಗಿದ್ದಾರೆ.
ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ಸ್ (ಸಿಡಿಸಿ) ರಾಷ್ಟ್ರೀಯ ಮಧುಮೇಹ ಅಂಕಿ ಅಂಶಗಳ ವರದಿ 2020 ರ ಮಾಹಿತಿಯ ಪ್ರಕಾರ, ಯುಎಸ್ನಲ್ಲಿ ಟೈಪ್ 2 ಡಯಾಬಿಟಿಸ್ ಹೊಂದಿರುವ 11 ಪ್ರತಿಶತದಷ್ಟು ಜನರು ಅಧಿಕ ತೂಕ ಅಥವಾ ಬೊಜ್ಜು ಹೊಂದಿರದೇ ಇರುವವರು ಅಂದರೆ ತೆಳ್ಳಗಿದ್ದವರಲ್ಲೂ ಮಧುಮೇಹ ಇದೆ ಎಂದು ಹೇಳಿದೆ.
ಮಧುಮೇಹ ರೋಗಿಗಳು ಕಾರ್ಬೋಹೈಡ್ರೇಟ್ ಆಹಾರ ಸೇವನೆ ಮಾಡಬಾರದು
Diabetes.co.uk ಪ್ರಕಾರ, ಕಾರ್ಬೋಹೈಡ್ರೇಟ್ಗಳು ರಕ್ತದ ಸಕ್ಕರೆ ಮಟ್ಟ ಹೆಚ್ಚಿಸಬಹುದು. ಏಕೆಂದರೆ ಕಾರ್ಬೋಹೈಡ್ರೇಟ್ಗಳು ಗ್ಲೂಕೋಸ್ ಅನ್ನು ಒಡೆಯುತ್ತವೆ ಮತ್ತು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಆದಾಗ್ಯೂ, ಕಾರ್ಬೋಹೈಡ್ರೇಟ್ಗಳು ಅನೇಕ ರೀತಿಯ ಆಹಾರಗಳಲ್ಲಿ ಇರುತ್ತವೆ. ಇದು ದೇಹಕ್ಕೆ ಅನೇಕ ಪೋಷಕಾಂಶ ನೀಡುತ್ತದೆ.
ಕಾರ್ಬೋಹೈಡ್ರೇಟ್ಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಒಳ್ಳೆಯದಲ್ಲ. ಏಕೆಂದರೆ ನೀವು ಸೇವಿಸುವ ಎಲ್ಲವು ಕಾರ್ಬೋಹೈಡ್ರೇಟ್ಗಳೇ ಆಗಿವೆ. ಉದಾ: ಅಕ್ಕಿ, ರೊಟ್ಟಿ, ಹಣ್ಣು ಇತ್ಯಾದಿ. ಸರಿಯಾದ ಸಲಹೆ ನೀಡುವ ಆಹಾರ ತಜ್ಞರನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ.
ಸಿಹಿ ಪದಾರ್ಥ, ಸಕ್ಕರೆ ಸೇವನೆಯಿಂದ ಮಧುಮೇಹ ಬರುತ್ತದೆ
ಮೆಡಿಕಲ್ ನ್ಯೂಸ್ ಟುಡೇ ಪ್ರಕಾರ, ಹೆಚ್ಚು ಸಕ್ಕರೆ ತಿನ್ನುವುದು ಮಾತ್ರ ಮಧುಮೇಹಕ್ಕೆ ಕಾರಣ ಎಂಬ ನಂಬಿಕೆ ಇದೆ. ಆದರೆ ಹೆಚ್ಚು ಸಕ್ಕರೆ ತಿನ್ನುವುದು ನೇರವಾಗಿ ಮಧುಮೇಹಕ್ಕೆ ಕಾರಣ ಆಗುವುದಿಲ್ಲ.
ನೀವು ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಕ್ಯಾಲೊರಿ ಸೇವನೆ ಮಾಡುತ್ತಿದ್ದರೆ ನಿಮ್ಮ ತೂಕ ತುಂಬಾ ಹೆಚ್ಚಾದರೆ, ನಿಮಗೆ ಮಧುಮೇಹ ಬರುವ ಸಾಧ್ಯತೆ ಹೆಚ್ಚು. ಅನೇಕ ಸಿಹಿ ಪದಾರ್ಥ ಮತ್ತು ಪಾನೀಯಗಳು ಹೆಚ್ಚಿನ ಕ್ಯಾಲೋರಿ ಹೊಂದಿರುತ್ತವೆ. ಇದು ಸ್ಥೂಲಕಾಯದ ಅಪಾಯ ಹೆಚ್ಚಿಸುತ್ತದೆ.
2013 ರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕ್ಯಾಲೊರಿ ಸೇವಿಸಿದ ನಂತರ ಮತ್ತು ಬಾಡಿ ಮಾಸ್ ಇಂಡೆಕ್ಸ್ (BMI) ಅನ್ನು ನಿಯಂತ್ರಿಸಿದ ನಂತರವೂ ಸೋಡಾ ಸೇವಿಸಿದರೆ, ಅವರು ಮಧುಮೇಹದ ಅಪಾಯ ಹೆಚ್ಚು ಹೊಂದಿರುತ್ತಾರೆ.
ಇದನ್ನೂ ಓದಿ: ಕಲ್ಲಂಗಡಿ ಬೀಜ ಎಸೆಯೋ ಬದಲು ಹೀಗೆ ತಿನ್ನಿ, ಆರೋಗ್ಯ ಲಾಭ ಬಹಳಷ್ಟಿದೆ
ಟೈಪ್ 2 ಮಧುಮೇಹವು ಸೌಮ್ಯವಾಗಿರುತ್ತದೆ
ಸಾಮಾನ್ಯವಾಗಿ ಜನರು ಟೈಪ್ 2 ಮಧುಮೇಹ ಸೌಮ್ಯ ಎಂದು ನಂಬುತ್ತಾರೆ. ಆದರೆ Diabetes.co.uk ಪ್ರಕಾರ, ಯಾವುದೇ ರೀತಿಯ ಮಧುಮೇಹವು ಸೌಮ್ಯವಾಗಿಲ್ಲ. ಟೈಪ್ 2 ಮಧುಮೇಹ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಅದು ಗಂಭೀರ ಸ್ಥಿತಿಗೆ ಕಾರಣವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ