ಕತ್ತಲಾಗ್ತಿದ್ದಂತೆ(Night) ಕಣ್ಣು (Eye)ಬಯಸುವುದು ನಿದ್ದೆಯನ್ನ(Sleep). ನಿದ್ದೆ ಮಾಡ್ತಿದ್ದಂತೆ ಮಾನಸಿಕವಾಗಿ ಶಾಂತ(Peace) , ದೈಹಿಕವಾಗಿ ಪರಿಶ್ರಮ(Physical Strain) ಹೋಗಲಾಡಿಸಿಕೊಳ್ಳುತ್ತೇವೆ. ನಿದ್ರೆಗೆ ಜಾರುತ್ತಿದ್ದಂತೆ ಬೇರೆಯದ್ದೇ ಲೋಕ ಅಂದ್ರೆ ಕನಸಿಕ ಲೋಕಕ್ಕೆ (Dream world)ಪ್ರವೇಶ ಮಾಡುತ್ತೇವೆ.. ರಾತ್ರಿಯ ನಿದ್ರೆಯಲ್ಲಿ ಬರುವ ಕನಸುಗಳನ್ನು ನಮ್ಮ ಮನಸ್ಥಿತಿಯೆನ್ನುವ ನಂಬಿಕೆಯಿದೆ. ನಾವು ದಿನವಿಡೀ ಏನು ಯೋಚಿಸುತ್ತೇವೆ ಅಥವಾ ನಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ, ಅನೇಕ ಬಾರಿ ನಾವು ನಮ್ಮ ಕನಸಿನಲ್ಲಿ ಒಂದೇ ರೀತಿ ನೋಡುತ್ತೇವೆ.ಆದ್ರೆ ಸ್ವಪ್ನ ಶಾಸ್ತ್ರದ ಪ್ರಕಾರ ಕನಸುಗಳು ಭವಿಷ್ಯದ ಘಟನೆಗಳಿಗೆ ಸಂಬಂಧಿಸಿವೆ. ಕನಸಿನಲ್ಲಿ ಕಾಣುವ ವಿಷಯಗಳು ಮುಂಬರುವ ಘಟನೆಗಳನ್ನು ಸೂಚಿಸುತ್ತವೆ ಎಂದು ಹೇಳಲಾಗುತ್ತದೆ.ಅಲ್ಲದೆ ಈ ಬಗ್ಗೆ ಇಡೀ ಸಪ್ನ ಶಾಸ್ತ್ರ ಗ್ರಂಥವನ್ನು ಬರೆಯಲಾಗಿದೆ.. ಹೀಗಾಗಿ ಕನಸಿನಲ್ಲಿ ಹಾವು ಕುದುರೆ ಪ್ರಾಣಿ, ಮನೆ ಮನುಷ್ಯ,ದೇವರು ಕಂಡರೆ ಹಾಗೆ ಆಗುತ್ತೆ ಹೀಗೆ ಆಗುತ್ತೆ ಎಂದು ಹೇಳಲಾಗುತ್ತೆ..
ನಿಜವಾಗುತ್ತಂತೆ ಬೆಳಗಿನ ಜಾವದ ಕನಸು
ಸ್ವಪ್ನ ಶಾಸ್ತ್ರದ ಪ್ರಕಾರ ಪ್ರಕಾರ, ಮುಂಜಾನೆ 3 ರಿಂದ 5 ರ ನಡುವಿನ ಸಮಯದಲ್ಲಿ ಕಂಡುಬರುವ ಕನಸು ಆಗಾಗ್ಗೆ ನನಸಾಗುತ್ತದೆ ಏಕೆಂದರೆ. ಈ ಸಮಯದಲ್ಲಿ ದೈವಿಕ ಶಕ್ತಿಗಳು ದೊಡ್ಡ ಪರಿಣಾಮವನ್ನು ಬೀರುತ್ತವೆ. ಇದೇ ರೀತಿ ನಿಮಗೂ ಮುಂಜಾನೆ ಸಮಯದಲ್ಲಿ ಅಥವಾ ನಿಮ್ಮ ನಿದ್ರೆಯ ಸಮಯದಲ್ಲಿ ಹಾವು ಕುದುರೆ ಪ್ರಾಣಿ, ಮನೆ ಮನುಷ್ಯ, ಆಗುವ ದೇವರಂತೆ ಮಕ್ಕಳು ಕಂಡುಬಂದಿದ್ರೆ ಅದಕ್ಕೆ ಏನು ಅರ್ಥ ಎನ್ನುವ ಮಾಹಿತಿ ಇಲ್ಲಿದೆ
ಮಕ್ಕಳು ಕನಸಿನಲ್ಲಿ ಬಂದರೆ ಏನು ಅರ್ಥ..?
ನಮ್ಮ ಕನಸಿನಲ್ಲಿ ಪದೇಪದೇ ಮಕ್ಕಳು ಕಾಣಿಸಿಕೊಳ್ಳುತ್ತಿದ್ದರೆ ಅದಕ್ಕೆ ನಾನಾ ಅರ್ಥಗಳು ಇವೆ.. ಅಲ್ಲದೇ ಹೀಗೆ ಕನಸಿನಲ್ಲಿ ಮಕ್ಕಳು ಕಾಣಿಸಿಕೊಳ್ಳುವುದು ನಮಗೆ ನಿಜಜೀವನದಲ್ಲಿಯೂ ಸಕಾರಾತ್ಮಕ ಹಾಗೂ ಋಣಾತ್ಮಕ ಪರಿಣಾಮಗಳನ್ನು ಬೀರುವುದು.. ಹಾಗಿದ್ರೆ ಯಾವ ರೀತಿಯ ಮಕ್ಕಳು ಕನಸಿನಲ್ಲಿ ಬಂದರೆ ಏನು ಅರ್ಥ ಅನ್ನೋದಕ್ಕೆ ಉತ್ತರ ಇಲ್ಲಿದೆ..
1) ಅಳುವ ಮಗು ಕಾಣಿಸಿಕೊಂಡರೆ : ನಿಮಗೆ ಕನಸಿನಲ್ಲಿ ಅಳುವ ಮಗು ಕಾಣಿಸಿಕೊಂಡರೆ ಅದು ಅಶುಭ ಎಂದು ಅರ್ಥ.. ಕೆಲವೇ ದಿನಗಳಲ್ಲಿ ನೀವು ಅನೇಕ ತೊಂದರೆಗೆ ಸಿಲುಕಲಿದ್ದೀರಾ .. ಶತ್ರುಗಳ ಬಾದೆ ಅಧಿಕವಾಗಿದ್ದು ಮನೆಯಲ್ಲಿ ಗಲಾಟೆ ಆಗಲಿದೆ..
2) ಮಕ್ಕಳು ಓದುವಂತೆ ಕನಸು ಬಿದ್ದರೆ: ಕನಸಿನಲ್ಲಿ ಮಕ್ಕಳು ಓದುವಂತೆ ಕಂಡುಬಂದರೆ ಥೂ ನಿಮ್ಮ ಪಾಲಿಗೆ ಅದೃಷ್ಟ.. ನಿಮಗೆ ಬಿಡುವಿಲ್ಲದ ಸಂತಸದ ದಿನಗಳು ಬರಲಿವೆ..
ಇದನ್ನೂ ಓದಿ :ಸಾವನ್ನಪ್ಪಿದ ಅಪ್ಪ-ಅಮ್ಮ ಪದೇ ಪದೇ ಕನಸಿನಲ್ಲಿ ಬಂದರೆ ಏನು ಅರ್ಥ; ಏನು ಹೇಳತ್ತೆ ಸ್ವಪ್ನಾ ಶಾಸ್ತ್ರ!
3) ಸ್ವಂತ ಮಗು ಅನಾರೋಗ್ಯದಿಂದ ಬಳಲುವಂತೆ ಕಂಡರೆ : ನಿಮ್ಮ ಸ್ವಂತ ಮಗು ಅನಾರೋಗ್ಯದಿಂದ ಬಳಲುವಂತೆ ಸೂಚಿಸುತ್ತಿದ್ದರೆ ಅದು ನಿಮ್ಮ ಮಗುವಿನ ಆರೋಗ್ಯದ ಕುರಿತು ಆಗಿರುತ್ತದೆ.. ಹಾಗೂ ಮುಂದಿನ ದಿನಗಳಲ್ಲಿ ಚಿಂತೆ ಹಾಗೂ ನಿರಾಸೆಯನ್ನು ತಂದೊಡ್ಡುವ ಸೂಚನೆಯಾಗಿರುತ್ತದೆ.
4) ಅವಳಿ ಮಕ್ಕಳು ಕಾಣಿಸಿಕೊಂಡರೆ: ಕನಸಿನಲ್ಲಿ ಅವಳಿ ಮಕ್ಕಳು ಕಾಣಿಸಿಕೊಂಡರೆ ನಾನಾ ಅರ್ಥಗಳನ್ನು ಹೇಳಲಾಗುತ್ತೆ.. ಅದರಲ್ಲೂ ಅವಿವಾಹಿತರಿಗೆ ಅವಳಿ ಮಕ್ಕಳು ಕಾಣಿಸಿಕೊಂಡರೆ ಸೂಕ್ತ ಸಂಬಂಧಗಳಿಗಾಗಿ ಹುಡುಕಾಟ ನಡೆಸುತ್ತಿರುತ್ತಾರೆ.. ವ್ಯಾಪಾರಿಗಳಿಗೆ ಅವಳಿ ಮಕ್ಕಳು ಕನಸಿನಲ್ಲಿ ಬಂದರೆ ಅವರು ಇಂದಿನ ದಿನಗಳಲ್ಲಿ ವ್ಯಾಪಾರದಲ್ಲಿ ಉತ್ತಮ ಲಾಭಗಳಿಸಲಿದ್ದಾರೆ ಹಾಗೂ ಉತ್ತಮ ಸ್ಥಾನಕ್ಕೆ ಹೋಗಲಿದ್ದಾರೆ ಎಂಬುದನ್ನು ಸೂಚಿಸುತ್ತದೆ..
5) ಮಗು ದುಃಖದಲ್ಲಿರುವಂತೆ ಕಂಡುಬಂದರೆ :ನಿಮ್ಮ ಕನಸಿನಲ್ಲಿ ಯಾವುದಾದರೂ ಒಂದು ದುಃಖದಲ್ಲಿ ಇರುವಂತೆ ಬಂದರೆ, ಮುಂದಿನ ದಿನಗಳಲ್ಲಿ ನಿಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ಬರಲಿದೆ ಎಂದು ಅರ್ಥ..
6) ಮಗು ಹಾಸಿಗೆಯಲ್ಲಿ ಮಲಗಿ ನಿದ್ರಿಸುತ್ತಿರುವಂತೆ ಕಂಡರೆ: ಗರ್ಭಿಣಿ ಮಹಿಳೆಯರಿಗೆ ಮಗು ಹಾಸಿಗೆಯಲ್ಲಿ ಮಲಗಿ ನಿದ್ರೆ ಮಾಡುತ್ತಿರುವಂತೆ ಕಂಡರೆ ಅದು ಶುಭ ಸಂಕೇತ..ಇದು ಗರ್ಭಿಣಿಯರಿಗೆ ಸುರಕ್ಷತೆಯ ಹೆರಿಗೆ ಸಂಕೇತವಾಗಿದೆ.. ಆದ್ರೆ ಅವಿವಾಹಿತರಿಗೆ ಈ ರೀತಿಯ ಕನಸು ಬೀಳುವುದು ಅಪಾಯಕಾರಿ ಸೂಚನೆಯಾಗಿದೆ..
7) ಮಕ್ಕಳೊಂದಿಗೆ ಆಟ ಆಡುವುದು : ನೀವು ಮಲಗಿ ನಿದ್ರಿಸುತ್ತಿರುವಾಗ ನಿಮ್ಮ ಕನಸಿನಲ್ಲಿ ನೀವು ಮಕ್ಕಳೊಡನೆ ಆಟವಾಡುವಂತೆ ಕಂಡರೆ ಪ್ರೀತಿ ಪ್ರೇಮ ಮತ್ತು ಸಂವಾದದಲ್ಲಿ ನೀವು ಉತ್ತಮ ಬಾಂಧವ್ಯ ಹೊಂದುವ ಸೂಚನೆಯಾಗಿದೆ.
ಇದನ್ನೂ ಓದಿ :ಕನಸಿನಲ್ಲಿ ಬೆಕ್ಕು, ಸೂರ್ಯಾಸ್ತ ಕಂಡರೆ ಏನು ಅರ್ಥ; ಏನು ಹೇಳುತ್ತದೆ ಸ್ವಪ್ನಾ ಶಾಸ್ತ್ರ?
8) ಮಗು ನಗುತ್ತಿದ್ದರೆ ಅಥವಾ ಕಿರುಚುತ್ತಿದ್ದರೆ : ಮಕ್ಕಳು ಕನಸಿನಲ್ಲಿ ನಗುತ್ತಿದ್ದರೆ ಅಥವಾ ಕಿರುಚುತ್ತಿದ್ದರೆ ಇದು ಒಳ್ಳೆಯ ಸಂಕೇತ.. ಇದು ಶೀಘ್ರವೇ ನೀವು ಅನಿರೀಕ್ಷಿತ ಪ್ರೇಮ ಸಂಬಂಧವನ್ನು ಹೊಂದಲಿದ್ದೀರಾ ಎಂಬುದನ್ನು ಸೂಚಿಸುತ್ತದೆ..
9) ಕನಸಿನಲ್ಲಿ ಹೆಣ್ಣು ಮಗು ಬಂದರೆ :ಸಾಮಾನ್ಯವಾಗಿ ನಿಮ್ಮ ಕನಸಿನಲ್ಲಿ ಹೆಣ್ಣು ಮಗು ಬಂದರೆ, ನೀವು ನಿಮ್ಮ ಭಾವನೆಗಳನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೆ ಒದ್ದಾಡುತ್ತಿದ್ದಾರಾ ಎಂದು ಅರ್ಥ.. ಹಾಗೂ ನಮ್ಮ ಮನಸ್ಸಿನ ಭಾವನೆಗಳು ನಮ್ಮ ನಿಯಂತ್ರಣಕ್ಕೆ ಸಿಗುತ್ತಿಲ್ಲ ಎಂದು ಸೂಚನೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ